ಒಂದು ವರ್ಷ ಸಕ್ಕರೆ ತಿನ್ನದ ನಟ ಕಾರ್ತಿಕ್ ಆರ್ಯನ್; ಏನಿದು 'ನೋ ಶುಗರ್ ಡಯೆಟ್' ಪ್ಲಾನ್?
ಬಾಲಿವುಡ್ ನಟರು ಫಿಟ್‌ನೆಸ್ ಮೈಂಡೇನ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ. ಹಾಗೆ ಕಟ್ಟುನಿಟ್ಟಾಗಿ ಡಯೆಟ್ ಮಾಡುವವರಲ್ಲಿ ನಟ ಕಾರ್ತಿಕ್ ಆರ್ಯನ್ ಕೂಡಾ ಒಬ್ಬರು. ಕಾರ್ತಿಕ್, ತಿಂಗಳುಗಟ್ಟಲೆ ಸಕ್ಕರೆ ರಹಿತ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಇದರಿಂದ ಆರೋಗ್ಯಕ್ಕೇನು ಪ್ರಯೋಜನ ತಿಳಿಯೋಣ.
ಬಾಲಿವುಡ್ ನಟ-ನಟಿಯರು ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಯಾವಾಗ್ಲೂ ವರ್ಕೌಟ್, ಡಯೆಟ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಒಬ್ಬೊಬ್ಬರು ತಮ್ಮ ದೇಹ ಕ್ರಮಕ್ಕೆ ಅನುಗುಣವಾಗಿ ವಿಭಿನ್ನ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ. ಹಾಗೆ ಕಟ್ಟುನಿಟ್ಟಾಗಿ ಡಯೆಟ್ ಮಾಡುವವರಲ್ಲಿ ನಟ ಕಾರ್ತಿಕ್ ಆರ್ಯನ್ ಕೂಡಾ ಒಬ್ಬರು. ಕಾರ್ತಿಕ್, ತಿಂಗಳುಗಟ್ಟಲೆ ಸಕ್ಕರೆ ರಹಿತ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಅನಿರೀಕ್ಷಿತವಾಗಿ ಸಿಹಿ ತಿನ್ನಬೇಕಾಗಿ ಬಂದ ಸಂದರ್ಭದಲ್ಲಿ ಕಾರ್ತಿಕ್ ಇನ್‌ಸ್ಟಾಗ್ರಾಂನಲ್ಲಿ 'ಈ ರಸ್‌ಮಲೈ ಟೇಸ್ಟ್ ಲೈಕ್ ವಿಕ್ಟರಿ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
'ಒಂದು ವರ್ಷದ ನಂತರ ಕೊನೆಗೂ ಸಕ್ಕರೆ ತಿಂದೆ. ಒಂದು ವರ್ಷದ ತಯಾರಿ ಮತ್ತು 8 ತಿಂಗಳ ಹಗಲು-ರಾತ್ರಿ ಶೂಟಿಂಗ್ ನಂತರ, ಇಂದು ನಾವು #ChantuChampionನ ಶೂಟಿಂಗ್ ಪ್ರಯಾಣವನ್ನು ಮುಕ್ತಾಯಗೊಳಿಸುತ್ತಿದ್ದೇವೆ. ನಾನು ಸಿಹಿಯನ್ನು ತಿನ್ನುತ್ತಿದ್ದೇನೆ' ಎಂದು ಕಾರ್ತಿಕ್ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.
ಬೆಲ್ಲಿ ಫ್ಯಾಟ್ ಕರಗಿಸೋದು ತುಂಬಾ ಈಝಿ, ಮನೆಯಲ್ಲೇ ತಯಾರಿಸಿದ ಈ ಪಾನೀಯ ಕುಡೀರಿ ಸಾಕು
ಸಕ್ಕರೆ ಸೇವನೆ ನಿಲ್ಲಿಸೋದ್ರಿಂದ ಆಗುವ ಪ್ರಯೋಜನವೇನು?
ಸಕ್ಕರೆ ಮುಕ್ತ ಆಹಾರವು ದೇಹವನ್ನು ತ್ವರಿತವಾಗಿ ಬದಲಾಯಿಸಬಹುದು. ಸಕ್ಕರೆಯನ್ನು ನಿಲ್ಲಿಸುವುದು ಅಥವಾ ಮಿತಿಗೊಳಿಸುವುದು ದೇಹದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು. ಆರಂಭದಲ್ಲಿ ಕೆಲವು ತೊಂದರೆಗಳಾಗಬಹುದು. ಆದರೆ ಕಾಲಾನಂತರದಲ್ಲಿ ಚಯಾಪಚಯವು ಸುಧಾರಿಸುತ್ತದೆ. ಬೊಜ್ಜು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತ್ವಚೆಯ ಆರೋಗ್ಯಕ್ಕೆ ಶುಗರ್ ಇಲ್ಲದ ಆಹಾರವು ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಇದು ದೇಹವು ಫಿಟ್ ಆಗಿರಲು ಸಹಾಯ ಮಾಡುತ್ತದೆ ಎಂದು ಅಹಮದಾಬಾದ್‌ನ ಸೈಡ್ ಹಾಸ್ಪಿಟಲ್ಸ್‌ನ ಮುಖ್ಯ ಡಯೆಟಿಷಿಯನ್ ಶ್ರುತಿ ಕೆ ಭಾರದ್ವಾಜ್, ಹೇಳುತ್ತಾರೆ.
ರಕ್ತದೊತ್ತಡ ಕಡಿಮೆಯಾಗುತ್ತದೆ: ಅಷ್ಟೇ ಅಲ್ಲ, ಸಕ್ಕರೆಯನ್ನು ಕಡಿತಗೊಳಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಿಂದ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಒಂದು ಟೀ ಚಮಚ ಸಕ್ಕರೆಯು 16 ಕ್ಯಾಲೋರಿಗಳನ್ನು ಹೊಂದಿರುತ್ತದೆ ಹೀಗಾದಿ ಇದರ ಸೇವನೆ ಮಾಡದೆ ಇರುವುದರಿಂದ ಟೈಪ್ 2 ಮಧುಮೇಹದ ಅಪಾಯ ಸಹ ಕಡಿಮೆಯಾಗುತ್ತದೆ. ಸಕ್ಕರೆ ಸೇವನೆ ತಪ್ಪಿಸುವುದು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಶೇಪ್‌ನಲ್ಲಿರಲು ದೀಪಿಕಾ ಫಾಲೋ ಮಾಡೋ ಡಯಟ್ ಪ್ಲ್ಯಾನ್ ಇಲ್ಲಿದೆ.. ನೀವೇಕೆ ಪ್ರಯತ್ನಿಸಬಾರದು?
ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ: ಕಡಿಮೆ ಸಕ್ಕರೆಯ ಆಹಾರವು ರಕ್ತದ ಲಿಪಿಡ್ ಮಟ್ಟವನ್ನು ಸುಧಾರಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇದು ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಸೇವನೆಯನ್ನು ಮಿತಿಗೊಳಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಕ್ಕರೆಯನ್ನು ಕಡಿಮೆ ಮಾಡುವುದು ಎಂದರೆ ಸಕ್ಕರೆಯನ್ನು ಬೆಲ್ಲ ಅಥವಾ ಕೃತಕ ಸಿಹಿಕಾರಕಗಳೊಂದಿಗೆ ಬದಲಿಸುವುದು ಎಂದಲ್ಲ. ಸಕ್ಕರೆ ಮತ್ತು ಬೆಲ್ಲದಲ್ಲಿ ಒಂದೇ ಪ್ರಮಾಣದ ಕ್ಯಾಲೋರಿಗಳಿವೆ. ಹೀಗಾಗಿ ಸಂಪೂರ್ಣವಾಗಿ ಸಿಹಿತಿಂಡಿ, ಜ್ಯೂಸ್ ಹೀಗೆ ಸಕ್ಕರೆಯುಕ್ತ ಆಹಾರಗಳಿಂದ ದೂರವಿರಬೇಕಾದುದು ಅವಶ್ಯಕವಾಗಿದೆ.