ಆಹಹಾ ಖಾರ ಖಾರ.... ಭಾರತೀಯ ಸ್ಟ್ರೀಟ್ ಫುಡ್‌ಗೆ ಮನಸೋತ ಜಪಾನ್ ರಾಯಭಾರಿ

ಜಪಾನ್‌ ರಾಯಭಾರಿಯೊಬ್ಬರು ಮುಂಬೈನ ಬೀದಿಗಳಲ್ಲಿ ಬೀದಿ ಬದಿ ಆಹಾರ ಸೇವಿಸಿ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ. 

See what the Prime Minister told the Japanese ambassador after eating Indian street food with his wife akb

ಮುಂಬೈ: ಬ್ರಿಟಿಷರ ಕಾಲಕ್ಕೂ ಮೊದಲಿನಿಂದಲೂ ಭಾರತ ಸಾಂಬಾರು ಪದಾರ್ಥಗಳಿಗೆ ಫೇಮಸ್‌, ಇಲ್ಲಿನ ಸಂಬಾರು ಪದಾರ್ಥಗಳಿಗೆ ಮನಸೋತೆ ದೂರ ದೂರದ ದೇಶಗಳ ವ್ಯಾಪಾರಿಗಳು ಇಲ್ಲಿಗೆ ಬರುತ್ತಿದ್ದರು. ಹಲವು ಸಾಂಬಾರು ಪದಾರ್ಥಗಳನ್ನು ಒಳಗೊಂಡ ಇಲ್ಲಿನ ಬೀದಿ ಬದಿ ಆಹಾರಗಳು ಕೂಡ ಸಾಂಬಾರು ಪದಾರ್ಥಗಳಷ್ಟೇ ಫೇಮಸ್, ಭಾರತೀಯ ನಗರಗಳ ಫುಡ್‌ ಸ್ಟ್ರೀಟ್‌ಗಳಲ್ಲಿ ಜನ ತುಂಬಿ ತುಳುಕಾಡ್ತಿರೋದೆ ಇದಕ್ಕೆ ಸಾಕ್ಷಿ, ಈಗ ಭಾರತೀಯರು ಬಿಡಿ ವಿದೇಶಿಯರು ಕೂಡ ಭಾರತದ ಈ ಬೀದಿ ಬದಿ ಆಹಾರಕ್ಕೆ ಮನಸೋತಿದ್ದಾರೆ. ಹೌದು ಜಪಾನ್‌ ರಾಯಭಾರಿಯೊಬ್ಬರು ಮುಂಬೈನ ಬೀದಿಗಳಲ್ಲಿ ಬೀದಿ ಬದಿ ಆಹಾರ ಸೇವಿಸಿ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ಸ್ವತಃ ಅವರೇ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ. 

ಭಾರತದಲ್ಲಿನ ಜಪಾನಿನ ರಾಯಭಾರಿ, ಹಿರೋಶಿ ಸುಜುಕಿ ಮತ್ತು ಅವರ ಪತ್ನಿ ಭಾರತದಲ್ಲಿ ಬೀದಿ ಬದಿ ಆಹಾರವನ್ನು ಸವಿದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನನಗೆ ಭಾರತದ ಬೀದಿ ಬದಿ ಆಹಾರ ಇಷ್ಟ, ಆದರೆ ದಯವಿಟ್ಟು ಖಾರ ಸ್ವಲ್ಪ ಕಡಿಮೆ ಇರಬೇಕು ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಅವರು ಈ ಬೀದಿ ಬದಿ ಆಹಾರ ಸವಿದಿದ್ದು,  ಭಾರತೀಯರು ಅವರಿಗೆ ಭಾರತದ ಇನ್ನಷ್ಟು ಬೇರೆ ಬೇರೆ ಬಗೆಯ ಬೀದಿ ಬದಿ ಆಹಾರವನ್ನು ಸವಿಯುವಂತೆ ಮನವಿ ಮಾಡಿದ್ದಾರೆ. 

 

ವಡಾಪಾವ್, ಮಿಸಾಲ್ ಪಾವ್‌ನ ರುಚಿ ಸವಿದ ಸುಜುಕಿ

ವೈರಲ್ ಆದ ವೀಡಿಯೋದಲ್ಲಿ ಮಸಾಲೆಯುಕ್ತ ಬೀದಿ ಆಹಾರವನ್ನು ತಿನ್ನುವುದರಲ್ಲಿ ತನ್ನ ಪತ್ನಿ ತನ್ನನ್ನು ಮೀರಿಸಿದ್ದಾಳೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಸುಜುಕಿ (Japanese envoy) ಅವರು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದ್ದು, ಅವರು ಅಲ್ಲಿನ ಪ್ರಸಿದ್ಧ ಬೀದಿ ಬದಿ ಆಹಾರವಾದ ವಡಾಪಾವ್, ಮಿಸಾಲ್ ಪಾವ್‌ನ ರುಚಿ ಸವಿದಿದ್ದಾರೆ. ಇದೇ ವೇಳೆ ಖಾರ ಸ್ವಲ್ಪ ಹೆಚ್ಚಾಗಿದೆ. ಸ್ವಲ್ಪ ಖಾರ ಕಡಿಮೆ ಬೇಕು ಎಂದು ಅವರು ಹೇಳಿದ್ದಾರೆ. ವೀಡಿಯೋದಲ್ಲಿ ರಾಯಭಾರಿ ಮಸಾಲೆಯುಕ್ತ ಆಹಾರವನ್ನು ಸೇವಿಸಲು ಹಿಂಜರಿಯುತ್ತಿರುವಂತೆ ಕಾಣಿಸಿಕೊಂಡರೆ ಅವರ ಪತ್ನಿ ಸಂತೋಷದಿಂದ ರುಚಿಕರವಾದ ಖಾರ ಖಾರವಾದ ಭಕ್ಷ್ಯಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಿರುವುದು ಕಂಡು ಬಂತು. 

ಆರೋಗ್ಯಕರ, ಸುರಕ್ಷಿತ ಆಹಾರ ಪದ್ಧತಿ ಉತ್ತೇಜಿಸಲು ದೇಶಾದ್ಯಂತ 100 ಫುಡ್ ಸ್ಟ್ರೀಟ್ ಆರಂಭ

ಇತ್ತ ಈ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 'ಮಿಸ್ಟರ್ ರಾಯಭಾರಿಯವರೇ ಇದೊಂದು ಸ್ಪರ್ಧೆ ಸೋಲಿನ ಬಗ್ಗೆ  ನಿರಾಸೆವುಂಟು ಮಾಡುವುದಿಲ್ಲ, ಭಾರತದ ವೈವಿಧ್ಯಮಯ ಪಾಕಪದ್ಧತಿ ಬಗ್ಗೆ ನಿಮ್ಮ ಮೆಚ್ಚುಗೆ ಮ್ಮ ವಿನೂತನ ಪ್ರಯೋಗದ ಬಗ್ಗೆ ನೋಡಲು ಅದ್ಭುತವಾಗಿದೆ.  ದಯವಿಟ್ಟು ಇಂತಹ ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿ ಎಂದು ಪ್ರಧಾನಿ ಬರೆದಿದ್ದಾರೆ. 

ಸುಜುಕಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ ಆಹಾರದ (Food) ವೀಡಿಯೋ ಹಂಚಿಕೊಳ್ಳುತ್ತಿರುತ್ತಾರೆ.  ಅದು ಭಾರತೀಯ ಬೀದಿ ಆಹಾರದ ಬಗ್ಗೆ ಅವರ ಒಲವನ್ನು ವ್ಯಕ್ತಪಡಿಸುತ್ತಿರುತ್ತದೆ. ಹೆಚ್ಚುವರಿಯಾಗಿ, ಅವರು ತಮ್ಮ ಟ್ವಿಟರ್ ಫಾಲೋವರ್‌ಗಳ ಆಹಾರದ ಶಿಫಾರಸುಗಳನ್ನು ಕೂಡ ಪ್ರಯತ್ನಿಸಿ ನೋಡಿದ್ದಾರೆ. ಪುಣೆಯ ಹೆಸರಾಂತ ಮಿಸಾಲ್ ಪಾವ್ ಅನ್ನು ಅವರು ಪ್ರಯತ್ನಿಸಿದ್ದು, ಮಸಾಲೆ ಸ್ವಲ್ಪ ಕಡಿಮೆ ಹಾಕುವಂತೆ ಅವರು ವಿನಂತಿಸಿದ್ದಾರೆ. 

Ramzan 2023: ಬೆಂಗಳೂರಿನ ಫುಡ್ಡೀಸ್‌ ಈ ಫುಡ್ ಸ್ಟ್ರೀಟ್ ಮಿಸ್ ಮಾಡ್ದೆ ವಿಸಿಟ್ ಮಾಡಿ

ಹಿರೋಷಿ ಸುಜುಕಿ ಯಾರು?

ಭಾರತದಲ್ಲಿ ಪ್ರಸ್ತುತ ಜಪಾನಿನ ರಾಯಭಾರಿಯಾಗಿರುವ ಹಿರೋಷಿ ಸುಜುಕಿ (Hiroshi Suzuki) ಅವರು 2022  ರ ನವೆಂಬರ್ 9ರಂದು ಅಧಿಕೃತವಾಗಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದರು.  ಭಾರತದಲ್ಲಿ ಅವರ ನಿಯೋಜನೆಯ ಮೊದಲು, ಅವರು 2020 ರಿಂದ 2022 ರವರೆಗೆ ಜಪಾನ್‌ನ ವಿದೇಶಾಂಗ ವ್ಯವಹಾರಗಳ ಹಿರಿಯ ಉಪ ಮಂತ್ರಿ ಸ್ಥಾನವನ್ನು ಹೊಂದಿದ್ದರು. (G7 ಮತ್ತು G20 ಶೆರ್ಪಾ) ಇದಕ್ಕೂ ಮೊದಲು 2012 ರಿಂದ 2020 ರವರೆಗೆ ಎಂಟು ವರ್ಷಗಳ ಗಮನಾರ್ಹ ಅವಧಿಯವರೆಗೆ ದಿವಂಗತ ಪ್ರಧಾನ ಮಂತ್ರಿ ಶಿಂಜೋ ಅಬೆ ಕಿಶಿದಾ ಅವರ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

 

Latest Videos
Follow Us:
Download App:
  • android
  • ios