jackfruit dosa: ಹಲಸಿನ ಹಣ್ಣನ್ನು ಬಳಸಿ ದೋಸೆ ಕೂಡ ಮಾಡಬಹುದು. ಈಗಾಗಲೇ ವೆರೈಟಿ ವೆರೈಟಿ ದೋಸೆಗಳು ಇವೆ. ಈಗ ಹಲಸಿನ ಹಣ್ಣಿನಿಂದ ಕೂಡ ರುಚಿಯಾದ ದೋಸೆ ಮಾಡಲೂಬಹುದು. ಈ ದೋಸೆಗೆ ತುಪ್ಪ ಹಾಕಿ ತಿಂದರೆ ಮಾತ್ರ…ಸೂಪರ್ ಆಗಿರುತ್ತದೆ.
ಈಗಂತೂ ಹಲಸಿನ ಹಣ್ಣಿನ ಸೀಸನ್. ಮಾರ್ಕೆಟ್‌ನಲ್ಲಿ, ಕೆಲವರ ಮನೆಯಲ್ಲಿ ಕೂಡ ಹಲಸಿನ ಹಣ್ಣು ಸಿಗುವುದು. ಹಲಸಿನ ಹಣ್ಣಿನಿಂದ ವಿವಿಧ ಖಾದ್ಯಗಳನ್ನು ಮಾಡಲಾಗುತ್ತದೆ. ಅಂತೆಯೇ ಈಗ ಹಲಸಿನ ಹಣ್ಣಿನಿಂದ ದೋಸೆ ( jackfruit dosa ) ಮಾಡುವುದು ಹೇಗೆ ಎಂದು ನೋಡೋಣ

ಹಲಸಿನ ಹಣ್ಣಿನ ದೋಸೆ ಮಾಡಲು ಬಳಸುವ ಪದಾರ್ಥಗಳು
15 ಬೀಜ ತೆಗೆದ ಹಲಸಿನ ಹಣ್ಣಿನ ತೊಳೆಗಳು
1 ಅಥವಾ ಎರಡು ಕಪ್ ಅಕ್ಕಿ ( ಅಕ್ಕಿ ಹೆಚ್ಚಿದ್ದಷ್ಟು ಹ
ಅರ್ಧ ಕಪ್ ತೆಂಗಿನ ತುರಿ
ಅರ್ಧ ಕಪ್ ಬೆಲ್ಲ ( ನಿಮಗೆ ಎಷ್ಟು ಬೇಕೋ ಅಷ್ಟೇ ಬೆಲ್ಲ ಹಾಕಿ )
2-3 ಏಲಕ್ಕಿ
ಒಂದು ಚಿಟಿಕೆ ಉಪ್ಪು
ಹೇಗೆ ಮಾಡಬೇಕು?
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 3 ರಿಂದ 4 ಗಂಟೆಗಳ ಕಾಲ, ಸರಿಯಾಗಿ ನೀರು ಹಾಕಿ ನೆನೆಸಿಡಿ. ಆಮೇಲೆ ಅದಕ್ಕೆ ಹಲಸಿನ ಹಣ್ಣಿನ ತೊಳೆಗಳು, ತೆಂಗಿನ ತುರಿ, ಬೆಲ್ಲ, ಏಲಕ್ಕಿ, ಒಂದು ಚಿಟಿಕೆ ಉಪ್ಪು ಹಾಕಿ ಸರಿಯಾಗಿ ರುಬ್ಬಿಕೊಳ್ಳಿ
ಸ್ವಲ್ಪ ನೀರು ಹಾಕಿ ನುಣ್ಣಗೆ ಹಿಟ್ಟು ರುಬ್ಬಿಕೊಳ್ಳಿ. ಈ ಹಿಟ್ಟನ್ನು ಹುದುಗಲು ಇಡಬೇಕಾಗಿಲ್ಲ, ತಕ್ಷಣವೇ ದೋಸೆ ಮಾಡಬಹುದು.
ಕಾವಲಿಯನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ. ತೆಳ್ಳಗೆ ಅಥವಾ ದಪ್ಪ ಮಾಡಿ ದೋಸೆ ಮಾಡಿಕೊಳ್ಳಲೂಬಹುದು. ಆಮೇಲೆ ಮುಚ್ಚಳ ಹಾಕಿ ಮುಚ್ಚಿ
ಸ್ವಲ್ಪ ಗುಲಾಬಿ ಅಥವಾ ಮಣ್ಣಿನ ಬಣ್ಣಕ್ಕೆ ಬಂದಾಗ ದೋಸೆ ತೆಗೆಯಿರಿ, ಸರಿಯಾಗಿ ತಿರುವಿ ಹಾಕಿ ಬೇಯಿಸಬೇಕಾಗುತ್ತದೆ.
ಈ ದೋಸೆಗೆ ತುಪ್ಪ ಅಥವಾ ಚಟ್ನಿ ಹಾಕಿ ತಿಂದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು

