Asianet Suvarna News Asianet Suvarna News

ಬಕೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದೇ ನೀರಲ್ಲೇ ನೆಲ ಒರೆಸಿದ ಮನೆ ಕೆಲಸದಾಕೆ: ಸಿಸಿ ಕ್ಯಾಮರಾದಲ್ಲಿ ಸೆರೆ..

ವಿಚಾರಣೆಯ ವೇಳೆ ಮೂತ್ರ ವಿಸರ್ಜಿಸಿ ನೆಲವನ್ನು ನೀರಿನಿಂದ ತೊಳೆದಿರುವುದನ್ನು ಆರಂಭದಲ್ಲಿ ನಿರಾಕರಿಸಿದರೂ, ಬಳಿಕ ಆಕೆ ಒಪ್ಪಿಕೊಂಡಿದ್ದಾಳೆ

greater noida shocker cctv catches maid urinating in water ash
Author
First Published May 27, 2023, 3:00 PM IST | Last Updated May 27, 2023, 3:00 PM IST

ನೋಯ್ಡಾ (ಮೇ 27, 2023): ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವೆಸ್ಟ್‌ನ ಅಜ್ನಾರಾ ಹೋಮ್ಸ್ ಸೊಸೈಟಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ನೆಲ ಒರೆಸುವ ಮಹಿಳೆಯನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣ ಆಕೆ ನೀರಿದ್ದ ಬಕೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು, ಬಳಿಕ ಅದೇ ನೀರಲ್ಲಿ ನೆಲ ಒರೆಸಿದ್ದಾರೆ. ಮಹಿಳೆಯ ಈ ಆಘಾತಕಾರಿ ವರ್ತನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಹಿನ್ನೆಲೆ ಆಕೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಈ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಇದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಂತರ, ಇದು ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಮಹಿಳೆಯನ್ನು ಕಸ್ಟಡಿಗೆ ಕರೆತಂದರು ಮತ್ತು ಆಕೆಯನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ, ಅಪಾರ್ಟ್‌ಮೆಂಟ್‌ ಮಾಲೀಕರು ಸಹ ಈ ಬಗ್ಗೆ ದೂರು ನೀಡಿದ್ದು, ಈ ಹಿನ್ನೆಲೆ ಪೊಲೀಸರು ದೂರು ತೆಗೆದುಕೊಂಡಿದ್ದಾರೆ.

ಇದನ್ನು ಓದಿ: ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್‌

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯು ಅಪಾರ್ಟ್‌ಮೆಂಟ್‌ನ ರೂಮನ್ನು ಸುಮಾರು 30 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸುವುದನ್ನು ಗುರುತಿಸಬಹುದು. ಬಳಿಕ, ಬಕೆಟ್‌ನಲ್ಲಿ ಒರೆಸುವ ಬಟ್ಟೆಯನ್ನು ಅದ್ದಿ ಬಕೆಟ್‌ನಲ್ಲಿ ಮೂತ್ರ ಮಾಡಿದಳು. ಅಲ್ಲದೆ, ಅದೇ ಬಟ್ಟೆಯನ್ನು ನೀರಿನಲ್ಲಿ ಮುಳುಗಿಸಿದ ನಂತರ ಆಕೆ ಇನ್ನೂ ಮೂರು ನಿಮಿಷಗಳ ಕಾಲ ಅಪಾರ್ಟ್ಮೆಂಟ್ ಅನ್ನು ಸ್ವಚ್ಛಗೊಳಿಸುವುದನ್ನು ಮುಂದುವರೆಸಿದ್ದಾಳೆ.

ಸಿಸಿಟಿವಿ ಕ್ಯಾಮೆರಾದಲ್ಲಿ ನಡೆದಿದ್ದೆಲ್ಲವೂ ದಾಖಲಾಗಿದೆ. ಈ ವಿಡಿಯೋದ ಮೂಲವನ್ನು ನಿರ್ಧರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲದಿದ್ದರೂ, ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಚುರುಕಾಗಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೆ, ಆಕೆಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಬಿಸ್ರಖ್ ಕೊತ್ವಾಲಿಯ ಉಸ್ತುವಾರಿ ಅನಿಲ್ ರಜಪೂತ್ ಹೇಳಿದ್ದಾರೆ.

ಇದನ್ನೂ ಓದಿ: ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!

ಈ ಮಧ್ಯೆ, ವಿಚಾರಣೆಯ ವೇಳೆ ಮೂತ್ರ ವಿಸರ್ಜಿಸಿ ನೆಲವನ್ನು ನೀರಿನಿಂದ ತೊಳೆದಿರುವುದನ್ನು ಆರಂಭದಲ್ಲಿ ನಿರಾಕರಿಸಿದರೂ, ಬಳಿಕ ಆಕೆ ಒಪ್ಪಿಕೊಂಡಿದ್ದಾಳೆ. ಆದರೆ, ತನ್ನನಡವಳಿಕೆಗೆ ಆಕೆ ಯಾವುದೇ ಸಮರ್ಥನೆಯನ್ನು ನೀಡಲಿಲ್ಲ ಎಂದು ತಿಳಿದುಬಂದಿದೆ. ನಂತರ, ಮಹಿಳೆಯ ವರ್ತನೆಯ ಬಗ್ಗೆ ಮನೆಯವರಿಗೆ ತಿಳಿಸಲಾಗಿದೆ. ಅವರ ವಿಚಾರಣೆಯ ಸಮಯದಲ್ಲಿ, ಮಹಿಳೆ ಸುಮಾರು ಆರು ತಿಂಗಳಿನಿಂದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.. ಆರು ತಿಂಗಳ ಹಿಂದೆ, ಮಹಿಳೆ ಉದ್ಯೋಗದಾತರನ್ನು ಕೆಲಸ ಕೇಳಿದ್ದರು ಮತ್ತು ಅವರು ಅವಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!

Latest Videos
Follow Us:
Download App:
  • android
  • ios