Asianet Suvarna News Asianet Suvarna News

Cucumber Side Effects: ಸೌತೆಕಾಯಿಗಳನ್ನು ತಿನ್ನುವುದರಿಂದಾಗುವ ಅಡ್ಡ ಪರಿಣಾಮಗಳು

ಸೌತೆಕಾಯಿ (Cucumber) ಯನ್ನು ತಿನ್ನುವುದು ಆರೋಗ್ಯ (Health)ಕ್ಕೆ ಎಲ್ಲಾ ರೀತಿಯಲ್ಲೂ ಒಳಿತು. ಹೀಗಾಗಿಯೇ ಹಲವರು ಎಲ್ಲಾ ಹೊತ್ತಿನ ತಮ್ಮ ಆಹಾರ (Food)ದಲ್ಲೂ ಸೌತೆಕಾಯಿಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಆದರೆ ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ತೊಂದರೆನೂ ಇದೆ ಅನ್ನೋದು ನಿಮಗೆ ಗೊತ್ತಾ..?

Secret Side Effects of Eating Cucumbers
Author
Bengaluru, First Published Jan 9, 2022, 8:53 PM IST

ದಿನನಿತ್ಯ ಸೌತೆಕಾಯಿ ಸೇವಿಸಿದರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸೌತೆಕಾಯಿ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಸಲಾಡ್, ಸೌತೆಕಾಯಿ ಜ್ಯೂಸ್ ಮೊದಲಾದವುಗಳನ್ನು ಸೇವಿಸುತ್ತಾರೆ. ಇದರಿಂದ ಮಧುಮೇಹ, ಮಲಬದ್ಧತೆ ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ತೂಕ ಇಳಿಕೆಗೂ ಸೌತೆಕಾಯಿ ಸೇವನೆ ಉತ್ತಮ ಎಂದು ತಿಳಿದುಬಂದಿದೆ. ಆದರೆ ನಿಮಗೆ ಗೊತ್ತಾ ಸೌತೆಕಾಯಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿರುವ ಹಾಗೆಯೇ ಕೆಲವೊಂದು ಅಡ್ಡಪರಿಣಾಮಗಳೂ ಇವೆ. ಹಾಗಿದ್ರೆ ಸೌತೆಕಾಯಿ ತಿನ್ನುವುದರಿಂದ ಇರುವ ಪ್ರಯೋಜನಗಳೇನು, ಅಡ್ಡ ಪರಿಣಾಮಗಳೇನು ತಿಳಿಯೋಣ.

ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ
ಮಧುಮೇಹವನ್ನು ತಡೆಯಲು ಪ್ರಯತ್ನಿಸುವಾಗ, ಆಹಾರಕ್ರಮವನ್ನು ಸಹ ಬದಲಾಯಿಸಿಕೊಳ್ಳಬೇಕಾದುದು ಅಗತ್ಯ. ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸಬೇಕು.  ಸಕ್ಕರೆ ಪಾನೀಯಗಳನ್ನು ಬಿಟ್ಟುಬಿಡಬೇಕು. ಮಾಂಸಾಹಾರದ ಸೇವನೆಯನ್ನು ಮಿತಿಗೊಳಿಸಬೇಕು. ಈ ಆಹಾರದ ಆಯ್ಕೆಗಳ ಜೊತೆಗೆ, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಯೊಂದಿಗೆ ಹೆಚ್ಚಿನ ಆಹಾರವನ್ನು ಸೇವಿಸುವುದನ್ನು ಪ್ರಾರಂಭಿಸುವುದು ಸಹ ಮುಖ್ಯವಾಗಿದೆ. ಜಿಐ ಎಂಬುದು ವಿಭಿನ್ನ ಆಹಾರಗಳಿಗೆ ನಿಗದಿಪಡಿಸಲಾದ ಸಂಖ್ಯೆಯಾಗಿದ್ದು, ಶೂನ್ಯದಿಂದ 100ರ ವರೆಗೆ ಇರುತ್ತದೆ. ಗ್ಲೈಸೆಮಿಕ್ ಸೂಚ್ಯಂಕವು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅದನ್ನು ತಿಂದ ನಂತರ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಸೌತೆಕಾಯಿಗಳು 15ರ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ. ಇದು ತುಲನಾತ್ಮಕವಾಗಿ ಕಡಿಮೆ ಸಂಖ್ಯೆಯ ಆಹಾರವಾಗಿದೆ.

ನ್ಯೂಟ್ರಿಷನ್ಸ್ ಪ್ರಕಾರ, ಕಡಿಮೆ ಜಿಐ ಹೊಂದಿರುವ ಆಹಾರವನ್ನು ತಿನ್ನುವುದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೊಟ್ಟೆಯ ಕೊಬ್ಬನ್ನು ಕರಗಿಸಲು ಒಂದು ಗ್ಲಾಸ್ ಸೌತೆಕಾಯಿ ನೀರು ಸಾಕು

ಹೆಚ್ಚು ಬಾಯಾರಿಕೆಯಾಗುವುದಿಲ್ಲ
ದಿನನಿತ್ಯದ ಬಳಕೆಯಲ್ಲಿ ಸೌತೆಕಾಯಿ (Cucumber)ಯನ್ನು ನಿಯಮಿತವಾಗಿ ಬಳಸುವುದರಿಂದ ಹೆಚ್ಚೆಚ್ಚು ಬಾಯಾರಿಕೆಯಾಗುವುದಿಲ್ಲ. ದಿನವಿಡೀ ನೀರು (Water) ಕುಡಿಯುತ್ತಾ ಇರಲು ಮರೆತು ಹೋಗುತ್ತದೆ ಎಂದಾದರೆ, ಆಗಾಗ ಸೌತೆಕಾಯಿ ತಿನ್ನುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಹೀಗಿದ್ದೂ ಪ್ರತ್ಯೇಕವಾಗಿ ನೀರನ್ನು ಕುಡಿಯುವುದನ್ನು ಮರೆಯದಿರಿ. ಆದರೂ ಸೌತೆಕಾಯಿ ಸೇವನೆ ಹೆಚ್ಚು ಬಾಯಾರಿಕೆಯಾಗದಂತೆ, ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಸಮೀಕ್ಷೆಯೊಂದರ ಪ್ರಕಾರ, ಸೌತೆಕಾಯಿಗಳು 95%ಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಈ ನೀರಿನ ಪ್ರಮಾಣ ನಿಮ್ಮ ದೇಹವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ತೂಕವನ್ನು ಕಳೆದುಕೊಳ್ಳಬಹುದು
ತೂಕ (Weight)ವನ್ನು ಕಳೆದುಕೊಳ್ಳಲು ಬಯಸುವರರು ಇದಕ್ಕಾಗಿ ಹಲವಾರು ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಉತ್ತಮ ವಿಧಾನವೆಂದರೆ ಆಹಾರದಲ್ಲಿ ಸೌತೆಕಾಯಿಗಳನ್ನು ಸೇರಿಸುವುದು. ಯಾಕೆಂದರೆ, ಇದು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುವ ಆರೋಗ್ಯಕರ ಆಹಾರವಾಗಿದೆ. ಒಂದು ಕಪ್ ಸೌತೆಕಾಯಿಯಲ್ಲಿ ಕೇವಲ 16 ಕ್ಯಾಲೋರಿಗಳಿವೆ. ಅಂದರೆ ಆಹಾರವು ಕಡಿಮೆ ಶಕ್ತಿಯ ಸಾಂದ್ರತೆಯನ್ನು ಹೊಂದಿರುತ್ತದೆ. 

ಸೌತೆಕಾಯಿ ಕಹಿ ಅಥವಾ ಸಿಹಿ ? ಗುರುತಿಸೋಕೆ ಈ ವಿಧಾನ ಅನುಸರಿಸಿ

ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ
ಸೌತೆಕಾಯಿಗಳಲ್ಲಿರುವ ನೀರು ಮತ್ತು ಫೈಬರ್‌ (Fiber) ಅಂಶ ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ. ಜಾದವಪುರ್ ವಿಶ್ವವಿದ್ಯಾನಿಲಯದಿಂದ ಫಿಟೊಟೆರಾಪಿಯಾದಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸೌತೆಕಾಯಿಯ ಬೀಜಗಳು, ಮಲಬದ್ಧತೆ (Constipation)ಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿರ‍್ಸಿಟಿಯ ಕಾಲೇಜ್ ಆಫ್ ಮೆಡಿಸಿನ್ ಮಲಬದ್ಧತೆಯನ್ನು ನಿವಾರಿಸಲು ಸೌತೆಕಾಯಿಯನ್ನು ಸೇರಿಸಿದ ಆಹಾರ (Food)ವನ್ನು ಸೇವಿಸುವಂತೆ ಸಲಹೆ ನೀಡುತ್ತದೆ.

ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ
ಸೌತೆಕಾಯಿಗಳನ್ನು ತಿನ್ನುವ ಧನಾತ್ಮಕ ಅಂಶವೆಂದರೆ ಇದು ಮಲಬದ್ಧತೆಯನ್ನು ತಪ್ಪಿಸಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿಗಳನ್ನು ತಿನ್ನುವುದರಿಂದ ಇದು ಗ್ಯಾಸ್‌ಗೆ ಸಹ ಕಾರಣವಾಗುತ್ತದೆ. ಸೌತೆಕಾಯಿಗಳು ಕುಕರ‍್ಬಿಟಾಸಿನ್ ಎಂಬ ಅಂಶವನ್ನು ಹೊಂದಿರುತ್ತವೆ. ಇದು ಕುಂಬಳಕಾಯಿ, ಬೂದು ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಇತರ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಕ್ಯುಕರ‍್ಬಿಟಾಸಿನ್ ಸೌತೆಕಾಯಿಗಳಲ್ಲಿ ಕಂಡುಬರುವ ಕಹಿ ರುಚಿಯನ್ನು ಉಂಟುಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. 

Follow Us:
Download App:
  • android
  • ios