ವೈಟ್ ಲಾಸ್ ಮಾಡ್ಕೊಳ್ಳೋಕೆ ಡಯೆಟ್ ಮಾಡ್ಬೇಕಿಲ್ಲ, ಈ ಕೆಲ ಆಹಾರ ಒಟ್ಟಿಗೆ ತಿಂದ್ರೆ ತೂಕ ಬೇಗ ಇಳಿಯುತ್ತೆ!
ತೂಕನಷ್ಟ ಅಂದುಕೊಂಡಷ್ಟು ಸುಲಭದ ಮಾತಲ್ಲ. ಇಷ್ಟವಾದ ಫುಡ್‌ನ್ನು ತಿನ್ನುವುದು ಬಿಟ್ಟು ಬಿಡಬೇಕಾಗುತ್ತದೆ. ಇಷ್ಟವಿಲ್ಲದ ಆಹಾರವನ್ನು ಕಷ್ಟಪಟ್ಟು ಸೇವಿಸಬೇಕಾಗುತ್ತದೆ. ಆದರೆ ಕೆಲವು ಫುಡ್ ಕಾಂಬಿನೇಷನ್‌ಗಳು ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗಬಲ್ಲದು ಅನ್ನೋದು ನಿಮ್ಗೆ ಗೊತ್ತಿದ್ಯಾ?
ತೂಕ ನಷ್ಟ ಅಂದುಕೊಂಡಷ್ಟು ಸುಲಭದ ಮಾತಲ್ಲ. ಇಷ್ಟವಾದ ಫುಡ್‌ನ್ನು ತಿನ್ನುವುದು ಬಿಟ್ಟು ಬಿಡಬೇಕಾಗುತ್ತದೆ. ಇಷ್ಟವಿಲ್ಲದ ಆಹಾರವನ್ನು ಕಷ್ಟಪಟ್ಟು ಸೇವಿಸಬೇಕಾಗುತ್ತದೆ. ಆದರೆ ಕೆಲವು ಫುಡ್ ಕಾಂಬಿನೇಷನ್‌ಗಳು ಸುಲಭವಾಗಿ ತೂಕ ಇಳಿಸಿಕೊಳ್ಳಲು ನೆರವಾಗಬಲ್ಲದು ಅನ್ನೋದು ನಿಮ್ಗೆ ಗೊತ್ತಿದ್ಯಾ?
ശരീരഭാരം
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದ ಕೆಲವು ಸಂಯೋಜನೆಯು ದೇಹದ ಮೇಲೆ ಪರಿಣಾಮ ಬೀರುತ್ತದೆ.
ಪೋಷಕಾಂಶಗಳ ಉತ್ತಮ ಸಂಯೋಜನೆಯು ಹೆಚ್ಚು ಸಮಯ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ. ಕ್ಯಾಲೊರಿಗಳನ್ನು ವೇಗವಾಗಿ ಸುಡುವಲ್ಲಿ ನೆರವಾಗುತ್ತದೆ.
ಹೆಚ್ಚು ಹಸಿರು ತರಕಾರಿ ತಿನ್ನಿ
ತಜ್ಞರ ಪ್ರಕಾರ ಹೆಸಿರು ತರಕಾರಿಗಳು ಹೆಚ್ಚು ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ಹೆಚ್ಚು ಸಮಯ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ. ಇದರ ಜೊತೆಗೆ ಅವಕಾಡೊವನ್ನು ತಿನ್ನೋದು ಒಳ್ಳೆಯದು.
ಗ್ರೀನ್ ಟೀ ಮತ್ತು ಲೆಮನ್
ಗ್ರೀನ್ ಟೀ ಆರೋಗ್ಯಕರ ಪಾನೀಯವಾಗಿದೆ. ಇದು ಕ್ಯಾಟೆಚಿನ್ಸ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದ್ದು, ಸುಲಭವಾಗಿ ಕ್ಯಾಲೊರಿಗಳನ್ನು ಸುಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ವಿಟಮಿನ್ ಸಿ ಗುಣಲಕ್ಷಣಗಳಿಗೆ ನಿಂಬೆಯನ್ನು ಸಹ ಸೇರಿಸಬಹುದು.
ಹಣ್ಣು, ತರಕಾರಿ ಮತ್ತು ಆಲಿವ್ ಎಣ್ಣೆ
ಆಲಿವ್ ಎಣ್ಣೆಯು ಆರೋಗ್ಯಕರ ತೈಲ ಆಯ್ಕೆಗಳಲ್ಲಿ ಒಂದಾಗಿದೆ. ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಸಂಯೋಜಿಸಿದಾಗ ಅದು ತೂಕ ನಷ್ಟದ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಬೆರ್ರಿ ಜೊತೆ ಓಟ್‌ಮೀಲ್
ಓಟ್‌ಮೀಲ್ ಆರೋಗ್ಯಕರ ಉಪಾಹಾರ ಪರ್ಯಾಯವಾಗಿದ್ದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ತೂಕ ನಷ್ಟಕ್ಕೆ ಸಹ ಸಹಾಯ ಮಾಡುತ್ತದೆ. ಹಣ್ಣುಗಳೊಂದಿಗೆ ಓಟ್ ಮೀಲ್ ದಿನವನ್ನು ಪ್ರಾರಂಭಿಸಲು ಉತ್ತಮ ಆಯ್ಕೆಯಾಗಿದೆ. ಬೆರ್ರಿಗಳು ಕರಗಬಲ್ಲ ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವುದರಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳಲ್ಲಿ ಒಂದಾಗಿದೆ.
ಚಿಯಾ ಸೀಡ್ಸ್ ಪುಡಿಂಗ್
ಈ ಸಣ್ಣ ಬೀಜಗಳು ಉತ್ತಮ ಪೌಷ್ಟಿಕಾಂಶದ ಗುಣಗಳಿಂದ ತುಂಬಿವೆ. ಇದು ಉತ್ತಮ ಆರೋಗ್ಯಕರ ಉಪಾಹಾರ ಪೂರಕವಾಗಿದೆ, ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಫೈಬರ್, ಒಮೆಗಾ 3 ಅಂಶಗಳು ಚೆನ್ನಾಗಿರುತ್ತವೆ.