ಆನ್‌ಲೈನ್‌ನಲ್ಲಿ ಯಾವುದನ್ನಾದರೂ ಆರ್ಡರ್‌ ಮಾಡಿದಾಗ ಎಡವಟ್ಟಾಗೋದು ಹೊಸದೇನಲ್ಲ. ಕೆಲವೊಮ್ಮೆ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಇನ್ನೇನು ಬಂದು ಫಜೀತಿಗೆ ಸಿಲುಕಿಕೊಳ್ಳುವಂತೆ ಆಗುತ್ತದೆ. ಹಾಗಾದ್ರೂ ಪರ್ವಾಗಿಲ್ಲ. ಆದ್ರೆ ಇಲ್ಲೊಂದೆಡೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಫುಡ್‌ನ ಜೊತೆಗೆ ಜೀವಂತ ಇಲಿಯೇ ಅಂದುಬಿಟ್ಟಿದೆ.

ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ ಹೋದಂತೆ ಮನುಷ್ಯ ಇನ್ನಷ್ಟು ಆಲಸೀಯಾಗುತ್ತಿದ್ದಾನೆ. ಎಲ್ಲವೂ ಕುಳಿತಲ್ಲಿಯೇ ಆಗಬೇಕು. ಬೆರಳ ತುದಿಯಲ್ಲೇ ಇರೋ ಮೊಬೈಲ್‌, ಕಂಪ್ಯೂಟರ್ ಒತ್ತಿ ಏನು ಬೇಕೋ ಅದನ್ನು ಆರ್ಡರ್‌ ಮಾಡಿಬಿಡುತ್ತಾನೆ. ಕೊರೋನಾ, ಲಾಕ್‌ಡೌನ್‌ ನಂತರ ಮನುಷ್ಯನ ಇಂಥಾ ಲೇಝಿನೆಸ್ ಇನ್ನಷ್ಟು ಜಾಸ್ತಿ ಆಗುತ್ತದೆ. ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌, ಡ್ರೆಸ್‌ಗಳು ಆನ್‌ಲೈನ್‌ನಲ್ಲಿ ಖರೀದಿ, ಆನ್‌ಲೈನ್‌ ಮೂಲಕವೇ ಲೈಟ್‌, ವಾಟರ್‌, ಕೇಬಲ್ ಬಿಲ್ ಪಾವತಿಸಿ ಮುಗಿಸುತ್ತಾನೆ. ಮತ್ತೆ ಮನೆಯಿಂದ ಹೊರಗೆ ಕಾಲಿಡುವಂತೆಯೇ ಇಲ್ಲ. ಸಾಲದ್ದಕ್ಕೆ ಸ್ವಿಗ್ಗಿಮಾರ್ಟ್‌, ಜಿಯೋ ಮಾರ್ಟ್ ಮನೆ ಬಾಗಿಲಿಗೇ ದಿನಸಿಯನ್ನು ತಂದು ಇಳಿಸುತ್ತವೆ. ಹೀಗಾಗಿ ತಿಂಗಳ ಗ್ರಾಸರಿ ಶಾಪಿಂಗ್ ಕೂಡಾ ಸುಲಭವಾಗಿಬಿಟ್ಟಿದೆ. 

ಬ್ರೆಡ್‌ ಪ್ಯಾಕೆಟ್‌ನೊಳಗಿತ್ತು ಜೀವಂತ ಇಲಿ
ದಿನಸಿ ಮತ್ತು ಇತರ ವಸ್ತುಗಳನ್ನು ಆರ್ಡರ್ ಮಾಡಲು ಬಹಳಷ್ಟು ಜನರು ಈಗ Swiggy, Big Basket ಮತ್ತು Blinkit ನಂತಹ ತ್ವರಿತ ಡೆಲಿವರಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್‌ಗಳು ಅನೇಕ ಜನರ ಜೀವನವನ್ನು ಸುಲಭಗೊಳಿಸಿವೆ. ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಗೆ ಹೋಗುವ ಸಮಯವನ್ನು ಉಳಿಸುತ್ತದೆ. ಆದ್ರೆ ಆನ್‌ಲೈನ್‌ ದಿನಸಿ, ಆಹಾರ (Food) ಖರೀದಿಸುವ ಬಗ್ಗೆ ಹಲವರಿಗೆ ವಿರೋಧವಿದೆ. ತಾಜಾ ತರಕಾರಿಗಳು (Vegetables) ಸಿಗೋದಿಲ್ಲ. ಅಕ್ಕಿ, ಸಕ್ಕರೆ ಇತರ ವಸ್ತುಗಳ ಕ್ವಾಲಿಟಿ ನೋಡೋಕೆ ಆಗೋದಿಲ್ಲ. ಫುಡ್ ಪ್ಯಾಕೆಟ್‌ಗಳು ಡೇಟ್‌ ಎಕ್ಸ್‌ಪೈರಿ ಆಗಿರುತ್ತವೆ ಅನ್ನೋದೆಲ್ಲಾ ದೂರು. ಕೆಲವೊಮ್ಮೆ ಇಂಥವುಗಳು ಆಗುತ್ತವೆ ಕೂಡಾ. ಆದ್ರೆ ಇಲ್ಲಾಗಿದ್ದು ಅಂಥಾ ಸಣ್ಣಪುಟ್ಟ ಪ್ರಮಾದವಲ್ಲ ಬದಲಿಗೆ ಬ್ರೆಡ್‌ ಪ್ಯಾಕೆಟ್‌ವೊಂದರಲ್ಲಿ ಜೀವಂತ ಇಲಿಯೇ (Rat) ಸಿಕ್ಕಿದೆ.

ವೈದ್ಯರಿಗೆ ಆಹಾರದಲ್ಲಿ ಸಿಕ್ತು ಹಲ್ಲಿ: ಫೇಮಸ್‌ ಮಾಲ್‌ನ ರೆಸ್ಟೋರೆಂಟ್‌ನಲ್ಲಿ ಘಟನೆ

ಹೌದು ನಂಬೋಕೆ ತುಸು ಕಷ್ಟವೆನಿಸಿದರೂ ಇದು ನಿಜ. ಹೊಟೇಲ್‌ಗಳಲ್ಲಿ ಕೊಡೋ ಆಹಾರದಲ್ಲಿ ಸತ್ತ ಜಿರಳೆ, ನೊಣ, ಹಲ್ಲಿಯೆಲ್ಲಾ ಸಿಕ್ಕಿರೋ ಬಗ್ಗೆ ಕೇಳಿದ್ದೀರಿ. ಆದ್ರೆ ಇಲ್ಲಿ ಆನ್‌ಲೈನ್‌ನಲ್ಲಿ ಖರೀದಿಸಿದ ಬ್ರೆಡ್ ಪ್ಯಾಕೆಟ್‌ನಲ್ಲಿ ಇಲಿ ಸಿಕ್ಕಿದೆ. ಬ್ಲಿಂಕಿಟ್‌ನಿಂದ ಆರ್ಡರ್ ಮಾಡಲಾದ ಬ್ರೆಡ್ ಪ್ಯಾಕೆಟ್‌ನೊಳಗೆ ಸತ್ತ ಇಲಿಯಿರೋ ಫೋಟೋವನ್ನು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ತಪ್ಪನ್ನು ಸರಿಪಡಿಸುವ ಕ್ರಮ ತೆಗೆದುಕೊಳ್ಳುತ್ತೇವೆಂದ ಬ್ಲಿಂಕಿಟ್
ನಿತಿನ್ ಅರೋರಾ ಅವರು ತಮ್ಮ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ, ಬ್ರೆಡ್ ಪ್ಯಾಕೆಟ್‌ನೊಳಗೆ ಇಲಿ ಚಲಿಸುತ್ತಿರುವುದನ್ನು ಗಮನಿಸಬಹುದು. ಘಟನೆಯು ಫೆಬ್ರವರಿ 1 ರಂದು ನಡೆಯಿತು. "@letsblinkit ನೊಂದಿಗೆ ಇದು ಅತ್ಯಂತ ಅಹಿತಕರ ಅನುಭವ. ಫೆಬ್ರವರಿ 1ರಂದು ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್‌ನೊಳಗೆ ಜೀವಂತ ಇಲಿಯನ್ನು ವಿತರಿಸಲಾಯಿತು. ಇದು ನಮಗೆಲ್ಲರಿಗೂ ಆತಂಕಕಾರಿಯಾಗಿದೆ' ಎಂದು ಹೇಳಿಕೊಂಡಿದ್ದಾರೆ.

ಅವರು ಬ್ಲಿಂಕಿಟ್ ಬೆಂಬಲ ಕಾರ್ಯನಿರ್ವಾಹಕರೊಂದಿಗೆ ತಮ್ಮ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಕಂಪನಿಯು ಪ್ರಮಾದಕ್ಕೆ ಕ್ಷಮೆಯಾಚಿಸಿದೆ ಮತ್ತು ಇದು ನಿಜಕ್ಕೂ ಕಳವಳ ಪಡುವ ವಿಷಯವಾಗಿದೆ ಎಂದು ಹೇಳಿಕೊಂಡಿದೆ. 'ಘಟನೆಗೆ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಖಂಡಿತವಾಗಿಯೂ ತಪ್ಪನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!

ನಿತಿನ್ ಪೋಸ್ಟ್‌ಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. 'ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸುವಾಗ ಯಾವಾಗಲೂ ಎಚ್ಚರದಿಂದಿರಿ' ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ಆನ್‌ಲೈನ್‌ ನಲ್ಲಿ ಇಂಥಾ ಎಡವಟ್ಟು ಆಗುತ್ತಲೇ ಇರುತ್ತದೆ. ಅದಕ್ಕೆ ನಾನು ಆನ್‌ಲೈನ್‌ ಆಪ್‌ ಮೂಲಕ ದಿನಸಿ ಖರೀದಿಸುವುದನ್ನೇ ಬಿಟ್ಟು ಬಿಟ್ಟಿದ್ದೇನೆ ಎಂದಿದ್ದಾರೆ.

Scroll to load tweet…