ವ್ಯಾಕ್ ವ್ಯಾಕ್‌ ಅಂತ ದಿನಪೂರ್ತಿ ವಾಂತಿ ಮಾಡ್ತಿದ್ದ, ಗಂಟಲು ಟೆಸ್ಟ್ ಮಾಡಿದ ವೈದ್ಯರೇ ಬೆಚ್ಚಿಬಿದ್ರು!

ಅಲ್ಲಾ ಒಬ್ಬೊಬ್ಬರು ಸರಿಯಾಗಿ ಬ್ಯಾಟಿಂಗ್ ಮಾಡೋ ಭರಾಟೆಯಲ್ಲಿ ಎಂಥೆಂಥಾ ಎಡವಟ್ಟು ಮಾಡಿಕೊಳ್ತಾರೆ ನೋಡಿ. ಹಿಂದಿನ ದಿನ ಮೂಗಿನ ವರೆಗೆ ತಿಂದು ಬಂದಿದ್ದ ಆತ ಬೆಳಗ್ಗೆದ್ದು ವ್ಯಾಕ್ ವ್ಯಾಕ್‌ ಅಂತ ಕಂಟಿನ್ಯೂಸ್ ಒಮಿಟ್ ಮಾಡ್ಕೊಳ್ಳೋಕೆ ಶುರು ಮಾಡಿದ್ದ. ಗಾಬರಿಯಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿದ್ರೆ ಹೊರಬಿದ್ದಿದ್ದು ಬೆಚ್ಚಿಬೀಳೋ ಸಂಗತಿ. 

Man Visits Hospital Complaining Of Vomiting, They Find octopus Stuck In His Throat Vin

ಗಂಟಲಲ್ಲಿ ಅನ್ನ, ಮೀನಿನ ಮುಳ್ಳು ಹೀಗೆ ಸಣ್ಣಪುಟ್ಟ ಆಹಾರ ನಿಂತ್ರೇನೆ ಉಸಿರಾಡಲಾಗದೆ ಒದ್ದಾಡುವಂತಾಗುತ್ತದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಯ ಗಂಟಲಿನಲ್ಲಿ ಅರ್ಧ ತಿಂದ ಅಕ್ಟೋಪಸ್‌ ಸಿಕ್ಕಿ ಹಾಕಿಕೊಂಡಿತ್ತು. ಅಲ್ಲಾ ಒಬ್ಬೊಬ್ಬರು ಸರಿಯಾಗಿ ಬ್ಯಾಟಿಂಗ್ ಮಾಡೋ ಭರಾಟೆಯಲ್ಲಿ ಎಂಥೆಂಥಾ ಎಡವಟ್ಟು ಮಾಡಿಕೊಳ್ತಾರೆ ನೋಡಿ. ಹಿಂದಿನ ದಿನ ಮೂಗಿನ ವರೆಗೆ ತಿಂದು ಬಂದಿದ್ದ ಆತ ಬೆಳಗ್ಗೆದ್ದು ವ್ಯಾಕ್ ವ್ಯಾಕ್‌ ಅಂತ ಕಂಟಿನ್ಯೂಸ್ ಒಮಿಟ್ ಮಾಡ್ಕೊಳ್ಳೋಕೆ ಶುರು ಮಾಡಿದ್ದ. ಗಾಬರಿಯಾಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿದ್ರೆ ಹೊರಬಿದ್ದಿದ್ದು ಬೆಚ್ಚಿಬೀಳೋ ಸಂಗತಿ. ಈತನ ಗಂಟಲಿನೊಳಗೆ ಅಕ್ಟೋಪಸ್ ಸಿಲುಕಿಹಾಕಿಕೊಂಡಿದೆ ಎಂದು ವೈದ್ಯರು ತಿಳಿಸಿದ್ರು. ಸಿಂಗಾಪುರದಲ್ಲಿ ಈ ಘಟನೆ ನಡೆದಿದೆ. 

ಸಿಂಗಾಪುರದ ಟ್ಯಾನ್ ಟೋಕ್ ಸೆಂಗ್ ಆಸ್ಪತ್ರೆಯ ವೈದ್ಯರು ರೋಗಿಯ ಅನ್ನನಾಳದೊಳಗೆ ಅಂಟಿಕೊಂಡಿರುವ ಆಕ್ಟೋಪಸ್‌ನ್ನು ಕಂಡು ದಿಗ್ಭ್ರಮೆಗೊಂಡರು. 55 ವರ್ಷದ ವ್ಯಕ್ತಿಯಲ್ಲಿ ಗಂಟಲಿನಲ್ಲಿ ಅಕ್ಟೋಪಸ್ ಸಿಲುಕಿ ಹಾಕಿಕೊಂಡಿತ್ತು. ವೈದ್ಯರು CT ಸ್ಕ್ಯಾನ್ ನಡೆಸಿದಾಗ ಗಂಟಲಿನಲ್ಲಿ ಏನೋ ರಾಶಿಯಿರೋದು ಕಂಡು ಬಂತು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನ್ನನಾಳ-ಹೊಟ್ಟೆಯ (Stomach) ಸಮೀಪ ಎರಡು ಇಂಚುಗಳಷ್ಟು ದೂರದಲ್ಲಿರುವ ಅನ್ನನಾಳದ ಗ್ಯಾಸ್ಟ್ರೋಡ್ಯೂಡೆನೋಸ್ಕೋಪಿಯ ಸಮಯದಲ್ಲಿ ಅಕ್ಟೋಪಸ್ ಕಂಡುಬಂದಿದೆ.

8 ತಿಂಗಳ ಮಗುವಿನ ಗಂಟಲಲಿತ್ತು ಬಾಟಲ್‌ ಮುಚ್ಚಳ: ಫೊರ್ಟಿಸ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಸರ್ಜರಿ ಮಾಡಿ ಅಕ್ಟೋಪಸ್ ಹೊರ ತೆಗೆದ ವೈದ್ಯರು
ಮನುಷ್ಯನ ಗಂಟಲಿನಿಂದ ಆಕ್ಟೋಪಸ್ ಅನ್ನು ತೆಗೆದುಹಾಕಲು ಹಲವಾರು ವಿಫಲ ಪ್ರಯತ್ನಗಳ ನಂತರ, ವೈದ್ಯರು ಎಂಡೋಸ್ಕೋಪ್ ನಡೆಸಿದರು. ಯಶಸ್ವಿಯಾಗಿ ಅಕ್ಟೋಪಸ್‌ನ್ನು ಹೊರ ತೆಗೆದರು. ಶಸ್ತ್ರಚಿಕಿತ್ಸೆಯ (Surgery) ಎರಡು ದಿನಗಳ ನಂತರ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇಂಥಾ ಪ್ರಕರಣಗಳಲ್ಲಿ ಪುಶ್ ಟೆಕ್ನಿಕ್‌ನ್ನು ಬಳಸಿ ಆಹಾರ (Food)ವನ್ನು ಹೊರತೆಗೆಯುತ್ತಾರೆ.

ಹಾಗೆಯೇ ಸಿಂಗಾಪುರದ ಈ ಪ್ರಕರಣದಲ್ಲೂ ಫುಶ್ ಟೆಕ್ನಿಕ್ ಬಳಸಿ ಅಕ್ಟೋಪಸ್ ಹೊರತೆಗೆಯಲಾಯಿತು. ಆದರೆ ಈ ಚಿಕಿತ್ಸೆಯಲ್ಲಿ (Treatment) ಅತಿಯಾದ ಬಲವನ್ನು ಅನ್ವಯಿಸುವುದರಿಂದ ಅನ್ನನಾಳದ ರಂಧ್ರಕ್ಕೆ ಕಾರಣವಾಗಬಹುದು ಎಂದು ವೈದ್ಯಕೀಯ ತಂಡವು ಹೇಳಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ, ಗಂಟಲಿನಲ್ಲಿ ಆಹಾರ ಸಿಲುಕಿಕೊಳ್ಳುವುದು ಅತೀ ಸಾಮಾನ್ಯವಾಗಿದೆ. ಆದರೆ ಎಂಡೋಸ್ಕೋಪಿಕ್ ಪರೀಕ್ಷೆಯು 10% ರಿಂದ 20% ಪ್ರಕರಣಗಳಲ್ಲಿ ಅಗತ್ಯವಾಗಿರುತ್ತದೆ. ಆದರೆ ಅವುಗಳಲ್ಲಿ 1% ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.

ಅಯ್ಯೋ ವಿಧಿಯೇ..ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ಆದರೆ ಈ ಪ್ರಕರಣದಲ್ಲಿ ಗಂಟಲಲ್ಲಿ ಸಿಲುಕಿಕೊಂಡಿದ್ದು ಸಣ್ಣಪುಟ್ಟ ಆಹಾರವಾಗಿರಲ್ಲಿಲ್ಲ. ಬದಲಿಗೆ ಅಕ್ಟೋಪಸ್ ಆಗಿತ್ತು ಎಂದು ತಿಳಿಸಿದರು. ಒಟ್ನಲ್ಲಿ ರುಚಿರುಚಿಯಾಗಿ ಭರ್ಜರಿ ಅಕ್ಟೋಪಸ್‌ ಭೋಜನ ಬಾರಿಸಿದೋನು, ಈಗ ಬೇಡಪ್ಪಾ ಅಕ್ಟೋಪಸ್ ಸಹವಾಸ ಅಂತಿದ್ದಾನೆ. ಅದಕ್ಕೆ ನಮ್ಮ ಹಿಂದಿನವರು ಸುಮ್ಮನೆ ಹೇಳಿಲ್ಲ. ಸಿಕ್ಕಿದ್ದೆಲ್ಲ ತಿನ್ನ ಬೇಡಿ ಅಂತ.

Latest Videos
Follow Us:
Download App:
  • android
  • ios