ಡಯೆಟ್‌ ಪ್ಲಾನ್‌ನಿಂದ ತಮಿಳು ಕಿರುತೆರೆ ನಟನ ಪತ್ನಿ ಸಾವು; Paleo Diet ಎಂದರೇನು ?

ತಮಿಳಿನ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಸಾವು ಎಲ್ಲೆಡೆ ಸಂಚಲನ ಮೂಡಿಸಿದೆ. ಪ್ಯಾಲಿಯೋ ಡಯಟ್ ನಲ್ಲಿದ್ದ ಪ್ರಿಯಾಗೆ ಮಧುಮೇಹ ಕಾಣಿಸಿಕೊಂಡಿತ್ತು. ಕೆಲ ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಹೀಗಿರುವಾಗ ಪ್ಯಾಲಿಯೋ ಡಯೆಟ್ ಎಂದರೇನು ಎಂಬ ಬಗ್ಗೆ ಹಲವರಲ್ಲಿ ಕುತೂಹಲ ಮೂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

The Paleo Diet That Killed The Serial Actors Wife, What Is It Vin

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ತೂಕ ಹೆಚ್ಚಳದ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲೂ ಸಾಮಾನ್ಯವಾಗಿದೆ. ಅಧಿಕ ತೂಕದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳುವುದು ಎಲ್ಲರಿಗೂ ಮೊದಲ ಆದ್ಯತೆಯಾಗಿರುತ್ತದೆ. ಇಂದಿನ ವೇಗದ ಜಗತ್ತಿನಲ್ಲಿ, ವ್ಯಾಯಾಮ ಮಾಡಲು ಸಮಯ ಸಿಗದ ಅನೇಕ ಜನರು ಪ್ಯಾಲಿಯೊ ಡಯಟ್, ಲೋ ಕಾರ್ಬ್ ಡಯಟ್, ಕೀಟೊ ಡಯಟ್, ವೆಗಾನ್ ಡಯಟ್ ಮುಂತಾದ ಡಯಟ್ ಗಳನ್ನು ಅನುಸರಿಸಿ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕ ಬಾರಿ ಇದು ತಿರುಗುಬಾಣವಾಗಿಯೂ ಪರಿಣಮಿಸುತ್ತದೆ. ತಮಿಳಿನ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಎಂಬವರು ಸಹ ಪ್ಯಾಲಿಯೊ ಡೆಯೆಟ್‌ನಿಂದ ಮೃತಪಟ್ಟಿದ್ದಾರೆ. 

ಹಾಗಿದ್ದರೆ ತೂಕ (Weight) ಇಳಿಸಿಕೊಳ್ಳುವುದು ಹೇಗೆ ? ಪ್ಯಾಲಿಯೋ ಡಯೆಟ್ ಎಂದರೇನು ? ಇದಲ್ಲದೆ, ಭಾರತದಲ್ಲಿ ಜನರು ಪ್ಯಾಲಿಯೊ ಆಹಾರವನ್ನು ಅನುಸರಿಸಬಹುದೇ ಎಂಬ ಬಗ್ಗೆ ಪೌಷ್ಟಿಕ ತಜ್ಞೆ ಸಾಧನಾ ರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ.

ಡಯಟ್ ಪ್ಲಾನ್ ಬದಲಾವಣೆ; ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ನಿಧನ

ಪ್ಯಾಲಿಯೋ ಡಯೆಟ್ ಎಂದರೇನು ?
ಪ್ಯಾಲಿಯೊ ಎಂದು ಕರೆಯಲ್ಪಡುವ ಕೇವ್‌ಮ್ಯಾನ್ ಆಹಾರವು (Food) ಯುವ ಪೀಳಿಗೆಯ ಗಮನವನ್ನು ಸೆಳೆದಿದೆ. ಇದು ಲಕ್ಷಾಂತರ ವರ್ಷಗಳ ಹಿಂದೆ ಕಾಡಿನ ವಾಸಿಗಳು ಅನುಸರಿಸುತ್ತಿದ್ದ ಆಹಾರ ಪದ್ಧತಿ. ಗುಹೆ (Cave)ಯಲ್ಲಿ ವಾಸಿಸುತ್ತಿದ್ದ ಸರಾಸರಿ 10,000 ವರ್ಷಗಳ ಹಿಂದೆ ಜನರು ಈ ರೀತಿಯ ಆಹಾರವನ್ನು ಹೊಂದಿದ್ದರು. ಅವರು ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ತಿನ್ನುತ್ತಿದ್ದರು ಮತ್ತು ಕೆಲವು ಬೇರುಗಳು, ಬೆಳೆದ ಹಣ್ಣನ್ನೆಲ್ಲ (Fruits) ಕಿತ್ತು ತಿನ್ನುತ್ತಿದ್ದರು. ಅವರು ನಮ್ಮಂತೆ ದಿನಕ್ಕೆ ಮೂರು ಹೊತ್ತು ಊಟ ಮಾಡುತ್ತಿರಲಿಲ್ಲ. ಹಸಿವಾದಾಗ ಮತ್ತು ಬೇಟೆಗೆ ಹೋದಾಗ ಮಾತ್ರ ತಿನ್ನುತ್ತಿದ್ದರು. ಇದನ್ನೇ ಈಗ ಪ್ಯಾಲಿಯೋ ಡಯೆಟ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.

ಆದರೆ ಈಗ ನಮ್ಮ ದೇಹವು ಗವಿಮಾನವರ ಕಾಲದಲ್ಲಿ ಇದ್ದಂತಿಲ್ಲ. ಎಲ್ಲವೂ ಬದಲಾಗಿದೆ. ಹಿಂದಿನ ಕಾಲದವರ ಜವನಶೈಲಿಯೇ ಬೇರೆಯಿತ್ತು. ನಮ್ಮ ಜೀವನಶೈಲಿಯೇ (Lifestyle) ಬೇರೆಯಿದೆ. ಜೀರ್ಣಾಂಗ ವ್ಯವಸ್ಥೆಯೂ ವ್ಯತ್ಯಸ್ಥವಾಗಿದೆ. ಅವರು ಬೇಟೆಯಾಡಿದ್ದನ್ನು ಮಾತ್ರ ತಿನ್ನುತ್ತಿದ್ದರು. ನಮ್ಮಂತೆ ಮನೆಯಲ್ಲಿ ಆರ್ಡರ್ ಮಾಡಿ ತಿನ್ನುತ್ತಿರಲಿಲ್ಲ. ಗುಹಾನಿವಾಸಿಗಳ ಜೀವಿತಾವಧಿ ಬಹಳ ಕಡಿಮೆ. ಅವರ ಜೀವನವು ಹೆಚ್ಚೆಂದರೆ 25 ವರ್ಷಕ್ಕೆ ಕೊನೆಗೊಳ್ಳುತ್ತಿತ್ತು. ಇಂದು ಅನೇಕ ಜನರ ಜೀವನವು 30 ವರ್ಷಗಳ ನಂತರವೇ ಪ್ರಾರಂಭವಾಗುತ್ತದೆ. ಇಂದಿನಂತೆ, ಮಾನವನ ಸರಾಸರಿ ಜೀವಿತಾವಧಿ 69 ವರ್ಷಗಳು. ಆದ್ದರಿಂದ ನಾವು ಶಿಲಾಯುಗದಲ್ಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಆಹಾರದಲ್ಲಿ ಕಾರ್ಬೋಹೈಡ್ರೇಟ್‌ನ ಪ್ರಮಾಣ
ಪ್ರತಿ ಗಂಟೆಗೆ ನಮಗೆ 30 ಕ್ಯಾಲೋರಿಗಳು ಬೇಕಾಗುತ್ತವೆ. ಇದು ಕಾರ್ಬೋಹೈಡ್ರೇಟ್‌ಗಳಿಂದ ಬರುತ್ತದೆ. ಆದರೆ ಈಗ ಯಾರೂ ಅಷ್ಟೊಂದು ಪ್ರಮಾಣದಲ್ಲಿ ತಿನ್ನುವುದಿಲ್ಲ. ಅವರು ದೈಹಿಕವಾಗಿ ಸಕ್ರಿಯರಾಗಿರಲಿ ಅಥವಾ ವೈಟ್ ಕಾಲರ್ ಉದ್ಯೋಗ (Job)ಗಳಲ್ಲಿರಲಿ, ಈಗ ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಸೇವಿಸುತ್ತಾರೆ. ಎಲ್ಲರೂ ಎಸಿಯೊಂದಿಗೆ ಬದುಕಲು ಅಭ್ಯಾಸ ಮಾಡಿರುವುದರಿಂದ, ಹೆಚ್ಚಿನ ಶಕ್ತಿಯ ಅಗತ್ಯ ಸಹ ಇರುವುದಿಲ್ಲ.

ಬಾಯಾರಿಕೆ ನೀಗಲು ಡಯಟ್ ಸೋಡಾ ಕುಡಿತೀರಾ ? ಆರೋಗ್ಯಕ್ಕೆ ಡೇಂಜರ್

ಭಾರತೀಯ ಆಹಾರ ಮಾರ್ಗಸೂಚಿಗಳ ಪ್ರಕಾರ ನಮ್ಮ ಆಹಾರವು ಹೆಚ್ಚಿನ ಕಾರ್ಬೋಹೈಡ್ರೇಟ್, ಮಧ್ಯಮ-ಪ್ರೋಟೀನ್, ಕಡಿಮೆ ಕೊಬ್ಬಿನ ಆಹಾರವಾಗಿದೆ. ಅಂದರೆ ನಮ್ಮ ಆಹಾರದಲ್ಲಿ 60-70% ಪಿಷ್ಟ, 10-15% ಪ್ರೋಟೀನ್ ಮತ್ತು ಅಂತಿಮವಾಗಿ ಕೊಬ್ಬು. ಇವು ನಾವು ತೆಗೆದುಕೊಳ್ಳುವ ಆಹಾರದ ಅಳತೆಗಳು. ಇದನ್ನು ತಕ್ಷಣವೇ ಹೆಚ್ಚಿನ ಕೊಬ್ಬಿನ ಆಹಾರವಾಗಿ ಪರಿವರ್ತಿಸಲಾಗುವುದಿಲ್ಲ. ಪ್ಯಾಲಿಯೊ ಆಹಾರವು ಹೆಚ್ಚು ಮಾಂಸ (Meat)ವನ್ನು ಒಳಗೊಂಡಿರುತ್ತದೆ. ಕಚ್ಚಾ ಮತ್ತು ಬೇಯಿಸಿದ ಸ್ಟೀಕ್ ನಡುವೆ ಹಲವು ವ್ಯತ್ಯಾಸಗಳಿವೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಈ ರೀತಿಯ ಕೊಬ್ಬನ್ನು ದಿನಕ್ಕೆ 15 ಗ್ರಾಂ ಮಾತ್ರ ತಿನ್ನಬಹುದು.

ಸ್ಯಾಚುರೇಟೆಡ್ ಕೊಬ್ಬುಗಳು, ಏಕಪರ್ಯಾಪ್ತ ಕೊಬ್ಬುಗಳು ಮತ್ತು ಬಹುಅಪರ್ಯಾಪ್ತ ಕೊಬ್ಬುಗಳು ಎಂಬ ಮೂರು ವಿಧದ ಕೊಬ್ಬುಗಳಿವೆ. ಈ ಮೂರನ್ನೂ ಸೇರಿಸಿ ತಿನ್ನಬೇಕು. ಅದರಲ್ಲೂ ಈ ಸ್ಯಾಚುರೇಟೆಡ್ ಕೊಬ್ಬಿನಲ್ಲಿ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಮಾತ್ರ ಬೇಕಾಗುತ್ತದೆ. ಆದರೆ ಪ್ಯಾಲಿಯೊ ಆಹಾರಗಳು ಕೊಬ್ಬನ್ನು ಹೆಚ್ಚಿಸುತ್ತವೆ. ಯಕೃತ್ತು ಕೊಬ್ಬನ್ನು ಸಂಸ್ಕರಿಸುತ್ತದೆ. ನೀವು ಹೆಚ್ಚು ಕೊಬ್ಬನ್ನು ಸೇವಿಸಿದಾಗ ನೀವು ಯಕೃತ್ತಿನ ಕೆಲಸವನ್ನು ಹೆಚ್ಚಿಸುತ್ತೀರಿ. ದೇಹದ ಯಾವುದೇ ಅಂಗವು ಪ್ರಕೃತಿಯಿಂದ ನಿಯೋಜಿಸಲಾದ ಕೆಲಸವನ್ನು ಮಾತ್ರ ನಿರ್ವಹಿಸುತ್ತದೆ. 

ಪ್ಯಾಲಿಯೊ ಆಹಾರ ಕ್ರಮದಲ್ಲಿ ಹೆಚ್ಚು ಕೊಬ್ಬಿನ ಸೇವನೆ
ಪ್ಯಾಲಿಯೊ ಆಹಾರದಲ್ಲಿರುವ ಜನರು ಹೆಚ್ಚು ಒಟ್ಟು ಕೊಬ್ಬನ್ನು ಸೇವಿಸುತ್ತಾರೆ. ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಆದರೆ ಇನ್ಸುಲಿನ್ ಹೇಗೆ ಬರುತ್ತದೆ ? ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಅವರ ಶುಗರ್ ಲೆವೆಲ್‌ಗಳು ಕೆಟ್ಟು ಹೋಗಿವೆ ಮತ್ತು ಕೀಟೋಸಿಸ್ ಎಂಬ ಸ್ಥಿತಿಗೆ ತಲುಪಿದೆ. ಶೇಖರಿಸಿದ ಕೊಬ್ಬನ್ನು ಶಕ್ತಿಯಾಗಿ ಬಳಸಲು ದೇಹಕ್ಕೆ ಕೀಟೋನ್‌ಗಳು ಮುಖ್ಯ. ಆ ಕೀಟೋನ್‌ಗಳು ಹೆಚ್ಚಾದಂತೆ, ನಿರ್ಜಲೀಕರಣವು ಸಂಭವಿಸಬಹುದು. ಪರಿಣಾಮವಾಗಿ, ದೇಹವು ಕ್ರಮೇಣ ಬಳಲಿಕೆ, ಗೊಂದಲ, ಕೋಮಾದ ಮುಂದಿನ ಸ್ಥಿತಿಯನ್ನು ತಲುಪುತ್ತದೆ. ಇದರ ಹೊರತಾಗಿ ಬೆಳವಣಿಗೆಯನ್ನು ಬದಲಾಯಿಸಲು ಹಲವು ಮಾರ್ಪಾಡುಗಳಿರುತ್ತವೆ. ಇದು ಅಂತಿಮವಾಗಿ ಜೀವಕ್ಕೆ ಅಪಾಯಕಾರಿಯಾಗಬಹುದು. ಹೀಗಾಗಿ ತೂಕವನ್ನು ಇಳಿಸಿಕೊಳ್ಳೋಕೆ ಯಾವುದೇ ಡಯೆಟ್ ಮಾಡೋ ಮೊದ್ಲು ತಜ್ಞರ ಸಲಹೆ ಪಡೆಯೋದು ಉತ್ತಮ.

Latest Videos
Follow Us:
Download App:
  • android
  • ios