ಅರ್ಜೆಂಟಿದ್ರೆ ಗೊಜ್ಜವಲಕ್ಕಿ ಮಾಡಿ, ಗಿರಿಜಾ ಲೋಕೇಶ್ ರೆಸಿಪಿ ಹೇಳ್ತಾರೆ ನೋಡಿ!
ಅವಲಕ್ಕಿ ಒಗ್ಗರಣೆ ಈಗಿನ ಮಹಿಳೆಯರಿಗೆ ಗೊತ್ತು. ಆದ್ರೆ ಹಳೆ ಅಡುಗೆ ಗೊಜ್ಜವಲಕ್ಕಿ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅದನ್ನು ಮಾಡೋದು ಕಷ್ಟ ಎನ್ನುವ ನಂಬಿಕೆಯಲ್ಲೇ ಅನೇಕರು ಪ್ರಯತ್ನಪಡೋದಿಲ್ಲ. ಆದ್ರೆ ಗೊಜ್ಜವಲಕ್ಕಿ ಮಾಡೋದು ಬಹಳ ಸುಲಭ ಅಂತಾ ಗಿರಿಜಮ್ಮ ಹೇಳ್ತಾರೆ.

ನಟಿ ಗಿರಿಜಾ ಲೋಕೇಶ್, ಗಿರಿಜಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಗಿರಿಜಾ ಲೋಕೇಶ್ ನಟನೆ ಮಾತ್ರ ಅಭಿಮಾನಿಗಳಿಗೆ ಇಷ್ಟವಾಗೋದಿಲ್ಲ, ಗಿರಿಜಾ ಲೋಕೇಶ್ ಸ್ವಭಾವ, ಮಗ, ಸೊಸೆ, ಮಗಳನ್ನು ನೋಡಿಕೊಳ್ಳುವ ರೀತಿ ಕೂಡ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಗಿರಿಜಾ ಲೋಕೇಶ್ ಬಹುತೇಕರ ಅಚ್ಚುಮೆಚ್ಚಿನ ಕಲಾವಿದೆ. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್ ಚಾನೆಲ್ ನಲ್ಲಿ ಕಾಣಿಸಿಕೊಳ್ತಾರೆ. ಸೊಸೆ, ಮಗಳು, ಮೊಮ್ಮಗನ ಜೊತೆ ಆಕ್ಟಿಂಗ್ ಮಾಡುವ ಗಿರಿಜಮ್ಮ ಕೆಲವೊಂದು ರೆಸಿಪಿಗಳನ್ನು ನಮಗೆ ತಿಳಿಸ್ತಿರುತ್ತಾರೆ.
ಮಹಿಳೆಯರಿಗೆ ನಾಳೆ ಬೆಳಿಗ್ಗೆ ತಿಂಡಿ ಎನು ಎನ್ನುವ ಚಿಂತೆ ಕಾಡುತ್ತದೆ. ಅದೇ ಇಡ್ಲಿ, ದೋಸೆ, ಪುಲಾವ್ ಮಾಡಿ ಬೋರ್ ಆಗಿರೋರು ನಾಳೆ ಏನು ಎಂಬ ಟೆನ್ಷನ್ ನಲ್ಲಿರ್ತಾರೆ. ಹಾಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬೇಗ ಬೇಗ ಮಾಡುವ ತಿಂಡಿ ರೆಸಿಪಿ (Recipe) ಗೊತ್ತಿದ್ರೆ ಬೆಸ್ಟ್. ಹಳೆಯದಾದ್ರೂ ಅನೇಕರಿಗೆ ಗೊಜ್ಜವಲಕ್ಕಿ ಮಾಡೋದು ಹೇಗೆ ಅಂತಾ ಗೊತ್ತಿಲ್ಲ. ಗಿರಿಜಾ ಲೋಕೇಶ್ (Girija Lokesh) ಈ ಬಾರಿ ಗೊಜ್ಜವಲಕ್ಕಿ ಮಾಡೋದನ್ನು ಹೇಳಿದ್ದಾರೆ. ಅರ್ಜೆಂಟ್ ಇದ್ದಾಗ್ಲೂ ಇದನ್ನು ಸುಲಭವಾಗಿ ಮಾಡ್ಬಹದು ಎನ್ನುತ್ತಾರೆ ಗಿರಿಜಾ ಲೋಕೇಶ್.
ಜಿಬುಟಿಯಲ್ಲಿ ತಯಾರಿಸೋ ಫ್ರೆಂಚ್ ಬ್ರೆಡ್ ಮಹತ್ವ ತಿಳಿಸಿದ ಡಾ. ಬ್ರೋ
ಇಂದು ಗಿರಿಜಾ ಲೋಕೇಶ್ ಹೇಳಿರುವ ಗೊಜ್ಜವಲಕ್ಕಿ (Gojjavalakki) ರೆಸಿಪಿ ನಿಮ್ಮ ಮುಂದೆ :
ಗೊಜ್ಜವಲಕ್ಕಿ ಮಾಡಲು ಬೇಕಾಗುವ ಪದಾರ್ಥ : ಅವಲಕ್ಕಿ, ಹುಣಸೆ ಹಣ್ಣಿನ ರಸ, ಸಾಂಬಾರ್ ಪುಡಿ, ಒಣ ಮೆಣಸು, ಬೆಲ್ಲ, ಕರಿಬೇವು, ಒಣ ಕೊಬ್ಬರಿ, ಉದ್ದಿನ ಬೇಳೆ, ಶೇಂಗಾ, ಉಪ್ಪು, ಸಾಸಿವೆ, ಇಂಗು ಹಾಕಿ.
ಗೊಜ್ಜವಲಕ್ಕಿ ತಯಾರಿಸೋದು ಹೇಗೆ? : ಗೊಜ್ಜವಲಕ್ಕಿ ತಯಾರಿಸುವ ಮೊದಲು ನೀವು ಮಿಕ್ಸಿ ಜಾರ್ ಗೆ ಅವಲಕ್ಕಿ ಹಾಕಿ ರುಬ್ಬಬೇಕು. ಅವಲಕ್ಕಿ ತರಿತರಿ ಇರುವಂತೆ ನೋಡಿಕೊಳ್ಳಿ. ಒಂದು ಬಾರಿ ಮಿಕ್ಸಿ ಮಾಡಿದ್ರೆ ಸಾಕು. ನಂತ್ರ ಅದನ್ನು ಒಂದು ಪಾತ್ರೆಗೆ ಹಾಕಿ, ತೊಳೆದು ಮುಚ್ಚಿಡಬೇಕು. ಅವಲಕ್ಕಿಯಲ್ಲಿ ನೀರಿನಾಂಶ ಇರುವುದು ಮುಖ್ಯ. ನಂತ್ರ ನೀರಿನಲ್ಲಿ ನೆನೆಸಿಟ್ಟ ಹುಣಸೆ ಹಣ್ಣನ್ನು ಚೆನ್ನಾಗಿ ಹಿಂಡಿ ಬರೀ ಹುಣಸೆ ಹಣ್ಣಿನ ರಸ ತೆಗೆದುಕೊಳ್ಳಬೇಕು. ಒಂದು ಪಾತ್ರೆಗೆ ಈ ರಸವನ್ನು ಹಾಕಿ ಗ್ಯಾಸ್ ಮೇಲಿಟ್ಟು ಆ ರಸಕ್ಕೆ ಸಾಂಬಾರ ಪುಡಿ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಅದು ಪಾಕವಾಗುವವರೆಗೆ ಕುದಿಸಿ.
ಉಪವಾಸ ಮಾಡೋದ್ರಿಂದ ನಿಜವಾಗ್ಲೂ ದೇಹದ ವಿಷ ಕಡಿಮೆಯಾಗುತ್ತಾ?
ನಂತ್ರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಾಸಿವೆ ಹಾಕಬೇಕು. ನಂತ್ರ ಶೇಂಗಾ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಶೇಂಗಾ ಸ್ವಲ್ಪ ಹುರಿದ ಮೇಲೆ ನೀವು ಉದ್ದಿನ ಬೇಳೆ ಹಾಕಿ. ನಂತ್ರ ಒಣ ಮೆಣಸು, ಕರಿಬೇವು ಹಾಕಿ. ಅದಕ್ಕೆ ಸ್ವಲ್ಪ ಇಂಗನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಹುಣಸೆಹಣ್ಣಿನ ರಸದ ಗೊಜ್ಜನ್ನು ಈ ಒಗ್ಗರಣೆಗೆ ಹಾಕಿ ಮಿಕ್ಸ್ ಮಾಡಿ. ತೊಳೆದಿಟ್ಟ ಅವಲಕ್ಕಿಯನ್ನು ಈ ಮಿಶ್ರಣಕ್ಕೆ ಹಾಕಿ, ನಿಧಾನವಾಗಿ ಮಿಕ್ಸ್ ಮಾಡಿ. ನಂತ್ರ ಅದರ ಮೇಲೆ ಒಣ ಕೊಬ್ಬರಿಯನ್ನು ಹಾಕಿ ಅಲಂಕರಿಸಿ ಎನ್ನುತ್ತಾರೆ ಗಿರಿಜಾ ಲೋಕೇಶ್.
ಅವಲಕ್ಕಿ ಸೇವನೆಯಿಂದ ಇದೆ ಇಷ್ಟೊಂದು ಲಾಭ : ಅವಲಕ್ಕೆ ಆರೋಗ್ಯಕ್ಕೆ ಒಳ್ಳೆಯದು. ಅವಲಕ್ಕಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಸರಿಸುಮಾರು ಶೇಕಡಾ 76.9ರಷ್ಟು ಕಾರ್ಬೋಹೈಡ್ರೇಟ್‌ಗಳು ಮತ್ತು ಶೇಕಡಾ 23ರಷ್ಟು ಕೊಬ್ಬನ್ನು ಹೊಂದಿದೆ. ತೂಕ ಇಳಿಕೆಗೆ ಹೇಳಿ ಮಾಡಿಸಿದ ಆಹಾರ. ಗೊಜ್ಜವಲಕ್ಕಿಯಲ್ಲಿ ಹುಣಸೆಹಣ್ಣು, ತೆಂಗಿನ ತುರಿ ಸೇರಿದಂತೆ ಮಸಾಲೆ ಪದಾರ್ಥ ಬೆರೆಸುವುದ್ರಿಂದ ಅದು ದುಪ್ಪಟ್ಟು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ.