Kitchen Tips: ನಾನ್ ಸ್ಟಿಕ್ ಪಾತ್ರೆ ಫಳ ಫಳ ಹೊಳೆಯುವಂತೆ ಮಾಡೋದು ಹೇಗೆ?
ನಾನ್ ಸ್ಟಿಕ್ ಪಾತ್ರೆಗಳು ಬಾಳಿಕೆ ಬರುವುದಿಲ್ಲ ಎಂಬ ದೂರನ್ನು ಅನೇಕ ಮಹಿಳೆಯರು ಹೇಳ್ತಾರೆ. ಅದಕ್ಕೆ ಅವರೇ ಕಾರಣ. ನಾನ್ ಸ್ಟಿಕ್ ಪಾತ್ರೆ ಮನೆಯಲ್ಲಿದೆ ಅಂದ್ಮೇಲೆ ಕೆಲವೊಂದು ನಿಯಮಗಳ ಪಾಲನೆ ಮಾಡ್ಬೇಕಾಗುತ್ತೆ. ಅದನ್ನು ಸ್ವಚ್ಛಗೊಳಿಸುವಾಗ ಎಚ್ಚರವಹಿಸಬೇಕು.
ಮಹಿಳೆ (Woman)ಯರ ಅಚ್ಚುಮೆಚ್ಚಿನ ಪಾತ್ರೆ ನಾನ್ ಸ್ಟಿಕ್ (Nonstick). ಅಡುಗೆ ಮನೆ (Kitchen)ಯಲ್ಲಿ ತವಾ,ಕುಕ್ಕರ್,ಪಡ್ಡಿನ ತವಾ ಸೇರಿದಂತೆ ನಾಲ್ಕೈದು ನಾನ್ ಸ್ಟಿಕ್ ಪಾತ್ರೆಗಳನ್ನು ಮಹಿಳೆಯರು ಹೊಂದಿರುತ್ತಾರೆ. ನಾನ್ ಸ್ಟಿಕ್ ಪಾತ್ರೆಗೆ ಕಡಿಮೆ ಎಣ್ಣೆ (Oil) ಸಾಕು. ಹಾಗೆ ಅವು ಪಾತ್ರೆಗೆ ಅಂಟಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಬಹುತೇಕ ಮಹಿಳೆಯರ ಮೊದಲ ಆಯ್ಕೆ ನಾನ್ ಸ್ಟಿಕ್. ನಾನ್ ಸ್ಟಿಕ್ ಪಾತ್ರೆಗಳು ನೋಡಲು ಸುಂದರವಾಗಿರುತ್ತವೆ. ಆದ್ರೆ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಹೋದ್ರೆ ಪಾತ್ರೆಯ ಕೋಟಿಂಗ್ ಕೂಡ ಹಾಳಾಗುತ್ತದೆ. ಹಾಗಾಗಿ ನಾನ್ ಸ್ಟಿಕ್ ಪಾತ್ರೆಗಳನ್ನು ಅತ್ಯಂತ ಚಾಗರೂಕತೆಯಿಂದ ಬಳಸಬೇಕು,ಸ್ವಚ್ಛಗೊಳಿಸಬೇಕು. ಇಂದು ನಾನ್ ಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಾವು ಹೇಳ್ತೇವೆ.
ನಾನ್ ಸ್ಟಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? :
ಎಲ್ಲ ಪಾತ್ರೆ ಜೊತೆ ಸಿಂಕ್ ಗೆ ಹಾಕ್ಬೇಡಿ : ಒಟ್ಟಿಗೆ ಒಂದಿಷ್ಟು ಪಾತ್ರೆಗಳನ್ನು ಗುಡ್ಡೆ ಹಾಕಿಕೊಂಡು ಕ್ಲೀನ್ ಮಾಡುವ ಸ್ವಭಾವ ಮಹಿಳೆಯರಿಗಿರುತ್ತದೆ. ಪ್ಲೇಟ್,ಲೋಟ,ತವಾ ಸೇರಿದಂತೆ ಎಲ್ಲವನ್ನೂ ಸಿಂಕ್ ಗೆ ಹಾಕ್ತೇವೆ. ಆದ್ರೆ ಇದು ಸರಿಯಲ್ಲ. ನಾನ್ ಸ್ಟಿಕ್ ಪಾತ್ರೆಗಳನ್ನು ಎಲ್ಲ ಪಾತ್ರೆಗಳ ಜೊತೆ ಸಿಂಕ್ ಗೆ ಹಾಕ್ಬೇಡಿ. ನಾನ್ ಸ್ಟಿಕ್ ಪಾತ್ರೆಗಳನ್ನು ಆ ತಕ್ಷಣ ತೊಳೆಯಬೇಕು. ಇಲ್ಲವಾದ್ರೆ ನಾನ್ ಸ್ಟಿಕ್ ಮೇಲಿರುವ ರಾಸಾಯನಿಕ ಕೋಟ್,ಬೇರೆ ಪಾತ್ರೆಗಳಿಗೆ ತಾಗಿ ಹಾಳಾಗುತ್ತದೆ. ಸೌಟ್,ಚಾಕುಗಳನ್ನೂ ಸಿಂಕ್ ಗೆ ಹಾಕಿದಾಗ ನಾನ್ ಸ್ಟಿಕ್ ಕೋಟ್ ಹಾಳಾಗುವ ಅಪಾಯ ಹೆಚ್ಚಿರುತ್ತದೆ.
Health Tips: ಹೆಚ್ಚು ತಿಂದರೆ ಊಟ ಸರಿ ಜೀರ್ಣ ಆಗೋಲ್ವಾ? ಹೀಗ್ಮಾಡಿ
ಬಿಸಿ ನೀರಿನ ಬಳಕೆ : ಕೆಲ ಪಾತ್ರೆಗಳನ್ನು ನಾವು ಬಿಸಿಯಿರುವಾಗ್ಲೇ ಸ್ವಚ್ಛಗೊಳಿಸುತ್ತೇವೆ. ಆದ್ರೆ ನಾನ್ ಸ್ಟಿಕ್ ಪಾತ್ರೆ,ತವಾಗಳನ್ನು ಬಿಸಿಯಿರುವಾಗ ಸ್ವಚ್ಛಗೊಳಿಸಬಾರದು. ಬಿಸಿ ನಾನ್ ಸ್ಟಿಕ್ ಪಾತ್ರೆಗೆ ತಣ್ಣನೆಯ ನೀರು ಹಾಕಿದಾಗ ಪಾತ್ರೆ ಹಾಳಾಗುವ ಅಪಾಯವಿರುತ್ತದೆ.
ನಾನ್ ಸ್ಟಿಕ್ ಪಾತ್ರೆ ಸ್ವಚ್ಛಗೊಳಿಸುವ ಸೋಪ್ ಹೀಗಿರಲಿ : ನಾನ್ ಸ್ಟಿಕ್ ಪ್ಯಾನ್ ಸ್ವಚ್ಛಗೊಳಿಸಲು ಸೌಮ್ಯವಾದ ಸೋಪ್ ಮತ್ತು ಡಿಟರ್ಜೆಂಟ್ ಬಳಸಿ. ಹೆಚ್ಚು ರಾಸಾಯನಿಕವಿರುವ ಸೋಪ್ ಬಳಕೆಯನ್ನು ತಪ್ಪಿಸಿ. ನಾನ್ ಸ್ಟಿಕ್ ಪಾತ್ರೆಗಳನ್ನು ಸೋಪ್ ಹಾಕಿ ಗಟ್ಟಿಯಾಗಿ ಉಜ್ಜುವ ಅವಶ್ಯಕತೆಯಿರುವುದಿಲ್ಲ. ಅದಕ್ಕೆ ಜಿಡ್ಡಿನಂಶ ಅಂಟಿಕೊಳ್ಳುವುದಿಲ್ಲ.
ನಾನ್ ಸ್ಟಿಕ್ ಪಾತ್ರೆ ತೊಳೆಯುವ ಬ್ರೆಶ್ : ನಾನ್‌ಸ್ಟಿಕ್ ಪಾತ್ರೆಗಳಿಗೆ ನೈಲಾನ್ ಮತ್ತು ಸ್ಟೀಲ್ ಬ್ರೆಶ್ ಬಳಸಬೇಡಿ. ಇದಕ್ಕಾಗಿ ಸ್ಪಾಂಜ್ ಪ್ಯಾಡ್ ಬಳಸಿ. ಪಾತ್ರೆಗಳನ್ನು ತೊಳೆದ ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ನಂತ್ರ ಅದನ್ನು ಸೂಕ್ತ ಜಾಗದಲ್ಲಿ ಇಡಿ.
ನಿಮ್ಮ ಮನೆ ಪಾತ್ರೆಯೂ ಹೊಳೆಯಬೇಕಾ? : ನಾನ್ ಸ್ಟಿಕ್ ಪಾತ್ರೆ ಬಣ್ಣ ಕಳೆದುಕೊಳ್ತಿದೆ,ಹಾಳಾಗ್ತಿದೆ ಅಂದ್ರೆ ಅದು ಹೊಳೆಯುವಂತೆ ಮಾಡಲು ಸುಲಭ ಉಪಾಯ ಇಲ್ಲಿದೆ. ಮೊದಲು ನಾನ್ ಸ್ಟಿಕ್ ಪಾತ್ರೆಗೆ ಅರ್ಧ ಕಪ್ ವಿನೇಗರ್ ಹಾಗೂ ಅರ್ಧ ಕಪ್ ನೀರನ್ನು ಹಾಕಿ ಬಿಸಿ ಮಾಡಿ. ನೀರು ಕುದಿಯುವ ಸಮಯದಲ್ಲಿ ಡಿಟರ್ಜೆಂಟ್ ಪೌಡರ್ ಹಾಕಿ. ನಂತರ ಮರದ ಸೌಟಿನ ಸಹಾಯದಿಂದ ನಾನ್ ಸ್ಟಿಕ್ ಪಾತ್ರೆಗೆ ಅಂಟಿರುವ ಜಿಡ್ಡನ್ನು ಉಜ್ಜಿ. ನಂತ್ರ ಗ್ಯಾಸ್ ಬಂದ್ ಮಾಡಿ ನೀರನ್ನು ಚೆಲ್ಲಿ. ನಾನ್ ಸ್ಟಿಕ್ ತಣ್ಣಗಾದ್ಮೇಲೆ ಪಾತ್ರೆ ತೊಳೆಯುವ ಸೋಪ್ ನಿಂದ ಸ್ವಚ್ಛಗೊಳಿಸಿ.
Food Tips: ಮರಳಿನಲ್ಲಿ ಹುರಿದ ಆಹಾರ ತಿಂದ್ರೆ ಆರೋಗ್ಯಕ್ಕೆ ಒಳ್ಳೇದಾ ?
ನಾನ್ ಸ್ಟಿಕ್ ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾವನ್ನೂ ಬಳಸಬಹುದು. ಒಂದು ಪಾತ್ರೆಗೆ ಒಂದು ಚಮಚ ಅಡುಗೆ ಸೋಡಾ,ಅರ್ಧ ಚಮಚ ಉಪ್ಪು,2-3 ಚಮಚ ವಿನೇಗರ್ ಹಾಕಿ. ನಂತ್ರ ಡಿಶ್ ವಾಶ್ ಸ್ಕ್ರಬ್ ನಿಂದ ನಿಧಾನವಾಗಿ ನಾನ್ ಸ್ಟಿಕ್ ಪಾತ್ರೆಯನ್ನು ಸ್ವಚ್ಛಗೊಳಿಸಿ. ನಂತ್ರ ಸ್ವಚ್ಛನೀರು ಹಾಕಿ ತೊಳೆಯಿರಿ. ನಾನ್ ಸ್ಟಿಕ್ ಪಾತ್ರೆ ಕಲೆಯನ್ನು ಇದು ತೆಗೆಯುತ್ತದೆ.