Asianet Suvarna News Asianet Suvarna News

ಮೊಳಕೆ ಬರಿಸಿದ ಕಾಳು ಅಥವಾ ಬೇಯಿಸಿದ ಕಾಳು; ತೂಕ ಇಳಿಸ್ಕೊಳ್ಳೋಕೆ ಯಾವುದು ಬೆಸ್ಟ್‌?

ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿರುವ ಹಲವರು ಹೆವಿ ಫುಡ್ ಸ್ಕಿಪ್ ಮಾಡಿ ಕಾಳುಗಳ ಸಲಾಡ್ ಮಾಡಿ ತಿನ್ನುತ್ತಿರುತ್ತಾರೆ. ಆದರೆ ಕೆಲವೊಬ್ಬರು ಕಾಳುಗಳನ್ನು ಬೇಯಿಸಿ ತಿಂದರೆ ಇನ್ನು ಕೆಲವರು ಹಸಿಯಾಗಿಯೇ ತಿನ್ನುತ್ತಾರೆ. ಆದರೆ ತೂಕ ಇಳಿಕೆಗೆ ಕಾಳುಗಳನ್ನು ಯಾವ ರೀತಿ ತಿಂದರೆ ಉತ್ತಮ?

Raw vs Boiled Sprouts, Which is Better For Easy Digestion And Weight Loss Vin
Author
First Published Feb 17, 2024, 10:30 AM IST

ಕಾಲ ಬದಲಾಗುತ್ತಿರುವ ಹಾಗೆಯೇ ಜನರಲ್ಲಿ ಕಾಯಿಲೆಗಳ ಪ್ರಮಾಣವೂ ಹೆಚ್ಚುತ್ತಿದೆ. ಜಡ ಜೀವನಶೈಲಿಯಿಂದ ವಕ್ಕರಿಸಿಕೊಂಡಿರೋ ಕಾಯಿಲೆಗಳು ಒಂದೆರಡಲ್ಲ. ಮಧುಮೇಹ, ಕಿಡ್ನಿ ಸಮಸ್ಯೆ, ಮಾನಸಿಕ ಒತ್ತಡ ಮೊದಲಾದವು ಹೆಚ್ಚಾಗುತ್ತಿದೆ. ಇದರಲ್ಲಿ ಬಹುತೇಕ ಆರೋಗ್ಯ ಸಮಸ್ಯೆಗೆ ಮುಖ್ಯವಾಗಿ ಕಾರಣವಾಗೋದು ತೂಕ ಹೆಚ್ಚಳ. ವೈಟ್ ಗೈನ್ ಆಗೋದ್ರಿಂದಾನೇ ಹಲವು ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ. ಹೀಗಾಗಿಯೇ ತೂಕ ಕಡಿಮೆ ಮಾಡ್ಕೊಳ್ಳೋಕೆ ಬಹುತೇಕರು ಯೋಗ, ಡಯೆಟ್‌, ಎಕ್ಸರ್‌ಸೈಸ್ ಅಂತ ನಾನಾ ರೀತಿಯಲ್ಲಿ ಪ್ರಯತ್ನ ಮಾಡ್ತಾರೆ. ಆಹಾರದಲ್ಲೂ ಹಲವು ಬದಲಾವಣೆಯನ್ನು ಮಾಡಿಕೊಳ್ತಾರೆ.

ತೂಕ ಇಳಿಸಿಕೊಳ್ಳಲು ಬಯಸುವವರು, ಫಿಟ್ನೆಸ್ ಉತ್ಸಾಹಿಗಳು ಸಾಮಾನ್ಯವಾಗಿ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಹೆಚ್ಚಾಗಿ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುತ್ತಾರೆ. ಮೊಳಕೆಯೊಡೆದ ಕಾಳುಗಳು ಹೆಚ್ಚಿನ ವಿಟಮಿನ್ ಮತ್ತು ಖನಿಜಾಂಶದ ಕಾರಣದಿಂದಾಗಿ ಪೌಷ್ಟಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸಲ್ಪಟ್ಟಿವೆ. ಅವು ನಿರ್ದಿಷ್ಟವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹೆಚ್ಚಿನ ಪ್ರೋಟೀನ್, ಮೆಗ್ನೀಸಿಯಮ್, ವಿಟಮಿನ್ ಸಿ ಮತ್ತು ಕೆ. ಮೊಗ್ಗುಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ದಿನವಿಡೀ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಆದರೆ ಕಾಳುಗಳನ್ನು ಹಸಿಯಾಗಿ ತಿನ್ನಬೇಕೇ ಅಥವಾ ಬೇಯಿಸಿ ತಿನ್ನಬೇಕಾ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಯಾವ ರೀತಿ ತಿಂದರೆ ಆರೋಗ್ಯಕ್ಕೆ ಉತ್ತಮ ಸುಲಭವಾಗಿ ತೂಕ ಇಳಿಸ್ಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ.

ಆಯುರ್ವೇದದ ಪ್ರಕಾರ ಬೆಳಗ್ಗೆದ್ದು ಇಂಥಾ ಆಹಾರ ತಿಂದ್ರೆ ಬೇಗ ಸ್ಲಿಮ್ ಆಗ್ಬೋದು

ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ರೋಗಗಳ ಭೀತಿ
ಇ.ಕೋಲಿ ಮತ್ತು ಸಾಲ್ಮೊನೆಲ್ಲಾಗಳಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವ ಕಾರಣ ಹಸಿ ಕಾಳುಗಳು ಸೇವನೆ ಹೆಚ್ಚಾಗಿ ಫುಡ್ ಪಾಯ್ಸನಿಂಗ್‌ಗೆ ಕಾರಣವಾಗುತ್ತದೆ. ಈ ಕಾಳುಗಳನ್ನು ಹಸಿಯಾಗಿ ಸೇವಿಸಿದರೆ, ಅತಿಸಾರ, ಹೊಟ್ಟೆನೋವು, ವಾಂತಿ ಇತ್ಯಾದಿ ಸೇರಿದಂತೆ ಆರೋಗ್ಯದ ಅಪಾಯಗಳು ಕಾಣಿಸಿಕೊಳ್ಳಬಹುದು. ಇದು ನಮ್ಮ ಒಟ್ಟಾರೆ ರೋಗನಿರೋಧಕ ಶಕ್ತಿಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ.

ಮಾತ್ರವಲ್ಲ ಬೇಯಿಸಿದ ಕಾಳುಗಳಿಗೆ ಹೋಲಿಸಿದರೆ ಕಚ್ಚಾ ಕಾಳುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ದೇಹವು ಕಾಳುಗಳ ಎಲ್ಲಾ ಪೋಷಕಾಂಶಗಳನ್ನು ಕಚ್ಚಾ ರೂಪದಲ್ಲಿ ಹೀರಿಕೊಳ್ಳಲು ಸಾಧ್ಯವಾಗದಿರಬಹುದು. ಆದ್ದರಿಂದ, ದೇಹಕ್ಕೆ ಪೋಷಕಾಂಶಗಳನ್ನು ಹೆಚ್ಚು ಸಿಗಲು ಮೊಳಕೆಗಳನ್ನು ಬೇಯಿಸಿ ಸೇವಿಸಲು ಸಲಹೆ ನೀಡಲಾಗುತ್ತದೆ.

ವೈಟ್ ಲಾಸ್ ಮಾಡ್ಕೊಳ್ಳೋಕೆ ಡಯೆಟ್ ಮಾಡ್ಬೇಕಿಲ್ಲ, ಈ ಕೆಲ ಆಹಾರ ಒಟ್ಟಿಗೆ ತಿಂದ್ರೆ ತೂಕ ಬೇಗ ಇಳಿಯುತ್ತೆ!

ಕಾಳುಗಳನ್ನು ಸೇವಿಸುವ ಸರಿಯಾದ ರೀತಿ ಯಾವುದು?
ಹಸಿಯಾಗಿ ಕಾಳುಗಳನ್ನು ತಿನ್ನುವ ಅಭ್ಯಾಸ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಇದು ಎಲ್ಲರಿಗೂ ಉಂಟಾಗುವುದಿಲ್ಲ. ವಿಶೇಷವಾಗಿ, ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಿರುವವರು, ಉತ್ತಮ ಜೀರ್ಣಕ್ರಿಯೆಗಾಗಿ ಬೇಯಿಸಿದ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಆದರೂ, ಕಾಳುಗಳನ್ನು ಬೇಯಿಸುವುದು ಅಥವಾ ಕುದಿಸುವುದು ಅವುಗಳಲ್ಲಿನ ಪೋಷಕಾಂಶಗಳು ಮತ್ತು ಜೀವಸತ್ವಗಳು ಕಡಿಮೆಯಾಗಲು ಕಾರಣವಾಗಬಹುದು. ಆದರೂ ಹಸಿಯಾಗಿ ತಿನ್ನಲು ಇಷ್ಟಪಡದವರು ಕಾಳುಗಳನ್ನು ಬೇಯಿಸಿ ತಿನ್ನುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. 

ಸುರಕ್ಷತೆಗಾಗಿ, ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಕಾಳುಗಳನ್ನು ಸ್ವಲ್ಪ ಸಮಯದವರೆಗೆ ಹುರಿಯಿರಿ ಅಥವಾ 5-10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಕುದಿಸಬಹುದು. ಕಾಳುಗಳನ್ನು ಬೇಯಿಸುವುದು ಜೀರ್ಣಾಂಗ ವ್ಯವಸ್ಥೆಗೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಇನ್ನೂ ಉತ್ತಮ ಮಾರ್ಗವಾಗಿದೆ.

Follow Us:
Download App:
  • android
  • ios