Asianet Suvarna News Asianet Suvarna News

ಬೇಕರಿಯಿಂದ ತಂದ ಸಮೋಸಾದಲ್ಲಿತ್ತು ಸತ್ತ ಹಲ್ಲಿ, ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಗೆ ದಾಖಲು

ಅಂಗಡಿಗಳಿಂದ ತಂದಿರೋ ಆಹಾರ ಡೇಟ್ ಬಾರ್ ಆಗಿರೋದು, ಪ್ಯಾಕ್ಡ್‌ ಆಹಾರದಲ್ಲಿ ಏನೇನೋ ಪತ್ತೆಯಾಗೋದು ಹೊಸದೇನಲ್ಲ. ಅದೇ ರೀತಿ ಉತ್ತರಪ್ರದೇಶದಲ್ಲಿ ಸಮೋಸಾದಲ್ಲಿ ಸತ್ತ ಹಲ್ಲಿ ಸಿಕ್ಕಿದೆ. ಇದನ್ನು ತಿಂದ ಬಾಲಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Man Shocked To Find Lizard Inside Samosa In UPs Hapur, Gilr Fallen Sick Vin
Author
First Published Nov 17, 2023, 2:30 PM IST

ಉತ್ತರಪ್ರದೇಶ: ಇಲ್ಲಿನ ಹಾಪುರದಲ್ಲಿ ಬೇಕರಿಯಿಂದ ಖರೀದಿಸಿದ ಸಮೋಸಾದಲ್ಲಿ ಹಲ್ಲಿ ಪತ್ತೆಯಾಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಹಬ್ಬದ ಸಂದರ್ಭ ಮನೆಗೆ ಅತಿಥಿಗಳು ಅಗಮಿಸಿದ ಕಾರಣ ವ್ಯಕ್ತಿಯೊಬ್ಬರು ಹಾಪುರದ ಚಂಡಿ ರಸ್ತೆಯಲ್ಲಿರುವ ಸ್ವೀಟ್ ಅಂಗಡಿಯಿಂದ ಸಮೋಸಗಳನ್ನು ಖರೀದಿಸಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಈ ಸಮೋಸಾವನ್ನು ನೀಡಲಾಗಿತ್ತು. ಆದರೆ ಸಮೋಸಾವನ್ನು ತಿನ್ನುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸಮೋಸಾದಲ್ಲಿ ಹಲ್ಲಿಯಿರೋದನ್ನು ಗಮನಿಸಿದ್ದಾನೆ. ಸಮೋಸಾ ತಿಂದ 13 ವರ್ಷದ ಬಾಲಕಿ ಅಸ್ವಸ್ಥಳಾಗಿದ್ದಾಳೆ ಎಂದು ತಿಳಿದುಬಂದಿದೆ.

ಮೊಹಲ್ಲಾ ನ್ಯೂ ಆರ್ಯನಗರದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ಮನೆಯಲ್ಲಿದ್ದ ಸಂಬಂಧಿಕರು ಸಮೋಸಾದಲ್ಲಿ ಹಲ್ಲಿ (Lizard) ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ತನ್ನ ಮನೆಯ ಹೊರಗೆ ವಾಂತಿ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತ್ತೊಬ್ಬ ವ್ಯಕ್ತಿ ಹಲ್ಲಿ ಪತ್ತೆಯಾದ ಸಮೋಸವನ್ನು ಹಿಡಿದಿದ್ದಾನೆ. ಅವನು ಸತ್ತ ಹಲ್ಲಿಯಿರುವ ಸಮೋಸವನ್ನು ಕ್ಯಾಮರಾಗೆ ತೋರಿಸುತ್ತಾನೆ.

ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..

ಹಲ್ಲಿ ತಿಂದು ಅಸ್ವಸ್ಥಳಾದ ಬಾಲಕಿಯನ್ನು ರಾಧಿಕಾ (13) ಎಂದು ಗುರುತಿಸಲಾಗಿದ್ದು, ಸಮೋಸಾ ತಿಂದ ನಂತರ ಆಕೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದಾಳೆ. ಘಟನೆಯ ಸಂಬಂಧ ಕುಟುಂಬದವರು ದೂರು (Complaint) ದಾಖಲಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಸ್ವೀಟ್ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕುಟುಂಬದವರು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

ಆದರೆ, ಸ್ವೀಟ್ ಅಂಗಡಿಯ ಮಾಲೀಕರು ಸಮೋಸಾದೊಳಗೆ ಹಲ್ಲಿ ಸಿಕ್ಕಿರುವ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.ಸಮೋಸಾದೊಳಗೆ ಆಲೂಗಡ್ಡೆಯನ್ನು ಕೈಗಳಿಂದ ತುಂಬಿಸಲಾಗಿದೆ. ಆದ್ದರಿಂದ ಸಮೋಸಾದ ಒಳಗೆ ಹಲ್ಲಿ ಪತ್ತೆಯಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ಧ ಎಂದು ಸ್ವೀಟ್ ಅಂಗಡಿಯ ಮಾಲೀಕರು ತಿಳಿಸಿದ್ದಾರೆ. 

ತರಕಾರಿಗಳಲ್ಲಿ ಹುಳ, ಕೀಟ ಹುಡುಕಿ ಸಾಕಾಗಿದೆಯೇ? ಈ ಸೂಪರ್ ಟ್ರಿಕ್ಸ್ ಟ್ರೈ ಮಾಡಿ

Follow Us:
Download App:
  • android
  • ios