ಟಿಕ್‌ಟಾಕ್‌ನಲ್ಲಿ ವೈರಲ್ ಆಗಿರುವ 'ಕ್ಲೌಡ್ ಕಾಫಿ', ಐಸ್ಡ್ ಎಸ್ಪ್ರೆಸೋಗೆ ತೆಂಗಿನ ನೀರು ಸೇರಿಸಿ ತಯಾರಿಸಲಾಗುತ್ತದೆ. ಇದರಿಂದ ಹೆಚ್ಚಿನ ಹೈಡ್ರೇಷನ್, ಎಲೆಕ್ಟ್ರೋಲೈಟ್ಸ್, ಪೊಟ್ಯಾಶಿಯಂ, ಮೆಗ್ನೇಶಿಯಂ ಮತ್ತು ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಆದರೆ ತೆಂಗಿನ ನೀರಿನಲ್ಲಿ ಹೆಚ್ಚುವರಿ ಸಕ್ಕರೆ ಇರದಂತೆ ಎಚ್ಚರವಹಿಸಬೇಕು. ಹೊಸತನ ಇಷ್ಟಪಡುವವರಿಗೆ ಒಳ್ಳೆಯ ಆಯ್ಕೆ.

ಟಿಕ್ ಟಾಕ್ ಅನ್ನು ಟ್ರೆಂಡಿಗ್‌ಗಳ ಜನ್ಮಸ್ಥಳ ಎಂದೇ ಹೇಳಲಾಗುತ್ತದೆ. ಇಲ್ಲಿ ತಿಂಡಿ-ಪಾನೀಯ ಟ್ರೆಂಡ್ಸ್ ಪ್ರತಿದಿನವೂ ವೈರಲ್ ಆಗುತ್ತದೆ. ಪ್ರಸ್ತುತ, ಟಿಕ್‌ಟಾಕ್ ಜಗತ್ತನ್ನು ಹೊಸ ಪ್ರವೃತ್ತಿಯೊಂದು ಬಿರುಗಾಳಿಯಂತೆ ಆಕ್ರಮಿಸಿಕೊಂಡಿದೆ. ಅದು 'ಕ್ಲೌಡ್' ಕಾಫಿ. ಟಿಕ್‌ಟಾಕ್‌ನಲ್ಲಿ ವೈರಲ್ ಆಗುತ್ತಿರುವ ಕ್ಲೌಡ್ ಕಾಫಿ ಸಾಮಾನ್ಯ ಐಸ್ ಎಸ್ಪ್ರೆಸೋ(iced espresso) ಪಾನೀಯಕ್ಕಿಂತಲೂ ಜನಪ್ರಿಯವಾಗುತ್ತಿದೆ. ಈ ರೆಸಿಪಿಯನ್ನು ಪೌಷ್ಟಿಕ ಪಾನೀಯ ಎಂದೂ ಹೇಳಲಾಗುತ್ತದೆ. ಅಷ್ಟಕ್ಕೂ 'ಕ್ಲೌಡ್' ಕಾಫಿ ಎಂದರೇನು ಅಂತೀರಾ? ಕ್ಲೌಡ್ ಕಾಫಿ ನಿಮ್ಮ ಸಾಮಾನ್ಯ ಕಾಫಿಗೆ ಬದಲಿಯಾಗಿದೆ. ಇಲ್ಲಿ ನೀವು ನೀರಿನ ಬದಲಿಗೆ ತೆಂಗಿನ ನೀರನ್ನು ಬಳಸಬೇಕು. ಇದರಿಂದ ಹೆಚ್ಚಿನ ಹೈಡ್ರೇಷನ್, ಎಲೆಕ್ಟ್ರೋಲೈಟ್ಸ್ ಮತ್ತು ಕ್ರೀಮಿಯ ಆಸ್ವಾದನೆಯೂ ದೊರೆಯುತ್ತದೆ. ಆದರೆ ಇದರಲ್ಲಿ ನಿಜವಾಗಿಯೂ ಪೋಷಕಾಂಶಗಳಿವೆಯಾ ಎಂದು ನೋಡೋಣ.

ಈ ಬಗ್ಗೆ ಮಾತನಾಡಿರುವ ಆಹಾರ ತಜ್ಞೆ ಮೆಕೆಂಜಿ ಬರ್ಗ್ರೆಸ್ , ಈ ಪಾನೀಯದ ರೂಪ ಆಕರ್ಷಕವಾಗಿರುವಷ್ಟೇ ಇದರಿಂದ ಆರೋಗ್ಯದ ಲಾಭವೂ ಇದೆ. ಇದು ಮೂಲತಃ ಅಮೆರಿಕಾನೋ ಕಾಫಿಯಷ್ಟೆ. ಆದರೆ ನೀರಿನ ಬದಲು ತೆಂಗಿನ ನೀರನ್ನು ಬಳಸುವುದರಿಂದ ಪೋಷಕಾಂಶಗಳು ಹೆಚ್ಚಾಗುತ್ತವೆ. ಕಾಫಿಗೆ ತೆಂಗಿನ ನೀರನ್ನು ಸೇರಿಸುವುದರಿಂದ ಅದು "ಪೌಷ್ಠಿಕಾಂಶ" ಪೇಯವಾಗುತ್ತದೆ. ತೆಂಗಿನ ನೀರಿನಲ್ಲಿರುವ ಎಲೆಕ್ಟ್ರೋಲೈಟ್ ಅಂಶವು ಸ್ವಲ್ಪ ಹೆಚ್ಚು ಹೈಡ್ರೇಟಿಂಗ್ ನೀಡುತ್ತದೆ. ತೆಂಗಿನ ನೀರಿನಲ್ಲಿ ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್ಸ್, ಪೊಟ್ಯಾಶಿಯಂ ಮತ್ತು ಮ್ಯಾಗ್ನೇಶಿಯಂ ಇರುತ್ತದೆ. ಒಂದು ಕಪ್ ತೆಂಗಿನ ನೀರಲ್ಲಿ ಸುಮಾರು 470 ಮಿ.ಗ್ರಾಂ ಪೊಟ್ಯಾಶಿಯಮ್ ಇರುತ್ತದೆ, ಇದು ದಿನದ ಶಿಫಾರಸು ಆದ ಪ್ರಮಾಣದ 10%,”. ಮತ್ತಷ್ಟು, 19 ಮಿ.ಗ್ರಾಂ ಮೆಗ್ನೇಶಿಯಂ ಕೂಡ ಇರುತ್ತದೆ. ಈ ಪಾನೀಯ ನಿಮಗೆ ಇಷ್ಟವಾಗಿದ್ದರೆ, ಇದು ದಿನದ ಪ್ರಾರಂಭದಲ್ಲಿ ಕೆಲವು ಪೋಷಕಾಂಶಗಳನ್ನು ಸೇರಿಸಿಕೊಳ್ಳಲು ಸುಲಭವಾದ ವಿಧಾನ. ಬಹುಪಾಲು ಜನರು ಪ್ರತಿದಿನ ಎಲೆಕ್ಟ್ರೋಲೈಟ್ಸ್ ಸೇವಿಸುವುದಿಲ್ಲ. ಅಂತಹವರಿಗಾಗಿ ಇದು ಬೇಸಿಗೆ ಅಥವಾ ವರ್ಕ್‌ಔಟ್ ನಂತರದ ಉತ್ತಮ ಆಯ್ಕೆಯಾಗಿದೆ. ಇದಲ್ಲದೇ, ತೆಂಗಿನ ನೀರಲ್ಲಿ ಆಂಟಿಆಕ್ಸಿಡೆಂಟ್ಸ್ ಇರುತ್ತದೆ, ಇದು ರೋಗನಿರೋಧಕ ಶಕ್ತಿಗೆ ಸಹಾಯಮಾಡುತ್ತದೆ. 

ಒಟ್ಟಾರೆಯಾಗಿ, ನೀವು ಸುವಾಸನೆಯನ್ನು ಇಷ್ಟಪಟ್ಟರೆ, ನಿಮ್ಮ ಬೆಳಗಿನ ಪಾನೀಯದಲ್ಲಿ ಕೆಲವು ಹೆಚ್ಚುವರಿ ಪೋಷಕಾಂಶಗಳನ್ನು ಸೇರಿಸಲು ಇದು ಒಂದು ಮೋಜಿನ ಮಾರ್ಗವಾಗಿದೆ. ಕ್ಲೌಡ್ ಕಾಫಿ ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಪೂರೈಸುವ ಒಂದು ಮಾರ್ಗವಾಗಿದೆ. ಇದು ದೇಹ ಹೈಡ್ರೇಟ್ ಆಗಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ತೆಂಗಿನ ನೀರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಅದು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ. ತೆಂಗಿನ ನೀರಿನೊಂದಿಗೆ ಇದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಅವರು ಸೂಚಿಸುತ್ತಾರೆ. ಏಕೆಂದರೆ ಇದು ಕಾಫಿಗೆ ಸಕ್ಕರೆ ಸೇರಿಸದೆಯೇ ಕೆನೆಯ ರುಚಿಯನ್ನು ನೀಡುತ್ತದೆ. ಹೊಸ ಪಾಕವಿಧಾನಗಳನ್ನು ಪ್ರಯತ್ನಿಸಲು ಆಸಕ್ತಿ ಹೊಂದಿರುವ ಕಾಫಿ ಪ್ರಿಯರಿಗೆ, ಕ್ಲೌಡ್ ಕಾಫಿ ಒಮ್ಮೆ ಪ್ರಯತ್ನಿಸಲು ಯೋಗ್ಯವಾಗಿರುತ್ತದೆ, ಅಥವಾ ಬಹುಶಃ ಅದನ್ನು ವಿನಿಮಯ ಮಾಡಿಕೊಳ್ಳಲೂ ಸಹ ಯೋಗ್ಯವಾಗಿರುತ್ತದೆ ಎಂದಿದ್ದಾರೆ. 

ಈ ಟ್ರೆಂಡ್ ಬಂದದ್ದು ಯಾವಾಗ? 
ಈ ಟ್ರೆಂಡ್ ಮೊದಲಿಗೆ 2022ರಲ್ಲಿ ಟಿವಿ ನಿರೂಪಕಿ ಮತ್ತು ಕುಕ್‌ಬುಕ್ ಲೇಖಕಿ ಡ್ಯಾಫ್ನಿ ಓಝ್ ತಮ್ಮ TikTok ನಲ್ಲಿ ಶೇರ್ ಮಾಡಿದಾಗ ಜನಪ್ರಿಯತೆ ಪಡೆಯಿತು. ಅವರು ಐಸ್ ಮೇಲೆ ಎಸ್ಪ್ರೆಸೋ ಹಾಕಿ, ತೆಂಗಿನಕಾಯಿ ನೀರನ್ನು ಸೇರಿಸಿ, ನಂತರ non-dairy ಮಿಲ್ಕ್ ಹಾಕಿದರು. ಇದನ್ನು ಅವರು “ಹೈಡ್ರೇಟಿಂಗ್ ಎಲಿಕ್ಸರ್” ಎಂದು ಕರೆದರು. ಅದರ ನಂತರ, #cloudcoffee ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಅನೇಕರು ಶೇರ್ ಮಾಡಲು ಪ್ರಾರಂಭಿಸಿದರು. ಕ್ಯಾರೊಲಿನ್ ಹ್ಯಾಡ್ಲಿ ಎಂಬ ಬಳಕೆದಾರಳು ಪಾನೀಯವನ್ನು ಫ್ರೋಥ್ ಮಾಡಿ ಬ್ಲೆಂಡರ್‌ನಿಂದ ಫೋಮಿ ಶೈಲಿಯಲ್ಲಿ ತಯಾರಿಸಿದ ದೃಶ್ಯ ಹೆಚ್ಚು ವೈರಲ್ ಆಯಿತು. ಈ ಕಾರಣಕ್ಕೂ ಇದಕ್ಕೆ ಹೆಸರು "cloud coffee" ಎಂದು ಬಂದಿದೆ. 

ಎಚ್ಚರಿಕೆಯಿಂದ ಇರಬೇಕು..
"ಆದರೂ, ಇದು ಎಲ್ಲರಿಗೂ ಇಷ್ಟವಾಗದು. ಈ ರುಚಿಯ ಸಂಯೋಜನೆ ಕೆಲವರಿಗೆ ಒಗ್ಗದು. ತೆಂಗಿನ ನೀರು ಮತ್ತು ಎಸ್ಪ್ರೆಸೋ ಮಿಶ್ರಣ ವಿಶಿಷ್ಟವಾಗಿದೆ" ಎಂದು ಬರ್ಜೆಸ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಪ್ರತಿಯೊಂದು ತೆಂಗಿನ ನೀರಿನ ಬ್ರಾಂಡ್ ಕೂಡ ಒಂದೇ ರೀತಿ ಇರುವುದಿಲ್ಲ. ಕೆಲವು ಬ್ರಾಂಡ್‌ಗಳಲ್ಲಿ ಹೆಚ್ಚುವರಿ ಸಕ್ಕರೆ ಇರುತ್ತದೆ, ಇದು ಈ ಪಾನೀಯದ ಆರೋಗ್ಯ ಕಡಿಮೆ ಮಾಡಬಹುದು. ಅವರ ಸಲಹೆ ಏನೆಂದರೆ “ಪ್ರತಿಗ್ಲಾಸ್‌ನಲ್ಲಿ 2 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಸಕ್ಕರೆ ಇದ್ದರೆ ಚೆನ್ನಾಗಿರುತ್ತದೆ ಅಥವಾ ಸಕ್ಕರೆ ರಹಿತವಾದನ್ನು ಆರಿಸಿ.” 

ಹೊಸ ಪ್ರಯೋಗಕ್ಕಾಗಿ ಅಥವಾ ಇನ್‌ಸ್ಟಾಗ್ರಾಂನಲ್ಲಿ ಹಾಕಲು ಪೋಷಕಾಂಶಗಳಿಂದ ಕೂಡಿದ cloud coffee ನಿಮ್ಮ ಬೆಳಗಿನ ಸಮಯವನ್ನು ತಂಪಾಗಿಸುತ್ತದೆ. ಮಜಾದಾಯಕ ಆಯ್ಕೆಯಾಗಿರುತ್ತದೆ.