ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್‌ ಘೋಷಣೆ

ಝೊಮ್ಯಾಟೋ ಸಿಇಒ ದೀಪಿಂದರ್‌ ಘೋಷಣೆ

ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ!

 

Zomato CEO Deepinder Goyal donates Esops worth Rs 700 crore to Future Foundation pod

ನವದೆಹಲಿ: ಝೊಮ್ಯಾಟೋ ಕಂಪನಿಯ ಸಿಇಒ ದೀಪಿಂದರ್‌ ಗೋಯಲ್‌, ಸಂಸ್ಥೆಯ ಡೆಲಿವರಿ ಬಾಯ್‌ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 700 ಕೋಟಿ ರು. ದಾನ ಮಾಡಲು ನಿರ್ಧರಿಸಿದ್ದಾರೆ. ಸ್ಟಾಕ್‌ ಓನರ್‌ಶಿಪ್‌ ಯೋಜನೆಯ ಅಂಗವಾಗಿ ತಮಗೆ ಲಭ್ಯವಾಗುವ ಸುಮಾರು 700 ಕೋಟಿ ರು.ಗಳನ್ನು ಗೋಯಲ್‌ ಅವರು ಝೊಮ್ಯಾಟೋ ಫä್ಯಚರ್‌ ಸಂಸ್ಥೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

‘ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಗರಿಷ್ಠ ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚವನ್ನು ಝೊಮ್ಯಾಟೋ ಫä್ಯಚರ್‌ ಸಂಸ್ಥೆ ಪೂರೈಸಲಿದೆ. ಪ್ರತಿ ಮಗುವಿನ ಉನ್ನತ ಶಿಕ್ಷಣಕ್ಕಾಗಿ 5 ವರ್ಷಗಳವರೆಗೆ 50000 ರು ಒದಗಿಸಲಾಗುವುದು.

ಝೊಮ್ಯಾಟೋದಲ್ಲೇ 10 ವರ್ಷಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಡೆಲಿವರಿ ಬಾಯ್‌ ಅವರ ಮಕ್ಕಳಿಗೆ ತಲಾ 1 ಲಕ್ಷ ರು. ಶಿಕ್ಷಣಕ್ಕಾಗಿ ಒದಗಿಸಲಾಗುವುದು. ಈ ಸಂಸ್ಥೆಯು ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆ ಹೊಂದಿದ್ದು, 12 ನೇ ತರಗತಿ ಹಾಗೂ ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ನೀಡಲಾಗುವುದು. ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು’ ಎಂದು ಗೋಯಲ್‌ ಹೇಳಿದ್ದಾರೆ. ‘ಅಲ್ಲದೇ ಕೆಲಸದ ನಡುವೆ ಡೆಲಿವರಿ

ಸ್ವಿಗ್ಗಿ, ಝೋಮ್ಯಾಟೋ ತಾಂತ್ರಿಕ ದೋಷ: ಅರ್ಧ ತಾಸು ಸೇವೆ ವ್ಯತ್ಯಯ

ಆನ್‌ಲೈನ್‌ ಫುಡ್‌ ಡೆಲಿವರಿ ದೈತ್ಯ ಸಂಸ್ಥೆಗಳಾದ ಝೊಮ್ಯಾಟೋ ಹಾಗೂ ಸ್ವಿಗ್ಗಿ ಸೇವೆಯಲ್ಲಿ ಬುಧವಾರ ಕೆಲಕಾಲ ವ್ಯತ್ಯಯ ಉಂಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. ಆನ್‌ಲೈನ್‌ ಸೇವೆ ಒದಗಿಸುವ ಅಮೆಜಾನ್‌ ವೆಬ್‌ ಸವೀರ್‍ಸಸ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಸ್ವಿಗ್ಗಿ ಹಾಗೂ ಝೊಮ್ಯಾಟೋ ಸೇವೆಯಲ್ಲಿ ವ್ಯತ್ಯಯವಾಗಿತ್ತು.

ಈ ನಡುವೆ ಗ್ರಾಹಕರಿಂದ ಅಸಂಖ್ಯಾತ ದೂರುಗಳು ಕೇಳಿಬಂದ ಬೆನ್ನಲ್ಲೇ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿರುವ ಎರಡೂ ಸಂಸ್ಥೆಗಳು ತಾತ್ಕಾಲಿಕ ದೋಷವನ್ನು ಸರಿಪಡಿಸುತ್ತೇವೆ’ ಎಂದು ಹೇಳಿತ್ತು. ಇದಾದ ಅರ್ಧ ತಾಸಿನಲ್ಲೇ ಈ ದೋಷ ಸರಿಪಡಿಸಿ ಎಂದಿನಂತೆ ಆ್ಯಪ್‌ ಕಾರಾರ‍ಯರಂಭಿಸಿವೆ.

ಫುಡ್‌ ಡೆಲಿವರಿ ಬಾಯ್‌ಗಳ ವೇತನ ಹೆಚ್ಚಿಸಿ

ವಿವಿಧ ಕಂಪನಿಯ ಆಹಾರ ಪದಾರ್ಥಗಳನ್ನು ಮನೆಮನೆಗೆ ವಿತರಿಸುವವರ ವೇತನ ಹೆಚ್ಚಿಸಲು ಆಗ್ರಹಿಸಿ ನಗರದ ಶ್ರೀಗಂಧದ ಕೋಠಿ ಎದುರಿನ ಸ್ವಿಗ್ಗಿ ಇಂಡಿಯಾ ಅಫೀಷಿಯಲ್‌ ಮುಂದೆ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು. ಕಂಪನಿಯ ಆಹಾರ ವಿತರಕರ ವೇತನ ಹೆಚ್ಚಿಸಬೇಕಾಗಿದ್ದು, ಕಳೆದ ಮೂರು ದಿನಗಳಿಂದಲೂ ನಿಮ್ಮ ವಿತರಕರು ಮನವಿ ಮಾಡುತ್ತಿದ್ದರೂ ಸ್ಪಂದಿಸಿರುವುದಿಲ್ಲ. ನಮ್ಮ ಹೋರಾಟಕ್ಕೆ ಪ್ರತಿಕ್ರಿಯೆ ದೊರಕದಿದ್ದರೆ ನ್ಯಾಯ ಸಿಗದಿದ್ದರೇ ಕರುನಾಡ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ಮಾಡುವ ಜೊತೆಗೆ ನಿಮ್ಮ ವ್ಯವಹಾರವನ್ನು ತಡೆ ಮಾಡಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಈ ವೇಳೆ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಚಂದನ್‌ ಗೌಡ, ಯುವ ಘಟಕದ ಅಧ್ಯಕ್ಷ ಪುನೀತ್‌, ಪ್ರಧಾನ ಕಾರ್ಯದರ್ಶಿ ದರ್ಶನ್‌, ಉಪಾಧ್ಯಕ್ಷ ಹೇಮಂತ್‌, ನೇಮನ್‌ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios