Asianet Suvarna News Asianet Suvarna News

Zomatoದಲ್ಲಿ ಹೈದರಾಬಾದ್‌ನ ಫೇಮಸ್‌ ರೆಸ್ಟೋರೆಂಟ್‌ ಬಾವರ್ಚಿಯಿಂದ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹಲ್ಲಿ

ವ್ಯಕ್ತಿಯೊಬ್ಬರು ಝೋಮ್ಯಾಟೋ ಮೂಲಕ ಸ್ಥಳೀಯ ರೆಸ್ಟೋರೆಂಟ್‌ವೊಂದರಿಂದ ಅರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ ಅವರ ಕುಟುಂಬದವರು ಶಾಕ್ ಆಗಿದ್ದು, ಟ್ವಿಟ್ಟರ್‌ನಲ್ಲಿ ಈ ಹಲ್ಲಿ ಬಿರಿಯಾನಿಯ ವೀಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Lizard found in Hyderabads famous restaurant Bawarchi chicken Biryani which orderd through zomato akb
Author
First Published Dec 4, 2023, 2:53 PM IST

ಹೈದರಾಬಾದ್‌: ವ್ಯಕ್ತಿಯೊಬ್ಬರು ಝೋಮ್ಯಾಟೋ ಮೂಲಕ ಸ್ಥಳೀಯ ರೆಸ್ಟೋರೆಂಟ್‌ವೊಂದರಿಂದ ಅರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ ಅವರ ಕುಟುಂಬದವರು ಶಾಕ್ ಆಗಿದ್ದು, ಟ್ವಿಟ್ಟರ್‌ನಲ್ಲಿ ಈ ಹಲ್ಲಿ ಬಿರಿಯಾನಿಯ ವೀಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೈದರಾಬಾದ್‌ನಲ್ಲಿ (Hyderabad) ಬಿರಿಯಾನಿಗೆ ಹೆಸರಾದ ಬಾವರ್ಚಿ (Bawarchi chicken Biryani) ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಈ ಅವಾಂತರ ಕಾಣಿಸಿಕೊಂಡಿದೆ. ತೆಲುಗು ಸ್ಕ್ರೈಬ್ ಎಂಬ ಟ್ವಿಟ್ಟರ್ ಪೇಜ್ ಫೋಟೋ ವೀಡಿಯೋ ಸಮೇತ ಈ ಪೋಸ್ಟ್ ಮಾಡಿದೆ. ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ ರಸ್ತೆಯಲ್ಲಿರುವ ಬಾವರ್ಚಿ ಹೊಟೇಲ್‌ ಈ ಬಿರಿಯಾನಿ ಅರ್ಡರ್ ಮಾಡಲಾಗಿತ್ತು. ಝೋಮ್ಯಾಟೋ ಮೂಲಕ ಅಂಬರ್‌ಪೇಟ್‌ನಲ್ಲಿರುವ ಡಿಡಿ ಕಾಲೋನಿ ನಿವಾಸಿ ವಿಶ್ವ ಆದಿತ್ಯ ಎಂಬುವವರು ಈ ಚಿಕನ್ ಬಿರಿಯಾನಿ ಆರ್ಡರ್‌ (Chicken Biriyani) ಮಾಡಿದ್ದರು. ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದೆ. ಆದರೆ ಹೊಟೇಲ್ ಸಿಬ್ಬಂದಿ ಇದಕ್ಕೆ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. 

ಬೇಕರಿಯಿಂದ ತಂದ ಸಮೋಸಾದಲ್ಲಿತ್ತು ಸತ್ತ ಹಲ್ಲಿ, ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಗೆ ದಾಖಲು

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಝೊಮ್ಯಾಟೋ ಪ್ರತಿಕ್ರಿಯಿಸಿದ್ದು, ನಾವು ಈ ವಿಚಾರದ ಬಗ್ಗೆ ಗಮನಹರಿಸಿದ್ದು, ಗ್ರಾಹಕರ ಜೊತೆ ಮಾತನಾಡಿದ್ದೇವೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ. 

ಮಲಗಿದ್ದ ಮಗುವಿನ ಬಾಯಿಯೊಳಗೆ ಬಿದ್ದ ಹಲ್ಲಿ, ಕಂದಮ್ಮ ಸಾವು

ಆದರೆ ಬಾವರ್ಚಿ(Bawarchi Biriyani) ಹೈದರಾಬಾದ್‌ನ ನಗರದ ಜೀವನಾಡಿಯಾಗಿದ್ದು, ಬಹುತೇಕ ಹೈದರಾಬಾದಿಗರು ಹಾಗೂ ದೂರದಿಂದ ಮುತ್ತಿನನಗರಿಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಈ ಬಿರಿಯಾನಿಯ ರುಚಿ ನೋಡದೇ ಹೋಗುವುದು ತೀರಾ ವಿರಳ, ಹೀಗಿರುವಾಗ ಇಂತಹ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹಲ್ಲಿ ಕಾಣಿಸಿಕೊಂಡಿದ್ದು, ಇದು ಬಾವರ್ಚಿ ಬಿರಿಯಾನಿ ಪ್ರಿಯರನ್ನು ಆತಂಕಕ್ಕೆ ಇಡುಮಾಡಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬಾವಾರ್ಚಿಯನ್ನು ಇನ್ನು ಮುಚ್ಚಿಲ್ವಾ ಇಲ್ಲಿ ಎಷ್ಟು ಸರಿ ಈ ರೀತಿ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅಯ್ಯೋ ದೇವರೆ ಈಗಷ್ಟೇ ಬಾವರ್ಚಿ ಬಿರಿಯಾನಿ ತಿಂದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

 

Follow Us:
Download App:
  • android
  • ios