Asianet Suvarna News Asianet Suvarna News

ಬಾಲಿವುಡ್ ಎವರ್‌ಗ್ರೀನ್ ಹೀರೋ ಶಾರುಖ್ ಖಾನ್ ಫಿಟ್ ಆಗಿರೋದಕ್ಕೆ ಏನು ತಿಂತಾರೆ?

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಈಗ್ಲೂ ಎಂಗ್ ಆಂಡ್ ಎನರ್ಜಿಟಿಕ್ ಆಗಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಅವರು ತಿನ್ನೋದೇನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 
 

Shah Rukh Khan Diet Plan Revealed Superfoods Jawan Star Eats In A Day roo
Author
First Published Sep 13, 2023, 5:54 PM IST

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ 57ನೇ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಮೈಕಟ್ಟು ಹೊಂದಿದ್ದಾರೆ. ಬರೀ ದೇಹ ಮಾತ್ರವಲ್ಲ ಅವರ ಮುಖದ ಸೌಂದರ್ಯ ಕೂಡ ಕಡಿಮೆಯಾಗಿಲ್ಲ. ಸದಾ ಚಟುವಟಿಕೆಯಿಂದಿರುವ, ಒಂದಾದ್ಮೇಲೆ ಒಂದು ಹಿಟ್ ಸಿನಿಮಾ ನೀಡ್ತಿರುವ ಶಾರುಕ್ ಖಾನ್ ಫಿಟ್ನೆಸ್ ಮಂತ್ರವೇನು ಎಂಬುದು ಗೊತ್ತಾಗಿದೆ. 

ಶಾರುಖ್ ಖಾನ್ (Shah Rukh Khan) ಅಭಿನಯದ ಜವಾನ್ (Jawan) ಆರು ದಿನಗಳ ಹಿಂದಷ್ಟೆ ಬಿಡುಗಡೆಯಾಗಿದೆ. ಹಿಂದಿ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಪಠಾಣ್ ನಂತ್ರ ವೇಗವಾಗಿ 300 ಕೋಟಿ ಗಳಿಸಿದ ಸಿನಿಮಾ ಜವಾನ್. ಜವಾನ್, ಪಠಾಣ್ ಸಿನಿಮಾಗಳಲ್ಲಿ ಫಿಟ್ ಆಗಿರುವ ಶಾರುಖ್ ಗೆ 57 ವರ್ಷ ವಯಸ್ಸಾಗಿದೆ ಅಂದ್ರೆ ನಂಬೋದು ಕಷ್ಟ. ಶಾರುಖ್ ಖಾನ್ ಹೀಗಿರಲು ಏನು ತಿನ್ನುತ್ತಾರೆ, ಅವರ ಡಯಟ್ ಪ್ಲಾನ್ ಏನು ಎಂಬ ಪ್ರಶ್ನೆಗೆ ಉತ್ತರ ಹೊರಬಿದ್ದಿದೆ. ಇದು ಅನೇಕ ಯುವ ನಾಯಕರಿಗೆ ಹಾಗೂ ಫಿಟ್ ಆಂಡ್ ಫೈನ್ ಆಗಲು ಬಯಸುವ ಜನರಿಗೆ ನೆರವಾಗಲಿದೆ.

ಈ ದೇಶದ ಬೀದಿ ಬೀದಿಯಲ್ಲಿ ಸಿಗುತ್ತೆ ಚೇಳು, ಜಿರಳೆ ಫ್ರೈ

ಶಾರುಖ್ ಖಾನ್ ಡಯಟ್ ಪ್ಲಾನ್ (Diet Plan) ಏನು ಗೊತ್ತಾ? :
ಪಠಾಣ್ ಸ್ಟಾರ್ ಶಾರುಖ್ ಖಾನ್, ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಹೈಟ್ರೆಡ್ ಆಗಿರಲು ಮರೆಯೋದಿಲ್ಲ. ಅವರು ದ್ರವ ಪದಾರ್ಥವನ್ನು ಆಗಾಗ ಸೇವನೆ ಮಾಡ್ತಿರುತ್ತಾರೆ. ಎಳನೀರು, ನೀರು ಸೇರಿದಂತೆ ದ್ರವ ಆಹಾರ ಸೇವನೆ ಮಾಡುವ ಮೂಲಕ ಅವರು ಆರೋಗ್ಯಕದ ಬಗ್ಗೆ ಕಾಳಜಿ ವಹಿಸ್ತಾರೆ.

ಉಪಹಾರ : ಬೆಳಿಗ್ಗೆ ಶಾರುಖ್ ಖಾನ್ ಪ್ರೋಟೀನ್ ಪೂರ್ಣವಾಗಿರುವ ಆಹಾರ ಸೇವನೆಗೆ ಆದ್ಯತೆ ನೀಡ್ತಾರೆ. ಅವರು ಬೆಳಿಗ್ಗೆ ಹೆಚ್ಚಾಗಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡ್ತಾರೆ. 

ಊಟಕ್ಕಿಂತ ಮೊದಲು ಹಣ್ಣು : ಶಾರುಖ್ ಖಾನ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಕಾರಣ ಹಣ್ಣುಗಳನ್ನು ತಮ್ಮ ಡಯಟ್ ಪ್ಲಾನ್ ನಲ್ಲಿ ಸೇರಿಸಿಕೊಂಡಿದ್ದಾರೆ. ಅವರು ಊಟದ ಮೊದಲು ಫ್ರೆಶ್ ಹಣ್ಣುಗಳನ್ನು ತಿನ್ನಲು ಇಷ್ಟಪಡ್ತಾರೆ.

ಭಾರತೀಯರ ಫೇವರಿಟ್‌ ಕಬಾಬ್, ಸಮೋಸಾ ಫಾರಿನ್‌ನಲ್ಲಿ ತಿನ್ನಂಗಿಲ್ಲ, ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ!

ಮಧ್ಯಾಹ್ನದ ಊಟದಲ್ಲೇನಿರುತ್ತೆ? : ಮಧ್ಯಾಹ್ನದ ಊಟದಲ್ಲಿ ಶಾರುಖ್ ಖಾನ್ ಗ್ರಿಲ್ಡ್ ತರಕಾರಿ ಸೇವನೆಯನ್ನು ಆಯ್ಕೆ ಮಾಡಿಕೊಳ್ತಾರೆ. ಕಡಿಮೆ ಕೊಬ್ಬಿರುವ ಹಾಗೂ ಪೋಷಕಾಂಶ ಹೆಚ್ಚಿರುವ ತರಕಾರಿಯನ್ನು ಅವರು ತಿನ್ನುತ್ತಾರೆ. 

ಡ್ರೈ ಫ್ರೂಟ್ಸ್ (Dry Frutis) : ತಮ್ಮ ಡಯಟ್ ನಲ್ಲಿ ಶಾರುಖ್ ಖಾನ್ ಡ್ರೈ ಫ್ರೂಟ್ಸ್ ಸೇರಿಸಿಕೊಂಡಿದ್ದಾರೆ. ಹೆಚ್ಚುವರಿ ಶಕ್ತಿ ಪಡೆಯಲು ಇದು ಅವರಿಗೆ ನೆರವಾಗುತ್ತದೆ. ಅವರು ಬಾದಾಮಿ ಹಾಗೂ ಪಿಸ್ತಾವನ್ನು ತಮ್ಮ ವರ್ಕ್ ಔಟ್ ಮೊದಲು ತಿನ್ನುತ್ತಾರೆ. ಇದ್ರಿಂದ ಸಿಗುವ ಪ್ರೊಟೀನ್ ಅವರ ಶಕ್ತಿಯನ್ನು ಹೆಚ್ಚಿಸುತ್ತೆ. 

ಶೂಟಿಂಗ್ ಸೆಟ್ ನಲ್ಲಿರವಾಗ ಶಾರುಖ್ ಏನು ತಿನ್ನುತ್ತಾರೆ? : ಶೂಟಿಂಗ್ ಸೆಟ್ ನಲ್ಲಿ ಶಾರುಖ್ ಲಂಚ್ ಪ್ಲೇಟ್ ನಲ್ಲಿ ಗ್ರಿಲ್ಡ್ ಚಿಕನ್ ನೋಡ್ಬಹುದು. ಪ್ರೋಟೀನ್ ಹಾಗೂ ಅಮಿನೋ ಆಸಿಡ್ ಗೆ ಆದ್ಯತೆ ನೀಡ್ತಾರೆ ನಟ.

ಡಿನ್ನರ್ (Dinner) ನಲ್ಲಿ ಇದನ್ನು ತಿನ್ನುತ್ತಾರೆ ಪಠಾಣ್ : ಇನ್ನು ಡಿನ್ನರ್ ವಿಷ್ಯಕ್ಕೆ ಬರೋದಾದ್ರೆ ಅಲ್ಲಿ ಗ್ರೀನ್ ಸಲಾಡ್ ಇಷ್ಟಪಡ್ತಾರೆ ಶಾರುಖ್. ವಿಟಮಿನ್ ಹಾಗೂ ಮಿನರಲ್ಸ್ ಇರುವ ಸಲಾಡ್ ತುಂಬಾ ಪ್ರಿಯವಾದ ಆಹಾರ. 

ಬ್ಲಾಕ್ ಕಾಫಿ (Black Coffee) ಫ್ಯಾನ್ ಶಾರುಖ್ : ಶಾರುಖ್ ಖಾನ್ ಎಲ್ಲೇ ಹೋದ್ರು ಕುಡಿಯೋದು ಬ್ಲಾಕ್ ಕಾಫಿ. ಇದು ಕ್ಯಾಲೋರಿ ಫ್ರೀ ಪಾನೀಯ. ಹಾಗೆ ಇದು ತೂಕವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಇಡೀ ದಿನ ನಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲವನ್ನು ಬ್ಲಾಕ್ ಕಾಫಿ ಮಾಡುತ್ತೆ. 

Follow Us:
Download App:
  • android
  • ios