Asianet Suvarna News Asianet Suvarna News

ಅಬ್ಬಬ್ಬಾ..12 ಕೆಜಿ ಲಡ್ಡು ಹರಾಜಿನಲ್ಲಿ 61 ಲಕ್ಷಕ್ಕೆ ಸೇಲ್..!

ಹೈದರಾಬಾದ್‌ನಲ್ಲಿ ಗಣೇಶ ಹಬ್ಬದಲ್ಲಿ ಪೂಜೆ ಮಾಡಲಾಗುವ ಲಡ್ಡೂಗಳು ಭಾರೀ ಮೊತ್ತಕ್ಕೆ ಹರಾಜು ಆಗುತ್ತವೆ. ಆದ್ರೆ, ಈ ವರ್ಷ ಬಾಲಾಪುರ ಗಣೇಶನ ಲಡ್ಡೂ ಬೆಲೆಯನ್ನು ಮೀರಿ ಲಡ್ಡುವೊಂದು ಸೇಲ್‌ ಆಗಿದೆ. ಅದ್ಯಾವುದು, ಸೇಲ್ ಆಗಿರೋದು ಎಷ್ಟು ಮೊತ್ತಕ್ಕೆ ಅನ್ನೋ ಮಾಹಿತಿ ಇಲ್ಲಿದೆ.

Ganesh Laddu Auctioned In Hyderabads Pandal For Rs 61 Lakh Vin
Author
First Published Sep 13, 2022, 8:36 AM IST

ದೇಶಾದ್ಯಂತ ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೀಗ ಗಣೇಶನ ವಿಸರ್ಜನೆ, ಯಾತ್ರೆಗಳು ಅದ್ಧೂರಿಯಾಗಿ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಗಮಬ ಸೆಳೀತಿರಪೋದು ಲಕ್ಷ ಲಕ್ಷ ಬೆಲೆಗೆ ಹರಾಜಾಗುತ್ತಿರುವ ಲಡ್ಡುಗಳ ವಿಚಾರ. ಅದರಲ್ಲೂ ಹೈದರಾಬಾದ್‌ನಲ್ಲಿ ಗಣೇಶ ಹಬ್ಬದಲ್ಲಿ ಪೂಜೆ ಮಾಡಲಾಗುವ ಲಡ್ಡೂಗಳು ಭಾರೀ ಮೊತ್ತಕ್ಕೆ ಹರಾಜು ಆಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಹೈದಾರಾಬಾದ್‌ನ ಬಾಲಾಪುರ ಗಣಪತಿ ಪ್ರಸಾದ ದಾಖಲೆಯ ಮೊತ್ತಕ್ಕೆ ಹರಾಜಾಗಿತ್ತು. ಬಾಲಾಪುರ ಚೌತಿ ಪ್ರಸಾದವಾಗಿರುವ ಒಂದು ಲಡ್ಡು ಬರೋಬ್ಬರಿ 24.60 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಆದ್ರೆ ಈ ವರ್ಷ ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ ₹ 60.8 ಲಕ್ಷಕ್ಕೆ ಸೇಲಾಗಿದೆ. 

ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ 60.8 ಲಕ್ಷಕ್ಕೆ ಸೇಲ್‌
ಕೋವಿಡ್ ಕಾರಣದಿಂದ 2020ರಲ್ಲಿ ಬಾಲಾಪುರದಲ್ಲಿ ಗಣಪತಿ(Balapur Ganapa) ಚೌತಿ ಹಬ್ಬ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇಷ್ಟೇ ಅಲ್ಲ ಲಡ್ಡು(Balapur Laddu) ಹರಾಜು ಕೂಡ ನಡೆದಿಲ್ಲ. 2021ರಲ್ಲಿ ಬಾಲಾಪುರ ಲಡ್ಡು 18.90 ಲಕ್ಷ ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿತ್ತು. 2019ರಲ್ಲಿ 17.6 ಲಕ್ಷ ರೂಪಾಯಿಗೆ ಲಡ್ಡು ಹರಾಜಾಗಿತ್ತು. ಈ ಬಾರಿ 20 ಲಕ್ಷ ರೂಪಾಯಿಗೆ ಹರಾಜಾಗುವ ವಿಶ್ವಾಸವನ್ನು ಬಾಲಾಪುರ ಗಣೇಶೋತ್ಸವ(Ganesh Festival) ಸಮಿತಿ ವ್ಯಕ್ತಪಡಿಸಿತ್ತು. ಆದರೆ ಅಂತಿಮವಾಗಿ 25.60 ಲಕ್ಷ ರೂಪಾಯಿಗೆ ಹರಾಜಾಗುವ ಮೂಲಕ ದಾಖಲೆ ಬರೆದಿದೆ. ಇನ್ನೊಂದೆಡೆ ಪ್ರಸಿದ್ಧ ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಸುಮಾರು ₹ 46 ಲಕ್ಷಕ್ಕೆ ಮಾರಾಟವಾಗಿದೆ. ಗಣೇಶ ಲಡ್ಡುಗಳು ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಸ್ಥಳೀಯ ನಿವಾಸಿಗಳು ನಂಬುತ್ತಾರೆ.

1.43 ಕೋಟಿ ರೂ. ಮೌಲ್ಯದ ಗರಿಗರಿ ನೋಟಿನಲ್ಲಿ ಸಿಂಗಾರಗೊಂಡ ಗಣಪ

ಹೌದು, ಈ ವರ್ಷ ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ 60.8 ಲಕ್ಷಕ್ಕೆ ಸೇಲಾಗಿದೆ. ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಸುಮಾರು 46 ಲಕ್ಷಕ್ಕೆ ಮಾರಾಟವಾದರೆ, ಬಾಲಾಪುರ ಗಣೇಶ ಲಡ್ಡು ₹ 24.60 ಲಕ್ಷಕ್ಕೆ ಮಾರಾಟವಾಗಿದೆ. ಇದನ್ನೂ ಮೀರಿ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂ 60.8 ಲಕ್ಷಕ್ಕೆ ಸೇಲಾಗಿದೆ. 

ಐದು ವರ್ಷಗಳ ಹಿಂದೆ ಗಣೇಶ ಲಡ್ಡು ಹರಾಜು ಹಾಕುವ ಸಂಪ್ರದಾಯ ಆರಂಭ
ಮಾಧ್ಯಮಗಳೊಂದಿಗೆ ಮಾತನಾಡಿದ, ರಿಚ್‌ಮಂಡ್ ವಿಲ್ಲಾ ಸನ್ ಸಿಟಿಯ ನಿವಾಸಿ ಡಾ.ಸಾಜಿ ಡಿಸೋಜಾ, ಸುಮಾರು 100 ನಿವಾಸಿಗಳು ಲಡ್ಡೂ ಖರೀದಿಸಲು ಒಟ್ಟಾಗಿ ಸೇರಿದ್ದರು. ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಇದ್ದಾರೆ, ಆದರೆ, ನಾವೆಲ್ಲರೂ ನಂಬುವ ಏಕೈಕ ಧರ್ಮವೆಂದರೆ ಅದು ಮಾನವೀಯತೆ. ಗಣೇಶ ಹಬ್ಬ ನಾವೆಲ್ಲರೂ ಒಗ್ಗೂಡಿ ಮಾನವೀಯತೆಯನ್ನು ಆಚರಿಸಲು ಉತ್ತಮ ಸಂದರ್ಭವಾಗಿದೆ ಎಂದರು.

ಗಣೇಶನ ಕಳ್ಸೋದು ಬ್ಯಾಡ... ಬಪ್ಪನ ತಬ್ಬಿ ಅಳಲಾರಂಭಿಸಿದ ಪುಟ್ಟ ಮಗು : ವಿಡಿಯೋ ವೈರಲ್

ಇಲ್ಲಿನ ನಿವಾಸಿಗಳು ಐದು ವರ್ಷಗಳ ಹಿಂದೆ ಗಣೇಶ ಲಡ್ಡೂವಿಗೆ 25 ಸಾವಿರ ನೀಡಿ ಹರಾಜು (Auctioned) ಹಾಕುವ ಸಂಪ್ರದಾಯ (Tradition) ಆರಂಭಿಸಿದ್ದರು. ವ್ಯತ್ಯಾಸವೆಂದರೆ ಲಡ್ಡೂವನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ನೀಡುವ ಬದಲು, ಲಡ್ಡೂಗಾಗಿ ಪಾವತಿಸಲು ಕ್ರೌಡ್‌ಫಂಡಿಂಗ್‌ನಂತಹ ಎಲ್ಲಾ ನಿವಾಸಿಗಳಿಂದ ಕೊಡುಗೆಗಳನ್ನು ಸ್ವೀಕರಿಸಲು ಪೂಜಾ ಸಂಘಟಕರು ನಿರ್ಧರಿಸಿದರು. ಪ್ರತಿ ವರ್ಷ ಬೆಳೆಯುತ್ತಿರುವ ಕೊಡುಗೆದಾರರ ಸಂಖ್ಯೆಯೊಂದಿಗೆ, ದಿಯಾ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು. ಅದು ಈಗ 17 NGO ಗಳಿಗೆ ಕಡಿಮೆ ಸೌಲಭ್ಯವಿರುವವರಿಗೆ ಶಿಕ್ಷಣ ಮತ್ತು ವೈದ್ಯಕೀಯ ಅಗತ್ಯಗಳನ್ನು ಬೆಂಬಲಿಸಲು ಧನಸಹಾಯ ನೀಡುತ್ತದೆ.

Follow Us:
Download App:
  • android
  • ios