ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ ! ಇದನ್ನು ನೀವೂ ನಂಬುತ್ತೀರಾ?
ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದೇ? ಬೇಸಿಗೆಯ ಉರಿ ಬಿಸಿಲಿನ ಸಮಯದಲ್ಲಿ ಮೊಟ್ಟೆ ತಿನ್ನೋದರಿಂದ ದೇಹದಲ್ಲಿ ಅತಿಯಾದ ಶಾಖ ಉಂಟಾಗುವ ಸಾಧ್ಯತೆ ಇದೆಯೇ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ವಾತವರಣದ ಉಷ್ಣಾಂಶ ಮತ್ತು ಬಾಡಿ ಹೀಟ್ ಬಗ್ಗೆ ಇಲ್ಲಿದೆ ಮಾಹಿತಿ.
ಮೊಟ್ಟೆ ತಿನ್ನುವವರು (eating egg) ಪ್ರತಿ ಋತುವಿನಲ್ಲಿ ಮೊಟ್ಟೆಗಳನ್ನು ಸೇವಿಸುತ್ತಾರೆ. ಆದರೆ ಕೆಲವರು ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ನಂಬಿದ್ದಾರೆ. ಬೇಸಿಗೆಯಲ್ಲಿ ಮೊಟ್ಟೆಗಳನ್ನು ತಿನ್ನುವುದು ನಿಜವಾಗಿಯೂ ದೇಹದಲ್ಲಿ ಅತಿಯಾದ ಶಾಖವನ್ನು ಉಂಟುಮಾಡಬಹುದೇ? ಈ ಬಗ್ಗೆ ಸತ್ಯಾಸತ್ಯತೆ ತಿಳಿಯೋಣ.
ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ದಿನವನ್ನು ಮೊಟ್ಟೆಗಳೊಂದಿಗೆ ಪ್ರಾರಂಭಿಸುತ್ತಾರೆ. ಇದು ಉತ್ತಮ ಪ್ರಮಾಣದ ಪ್ರೋಟೀನ್ (proteine)ಅನ್ನು ಹೊಂದಿರುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ.ಹಾಗಾಗಿ ಮುಂಜಾನೆ ಮೊಟ್ಟೆ ತಿಂದರೆ ದಿನವಿಡೀ ನೀವು ಎನರ್ಜಿಟಿಕ್ ಆಗಿ ಇರಬಹುದು.
ಚಳಿಗಾಲದಲ್ಲಿ, ಮೊಟ್ಟೆ ತಿನ್ನುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ, ಆದರೆ ಬೇಸಿಗೆ ಬರುತ್ತಿದ್ದಂತೆ ಮೊಟ್ಟೆ ಸೇವನೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಬೇಸಿಗೆಯಲ್ಲಿ ಮೊಟ್ಟೆಗಳನ್ನು (eatings eggs in summer) ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಎಂದು ಜನರು ಭಾವಿಸುತ್ತಾರೆ. ಮೊಟ್ಟೆಯ ಉಷ್ಣ ಗುಣದಿಂದ ಅನಾರೋಗ್ಯ ಉಂಟಾಗಬಹುದು ಎಂದು ಸಹ ಜನರು ಹೇಳುತ್ತಾರೆ.
ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ನಿಜವಾಗಿಯೂ ಆರೋಗ್ಯಕ್ಕೆ ಹಾನಿ (health effect) ಮಾಡಬಹುದೇ? ಈ ಪ್ರಶ್ನೆಯ ಬಗ್ಗೆ ನೀವು ಕೂಡ ಗೊಂದಲದಲ್ಲಿದ್ದರೆ, ಇಂದು ನಿಮ್ಮ ತಪ್ಪು ತಿಳುವಳಿಕೆಯನ್ನು ತೆಗೆದುಹಾಕಲಾಗುತ್ತದೆ. ಈ ಬಗ್ಗೆ ಸತ್ಯವನ್ನು ತಿಳಿದುಕೊಳ್ಳೋಣ. ಆಹಾರ ತಜ್ಞರು ತಿಳಿಸುವಂತೆ ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಯಾವುದೇ ಸೀಸನ್ ನಲ್ಲಿ ಮೊಟ್ಟೆ ತಿನ್ನೋದು ಹಾನಿಕಾರಕವಲ್ಲ.
ಜನರು ಬೇಸಿಗೆಯಲ್ಲಿ ಮೊಟ್ಟೆ ತಿನ್ನಬಹುದು, ಆದರೆ ಅವುಗಳ ಪ್ರಮಾಣವು ಚಳಿಗಾಲಕ್ಕಿಂತ ಕಡಿಮೆ ಇರಬೇಕು. ಬೇಸಿಗೆಯಲ್ಲಿ, ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತಿದಿನ ಒಂದು ಅಥವಾ ಎರಡು ಮೊಟ್ಟೆಗಳನ್ನು ಮಾತ್ರ ಸೇವಿಸಬಹುದು. ಹೆಚ್ಚು ಸೇವಿಸಿದರೆ ಸಮಸ್ಯೆ.
ಮೊಟ್ಟೆಗಳನ್ನು ಪ್ರತಿ ಋತುವಿನಲ್ಲಿ ಬೇಯಿಸಿ ತಿನ್ನಬಹುದು ಅಥವಾ ಆಮ್ಲೆಟ್ ತಯಾರಿಸುವ ಮೂಲಕವೂ ತಿನ್ನಬಹುದು. ಮೊಟ್ಟೆಗಳಲ್ಲಿ ಪ್ರೋಟೀನ್ ಗಳು, ಜೀವಸತ್ವಗಳು, ಖನಿಜಗಳು ಮತ್ತು ಸ್ವಲ್ಪ ಪ್ರಮಾಣದ ವಿಟಮಿನ್ ಡಿ (vitamin D) ಇರುತ್ತದೆ.
ಮೊಟ್ಟೆಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ, ಇದು ಕೆಂಪು ರಕ್ತ ಕಣಗಳ ರಚನೆಗೆ ಬಹಳ ಮುಖ್ಯ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುತ್ತದೆ. ಹಾಗಾಗಿ ಮೊಟ್ಟೆ ತಿನ್ನೋದು ಒಳ್ಳೆಯದೆ.
ವಿಟಮಿನ್ ಡಿ ಕಾರಣದಿಂದಾಗಿ, ಮೊಟ್ಟೆಗಳು ಕ್ಯಾಲ್ಸಿಯಂ (Calcium) ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆಗಳನ್ನು ಸ್ಟ್ರಾಂಗ್ ಆಗಿಸುತ್ತೆ. ಮೊಟ್ಟೆಗಳು ಅನೇಕ ಶಕ್ತಿಯುತ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಮೊಟ್ಟೆ ತಿನ್ನಲು ತೊಂದರೆ ಇರುವ ಜನರು ಮೊಟ್ಟೆಗಳನ್ನು ತಿನ್ನುವುದನ್ನು ನಿಲ್ಲಿಸಬೇಕು.