Asianet Suvarna News Asianet Suvarna News

Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ

ಸಣ್ಣಗಾಗ್ಬೇಕು ಅನ್ನೋ ಆಸೆನಾ ? ಅದಕ್ಕಾಗಿ ಹಸಿವಿಲ್ಲ ಅಂತ್ಹೇಳಿ ಫುಡ್ (Food) ಸ್ಕಿಪ್ ಮಾಡ್ತೀರಾ ? ಬರೀ ಜ್ಯೂಸ್ (Juice), ಕಾಳುಗಳಲ್ಲಿ ಹೊಟ್ಟೆ ತುಂಬಿಸಿಕೊಳ್ತಿದ್ದೀರಾ ? ಹಾಗಿದ್ರೆ ನೀವು ಈ ವಿಷ್ಯವನ್ನು ತಿಳ್ಕೊಳ್ಳೇಬೇಕು.

Skipping Meals Dont Help In Weight Loss
Author
Bengaluru, First Published Feb 23, 2022, 9:32 PM IST

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight), ಬೊಜ್ಜು ಅನ್ನೋದು ಸಾರ್ವತಿಕ ಸಮಸ್ಯೆಯಾಗಿಬಿಟ್ಟಿದೆ. ಒತ್ತಡದ ಜೀವನಶೈಲಿ ಹಾಗೂ ಅಸಮರ್ಪಕ ಆಹಾರಪದ್ಧತಿ ಇಂಥಾ ಆರೋಗ್ಯ (Health) ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅಧಿಕ ತೂಕದಿಂದಾನೇ ಹಲವಾರು ಕಾಯಿಲೆಗಳು ವಕ್ಕರಿಸುತ್ತಿವೆ. ಹೀಗಾಗಿಯೇ ಎಲ್ಲರೂ ತೂಕ ಇಳಿಸ್ಕೊಂಡು ಸಣ್ಣಗಾಗ್ಬೇಕು ಅಂತ ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಜಿಮ್, ಯೋಗ, ಧ್ಯಾನ, ಡಯೆಟ್ಗಳ ಮೊರೆ ಹೋಗ್ತಾರೆ. ಅದರಲ್ಲೂ ಊಟವನ್ನು ಬಿಟ್ಟುಬಿಡುವುದು ತೂಕವನ್ನು ಕಳೆದುಕೊಳ್ಳಲು ಸುಲಭವಾದ ಮಾರ್ಗ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಅದು ನಿಜವಲ್ಲ ಅನ್ನೋದು ನಿಮಗೆ ಗೊತ್ತಾ ?

ತೂಕ ಕಳೆದುಕೊಳ್ಳಲು ಹೆಚ್ಚಿನವರು ಅನುಸರಿಸುವ ಮಾರ್ಗ ಡಯೆಟ್ (Diet). ಮಿತವಾದ ಆಹಾರ ಸೇವನೆ, ಹೆಚ್ಚು ಹಣ್ಣು-ಸೊಪ್ಪು ತರಕಾರಿಗಳ ಸೇವನೆ, ಧಾನ್ಯ, ಜ್ಯೂಸ್‌ಗಳ ಸೇವನೆ, ಅನ್ನ ಸೇವಿಸದಿರುವುದು ಹೀಗೆ ನಾನಾ ರೀತಿಯಲ್ಲಿ ಡಯೆಟ್ ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರಂತೂ ಮೂರೂ ಹೊತ್ತು ಜ್ಯೂಸ್ ಕುಡಿಯುವ ಮೂಲಕ ಕಳೆಯುವುದಿದೆ. ಇನ್ನು ಕೆಲವರಂತೂ ತೂಕ ಕಳೆದುಕೊಂಡು ಸ್ಲಿಮ್ ಆಗಿ ಬಿಡೋ ಆಸೆಯಲ್ಲಿ ಸಂಪೂರ್ಣವಾಗಿ ಊಟ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಈ ರೀತಿ ನೀವು ಎಂದಿಗೂ ಮಾಡಬಾರದು. ಅದ್ಯಾಕೆ ? ಇದ್ರಿಂದೇನು ತೊಂದ್ರೆ ನಾವ್ ಹೇಳ್ತೀವಿ.

Food Tips: ತೂಕ ಇಳಿಸ್ಕೋಬೇಕು, ಎಲ್ಲಾ ವೆರೈಟಿ ಫುಡ್ ತಿನ್ಬೇಕು ಅನ್ನೋರು ಇದನ್ನೋದಿ

ಆಹಾರತಜ್ಞೆ ಡೀನ್ನೆ ಪಾಂಡೆ ಹೇಳುವ ಪ್ರಕಾರ, ‘ನೀವು ತೂಕವನ್ನು ಕಳೆದುಕೊಳ್ಳಲು ಬಯಸುತ್ತೀರಾ ಅಥವಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತೀರಾ ಎಂಬುದನ್ನು ಮೊದಲು ನಿರ್ಣಯಿಸಬೇಕಾಗಿದೆ. ಯಾಕೆಂದರೆ ಆರೋಗ್ಯಕ್ಕೆ ನಿಯಮಿತವಾದ ಸ್ಥಿರವಾದ ಊಟದ ವೇಳಾಪಟ್ಟಿಯನ್ನು ಹೊಂದಿರುವುದು ಅವಶ್ಯಕವಾಗಿದೆ’ ಎಂದಿದ್ದಾರೆ.
ಅನೇಕ ಬಾರಿ  ಒತ್ತಡದ ಜೀವನಶೈಲಿಯಿಂದಾಗಿ ನಾವು ಹೊತ್ತಿನ ಊಟವನ್ನು ಬಿಟ್ಟುಬಿಡುತ್ತೇವೆ. ಇನ್ನು ಕೆಲವೊಮ್ಮೆ ತಿನ್ನದೇ ಇರುವುದರಿಂದ ಸಣ್ಣಗಾಗುತ್ತೇವೆ ಅನ್ನೋ ಭ್ರಮೆಯನ್ನು ಹೊಂದಿರುತ್ತೇವೆ. ಆದರೆ, ವಾಸ್ತವದಲ್ಲಿ ಇದು ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಹ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಬಿಟ್ಟುಬಿಡುವುದು ಒಳ್ಳೆಯದಲ್ಲ.ಊಟವನ್ನು ಬಿಟ್ಟುಬಿಡುವುದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆಹಾರತಜ್ಞೆ ಡೀನ್ನೆ ಪಾಂಡೆ ತಿಳಿಸಿದ್ದಾರೆ. ಅದೇನೆಂದು ತಿಳಿಯೋಣ.

ಊಟವನ್ನು ಬಿಟ್ಟುಬಿಡುವುದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ 
ಊಟವನ್ನು ಬಿಟ್ಟುಬಿಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ. ನೀವು ಸೇವಿಸುವ ಊಟವು ನಿಮ್ಮ ಶಕ್ತಿಯ ಮಟ್ಟಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಆಯಾಸ ಶುರುವಾಗುತ್ತದೆ. ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ.ಊಟ ಮಾಡದೇ ಇರುವುದರಿಂದ ಅಗತ್ಯವಿರುವ ಪೌಷ್ಟಿಕಾಂಶವನ್ನು ನೀವು ಕಳೆದುಕೊಳ್ಳುತ್ತೀರಿ.

Food Tips: ಗೋಲ್‌ಗಪ್ಪಾ ತಿಂದ್ರೆ ತೂಕ ಕಡಿಮೆಯಾಗುತ್ತಾ ?

ಊಟ ಮಾಡದ ಕಾರಣ ಸಕ್ಕರೆಯ ಕಡುಬಯಕೆಗಳು ಹೆಚ್ಚಾಗುತ್ತದೆ. ಇದರಿಂದ ಮಧುಮೇಹ (Diabetes)ದ ಅಪಾಯ ಹೆಚ್ಚಾಗಿರುತ್ತದೆ. ಊಟ ಮಾಡದೇ ಇರುವುದು ನಿಮ್ಮ ಮನಸ್ಥಿತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರಬಹುದು. ಇದು ತಲೆನೋವಿಗೆ ಕಾರಣವಾಗಬಹುದು. ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಊಟವನ್ನು ಬಿಡುವುದರಿಂದ ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು.

ತೂಕವನ್ನು ಕಳೆದುಕೊಳ್ಳಲು ಬಯಸುವುದಾದರೆ ಆಹಾರಪದ್ಧತಿಯಲ್ಲಿ ಬೇರೇನು ಬದಲಾವಣೆ ಮಾಡಬಹುದು ?
ಪ್ರತಿದಿನ 4-5 ಬಾರಿ ತಿನ್ನಿರಿ. ಇದರಿಂದ ಮಾತ್ರ ಆರೋಗ್ಯವಾಗಿರಲು ಆಗುವಷ್ಟು ಸಮರ್ಪಕವಾಗಿ ಹೊಟ್ಟೆ ತುಂಬುತ್ತದೆ. ಎರಡು ಊಟಗಳ ನಡುವಿನ ಅಂತರವು ನಾಲ್ಕು ಗಂಟೆಗಳಿಗಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದರ ಮಧ್ಯೆ ಕೇವಲ ಆರೋಗ್ಯಕರ ಹಣ್ಣುಗಳು ಮತ್ತು ಕಾಳುಗಳನ್ನು ಮಾತ್ರ ಸೇವಿಸಿ. 'ಬೆಳಗ್ಗಿನ ಉಪಹಾರವನ್ನು ಎಂದಿಗೂ ಬಿಟ್ಟುಬಿಡಬೇಡಿ. ಇದು ನಿಶ್ಯಕ್ತಿ, ಆಯಾಸ, ತಲೆನೋವು ಮೊದಲಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹವು ದೈನಂದಿನ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ಶಕ್ತಿಯ ಕೊರತೆ ಉಂಟಾಗುತ್ತದೆ. 

Follow Us:
Download App:
  • android
  • ios