ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
ಆಹಾರ ಮತ್ತು ಪಾನೀಯದ ಬಗ್ಗೆ ಮಾತನಾಡುವುದಾದರೆ, ನಾವು ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿಗಳನ್ನು ಪಡೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ, ವಿಚಿತ್ರ ಆಹಾರ ಪದಾರ್ಥಗಳು ಇಂಟರ್ನೆಟ್ ನಲ್ಲಿ ಕಂಡುಬರುತ್ತವೆ. ಈ ಲೇಖನದಲ್ಲಿ ನಾವು ಕೆಲವು ವೈರಲ್ ಫುಡ್ ಕಾಂಬೋಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
ಅನೇಕ ಪದಾರ್ಥಗಳು ಒಟ್ಟಾದಾಗ ಮಾತ್ರ ರುಚಿಯಾದ ಆಹಾರ ತಯಾರಿಸಲು ಸಾಧ್ಯ ಅನ್ನೋದು ನಿಮಗೆ ಗೊತ್ತೇ ಇದೆ. ಇದು ಊಟದ ನಂತರ ಹೃದಯ ಮತ್ತು ಮನಸ್ಸನ್ನು ಸಂತೋಷಪಡಿಸುತ್ತದೆ. ಆದರೆ ಅದೇ ಆಹಾರಕ್ಕೆ ವಿರುದ್ಧವಾದ ಖಾದ್ಯ ಸೇರಿಸಿದರೆ ಏನಾಗುತ್ತದೆ? ಮೂಡ್ ಹಾಳಾಗೋ ಜೊತೆಗೆ, ಹೊಟ್ಟೆಯೂ ಹಾಳಾಗಬಹುದು. ಹೌದು, ಇತ್ತೀಚಿನ ದಿನಗಳಲ್ಲಿ ಅನೇಕ ವಿಚಿತ್ರ ಫುಡ್ ಕಾಂಬಿನೇಶನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವು ವೈರಲ್ ಫುಡ್ ಕಾಂಬೋಗಳ (weird food combo) ಬಗ್ಗೆ ತಿಳಿದುಕೊಳ್ಳೋಣ..
ಫಾಂಟಾ ಮ್ಯಾಗಿ (Fanta Maggi)
ನಾವು ಸಾಕಷ್ಟು ವಿಧದ ಮ್ಯಾಗಿಯನ್ನು ತಿಂದಿದ್ದೇವೆ, ಎಗ್ ಮ್ಯಾಗಿ, ವೆಜಿಟೇಬಲ್ ಮ್ಯಾಗಿ, ಚೀಸ್ ಮ್ಯಾಗಿ, ಪೀಸ್ ಮ್ಯಾಗಿ, ಚಿಕನ್ ಮ್ಯಾಗಿ ಇತ್ಯಾದಿ. ಆದರೆ ಫಾಂಟಾ ಮ್ಯಾಗಿ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಥವಾ ತಿಂದಿದ್ದೀರಾ? ಛೀ ಏನಿದು ಫ್ಯಾಂಟಾ ಮ್ಯಾಗಿ ಎಂದು ಕೇಳ್ತಿದ್ದೀರಾ?
ಈ ಫಾಂಟಾ ಮ್ಯಾಗಿ ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗುತ್ತಿದೆ. ಅದೇ ಸಮಯದಲ್ಲಿ, ಈ ಮ್ಯಾಗಿ ತಯಾರಿಸಲು ಫಾಂಟಾ ಸೇರಿಸುವುದಲ್ಲದೆ ತುಪ್ಪ, ಆಮ್ಚೂರ್ ಪುಡಿ, ಒಣ ಮಸಾಲೆ ಮತ್ತು ಅರಿಶಿನ ಪುಡಿಯನ್ನು ಅದರ ರುಚಿಯನ್ನು ಹೆಚ್ಚಿಸಲು ಬಳಸುತ್ತಾರೆ..
ಮೊಸರು ಗುಲಾಬ್ ಜಾಮೂನ್ (Curd Gulab Jamun)
ಇತ್ತೀಚೆಗೆ, ಆಹಾರ ಬ್ಲಾಗರ್ ಗೌರವ್ ವಾಸನ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನು ಪೋಸ್ಟ್ ಮಾಡಿದ ಕೂಡಲೇ, ಈ ವೀಡಿಯೊ ಸಾಕಷ್ಟೂ ವೈರಲ್ ಆಗಿತ್ತು, ಯಾಕಂದ್ರೆ ಈ ಪೋಸ್ಟ್ನಲ್ಲಿ, ಮಾರಾಟಗಾರನು ಫ್ಯೂಷನ್ ಭಕ್ಷ್ಯಗಳ ಪ್ಲೇಟ್ ಅನ್ನು ತಯಾರಿಸುವುದನ್ನು ಕಾಣಬಹುದು.
ಹೌದು, ನಾವು ಶುಗರ್ ಸಿರಪ್ (sugar syrup) ಜೊತೆಗೆ ಗುಲಾಬ್ ಜಾಮೂನ್ ತಿಂದ್ರೆ ಇಲ್ಲೊಬ್ಬ ಸೆಲ್ಲರ್, ತಟ್ಟೆಯಲ್ಲಿ, ಒಂದು ಚಮಚ ಮೊಸರನ್ನು ಗುಲಾಬ್ ಜಾಮೂನ್ ನೊಂದಿಗೆ ಬಡಿಸುತ್ತಿದ್ದಾನೆ ಮತ್ತು ಈ ವೈರಲ್ ಗುಲಾಬ್ ಜಾಮೂನ್ ನ ಬೆಲೆ ಪ್ರತಿ ಪ್ಲೇಟ್ ಗೆ 50 ರೂ. ತಿಂದವನೇ ಬಲ್ಲ ಅದ್ರ ರುಚಿ ಹೇಗಿದೆ ಅಂತ.
ಮ್ಯಾಂಗೋ ಪಾನಿ ಪುರಿ (Mango Pani Puri)
ಬೇಸಿಗೆ ನಮ್ಮೆಲ್ಲರ ನೆಚ್ಚಿನ ಹಣ್ಣು, ಮಾವಿನ ಹಣ್ಣಿನ ಋತು. ಬೇಸಿಗೆಯಲ್ಲಿ ಅನೇಕ ರುಚಿಕರವಾದ ಪಾಕವಿಧಾನಗಳನ್ನು ಮಾಡುವ ಮೂಲಕ ಜನರು ಮಾವಿನ ಹಣ್ಣನ್ನು ಎಂಜಾಯ್ ಮಾಡ್ತಾರೆ.. ಮಾವಿನಹಣ್ಣಿನ ವಿಷಯಕ್ಕೆ ಬಂದರೆ, ನೀವು ಎಂದಾದರೂ ಮಾವಿನ ಪಾನಿ ಪುರಿಯನ್ನು ತಿಂದಿದ್ದೀರಾ?
ಏನು ಮ್ಯಾಂಗೋ ಪಾನಿ ಪುರಿಯೇ ಎಂದು ಶಾಖ್ ಆಗಬೇಡಿ. ಈ ವಿಶೇಷ ಮಾವಿನ ಪಾನಿ ಪುರಿಯನ್ನು ಮುಂಬೈನಲ್ಲಿ ಮಾರಲಾಗುತ್ತದೆ. ಈ ವಿಶೇಷ ಪಾನಿ ಪೂರಿಯಲ್ಲಿ, ಆಲೂಗಡ್ಡೆ ಮಸಾಲೆ ಬದಲು, ಘುಗ್ನಿ ಮತ್ತು ಹುಣಸೆ ನೀರಿನ ಜೊತೆಗೆ ಮಾವಿನ ಪೇಸ್ಟ್ ಅಥವಾ ರಸ ಸೇರಿಸುವ ಮೂಲಕ ಸರ್ವ್ ಮಾಡಲಾಗುತ್ತೆ.
ಪಾಪ್ಸಿಕಲ್ ಇಡ್ಲಿ (Popsicle Idli)
ಬೇಸಿಗೆಯಲ್ಲಿ, ಪಾಪ್ಸಿಕಲ್ಸ್, ಐಸ್ ಕ್ರೀಮ್, ಕುಲ್ಫಿ ಇತ್ಯಾದಿಗಳನ್ನು ಹಿರಿಯರು, ಕಿರಿಯರು ಎಲ್ಲರೂ ಸೇರಿ ತಿನ್ನುತ್ತಾರೆ. ಮನೆಯಲ್ಲಿ ವಿವಿಧ ರೀತಿಯಲ್ಲಿ ಪಾಪ್ಸಿಕಲ್ ಐಸ್ ಕ್ರೀಂ ಕೂಡ ಸೇವಿಸ್ತಾರೆ. ಆದರೆ ನೀವು ಎಂದಾದ್ರೂ ಪಾಪ್ಸಿಕಲ್ ಇಡ್ಲಿ ಬಗ್ಗೆ ಕೇಳಿದ್ದೀರಾ?
ದಕ್ಷಿಣ ಭಾರತದ ಖಾದ್ಯ ಇಡ್ಲಿ ಇದೀಗ ಪಾಪ್ಸಿಕಲ್ ರೂಪದಲ್ಲೂ ದೊರೆಯುತ್ತಿದೆ. ಸಾಂಬಾರ್, ಪುದೀನಾ ಚಟ್ನಿ ಮತ್ತು ಕಡಲೆಕಾಯಿ ಚಟ್ನಿ ಜೊತೆಗೆ ಇಡ್ಲಿ ಪಾಪ್ಸಿಕಲ್ಸ್ ಅನ್ನು ಡಿಪ್ಪಿಂಗ್ ಸಾಸ್ ಆಗಿ ಬಡಿಸಲಾಗುತ್ತದೆ. ಕೈಯಲ್ಲಿ ಇಡ್ಲಿ ತಿನ್ನೋಕೆ ಕಷ್ಟ ಆದ್ರೆ ಇದನ್ನ ಸೇವಿಸಬಹುದು ನೋಡಿ.