ಈ ದೇಶದ ಬೀದಿ ಬೀದಿಯಲ್ಲಿ ಸಿಗುತ್ತೆ ಚೇಳು, ಜಿರಳೆ ಫ್ರೈ
ವಿಶ್ವದಲ್ಲಿ ಇಷ್ಟೊಂದು ದೇಶವಿದೆ ಅಂದ್ಮೇಲೆ ಅಡುಗೆಯಲ್ಲಿ ವೈವಿಧ್ಯತೆ ಇರ್ಲೇಬೇಕು. ಒಂದೊಂದು ಪ್ರದೇಶದಲ್ಲೂ ಒಂದೊಂದು ಸ್ಪೇಷಲ್ ಫುಡ್ ಇರುತ್ತೆ. ಆದ್ರೆ ಕೆಲವು ಕಡೆ ಜನರು ತಿನ್ನುವ ಆಹಾರ ನೋಡಿದ್ರೆ ವಾಕರಿಕೆ ಬರುತ್ತದೆ.
ಸ್ಟ್ರೀಟ್ ಫುಡ್ ಪ್ರೇಮಿಗಳ ಸಂಖ್ಯೆ ಹೆಚ್ಚಾಗ್ತಿರುವ ಕಾರಣಕ್ಕೆ ಹೊಸ ಹೊಸ ಸ್ಟ್ರೀಟ್ ಗಳು ಫುಡ್ ಗಾಗಿಯೇ ಹುಟ್ಟಿಕೊಳ್ತಿವೆ. ನಮ್ಮ ದೇಶದ ಒಂದೊಂದು ಗಲ್ಲಿಯಲ್ಲೂ ಸ್ಟ್ರೀಟ್ ಫುಡ್ ಝೋನ್ ಗಳಿವೆ. ಸಂಜೆಯಾಗ್ತಿದ್ದಂತೆ ಎಲ್ಲ ಸ್ಟ್ರೀಟ್ ಫುಡ್ ಅಂಗಡಿಗಳು ತುಂಬಿರುತ್ತವೆ. ಮೊಮೊಸ್, ಗೊಲ್ಗಪ್ಪಾ, ಮಂಚೂರಿ, ಚುರ್ ಮುರಿ, ಪಾನಿಪುರಿ, ಸಮೋಸಾ ಅಂತಾ ವೆರೈಟಿ ಆಹಾರವನ್ನು ನಾವು ಬೀದಿ ಬದಿಯಲ್ಲಿ ನೋಡ್ಬಹುದು. ಜನರು ತಮಗಿಷ್ಟವಾದ ಆಹಾರವನ್ನು ಚಪ್ಪರಿಸಿ ತಿನ್ನುತ್ತಿರುತ್ತಾರೆ. ಕುಟುಂಬ ಸಮೇತ ಇಂಥ ಪ್ರದೇಶಕ್ಕೆ ಹೋಗುವ ಜನರು ಸ್ಟ್ರೀಟ್ ಫುಡ್ ತಿಂದು ಎಂಜಾಯ್ ಮಾಡ್ತಾರೆ.
ಬರೀ ಭಾರತ (India) ದವಲ್ಲ ಎಲ್ಲ ದೇಶಗಳಲ್ಲೂ ಅದರದೇ ಆದ ಸ್ಟ್ರೀಟ್ ಫುಡ್ (Street Food) ಗಳು ಪ್ರಸಿದ್ಧಿ ಪಡೆದಿವೆ. ಆದ್ರೆ ಕೆಲ ದೇಶಗಳ ಸ್ಟ್ರೀಟ್ ಫುಡ್ಸ್ ವಿಚಿತ್ರವಾಗಿದೆ. ಅವುಗಳನ್ನು ನೋಡಿದ್ರೆ ಸಸ್ಯಹಾರಿಗಳಿಗೆ ಮಾತ್ರವಲ್ಲ ಮಾಂಸಹಾರಿಗಳಿಗೂ ವಾಕರಿಕೆ ಬರೋದು ಸಾಮಾನ್ಯ.
ಖಾರದ, ಮಸಾಲೆ ಚಿಪ್ಸ್ ತಿಂದು ಕೊನೆಯುಸಿರೆಳೆದ ಬಾಲಕ
ನಮ್ಮಲ್ಲಿ ಚೇಳು (Scorpion) ಅಂದ್ರೆ ಮಾರುದೂರ ಓಡೋರಿದ್ದಾರೆ. ಕಪ್ಪು ಚೇಳು ಕಾಣ್ತಿದ್ದಂತೆ ಅದನ್ನು ಕೆಲವರು ಹೊಡೆದು ಕೊಂದ್ರೆ ಮತ್ತೆ ಕೆಲವರು ಅದ್ರಿಂದ ರಕ್ಷಣೆ ಪಡೆಯುವ ಪ್ರಯತ್ನ ನಡೆಸ್ತಾರೆ. ಅದೇ ರೀತಿ ಜಿರಳೆ. ಹೆಸರು ಕೇಳ್ತಿದ್ದಂತೆ ಮೈ ಜುಮ್ಮೆನ್ನುತ್ತದೆ. ಮನೆಯಲ್ಲಿ ಒಂದು ಜಿರಳೆ ಬಂದ್ರೂ ನಿದ್ರೆ ಬರೋದಿಲ್ಲ. ಅದ್ರ ಗಬ್ಬು ವಾಸನೆ ವಾಕರಿಕೆ ತರಿಸುತ್ತದೆ. ನಾವು ಕೊಳಕು ಎಂದು ಬದಿಗಿಟ್ಟ ಪ್ರಾಣಿಗಳನ್ನು ಕೆಲ ದೇಶದ ಜನರು ಸ್ಟ್ರೀಟ್ ಫುಡ್ ಹೆಸರಿನಲ್ಲಿ ಸೇವನೆ ಮಾಡ್ತಾರೆ.
ಹೌದು, ಜಿರಳೆ, ಚೇಳನ್ನು ಬೇಯಿಸಿ ತಿನ್ನುವ ಜನರಿದ್ದಾರೆ. ಇದು ಅಲ್ಲಿನ ಪ್ರಸಿದ್ಧ ಸ್ಟ್ರೀಟ್ ಫುಡ್. ಸಾಮಾಜಿಕ ಜಾಲತಾಣದಲ್ಲಿ ಅದ್ರ ವಿಡಿಯೋಗಳು ಈಗ ಹರಿದಾಡ್ತಿವೆ. ಚೇಳು, ಜಿರಳೆಗಳನ್ನು ಕರಿದು ತಿನ್ನುವ ದೇಶದ ಹೆಸರು ಥೈಲ್ಯಾಂಡ್. ಲ್ಯಾಂಡ್‌ನ ಪ್ರತಿಯೊಂದು ರಸ್ತೆ ಮತ್ತು ಚೌಕದಲ್ಲಿ ನೀವು ಈ ಭಕ್ಷ್ಯಗಳನ್ನು ಕಾಣಬಹುದು. ಇನ್ಸ್ಟಾಗ್ರಾಮ್ ನಲ್ಲಿ ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿದೆ. foodie_saurabh_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚೇಳು ಹಾಗೂ ಜಿರಳೆ ಫ್ರೈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಥೈಲ್ಯಾಂಡ್ ಸ್ಟ್ರೀಟ್ ಫುಡ್ ಎಂದು ಇದಕ್ಕೆ ಶೀರ್ಷಿಕೆ ಹಾಕಲಾಗಿದೆ.
ಭಾರತೀಯರ ಫೇವರಿಟ್ ಕಬಾಬ್, ಸಮೋಸಾ ಫಾರಿನ್‌ನಲ್ಲಿ ತಿನ್ನಂಗಿಲ್ಲ, ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ!
ವಿಡಿಯೋದಲ್ಲಿ ಮಹಿಳೆಯೊಬ್ಬಳು ಕಪ್ಪು ಚೇಳನ್ನು ಒಂದು ಕೋಲಿಗೆ ಜೋಡಿಸಿದ್ದಾಳೆ. ನಂತ್ರ ಸತ್ತ ಚೇಳನ್ನು ಬಿಸಿ ಎಣ್ಣೆಯಲ್ಲಿ ಫ್ರೈ ಮಾಡ್ತಾಳೆ. ಫ್ರೈ ಮಾಡುವಾಗ ಸಾಸ್ ಹಾಕ್ತಾಳೆ. ಚೇಳನ್ನು ಹುರಿದ ನಂತ್ರ ಅದಕ್ಕೆ ಮಸಾಲೆ ಹಾಕಿ ಸರ್ವ್ ಮಾಡ್ತಾಳೆ. ಅದ್ರ ಮುಂದಿನ ಭಾಗದಲ್ಲಿ ನೀವು ಜಿರಳೆ ಫ್ರೈ ಮಾಡೋದನ್ನು ನೋಡ್ಬಹುದು. ಒಂದಿಷ್ಟು ಜಿರಳೆಯನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡುವ ಮಹಿಳೆ ಅದಕ್ಕೆ ಮಸಾಲೆ ಹಾಕಿ ಸರ್ವ್ ಮಾಡ್ತಾಳೆ. ಇದಲ್ಲದೆ ಅಲ್ಲಿ ನೀವು ಬೇರೆ ಬೇರೆ ಪ್ರಾಣಿಗಳನ್ನು ನೋಡ್ಬಹುದು. ಅದ್ರ ಮೇಲೆ ಬೆಲೆಯನ್ನು ಕೂಡ ಹಾಕಲಾಗಿದೆ.
ಥೈಲ್ಯಾಂಡ್ ನಲ್ಲಿ ವಿವಿಧ ಪ್ರಾಣಿಗಳ ಕರಿ, ತರಕಾರಿ, ಸೂಪ್ ಇತ್ಯಾದಿಗಳನ್ನು ತಯಾರಿಸಿ ಸೇವಿಸುತ್ತಾರೆ. ಈ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ನಮ್ಮ ದೇಶದಲ್ಲಿ ಹೆದರುವ ಪ್ರಾಣಿಗಳನ್ನು ಇವರು ತಿನ್ನುತ್ತಿದ್ದಾರೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇವರು ಕಲ್ಲನ್ನು ಕೂಡ ಬಿಡೋದಿಲ್ಲ ಎಂದು ಇನ್ನೊಬ್ಬರು ಹೇಳಿದ್ರೆ, ಕೆಲವರು ನೋಡಿದ್ರೆ ವಾಕರಿಕೆ ಬರುತ್ತೆ ಎಂದಿದ್ದಾರೆ.
ಥೈಲ್ಯಾಂಡ್ ಮಾತ್ರವಲ್ಲ ಚೀನಾ ಜನರು ಕೂಡ ಜಿರಳೆ, ಚೇಳು, ಹಾವು ಮಾತ್ರವಲ್ಲದೆ ರೇಷ್ಮೆ ಹುಳು ಮತ್ತು ಜೇನುನೊಣವನ್ನು ಸೇವನೆ ಮಾಡುತ್ತಾರೆ.