Food Tips: ತೂಕ ಇಳಿಸ್ಕೋಬೇಕು, ಎಲ್ಲಾ ವೆರೈಟಿ ಫುಡ್ ತಿನ್ಬೇಕು ಅನ್ನೋರು ಇದನ್ನೋದಿ
ಫ್ರೆಂಡ್ಸ್ ಬರ್ತ್‌ಡೇ ಪಾರ್ಟಿ, ಡಿನ್ನರ್ ಅಂತ ರೆಸ್ಟೋರೆಂಟ್ (Restaurant)ಗೆ ಕರೀತಾರೆ. ನೀವೋ ಡಯೆಟ್‌ನಲ್ಲಿದ್ದೀರಿ, ಏನಾದ್ರೂ ತಿನ್ನೋದು ಹೇಗಪ್ಪಾ ಅನ್ನೋ ಕನ್‌ಫ್ಯೂಶನ್. ಏನು ತಿನ್ನದಿದ್ರೆ ಫ್ರೆಂಡ್ಸ್ ಬಿಡಲ್ಲ. ಹೀಗಿದ್ದಾಗ ರೆಸ್ಟೋರೆಂಟ್‌ನಲ್ಲಿ ತೂಕ (Weight) ಹೆಚ್ಚಾಗದ ರೀತಿ ಯಾವ ಫುಡ್ (Food) ತಿನ್ಬೋದು ?
ಮನುಷ್ಯ ಸ್ವಭಾತಃ ಆಹಾರಪ್ರಿಯ. ಅದರಲ್ಲೂ ಆಯಾ ದೇಶಕ್ಕೂ ಅಲ್ಲಿನದ್ದೇ ಆದ ವಿಶೇಷ ಆಹಾರಕ್ರಮವಿದೆ. ಇಟಾಲಿಯನ್, ಮೆಕ್ಸಿಕನ್, ಚೈನೀಸ್, ಇಂಡಿಯನ್ ಹೀಗೆ ಹಲವು ರೀತಿಯ ಆಹಾರಶೈಲಿಯನ್ನು ನೋಡಬಹುದು. ಆದರೆ, ತೂಕ ಇಳಿಸಿಕೊಳ್ಳಬೇಕೆಂದು ಬಯಸುವವರು ಡಿಶ್ ಅದೆಷ್ಟು ಸ್ಪೆಷಲ್ ಆಗಿದ್ದರೂ ಅದನ್ನು ಟೇಸ್ಟ್ ಮಾಡಲು ಹಿಂಜರಿಯಬೇಕಾಗುತ್ತದೆ. ಅದರಲ್ಲೂ ಫ್ರೆಂಡ್ಸ್ ಪಾರ್ಟಿ, ಡಿನ್ನರ್ ಎಂದು ರೆಸ್ಟೋರೆಂಟ್ (Restaurant)ಗೆ ಕರೆದೊಯ್ದಾಗ ಏನನ್ನೂ ತಿನ್ನಲಾಗದೆ ಕಷ್ಟಪಡಬೇಕಾಗುತ್ತದೆ. ಹೀಗಿದ್ದಾಗ ಏನಾದ್ರೂ ತಿನ್ಬೇಕು, ತೂಕಾನೂ ಹೆಚ್ಚಾಗಬಾರದು ಎಂದಾದ್ರೆ ಯಾವ ರೀತಿಯ ಆಹಾರ ಸೇವಿಸಬೇಕು ?
ಇಟಾಲಿಯನ್ ಆಹಾರ ಪ್ರಿಯರಿಗೆ ಸಲಾಡ್
ಇಟಾಲಿಯನ್ ರೆಸ್ಟೋರೆಂಟ್‌ಗೆ ಹೋದರೆ ತರಹೇವಾರಿ ತಿನಿಸುಗಳನ್ನು ನೋಡಬಹುದು. ಆದರೆ ಇವೆಲ್ಲವನ್ನೂ ತಿಂದರೆ ತೂಕ (Weight) ಹೆಚ್ಚಳವಾಗುವುದು ಖಂಡಿತ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇಟಾಲಿಯನ್ ರೆಸ್ಟೋರೆಂಟ್‌ಗೆ ಹೋದಾಗ ಸಲಾಡ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸಲಾಡ್ (Salad)ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇರಿಸುವ ಕಾರಣ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
Food Tips: ಗೋಲ್‌ಗಪ್ಪಾ ತಿಂದ್ರೆ ತೂಕ ಕಡಿಮೆಯಾಗುತ್ತಾ ?
ಮೆಕ್ಸಿಕನ್ ಆಹಾರ ಪ್ರಿಯರಿಗೆ ಚಿಕನ್ ಫಜಿಟಾಸ್
ಮೆಕ್ಸಿಕನ್ ಆಹಾರವನ್ನು ಯಾರು ತಾನೇ ಇಷ್ಟಪಡುವುದಿಲ್ಲ ? ಅದರಲ್ಲೂ ಇದನ್ನು ತಿಂದ್ರೆ ತೂಕ ಹೆಚ್ಚಾಗಲ್ಲ ಅಂದ್ರೆ ಯಾವ ರೆಸ್ಟೋರೆಂಟ್‌ಗೆ ಹೋದ್ರೂ ಇದನ್ನೇ ಮೊದಲು ಆರ್ಡರ್ ಮಾಡ್ತಾರೆ. ಚಿಕನ್ (Chicken) ಫಜಿಟಾಸ್ ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುವ ಕಾರಣ ತೂಕ ಹೆಚ್ಚಳವಾಗುವ ಭಯವಿಲ್ಲ. ಅಲ್ಲದೆ ಇದರಲ್ಲಿ ಲೀನ್ ಪ್ರೊಟೀನ್ ಇರುವುದರಿಂದ ತೂಕ ಇಳಿಸಲು ನೆರವಾಗುತ್ತದೆ. ನೀವು ಇದನ್ನು ಸಣ್ಣ ಬೌಲ್ ಬೀನ್ಸ್‌ನೊಂದಿಗೆ ಸೇರಿಸಿ ತಿನ್ನಬಹುದು.
ಚೈನೀಸ್ ಆಹಾರ ಪ್ರಿಯರಿಗೆ ಬ್ರೊಕೊಲಿ ಚಿಕನ್, ತರಕಾರಿ ಸ್ಟಿರ್ ಫ್ರೈ
ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಚೈನೀಸ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಆದ್ರೆ ನೋಡೋಕೆ ಎಲ್ಲಾ ಅಟ್ರ್ಯಾಕ್ಟಿವ್ ಆಗಿದೆ ಎಂದು ತಿಂದರೆ ತೂಕ ಹೆಚ್ಚಾಗೋದು ಖಂಡಿತ. ಹೀಗಿದ್ದಾಗ ಚೈನೀಸ್ ಫುಡ್ ಇಷ್ಟಪಡುವವರು ಬ್ರೊಕೊಲಿ ಚಿಕನ್ ಅಥವಾ ವೆಜಿಟೇಬಲ್ ಸ್ಟಿರ್ ಫ್ರೈನಂತಹ ಆರೋಗ್ಯಕರ ತಿನಿಸನ್ನು ತಿನ್ನಬಹುದು.
ಭಾರತೀಯ ಆಹಾರ ಪ್ರಿಯರಿಗೆ ತಂದೂರಿ ಚಿಕನ್, ದಾಲ್ ತಡ್ಕಾ,ಪನೀರ್ ಟಿಕ್ಕಾ,ಧೋಕ್ಲಾ
ಭಾರತೀಯ ರೆಸ್ಟೋರೆಂಟ್ ಮೆನು ಐಟಂಗಳು ಭಾರೀ ಸಾಸ್‌ಗಳು ಮತ್ತು ಡೀಪ್-ಫ್ರೈಡ್ ಸ್ಟಫ್‌ಗಳಿಂದ ಸಮೃದ್ಧವಾಗಿರುತ್ತದೆ. ಹೀಗಾಗಿ ಇದನ್ನು ತಿನ್ನುವುದರಿಂದ ನಿಸ್ಸಂದೇಹವಾಗಿ ತೂಕ ಹೆಚ್ಚಳವಾಗುತ್ತದೆ. ಹೀಗಾಗಿ ಭಾರತೀಯ ರೆಸ್ಟೋರೆಂಟ್‌ಗೆ ಹೋದಾಗ ತಂದೂರಿ ಚಿಕನ್ ಆಯ್ಕೆ ಮಾಡಿ., ಇದು ಹೆಚ್ಚಿನ ಪೋಷಕಾಂಶ ಮತ್ತು ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿದೆ. ಸಸ್ಯಾಹಾರಿ ಆಹಾರವನ್ನು ಸೇವಿಸುವವರು ದಾಲ್ ತಡ್ಕಾ ಮತ್ತು ಪನೀರ್ ಟಿಕ್ಕಾ ಮತ್ತು ಧೋಕ್ಲಾವನ್ನು ಆಯ್ಕೆ ಮಾಡಬಹುದು.
Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
ಸ್ಯಾಂಡ್‌ವಿಚ್ ಪ್ರಿಯರಿಗೆ ಓಪನ್ ಸ್ಯಾಂಡ್‌ವಿಚ್
ಸ್ಯಾಂಡ್‌ವಿಚ್‌ಗಳು ಆರೋಗ್ಯಕರವೆಂದೇ ಎಲ್ಲರೂ ತಿಳಿದಿದ್ದಾರೆ. ಆದರೆ ನಿಜವಾಗಿಯೂ ಅವು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಬ್ರೆಡ್‌ನಿಂದ ಮಾಡಲ್ಪಟ್ಟಿದೆ. ಹೀಗಾಗಿ ಸ್ಯಾಂಡ್‌ವಿಚ್ ಸೇವನೆ ನಮಗೆ ಅರಿವಿಲ್ಲದೆಯೇ ಕ್ಯಾಲೊರಿಗಳನ್ನು ಗಳಿಸುವಂತೆ ಮಾಡುತ್ತದೆ. ಆದ್ದರಿಂದ, ನೀವು ಸ್ಯಾಂಡ್ ವಿಚ್ (Sandwich) ಪ್ರಿಯರಾಗಿದ್ದರೆ ಓಪನ್ ಸ್ಯಾಂಡ್‌ವಿಚ್ ಆಯ್ಕೆ ಮಾಡಿಕೊಳ್ಳಬಹುದು. ಈ ಸ್ಯಾಂಡ್‌ವಿಚ್ ತರಕಾರಿಗಳೊಂದಿಗೆ, ಚಿಕನ್ ಸ್ಲೈಸ್‌ಗಳಂತಹ ಆರೋಗ್ಯಕರ ಮತ್ತು ರುಚಿಕರವಾದ ಮೇಲೋಗರಗಳೊಂದಿಗೆ ತಯಾರಿಸಲಾಗುತ್ತದೆ. ಇದರಿಂದ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಸೇರ್ಪಡೆಯಾಗುತ್ತದೆ.
ಬರ್ಗರ್ ಪ್ರಿಯರಿಗೆ ನೋ ಬನ್ ಬರ್ಗರ್
ಬನ್ ಇಲ್ಲದ ಬರ್ಗರ್ (Burger) ಅನ್ನು ನೀವು ಊಹಿಸಬಹುದೇ? ನಿಜ ಹೀಗೊಂದು ಬರ್ಗರ್ ಇದೆ. ನೀವು ಬರ್ಗರ್ ಪ್ರಿಯರಾಗಿದ್ದರೆ, ಆದರೆ ತಿಂದ್ರೆ ತೂಕ ಹೆಚ್ಚಾಗುತ್ತೆ ಅನ್ನೋ ಭಯವಿದ್ರೆ, ನೋ ಬನ್ ಬರ್ಗರ್ ಆಯ್ಕೆ ಮಾಡಿಕೊಳ್ಳಿ. ಈ ಬರ್ಗರ್ ತಯಾರಿಸಲು ಸ್ವಲ್ಪ ಸಲಾಡ್, ಸಿಹಿ ಆಲೂಗಡ್ಡೆ ಫ್ರೈ ಸೇರಿಸಲಾಗುತ್ತದೆ. ಇದರಿಂದ ಕ್ಯಾಲೋರಿ ಹೆಚ್ಚಾಗುವ ಭಯವಿಲ್ಲ.
ಚೀಸ್ ಕಡಿಮೆ ಹಾಕಿದ ಪಿಜ್ಜಾ ತಿನ್ನಿ
ಪಿಜ್ಜಾ ಖಂಡಿತವಾಗಿಯೂ ಆರೋಗ್ಯಕರ ಆಹಾರವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪಿಜ್ಜಾ ತಿನ್ನೋದ್ರಿಂದ ನೂರಕ್ಕೆ ನೂರು ವೈಟ್ ಗೈನ್ ಆಗುತ್ತೆ. ಹೀಗಿದ್ದೂ ಪಿಜ್ಜಾ (Pizza) ತಿನ್ಲೇಬೇಕು ಅಂತ ಅನಿಸುವವರು ಹೆಚ್ಚು ಚೀಸ್ ಸೇರಿಸದ, ಕಡಿಮೆ ತರಕಾರಿ ಸೇರಿಸಿದ ಪಿಜ್ಜಾವನ್ನು ಆಯ್ಕೆ ಮಾಡಿಕೊಳ್ಳಬೇಕು.
ತೂಕ ಕಡಿಮೆಯಾಗಲು ಟ್ರಿಕ್ ಅನುಸರಿಸಿ
ತೂಕ ಕಡಿಮೆಯಾಗಲು ಸಮರ್ಪಕ ಆಹಾರವನ್ನು ಸಹ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಹೀಗಾಗಿ ತೂಕ ಇಳಿಸಿಕೊಳ್ಳುವುದು ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ ಆಹಾರ (Food)ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಮಾತ್ರ ಸೇರಿಸಿಕೊಳ್ಳಿ. ಕೊಬ್ಬಿನಾಂಶದ ಆಹಾರ ಪದಾರ್ಥಗಳು, ಕರಿದ ತಿಂಡಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.