Asianet Suvarna News Asianet Suvarna News

ಟೇಸ್ಟೀ ಚಿಕನ್ ಕಟ್ಲೆಟ್‌, ಬಾಯಿಗಿಟ್ರೆ ತಿನ್ತಾನೇ ಇರ್ಬೇಕು ಅನ್ಸುತ್ತೆ..ಅನುಪಮಾ ಗೌಡ ಹೇಳ್ಕೊಟ್ಟಿರೋ ರೆಸಿಪಿ ಇಲ್ಲಿದೆ

ವೀಕೆಂಡ್ ಬಂತೂಂದ್ರೆ ಸಾಕು ರುಚಿ ರುಚಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ. ಅದ್ರಲ್ಲೂ ನಾನ್‌ವೆಜ್‌ ಪ್ರಿಯರಂತೂ ಸ್ಪೆಷಲ್ ಆಗಿ ಏನಾದ್ರೂ ನಾನ್‌ವೆಜ್ ರೆಸಿಪಿ ಮಾಡಿ ಸವೀಬೇಕು ಅಂದ್ಕೊಳ್ತಾರೆ. ನೀವು ಸಹ ಈ ಸಂಡೇ ಏನಾದ್ರೂ ಸ್ಪೆಷಲ್ ಅಡುಗೆ ಮಾಡ್ಬೇಕು ಅಂದುಕೊಂಡಿದ್ದೀರಾ..ಹಾಗಿದ್ರೆ ಈ ಚಿಕನ್ ಕಟ್ಲೆಟ್‌ ಮಾಡಿ ತಿನ್ನಿ.

Tasty chicken cutlet mouth watering recipe by Actress Anupama Gowda Vin
Author
First Published Dec 9, 2023, 1:00 PM IST

ವೀಕೆಂಡ್ ಬಂತೂಂದ್ರೆ ಸಾಕು ರುಚಿ ರುಚಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ. ಅದ್ರಲ್ಲೂ ನಾನ್‌ವೆಜ್‌ ಪ್ರಿಯರಂತೂ ಸ್ಪೆಷಲ್ ಆಗಿ ಏನಾದ್ರೂ ನಾನ್‌ವೆಜ್ ರೆಸಿಪಿ ಮಾಡಿ ಸವೀಬೇಕು ಅಂದ್ಕೊಳ್ತಾರೆ. ನೀವು ಸಹ ಈ ಸಂಡೇ ಏನಾದ್ರೂ ಸ್ಪೆಷಲ್ ಅಡುಗೆ ಮಾಡ್ಬೇಕು ಅಂದುಕೊಂಡಿದ್ದೀರಾ..ಆದ್ರೆ ರೆಸ್ಟ್ ಮಾಡ್ಲೂ ಬೇಕು. ಅಂತೀರಾ..ಹಾಗಿದ್ರೆ ನೀವು ಸಿಂಪಲ್ ಆಗಿರೋ ಈ ರೆಸಿಪಿ ಮಾಡ್ಕೊಳ್ಬೋದು..ಅದು ಮತ್ತೇನಲ್ಲ..ಚಿಕನ್ ಕಟ್ಲೆಟ್‌. ಇದು ಹೆಲ್ದೀ ಮತ್ತು ಇದನ್ನು ಮಾಡೋಕೆ ಹೆಚ್ಚು ಟೈಂ ಸಹ ಬೇಕಾಗಲ್ಲ.ನಿರೂಪಕಿ ಹಾಗೂ ನಟಿ ಅನುಪಮಾ ಗೌಡ ರುಚಿಕರವಾದ ಚಿಕನ್ ಕಟ್ಲೆಟ್ ಮಾಡೋದು ಹೇಗೆಂತ ಹೇಳಿಕೊಟ್ಟಿದ್ದಾರೆ.

ಈ ಚಿಕನ್ ಕಟ್ಲೆಟ್‌, ಡಯೆಟ್ ಮಾಡೋರಿಗೂ ತುಂಬಾ ಒಳ್ಳೇದು. ಇದರಲ್ಲಿ ಪ್ರೋಟೀನ್‌ ಇರೋ ಕಾರಣ ತುಂಬಾ ಹೆಲ್ದೀ ಮತ್ತು ತೂಕ ಹೆಚ್ಚಾಗೋ ಭಯನೂ ಇಲ್ಲ. ಈ ರುಚಿಕರವಾದ ಚಿಕನ್ ಕಟ್ಲೆಟ್ ಮಾಡೋ ಸಿಂಪಲ್ ವಿಧಾನ ಇಲ್ಲಿದೆ.

ಆಲೂಗಡ್ಡೆಯಿಂದ ಮಾಡೋ ರೆಸಿಪಿ ಗೊತ್ತು, ಸಿಪ್ಪೆಯಿಂದ ಹೊಸ ಅಡುಗೆ ಮಾಡಿದ್ದಾರೆ ನೋಡಿ!

ಬೇಕಾಗುವ ಸಾಮಗ್ರಿಗಳು
ಚಿಕನ್‌ ಬ್ರೆಸ್ಟ್‌ 500 ಗ್ರಾಂ
ಮಧ್ಯಮ ಗಾತ್ರದ ಆಲೂಗಡ್ಡೆ 1
ಈರುಳ್ಳಿ 1
ಹಸಿಮೆಣಸಿನಕಾಯಿ 3
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ 2 ಸ್ಪೂನ್‌

ಮಾಡುವ ವಿಧಾನ: 
ಚಿಕನ್‌ ಬ್ರೆಸ್ಟ್‌, ಕತ್ತರಿಸಿದ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಇದಕ್ಕೆ ಉಪ್ಪನ್ನು ಸೇರಿ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ಬೇಕಾದರೆ ಮೊಟ್ಟೆಯನ್ನು ಸಹ ಸೇರಿಸಿಕೊಳ್ಳಬಹುದು. ಆಗಾಗ ಮಿಕ್ಸಿ ಜಾರ್ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ರುಬ್ಬಿಕೊಳ್ಳಿ. ನೀರು ಬಳಸಬಾರದು. ಟೆಕ್ಚರ್‌ ಸ್ಪಲ್ಪ ದಪ್ಪವಾಗಿದ್ದು, ಕೈಯಲ್ಲಿ ಅಂಟಿಕೊಳ್ಳುವ ರೀತಿ ಇರಬೇಕು.ಈಗ ಈ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ.

ಅರ್ಜೆಂಟಿದ್ರೆ ಗೊಜ್ಜವಲಕ್ಕಿ ಮಾಡಿ, ಗಿರಿಜಾ ಲೋಕೇಶ್ ರೆಸಿಪಿ ಹೇಳ್ತಾರೆ ನೋಡಿ!

ಸ್ಟವ್‌ ಮೇಲೆ ಅಗಲವಾದ ಪಾತ್ರೆಯನ್ನಿಟ್ಟು ಇದಕ್ಕೆ ಒಂದು ಸ್ಪೂನ್‌ನಷ್ಟು ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಈಗ ಸಿದ್ಧಪಡಿಸಿರುವ ಪೇಸ್ಟ್‌ನ್ನು ಕಟ್ಲೆಟ್‌ ಶೇಪ್‌ನಲ್ಲಿ ಮಾಡ್ಕೊಂಡು ಎಣ್ಣೆಯ ಮೇಲೆ ಹಾಕಿ. ಸ್ಟವ್‌ ಮೀಡಿಯಂ ಫ್ಲೇಮ್‌ನಲ್ಲಿರಲಿ. ಕಟ್ಲೆಟ್ ಒಂದು ಬದಿ ಬೆಂದ ನಂತರ ಮಗುಚಿ ಹಾಕಿ ಇನ್ನೊಂದು ಬದಿಯನ್ನೂ ಚೆನ್ನಾಗಿ ಬೇಯಿಸಿಕೊಳ್ಳಿ. ಕಟ್ಲೆಟ್‌, ಬದಿಯಲ್ಲೂ ಸರಿಯಾಗಿ ಬೇಯಿಸಿಕೊಳ್ಳಿ. ಐದೇ ನಿಮಿಷದಲ್ಲಿ ಟೇಸ್ಟಿಯಾದ ಚಿಕನ್‌ ಕಟ್ಲೆಟ್‌ ತಿನ್ನಲು ರೆಡಿಯಾಗುತ್ತದೆ. 

Follow Us:
Download App:
  • android
  • ios