8 ತಿಂಗಳ ಮಗುವಿನ ಗಂಟಲಲಿತ್ತು ಬಾಟಲ್‌ ಮುಚ್ಚಳ: ಫೊರ್ಟಿಸ್‌ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

8 ತಿಂಗಳ ಮಗು ಆಕಸ್ಮಿಕವಾಗಿ 2 ಸೆಂ.ಮೀನ ಬಾಟಲ್‌ನ ರಬ್ಬರ್ ಮುಚ್ಚಳವನ್ನು ನುಂಗಿದ್ದನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದ ಫೋರ್ಟಿಸ್‌ ಆಸ್ಪತ್ರೆ ವೈದ್ಯರು 

Doctors Removed The Bottle Cap from the Throat of the 8 Month Old Baby in Bengaluru grg

ಬೆಂಗಳೂರು(ಡಿ.07):  8 ತಿಂಗಳ ಮಗು ಆಕಸ್ಮಿಕವಾಗಿ 2 ಸೆಂ.ಮೀನ ಬಾಟಲ್‌ನ ರಬ್ಬರ್ ಮುಚ್ಚಳವನ್ನು ನುಂಗಿದ್ದನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಎನ್‌ಟಿ ತಜ್ಞ ಡಾ. ಎಚ್‌. ಕೆ. ಸುಶೀನ್‌ ದತ್‌ ಹಾಗೂ ಡಾ ನರೇಂದ್ರನಾಥ್‌ ಅವರ ತಂಡ ಈ ಚಿಕಿತ್ಸೆ ನಡೆಸಿದರು.

ಈ ಕುರಿತು ಮಾತನಾಡಿದ ಡಾ ನರೇಂದ್ರನಾಥ್‌, 8 ತಿಂಗಳ ಗಂಡು ಮಗುವು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ರಬ್ಬರ್‌ನಂತಿದ್ದ ಬಾಟಲ್‌ನ ಮುಚ್ಚಳವನ್ನು ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಪೋಷಕರಿಗೂ ತಿಳಿದಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ಧ್ವನಿಯೂ ಕ್ಷೀಣಿಸುತ್ತಾ ಬಂದಿದೆ, ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಹಾರ ಸೇವಿಸುತ್ತಿರಲಿಲ್ಲ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ದನಿ ಹೊರಡುತ್ತಿತ್ತು. ಇದರಿಂದ ಗಾಬರಿಯಾದ ಕುಟುಂಬಸ್ಥರು ಫೋರ್ಟಿಸ್‌ ಆಸ್ಪತ್ರೆಗೆ ಕರೆ ತಂದರು. ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದಾಗ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ತಿಳಿದು ಬಂದಿತ್ತು. 

ಪೋಷಕರೇ ಎಚ್ಚರ ! ಹರಡ್ತಿದೆ ಸ್ಟ್ರೆಪ್ ಎ ವೈರಸ್, ಸೋಂಕಿಗೆ 6 ಮಕ್ಕಳು ಸಾವು

ಕೂಡಲೇ ಆ ಮುಚ್ಚಳವನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾದೆವು. ಒಂದು ವೇಳೆ ಈ ವಿಷಯ ತಿಳಿಯದೇ ಕೇವಲ ಮಾತ್ರ, ಇಂಜಕ್ಷನ್‌ ನೀಡಿದ್ದರೆ, ಮುಂದಿನ ದಿನಗಳಲ್ಲಿ ಅನ್ನನಾಳದ ಮೇಲ್ಭಾಗ, ಎದೆಯ ಸೋಂಕು ಅಥವಾ ಶ್ವಾಸಕೋಶದ ಸೋಂಕು ಇತ್ಯಾದಿ ಬಹುದೊಡ್ಡ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು ಅಂತ ತಿಳಿಸಿದ್ದಾರೆ. 

ಡಾ. ಎಚ್.ಕೆ. ಸುಶೀನ್ ದತ್ ಮಾತನಾಡಿ, ಮನೆಯಲ್ಲಿ ಸಣ್ಣ ಮಕ್ಕಳ ಕೈಗೆ ಇಂತಹ ಸಣ್ಣ ಪದಾರ್ಥಗಳು ಸಿಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕ. ಮಕ್ಕಳಿಗೆ ತಿಳಿಯದೇ ಅದನ್ನು ನುಂಗಬಹುದು. ಹೀಗಾಗಿ ಮನೆಯಲ್ಲಿ ಮಗುವಿನ ಆರೈಕೆ ಬಗ್ಗೆ ಹೆಚ್ಚು ಗಮನ ನೀಡಿ. ಈ ಮಗುವು ಸದ್ಯ ಆರೋಗ್ಯವಾಗಿದೆ ಎಂದು ವಿವರಿಸಿದರು.
 

Latest Videos
Follow Us:
Download App:
  • android
  • ios