Ramzan 2023: ಬೆಂಗಳೂರಿನ ಫುಡ್ಡೀಸ್ ಈ ಫುಡ್ ಸ್ಟ್ರೀಟ್ ಮಿಸ್ ಮಾಡ್ದೆ ವಿಸಿಟ್ ಮಾಡಿ
ರಂಜಾನ್ ಹಿನ್ನೆಲೆ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ಆಹಾರ ಪ್ರಿಯರ ಸ್ವರ್ಗವಾಗಿದೆ.. ಫ್ರೇಜರ್ ಟೌನ್‌ಗೆ ಕಾಲಿಟ್ಟ ತಕ್ಷಣ ಮಸಾಲೆಗಳ ಸುವಾಸನೆ ಮತ್ತು ಗ್ರಿಲ್‌ಗಳಿಂದ ಹೊಗೆಯಾಡುವ ದೃಶ್ಯಗಳು ಫುಡ್ಡೀಗಳನ್ನು ಸ್ವಾಗತಿಸುತ್ತಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ವಿಶೇಷ ತಿಂಗಳುಗಳಲ್ಲಿ ಒಂದಾದ ರಂಜಾನ್, ಮುಸ್ಲಿಮರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ, ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದಲ್ಲಿ ತಿನ್ನುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ರಂಜಾನ್ ಅಂದರೆ ಎಲ್ಲರಿಗೂ ತಕ್ಷಣಕ್ಕೆ ನೆನಪಾಗೋದು ವಿಧವಿಧವಾದ ಕರಿದ ತಿಂಡಿಗಳು, ಕೇಕ್, ಸ್ವೀಟ್ಸ್ ಮೊದಲಾದವು. ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಇದನ್ನು ವಿಶೇಷವಾಗಿ ತಯಾರಿಸಿ ಮಾರಾಟ ಮಾಡುತ್ತಾರೆ. ಬೆಂಗಳೂರಿನ ಹಲವು ಫುಡ್ ಸ್ಟ್ರೀಟ್‌ಗಳಲ್ಲಿ ಈ ರೀತಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹಲವು ರೀತಿಯ ತಿನಿಸುಗಳನ್ನು ಮಾರಾಟ ಮಾಡಲಾಗ್ತಿದೆ.
ರಂಜಾನ್ ಹಿನ್ನೆಲೆ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ಆಹಾರ ಪ್ರಿಯರ ಸ್ವರ್ಗವಾಗಿದೆ.. ಫ್ರೇಜರ್ ಟೌನ್‌ಗೆ ಕಾಲಿಟ್ಟ ತಕ್ಷಣ ಮಸಾಲೆಗಳ ಸುವಾಸನೆ ಮತ್ತು ಗ್ರಿಲ್‌ಗಳಿಂದ ಹೊಗೆಯಾಡುವ ದೃಶ್ಯಗಳು ಫುಡ್ಡೀಗಳನ್ನು ಸ್ವಾಗತಿಸುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ವಿಭಿನ್ನ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷಗಳ ಅಂಗಡಿಗಳ ಸಾಲು ಸಾಲು ಬಾಯಲ್ಲಿ ನೀರು ತರಿಸುತ್ತಿದೆ.
ಬಿಸಿ ಬಿಸಿಯಾದ ಮಟನ್ ಕೀಮಾ ವಿವಿಧ ಬಗೆಯ ಸಮೋಸಾಗಳು, ಸುವಾಸನೆಯ ಬಿರಿಯಾನಿ, ರುಚಿಕರವಾದ ಕೇಕ್‌ಗಳು ಮತ್ತು ರಸಭರಿತವಾದ ಸ್ಟೀಕ್ಸ್ - ಇವೆಲ್ಲವು ಸೇರಿ ಬೆಂಗಳೂರಿನ ಫ್ರೇಜರ್ ಟೌನ್ ನ ಮಸೀದಿ ರಸ್ತೆ ಸದ್ಯ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ. ನೂರಾರು ಬಗೆಯ ರುಚಿಕರ ಚಿಕನ್ ಐಟಂಗಳು, ವಿಭಿನ್ನ ರುಚಿಯ ಸೀ ಫುಡ್ ಸೇರಿದಂತೆ ಹಲವು ಬಗ್ಗೆಯ ಮಾಂಸಾಹಾರಗಳಿಗೆ ಈ ರಸ್ತೆ ಫೇಮಸ್ ಆಗಿದೆ.
ಬಿರಿಯಾನಿ, ಹಲೀಮ್ ಮತ್ತು ಇತರ ಹಬ್ಬದ ಭಕ್ಷ್ಯಗಳನ್ನು ರಂಜಾನ್ ಗಾಗಿ ತೆರೆದಿಡಲಾಗಿದೆ. ಸಾಲು ಸಾಲು ಅಂಗಡಿಗಳಲ್ಲಿ ಕೆಂಡದ ಮೇಲೆ ಸುಡುವ ತಂದೂರಿ ಆಹಾರವನ್ನು ಸಾರ್ವಜನಿಕರು ಸಾಲು ಗಟ್ಟಿ ನಿಂತು ಸವಿಯುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.
ಬೇಸಿಗೆ ಬಿಸಿ ತಣಿಸಲು ರುಚಿಕರ ಪಾನೀಯಗಳು, ವಿಶೇಷ ರುಚಿಯ ಸಿಹಿ ತಿನಿಸಿಗಳು ಸಹ ಈ ಫುಡ್ ಸ್ಟ್ರೀಟ್ ನ ಹೈಲೆಟ್ಸ್ ಆಗಿದೆ.. ರಂಜಾನ್ ಹಿನ್ನಲೆಯಲ್ಲಿ ಎಂದಿಗಿಂತ ಹೆಚ್ಚಿನ ಸಾರ್ವಜನಿಕರು ಸಂಜೆ ವೇಳೆ ಫ್ರೇಜರ್ ಟೌನ್ ನಾ ಮಸೀದಿ ರಸ್ತೆಯ ಈ ಫುಡ್ ಸ್ಟ್ರೀಟ್ ಗೆ ಹೆಚ್ಚಾಗಿ ಭೇಟಿ ನೀಡಿ ತಮ್ಮ ಇಷ್ಟದ ಖಾದ್ಯಗಳನ್ನು ಸವಿದು ಎಂಜಾಯ್ ಮಾಡುತ್ತಿದ್ದಾರೆ
ಬಾಕ್ಸ್‌ನಲ್ಲಿ ಸಿದ್ಧ ಮಾಡಿಟ್ಟಿರುವ ವಿವಿಧ ರೀತಿಯ ಸ್ವೀಟ್ಸ್‌ಗಳು ಸಹ ಜನರನ್ನು ಸೆಳೆಯುತ್ತಿವೆ. ಒಟ್ನಲ್ಲಿ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ರಂಜಾನ್ ಹಿನ್ನೆಲೆ ಆಹಾರಪ್ರಿಯರ ಫೇವರಿಟ್ ಸ್ಥಳವಾಗಿ ಬದಲಾಗಿರೋದಂತೂ ನಿಜ.