ಬನಾನ ಟೀ, ಬಾಳೆಹಣ್ಣಿನ ಪಾನಿಪುರಿ ವಿಡಿಯೋ ವೈರಲ್, ಇವ್ರನ್ನು ಜೀವಂತವಾಗಿ ಹಿಡೀರಿ ಎಂದ ನೆಟ್ಟಿಗರು!
ಆಹಾರ ಪ್ರಿಯರು ಅಡುಗೆಯಲ್ಲಿ ಹೊಸ ಹೊಸ ಪ್ರಯೋಗ ಮಾಡ್ತಿರುತ್ತಾರೆ. ಹಾಗೆ ಬೇರೆ ಬೇರೆ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಕೂಡ ಮಾಡ್ತಾರೆ. ರುಚಿ ಚೆನ್ನಾಗಿರಲಿ ಬಿಡಲಿ ಸಾಮಾಜಿಕ ಜಾಲತಾಣದಲ್ಲಂತೂ ಅದು ವೈರಲ್ ಆಗೇ ಆಗುತ್ತೆ. ಆದ್ರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವೀಡಿಯೋಗೆ ಜನ್ರು ಹಿಗ್ಗಾಮುಗ್ಗಾ ಬೈತಿದ್ದಾರೆ.
ಭಾರತೀಯರು ಸ್ವಭಾತಹಃ ಪ್ರಿಯರು. ಅದರಲ್ಲೂ ಬೇರೆ ಬೇರೆ ಫುಡ್‌ಗಳನ್ನು ಮಿಕ್ಸ್ ಮಾಡಿ ಎಕ್ಸಪರಿಮೆಂಟ್ ಮಾಡೋದ್ರಲ್ಲಂತೂ ಎತ್ತಿದ ಕೈ. ಇತ್ತೀಚಿನ ದಿನಗಳಲ್ಲಿ ಡಿಫರೆಂಟ್ ಕಾಂಬಿನೇಷನ್ ನಲ್ಲಿ ಆಹಾರ ಸೇವನೆ ಮಾಡೋದು ಸಾಮಾನ್ಯವಾಗಿದೆ. ಆಹಾರ ಪ್ರಿಯರು ಹೊಸ ಹೊಸ ಕಾಂಬಿನೇಷನ್ ನಲ್ಲಿ ಆಹಾರ ಟೇಸ್ಟ್ ಅಂಡ್ ಟೆಸ್ಟ್ ಮಾಡ್ತಿದ್ದಾರೆ. ಕೆಲವೊಂದು ಆಹಾರ ಕಾಂಬಿನೇಷನ್ ಕೇಳಿದ್ರೆ ವಿಚಿತ್ರವೆನ್ನಿಸುತ್ತದೆ. ಆದರೂ ಜನರು ಇದನ್ನು ಟ್ರೈ ಮಾಡ್ತಾರೆ. ಕೆಲವೊಂದು ಫುಡ್ ಕಾಂಬಿನೇಷನ್‌ನ್ನು ಇಷ್ಟಪಟ್ಟರೆ, ಇನ್ನು ಕೆಲವನ್ನು ಇದೆಂಥಾ ವಿಚಿತ್ರನಾಪ್ಪ ಅಂತಾರೆ. ಹಾಗೆಯೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವೀಡಿಯೋಗೆ ಜನ್ರು ಹಿಗ್ಗಾಮುಗ್ಗಾ ಬೈತಿದ್ದಾರೆ.
ಟೀಯಲ್ಲಿ ಹಲವು ವೆರೈಟಿ ಇರೋದು ನಿಮ್ಗೆ ಗೊತ್ತೇ ಇದೆ. ಇದಲ್ಲದೆ ಕೆಲ ವ್ಯಾಪಾರಿಗಳು (Street vendors) ವಿಚಿತ್ರವಾಗಿರೋ ಟೀ ತಯಾರಿಸ್ತಾರೆ. ಹಾಗೆಯೇ ಬಾಳೆಹಣ್ಣು ಬಳಸುವ ಐಎಎಸ್ ಚಾಯ್‌ವಾಲಾ ಅವರ ಫ್ರೂಟ್ ಚಾಯ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮಾರಾಟಗಾರನು ಮೊದಲು ಹಾಲು ಮತ್ತು ಟೀ ಪುಡಿಯನ್ನು ಪಾತ್ರೆಯಲ್ಲಿ ಸೇರಿಸುತ್ತಾನೆ. ಒಲೆಯ ಮೇಲೆ ಹಾಲು (Milk) ಕುದಿಯುತ್ತಿರುವಂತೆ, ಚಹಾಕ್ಕೆ ಬಾಳೆಹಣ್ಣು ಮತ್ತು ಚಿಕ್ಕು ಹಣ್ಣನ್ನು ಸೇರಿಸುತ್ತಾನೆ. ನಂತರ ಚೆನ್ನಾಗಿ ಮಿಕ್ಸ್ ಮಾಡುತ್ತಾನೆ. ಸ್ವಲ್ಪ ಹೊತ್ತು ಕುದಿದ ಬಳಿಕ ಈ ಟೀಯನ್ನು ಸೋಸಿ ಜನರಿಗೆ ಸರ್ವ್ ಮಾಡುತ್ತಾನೆ.
ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
ಬಾಳೆಹಣ್ಣಿನ ಟೀ, ಒಂದು ಕಪ್‌ಗೆ ಭರ್ತಿ 200 ರೂಪಾಯಿ
ಬಾಳೆಹಣ್ಣನ್ನು (Banana) ಬಳಸಿ ಫ್ರೂಟ್ ಚಾಯ್ ತಯಾರಿಸುತ್ತಿರುವ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಆ ವ್ಯಕ್ತಿ ಒಂದು ಕಪ್ ಫ್ರೂಟ್ ಚಾಯ್‌ಗೆ ತಲಾ 200 ರೂಪಾಯಿ ಎಂದು ಹೇಳಿಕೊಂಡಿದ್ದಾನೆ. @HasnaZarooriHai ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ 148.3K ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಹಲವರು 'ವಿಚಿತ್ರ ಟೀ ಮಾಡಿರುವ ವ್ಯಕ್ತಿಯನ್ನು ಎಲ್ಲಿದ್ದರೂ ಬಿಡಬೇಡಿ, ಜೀವಂತವಾಗಿ ಹಿಡಿಯಿರಿ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಆ ಅಸಹ್ಯಕರ ಚಹಾಕ್ಕೆ 200 ರೂಪಾಯಿನಾ, ಜನರಿಗೇನು ತಲೆಕಟ್ಟಿದ್ಯಾ' ಎಂದಿದ್ದಾರೆ. ಮತ್ತೊಬ್ಬರು 'ಈ ವ್ಯಕ್ತಿ ಎಲ್ಲಾದರೂ ಸಿಕ್ಕರೆ ನನ್ನ ಪರವಾಗಿಯೂ ಎರಡು ಏಟನ್ನು ಹೊಡೆಯಿರಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?
ಬಾಳೆಹಣ್ಣು ಸೇರಿಸಿದ ಪಾನಿಪುರಿ, ವಿಡಿಯೋ ವೈರಲ್
ಇನ್ನೊಂದೆಡೆ ಪಾನಿಪುರಿಗೆ ಆಲೂಗಡ್ಡೆಯ (Potato) ಬದಲು ಬಾಳೆಹಣ್ಣು ಸೇರಿಸಿ ಕೊಡ್ತಿರೋ ವಿಡಿಯೋ ವೈರಲ್ ಆಗಿದೆ. ಪಾನಿ ಪುರಿ ಬಹುತೇಕರು ಇಷ್ಟಪಡುವ ಬೀದಿ ಆಹಾರಗಳಲ್ಲಿ ಒಂದಾಗಿದೆ. ಗರಿಗರಿಯಾದ ಪೂರಿಯೊಂದಿಗೆ ಆಲೂ ಸ್ಟಫಿಂಗ್ ಮತ್ತು ಮಸಾಲೆಯುಕ್ತ ನೀರು ತಿನ್ನು ಹಿತಕರವಾಗಿರುತ್ತದೆ. ಆದ್ರೆ ಇಲ್ಲಿ ಪಾನಿಪುರಿಗೆ ಆಲೂಗಡ್ಡೆ ಬದಲು ಬಾಳೆಹಣ್ಣು ಬಳಸಿದ್ದಾರೆ. ಟ್ವಿಟರ್ ಬಳಕೆದಾರ ಮೊಹಮ್ಮದ್ ಫ್ಯೂಚರ್‌ವಾಲಾ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ತಮ್ಮ ಗ್ರಾಹಕರಿಗೆ (Customers) 'ಬಾಳೆಹಣ್ಣು ಪಾನಿ ಪುರಿ' ಸರ್ವ್ ಮಾಡಿದ್ದಾರೆ. ಬೀದಿಬದಿ ವ್ಯಾಪಾರಿ ಪಾನಿಪುರಿ ಸ್ಟಫಿಂಗ್‌ಗೆ ಬೇಯಿಸಿದ ಆಲೂಗಡ್ಡೆಯನ್ನು ಬಳಸುವ ಬದಲು ಬಾಳೆಹಣ್ಣನ್ನು ಬಳಸಿದ್ದಾರೆ.
ವೀಡಿಯೊ ಕುರಿತು ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, 'ನೀವು ಆಹಾರಕ್ಕೆ ಸಂಬಂಧಿಸಿದ ವೀಡಿಯೊವನ್ನು ಪ್ರತಿ ಬಾರಿ ಹಂಚಿಕೊಂಡಾಗ, ನಾನು ನನ್ನ ಕಣ್ಣುಗಳನ್ನು ಸ್ಯಾನಿಟೈಸ್ ಮಾಡಬೇಕಾಗಿದೆ' ಎಂದು ಬರೆದಿದ್ದಾರೆ. ಮತ್ತೊಬ್ಬರು 'ಒಳ್ಳೆಯ ಆಹಾರವನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ. ಪಾನಿ ಪುರಿ ಪ್ರಯೋಗ ಮಾಡುವವರನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಬೀದಿ ತಿನಿಸು ವ್ಯಾಪಾರಿಯೊಬ್ಬರು ಮಾವಿನಕಾಯಿ ಪಾನಿ ಪುರಿ ತಯಾರಿಸುತ್ತಿರುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.