Kannada

ಸೋಂಪಿನ ಆರೋಗ್ಯಕರ ಗುಣಗಳು

ಸೋಂಪು ಕಾಳುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

Kannada

ರಕ್ತದೊತ್ತಡ ನಿಯಂತ್ರಣ

ಸೋಂಪು ಕಾಳುಗಳನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು ಅಥವಾ ಹಾಗೆಯೇ ಜಗಿದು ತಿನ್ನಬಹುದು.

Image credits: Getty
Kannada

ವಾಟರ್ ರಿಟೆನ್ಶನ್ ತಡೆಯುತ್ತೆ

ದೇಹದ ಅಂಗಾಂಶಗಳಲ್ಲಿ ಅತಿಯಾದ ದ್ರವವು ಶೇಖರಣೆಗೊಂಡು ಕೈ, ಕಾಲು, ಪಾದ, ಹೊಟ್ಟೆ ಮತ್ತು ಮುಖದಲ್ಲಿ ಊತ ಉಂಟಾಗುವ ಸ್ಥಿತಿಯೇ ವಾಟರ್ ರಿಟೆನ್ಶನ್. ಸೋಂಪು ಸೇವನೆಯು ಇದನ್ನು ತಡೆಯಲು ಸಹಾಯ ಮಾಡುತ್ತದೆ.

Image credits: Getty
Kannada

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸೋಂಪು ಕಾಳುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.

Image credits: Getty
Kannada

ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ

ಬ್ರಾಂಕೈಟಿಸ್, ದೀರ್ಘಕಾಲದ ಮತ್ತು ಒಣ ಕೆಮ್ಮಿನಂತಹ ಸಮಸ್ಯೆಗಳನ್ನು ದೂರ ಮಾಡಲು ಸೋಂಪು ಉತ್ತಮ ಮನೆಮದ್ದು. ಇದನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು ಅಥವಾ ಹಾಗೆಯೇ ತಿನ್ನಬಹುದು.

Image credits: Getty
Kannada

ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ

ತೀವ್ರವಾದ ಮುಟ್ಟಿನ ನೋವನ್ನು ಕಡಿಮೆ ಮಾಡಲು ಕೂಡ ಸೋಂಪು ಸೇವನೆ ಒಳ್ಳೆಯದು. ಇದನ್ನು ಚಹಾದಲ್ಲಿ ಬೆರೆಸಿ ಅಥವಾ ನೀರಿನಲ್ಲಿ ಕುದಿಸಿ ಕುಡಿಯಬಹುದು.

Image credits: Getty
Kannada

ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ

ಸೋಂಪಿನಲ್ಲಿ ಸೆಲೆನಿಯಮ್ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಕಾಪಾಡಲು ಮತ್ತು ಅದರ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಮುಖದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ

ಸೋಂಪಿನಲ್ಲಿ ಸತು (ಜಿಂಕ್), ಕ್ಯಾಲ್ಸಿಯಂ ಮತ್ತು ಸೆಲೆನಿಯಮ್ ಅಂಶಗಳಿವೆ. ಪ್ರತಿದಿನ ಇದನ್ನು ಸೇವಿಸುವುದರಿಂದ ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ.

Image credits: Getty

ಇಡ್ಲಿ, ದೋಸೆ, ಉಪ್ಪಿಟ್ಟುಗೆ ಹೋಟೆಲ್‌ನಂತೆಯೇ ರುಚಿಯಾದ ಕಡಲೆಕಾಯಿ ಚಟ್ನಿ

Gardening Tips: ಬಾಲ್ಕನಿಯಲ್ಲೇ ಸೋರೆಕಾಯಿ ಬೆಳೆಸೋಕೆ ಅಕ್ಕಿ ನೀರು ಹಾಕಿ

ರಂಜಾನ್ ತಿಂಗಳಲ್ಲಿ ಸ್ಪೆಷಲ್ ಫುಡ್ ಸಿಗುವ ಬೆಂಗಳೂರಿನ ಪ್ರಮಖ ಸ್ಥಳಗಳು

ಪನೀರ್ ಅಂದ್ರೆ ಇಷ್ಟನಾ? ಪ್ರತಿದಿನ ಅತಿಯಾಗಿ ತಿಂದ್ರೆ ಈ ಸಮಸ್ಯೆಗಳು ಗ್ಯಾರಂಟಿ!