ಯುವತಿಗೆ ಮಿಸ್‌ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ

ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ದಿನಸಿ ಸಾಮಾನು ತಂದು ಕೊಟ್ಟ ಡೆಲಿವರಿ ಬಾಯ್ (Delivery Agent) ಒಬ್ಬ ನಂತರ ಆಕೆಗೆ ಮಿಸ್ ಯೂ ಲಾಟ್ ಎಂದು ಸಂದೇಶ ಕಳುಹಿಸಿದ್ದಾನೆ. ಇದನ್ನು ಮಹಿಳೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಸ್ವಿಗ್ಗಿ ಸಂಸ್ಥೆ ಸಂದೇಶ ಕಳುಹಿಸಿದ ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದು ಹಾಕಿದೆ. 

Swiggy Delivery boy sent Miss You Texts to customer Swiggy Deactivated his service akb

ಮುಂಬೈ:  ಆನ್ಲೈನ್‌ನಲ್ಲಿ ಪ್ರತಿಯೊಂದನ್ನು ಆರ್ಡರ್ ಮಾಡಿ ಕುಳಿತಲ್ಲಿಗೆ ಪ್ರತಿಯೊಂದನ್ನು ತರಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಔಷಧಿಯಿಂದ ಹಿಡಿದು ಬಟ್ಟೆ ದಿನಸಿ ಸಾಮಾನುಗಳವರೆಗೆ ಈಗ ಪ್ರತಿಯೊಂದು ಆನ್‌ಲೈನ್‌ ಮೂಲಕ ನೀವು ಇದ್ದಲ್ಲಿಗೆ ಬಂದು ತಲುಪುವುದು. ಹೀಗೆ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ದಿನಸಿ ಸಾಮಾನು ತಂದು ಕೊಟ್ಟ ಡೆಲಿವರಿ ಬಾಯ್ (Delivery Agent) ಒಬ್ಬ ನಂತರ ಆಕೆಗೆ ಮಿಸ್ ಯೂ ಲಾಟ್ ಎಂದು ಸಂದೇಶ ಕಳುಹಿಸಿದ್ದಾನೆ. ಇದನ್ನು ಮಹಿಳೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು ಇದು ದೊಡ್ಡ ಸುದ್ದಿಯಾಗುತ್ತಿದ್ದಂತೆ ಸ್ವಿಗ್ಗಿ ಸಂಸ್ಥೆ ಸಂದೇಶ ಕಳುಹಿಸಿದ ಡೆಲಿವರಿ ಬಾಯ್ ಅನ್ನು ಕೆಲಸದಿಂದ ತೆಗೆದು ಹಾಕಿದೆ. 

ಟ್ವಿಟ್ಟರ್‌ನಲ್ಲಿ ಪ್ರಾಪ್ತಿ ಎಂಬ ಮಹಿಳೆ ತಮಗೆ ಡೆಲಿವರಿ ಬಾಯ್ ಮೆಸೇಜ್ ಮಾಡಿದ್ದನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಬಳಿಕ ಸ್ವಿಗ್ಗಿ ಸಂಸ್ಥೆ, ಗ್ರಾಹಕರಿಗೆ ಅಸಂಬದ್ಧ ಸಂದೇಶದ ಕಳುಹಿಸಿದ  ಡೆಲಿವರಿ ಏಜೆಂಟ್ ಅನ್ನು ಸೇವೆಯಿಂದ ನಿಷ್ಕ್ರಿಯಗೊಳಿಸಿದೆ. ಮಹಿಳೆಯ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸಿದ ಡೆಲಿವರಿ ಏಜೆಂಟ್ ನಂತರ ಆಕೆಗೆ ಮಿಸ್ ಯು ಲಾಟ್ ಎಂಬ ಸಂದೇಶ ಕಳುಹಿಸಿದ್ದ. ನಿಮ್ಮ ಸೌಂದರ್ಯ ಚೆನ್ನಾಗಿದೆ, ನಿಮ್ಮ ನಡವಳಿಕೆ ಅದ್ಭುತವಾಗಿದೆ ಎಂದು ಸಂದೇಶ ಕಳುಹಿಸಿದ್ದ. 

 

ಇದನ್ನು ನೋಡಿದ ಯುವತಿ ಪ್ರಾಪ್ತಿ ಸ್ವಿಗ್ಗಿಯ ಸಪೋರ್ಟ್ ಟೀಮ್‌ಗೆ  ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಮಂಗಳವಾರ ರಾತ್ರಿ (ಜೂನ್‌ 14) ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ (Swiggy Instamart) ದಿನಸಿ ವಸ್ತುಗಳನ್ನು ಆರ್ಡರ್ ಮಾಡಿರುವುದಾಗಿ ಪ್ರಾಪ್ತಿ (Prapthi) ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದಾದ ಬಳಿಕ ಡೆಲಿವರಿ ಸಿಬ್ಬಂದಿ ಆಕೆಗೆ ಈ ರೀತಿ ಅಸಂಬದ್ಧ ಸಂದೇಶಗಳನ್ನು ಕಳುಹಿಸಿದ್ದಾನೆ. 

ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್‌ ಘೋಷಣೆ

ಡೆಲಿವರಿ ಬಾಯ್ ನನಗೆ ವಾಟ್ಸಾಪ್‌ನಲ್ಲಿ ಈ ರೀತಿ ಸಂದೇಶ ಕಳುಹಿಸಿದ್ದಾನೆ. ಇದೇನು ಮೊದಲ ಬಾರಿಯೂ ಅಲ್ಲ, ಕೊನೆಯ ಬಾರಿಯೂ ಅಲ್ಲ. ಈ ರೀತಿ ಏನಾದರೂ ಆಗುತ್ತಿರುತ್ತದೆ ಎಂದು ಪ್ರಾಪ್ತಿ ಬರೆದಿದ್ದಾರೆ. ಅಲ್ಲದೇ ಆರಂಭದಲ್ಲಿ ಸ್ವಿಗ್ಗಿಯ ಗ್ರಾಹಕ ಬೆಂಬಲ ತಂಡ ಈ ವಿಚಾರಕ್ಕೆ ಸಮರ್ಪಕವಾಗಿ ಪ್ರತಿಕ್ರಿಯಿಸಲಿಲ್ಲ. ಆದರೆ ನಂತರ ಸ್ವಿಗ್ಗಿಯ ಗ್ರಾಹಕ ಸಿಬ್ಬಂದಿ ನನ್ನನ್ನು ಸಂಪರ್ಕಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಗ್ರಾಹಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದೆ. ಅಲ್ಲದೇ ಡೆಲಿವರಿ ಬಾಯ್‌ನ್ನು ಸೇವೆಯಿಂದ ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಘಟನೆ ಗ್ರಾಹಕರ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಕುರಿತು ಕಳವಳ ಮೂಡಿಸಿದೆ.

ಓಲಾ ಝೊಮ್ಯಾಟೋದಲ್ಲಿ ದುಡಿಯುತ್ತ ಸಾಫ್ಟವೇರ್ ಇಂಜಿನಿಯರ್ ಆದ ಯುವಕ
 

ಸ್ವಿಗ್ಗಿ ಮತ್ತು ಜೊಮಾಟೊದಂತಹ ವಿತರಣಾ ಸೇವೆಗಳು ಸಾಮಾನ್ಯವಾಗಿ ನಂಬರ್-ಮಾಸ್ಕಿಂಗ್ ವೈಶಿಷ್ಟ್ಯವನ್ನು ಬಳಸುತ್ತವೆ. ಪ್ರಾಪ್ತಿ ಅವರು ಅಪ್ಲಿಕೇಷನ್‌ ಬದಲು ತನ್ನ ಕರೆ ಲಾಗ್ ಅನ್ನು ಬಳಸಿಕೊಂಡು ಡೆಲಿವರಿ ಬಾಯ್‌ಗೆ ಕರೆ ಮಾಡಿದಳು . ಹೀಗಾಗಿ ಆಕೆಯ ಫೋನ್ ಸಂಖ್ಯೆಯನ್ನು ಪಡೆಯಲು ಏಜೆಂಟ್ ಯಶಸ್ವಿಯಾಗಿರಬಹುದು ಎಂದು ಮನಿಕಂಟ್ರೋಲ್ ವರದಿ ಮಾಡಿದೆ. 
 

Latest Videos
Follow Us:
Download App:
  • android
  • ios