ಆರೋಗ್ಯಕರ, ಸುರಕ್ಷಿತ ಆಹಾರ ಪದ್ಧತಿ ಉತ್ತೇಜಿಸಲು ದೇಶಾದ್ಯಂತ 100 ಫುಡ್ ಸ್ಟ್ರೀಟ್ ಆರಂಭ

ದೇಶದಾದ್ಯಂತ 100 ಫುಡ್ ಸ್ಟ್ರೀಟ್‌ಗಳನ್ನು ಕಾರ್ಯಗತಗೊಳಿಸಲು ಆರೋಗ್ಯ ಸಚಿವಾಲಯವು ಪ್ರಸ್ತಾಪ ಮುಂದಿಟ್ಟಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 1 ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದಾಗಿದೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

Ministry of Health proposes operationalizing of 100 Food Streets across the country Vin

ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ಇಲ್ಲಿನ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಸ್ಟ್ರೀಟ್ ಫುಡ್‌ಗಳು ಹೆಚ್ಚು ಹೆಸರುವಾಸಿಯಾಗಿವೆ. ಆರೋಗ್ಯ ಸಚಿವಾಲಯವೂ ಸಮರ್ಪಕವಾಗಿ ಕೆಲಸ ಮಾಡುವ ಕಾರಣ ಆಗಿಂದಾಗೆ ಆಹಾರದ ಗುಣಮಟ್ಟಗಳನ್ನು ಪರಿಶೀಲಿಸುವ ಕೆಲಸ ಮಾಡಿಸುತ್ತದೆ. ಹೀಗಿರುವಾಗ ಆರೋಗ್ಯಕರ ಮತ್ತು ಸುರಕ್ಷಿತ ಆಹಾರ ಪದ್ಧತಿಗಳನ್ನು ಉತ್ತೇಜಿಸಲು ದೇಶದಾದ್ಯಂತ 100 ಫುಡ್ ಸ್ಟ್ರೀಟ್‌ಗಳನ್ನು ಕಾರ್ಯಗತಗೊಳಿಸಲು ಆರೋಗ್ಯ ಸಚಿವಾಲಯವು ಪ್ರಸ್ತಾಪ ಮುಂದಿಟ್ಟಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 1 ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ದೇಶಾದ್ಯಂತ 100 ಜಿಲ್ಲೆಗಳಲ್ಲಿ 100 ಆಹಾರ ಬೀದಿಗಳನ್ನು (Food street) ಅಭಿವೃದ್ಧಿಪಡಿಸಲು ಈ ಯೋಜನೆ ಹಮ್ಮಿಕೊಂಡಿದೆ. ಇದು ಸುರಕ್ಷಿತ ಆಹಾರ ಪದ್ಧತಿಗಳು ಸ್ಥಳೀಯ ಆಹಾರ ವ್ಯವಹಾರಗಳ ನೈರ್ಮಲ್ಯ ವಿಶ್ವಾಸಾರ್ಹತೆಯನ್ನು ಸುಧಾರಿಸುವುದಲ್ಲದೆ, ಸ್ಥಳೀಯ ಉದ್ಯೋಗ (Job), ಪ್ರವಾಸೋದ್ಯಮ ಮತ್ತು ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಉಪಕ್ರಮವನ್ನು ಪ್ರಾಯೋಗಿಕ ಯೋಜನೆಯಾಗಿ ತೆಗೆದುಕೊಳ್ಳಲಾಗಿದೆ. ಆಹಾರ ವ್ಯವಹಾರಗಳು ಮತ್ತು ಸಮುದಾಯದ ಸದಸ್ಯರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಪ್ರೋತ್ಸಾಹಿಸುವುದು ಈ ಯೋಜನೆಯ (Project) ಉದ್ದೇಶವಾಗಿದೆ, ಹೀಗಾಗಿ, ಆಹಾರದಿಂದ ಹರಡುವ ರೋಗಗಳನ್ನು (Disease) ಕಡಿಮೆ ಮಾಡುವಲ್ಲಿ ಇದು ಗಮನಾರ್ಹವಾಗಿ ಪರಿಣಾಮ ಬೀರಲಿದೆ.

Ramzan 2023: ಬೆಂಗಳೂರಿನ ಫುಡ್ಡೀಸ್‌ ಈ ಫುಡ್ ಸ್ಟ್ರೀಟ್ ಮಿಸ್ ಮಾಡ್ದೆ ವಿಸಿಟ್ ಮಾಡಿ

ರಾಜ್ಯಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ. 'ನಾಗರಿಕರ ಉತ್ತಮ ಆರೋಗ್ಯಕ್ಕೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರವನ್ನು ಸುಲಭವಾಗಿ ಪ್ರವೇಶಿಸುವುದು ಅತ್ಯಗತ್ಯ. ಸುರಕ್ಷಿತ ಆಹಾರ ಪದ್ಧತಿಗಳು, ಆಹಾರ ಸುರಕ್ಷತೆಯನ್ನು ಉತ್ತೇಜಿಸುವುದಲ್ಲದೆ, ಸ್ಥಳೀಯ ಆಹಾರ ವ್ಯವಹಾರಗಳ ನೈರ್ಮಲ್ಯದ ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ, ಸ್ಥಳೀಯ ಉದ್ಯೋಗ, ಪ್ರವಾಸೋದ್ಯಮ ಮತ್ತು ಪ್ರತಿಯಾಗಿ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಇದು ಸ್ವಚ್ಛ ಮತ್ತು ಹಸಿರು ಪರಿಸರಕ್ಕೆ ಕಾರಣವಾಗುತ್ತದೆ' ಎಂದು ತಿಳಿಸಿದರು.

ಬೀದಿ ಆಹಾರಗಳು ಸಾಂಪ್ರದಾಯಿಕವಾಗಿ ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದೆ. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ನಾವು ಹೆಸರುವಾಸಿಯಾದ ಸ್ಟ್ರೀಟ್‌ಫುಡ್‌ಗಳನ್ನು ನೋಡಬಹುದು. ಇದು ಸ್ಥಳೀಯ ಪಾಕಪದ್ಧತಿಯ ಶ್ರೀಮಂತ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ಬೀದಿ ಆಹಾರ ಘಟಕೆಗಳು ಲಕ್ಷಾಂತರ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಆಹಾರವನ್ನು ಒದಗಿಸುವುದಲ್ಲದೆ, ಹೆಚ್ಚಿನ ಸಂಖ್ಯೆಯ ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಮಾತ್ರವಲ್ಲ ಪ್ರವಾಸೋದ್ಯಮವನ್ನು ಬೆಂಬಲಿಸುತ್ತವೆ.

ಫುಡ್ಡೀಸ್‌ಗೆ ಗುಡ್‌ನ್ಯೂಸ್‌..ಬೆಂಗಳೂರಲ್ಲಿ ಆರಂಭವಾಗಲಿದೆ 2ನೇ ಫುಡ್ ಸ್ಟ್ರೀಟ್, ಎಲ್ಲಿ..ಯಾವಾಗ?

ಹೀಗಾಗಿಯೇ ಬೀದಿ ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ಕಾಳಜಿಯ ವಿಷಯವಾಗಿದೆ. ಆದ್ರೆ ಇತ್ತೀಚಿಗೆ ನಗರಗಳ ಬೆಳವಣಿಗೆಯೊಂದಿಗೆ ಬೀದಿ ಆಹಾರ ಮಳಿಗೆಗಳಲ್ಲಿ ಅನೈರ್ಮಲ್ಯ ಮತ್ತು ಅಸುರಕ್ಷಿತ ಆಹಾರ ಪದ್ಧತಿಗಳಿಂದಾಗಿ ಆಹಾರ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿವೆ. ಹೀಗಾಗಿ ಆರೋಗ್ಯ ಸಚಿವಾಲಯವು ಈ ಯೋಜನೆಯನ್ನು ಮುಂದಿಟ್ಟಿದೆ.

ಈ ವಿಶಿಷ್ಟ ಉಪಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಮೂಲಕ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಮತ್ತು FSSAI ನ ತಾಂತ್ರಿಕ ಬೆಂಬಲದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತಿ ಆಹಾರ ಬೀದಿ/ಜಿಲ್ಲೆಗಳಿಗೆ ರೂ.1 ಕೋಟಿ ರೂಪದಲ್ಲಿ ಆರ್ಥಿಕ ಸಹಾಯವನ್ನು  ನೀಡಲಾಗುತ್ತದೆ. ದೇಶಾದ್ಯಂತ 100 ಜಿಲ್ಲೆಗಳಲ್ಲಿ ಇಂತಹ 100 ಆಹಾರ ಬೀದಿಗಳನ್ನು ತೆರೆಯಲಾಗುವುದು. ಈ ಸಹಾಯವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ 60:40 ಅಥವಾ 90: 10 ರ ಅನುಪಾತದಲ್ಲಿ ಒದಗಿಸಲಾಗುತ್ತದೆ ಮತ್ತು FSSAI ಮಾರ್ಗಸೂಚಿಗಳ ಪ್ರಕಾರ ಈ ಆಹಾರ ಬೀದಿಗಳ ಪ್ರಮಾಣಿತ ಬ್ರ್ಯಾಂಡಿಂಗ್ ಅನ್ನು ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios