Asianet Suvarna News Asianet Suvarna News

ಆಲೂಗಡ್ಡೆಯಿಂದ ಮಾಡೋ ರೆಸಿಪಿ ಗೊತ್ತು, ಸಿಪ್ಪೆಯಿಂದ ಹೊಸ ಅಡುಗೆ ಮಾಡಿದ್ದಾರೆ ನೋಡಿ!

ಬಹುತೇಕರ ಮನೆಯಲ್ಲಿ ತರಕಾರಿ ಸಿಪ್ಪೆಯನ್ನು ಬಳಸೋದಿಲ್ಲ. ಸಿಪ್ಪೆ ತೆಗೆದು ಕಸಕ್ಕೆ ಹಾಕುವವರೇ ಹೆಚ್ಚು. ನೀವೂ ಹಾಗೆ ಮಾಡ್ತಿದ್ದರೆ ಇನ್ಮುಂದೆ ಆಲೂಗಡ್ಡೆ ಸಿಪ್ಪೆ ಸಂಗ್ರಹಿಸಿ ಈ ಸೂಪರ್ ಖಾದ್ಯ ಸಿದ್ಧಪಡಿಸಿ. 
 

Man Made Tasty Dish From Potato Peels Watch Viral Video roo
Author
First Published Nov 15, 2023, 12:19 PM IST

ಆಲೂಗಡ್ಡೆಯಲ್ಲಿ ನಾನಾ ಬಗೆಯ ಆಹಾರವನ್ನು ನಾವು ತಯಾರಿಸ್ತೇವೆ. ಆಲೂಗಡ್ಡೆ ಇದ್ರೆ ಸಾಂಬಾರ್ ನಿಂದ ಹಿಡಿದು ಪಾನಿಪುರಿವರೆಗೆ ಎಲ್ಲ ಡಿಶ್ ತಯಾರಿಸ್ಬಹುದು. ಆದ್ರೆ ಆಲೂಗಡ್ಡೆ ಬಳಸ್ತೇವೆಯೇ ಹೊರತು ಅದ್ರ ಸಿಪ್ಪೆಯನ್ನು ನಾವು ಉಪಯೋಗಿಸೋದಿಲ್ಲ. ಆಲೂಗಡ್ಡೆ ಸಿಪ್ಪೆ ತೆಗೆದು ಅದನ್ನು ಕಸಕ್ಕೆ ಹಾಕೋದು ಪ್ರತಿ ದಿನ ನಾವೆಲ್ಲ ಮಾಡುವ ಕೆಲಸ. ನೀವೂ ಹಾಗೆ ಮಾಡ್ತಿದ್ದರೆ ಇನ್ಮುಂದೆ ಆಲೂಗಡ್ಡೆ ಸಿಪ್ಪೆಯನ್ನು ಕಸಕ್ಕೆ ಎಸೆಯುವ ತಪ್ಪು ಮಾಡ್ಬೇಡಿ. ಆಲೂಗಡ್ಡೆ ಸಿಪ್ಪೆಯಿಂದ್ಲೂ ರುಚಿಯಾದ ರೆಸಿಪಿ ತಯಾರಿಸ್ಬಹುದು.  

ಅಡುಗೆ (Cooking) ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.  ಈ ವೀಡಿಯೊದಲ್ಲಿ  ವ್ಯಕ್ತಿಯೊಬ್ಬರು ಆಲೂಗೆಡ್ಡೆ ಸಿಪ್ಪೆಗಳ ಸಹಾಯದಿಂದ ರುಚಿಯಾದ ಖಾದ್ಯ (Dish) ತಯಾರಿಸಿದ್ದಾರೆ. ಅದನ್ನು ತಿಂದ ತೀರ್ಪುಗಾರರು ಅಚ್ಚರಿಗೊಂಡಿದ್ದಾರೆ.  ಸೂರಜ್ ಹೆಸರಿನ ವ್ಯಕ್ತಿ  ಆಲೂಗೆಡ್ಡೆ (Potatoes) ಸಿಪ್ಪೆಯಿಂದ ಚಿಪ್ಸ್ ತಯಾರಿಸಿದ್ದು, ರೆಸಿಪಿ ವೈರಲ್ ಆಗಿದೆ.

ಒಂದು ಆರ್ಡರ್ ಮಾಡಿದ್ರೆ ಮತ್ತೊಂದು ಕೊಡೋ ರೆಸ್ಟೋರೆಂಟ್, ಆದ್ರೂ ಜನ ಬರೋದು ನಿಲ್ಸೋಲ್ಲ!

ಆಲೂಗಡ್ಡೆ ಸಿಪ್ಪೆ ಚಿಪ್ಸ್ ತಯಾರಿಸೋದು ಹೇಗೆ? : ಇದನ್ನು ತಯಾರಿಸಲು ಆಲೂಗಡ್ಡೆ ಸಿಪ್ಪೆಯನ್ನು ಮೊದಲು ತೆಗೆಯಬೇಕು. ನಂತರ ಈ ಸಿಪ್ಪೆಗಳಿಗೆ ರುಚಿಕರವಾದ ಮಸಾಲೆಗಳು ಮತ್ತು ಉಪ್ಪನ್ನು ಸೇರಿಸಬೇಕು. ನಂತರ ಅದನ್ನು ಮೈಕ್ರೊವೇವ್‌ನಲ್ಲಿ ಕಡಿಮೆ ತಾಪಮಾನದಲ್ಲಿ ಬಿಸಿಮಾಡಬೇಕು. ರಾತ್ರಿ ಪೂರ್ತಿ ಮೈಕ್ರೊವೇವ್ ನಲ್ಲಿ ಇದನ್ನು ಇಟ್ಟು ಒಣಗಿಸಬೇಕಾಗುತ್ತದೆ. ಅದು ಸಂಪೂರ್ಣ ಒಣಗಿದ ನಂತ್ರ ಆಲೂಗಡ್ಡೆ ಸಿಪ್ಪೆಗಳು ಗರಿಗರಿಯಾದ ಮಸಾಲೆಯುಕ್ತ ತಿಂಡಿ ಸವಿಯಲು ಸಿದ್ಧವಾಗುತ್ತದೆ.  

ತೀರ್ಪುಗಾರರಿಂದ ಮೆಚ್ಚುಗೆ :  ಮಾಸ್ಟರ್ ಚೆಫ್ ಇಂಡಿಯಾ ಶೋನಲ್ಲಿ ಸೂರಜ್ ಇದ್ರ ಬಗ್ಗೆ ಹೇಳ್ತಿದ್ದಂತೆ ಜಡ್ಜ್ ಆಸಕ್ತಿ ತೋರಿದ್ದಾರೆ. ಇದನ್ನು ತಿಂದ ವಿಕಾಸ್ ಖನ್ನಾ ಮತ್ತು ರಣವೀರ್ ಬ್ರಾರ್ ಕೂಡ ಸೂರಜ್‌ ರನ್ನು ಹೊಗಳಿದ್ದಾರೆ. ಇನ್ಮುಂದೆ ಭಾರತೀಯರು ಯಾವುದೇ ಕಾರಣಕ್ಕೂ ಆಲೂಗಡ್ಡೆ ಸಿಪ್ಪೆಯನ್ನು ಕಸಕ್ಕೆ ಹಾಕೋದಿಲ್ಲವೆಂದು ತೀರ್ಪುಗಾರರು ಕಮೆಂಟ್ ಮಾಡಿದ್ದಾರೆ.

ಮಧುಮೇಹಕ್ಕೆ ಕಾರಣವಾಗುವ 7 'S' …. ಇವತ್ತಿನಿಂದ ನಿಮ್ಮ ಜೀವನ ಬದಲಾಗಲಿ!

ಸೂರಜ್ ಖಾದ್ಯ ಟ್ರೈ ಮಾಡಿದ ನೆಟ್ಟಿಗರು : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನ bawarchi_nari_ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ೨೨ ಕೋಟಿಗೂ ಹೆಚ್ಚು ಲೈಕ್ಸ್ ಈ ವಿಡಿಯೋಕ್ಕೆ ಬಂದಿದೆ. ಆಲೂಗಡ್ಡೆ ಸಿಪ್ಪೆಯ ಈ ಖಾದ್ಯವನ್ನು ಅನೇಕರು ಟ್ರೈ ಮಾಡ್ತಿದ್ದಾರೆ. ಜಡ್ಸ್ಸ್ ನೀಡಿದ ಪ್ರತಿಕ್ರಿಯೆಯನ್ನೇ ಸಾಮಾಜಿಕ ಜಾಲತಾಣ ಬಳಕೆದಾರರು ನೀಡಿದ್ದಾರೆ. ಎಲ್ಲ ಕಡೆ ಈ ಖಾದ್ಯವನ್ನು ಇಷ್ಟಪಡಲು ಶುರು ಮಾಡಿದ್ರೆ ತರಕಾರಿ ವೇಸ್ಟ್ ಆಗೋದು ಕಡಿಮೆ ಆಗುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಹಳೆಯ ಖಾದ್ಯ ಇದು. ನೀವು ಒಣಗಿಸಬೇಕಾಗಿಲ್ಲ. ಇದನ್ನು ಕಡಿಮೆ ಎಣ್ಣೆಯಲ್ಲಿ ಫ್ರೈ ಕೂಡ ಮಾಡ್ಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ. ಇದಕ್ಕೆ ಮಸಾಲೆ ಹಾಕಲು ಮರೆಯಬೇಡಿ ಎಂದಿದ್ದಾರೆ. ನನ್ನ ಬಳಿ ಓವನ್ ಇಲ್ಲ. ಹೇಗೆ ಈ ಡಿಶ್ ಮಾಡೋದು ಅಂತಾ ಒಬ್ಬ ಬಳಕೆದಾರ ಪ್ರಶ್ನೆ ಕೇಳಿದ್ರೆ, ಇನ್ಮುಂದೆ ಹೊಟೇಲ್ ನಲ್ಲಿ ೮೫೦ ರೂಪಾಯಿ ಪ್ಲೇಟ್ ನಂತೆ ಇದು ಮಾರಾಟವಾಗುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಎಲೆಕ್ಟ್ರಿಕಲ್ ಬಿಲ್ ತುಂಬೋದು ಕಷ್ಟವೆಂದು ಮತ್ತೊಬ್ಬ ಬಳಕೆದಾರ ಹೇಳಿದ್ರೆ, ಇದು ಪಶ್ಚಿಮ ಬಂಗಾಳದ ಖಾದ್ಯವಾಗಿದ್ದು, ಸೂರ್ಯನ ಕಿರಣದ ಕೆಳಗೆ ಇದನ್ನು ಒಣಗಿಸಬಹುದು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಆಲೂಗಡ್ಡೆ ಮಾತ್ರವಲ್ಲ ಎಲ್ಲ ತರಕಾರಿ ಸಿಪ್ಪೆಯಲ್ಲಿ, ತರಕಾರಿಗಿಂತ ಹೆಚ್ಚು ಪೋಷಕಾಂಶವಿರುತ್ತದೆ. ಹಾಗಾಗಿ ಇದನ್ನು ಯಾವುದೇ ರೀತಿಯಲ್ಲಾದ್ರೂ ಸೇವನೆ ಮಾಡಿ ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ. 

Follow Us:
Download App:
  • android
  • ios