ಈ ಐದು ಕಾರಣಕ್ಕೆ ಕ್ಯಾರೆಟ್ ಹಲ್ವಾ ತಿನ್ಲೇಬೇಕು ಅಂತಿದ್ದಾರೆ ಉದ್ಯಮಿ ಆನಂದ್ ಮಹೀಂದ್ರಾ
ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ನೆಚ್ಚಿನ ಕ್ಯಾರೆಟ್ ಹಲ್ವಾದಿಂದ ಆರೋಗ್ಯಕ್ಕಿರುವ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ಯಾಕೆ ಆರೋಗ್ಯಕರ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಸಿಹಿ ತಿನ್ನೋಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಅವಾಯ್ಡ್ ಮಾಡುತ್ತಾರೆ. ಸಿಹಿ ತಿನ್ಬೇಕು ಅಂತ ಅನಿಸಿದರೂ ಹಲ್ಲು ನೋವು, ಡಯಾಬಿಟಿಸ್ ಭಯದಿಂದ ಸಕ್ಕರೆ ತಿನ್ನೋದೆ ಇರುವವರು ಹಲವರು. ಹಾಗೆಯೇ ಭಾರತದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಸ್ವಲ್ಪ ಸಮಯದ ಹಿಂದೆ ಆರೋಗ್ಯ ಹಾಳಾಗುವ ಭಯದಿಂದ ಸಕ್ಕರೆಯನ್ನು ತಿನ್ನದೇ ಇರಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. 'ಸಿಹಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕೆಂದು ಅಂದುಕೊಂಡೆ. ಆದರೆ ಕ್ಯಾರೆಟ್ ಹಲ್ವಾ ನೋಡಿದಾಗ ನನ್ನ ಮನಸ್ಸು ತಡೆಯುವುದಿಲ್ಲ. ತಿಂದು ಬಿಡುತ್ತೇನೆ' ಎಂದು ತಿಳಿಸಿದ್ದಾರೆ. ಆದರೆ ಇತ್ತೀಚಿಗಿನ ಲೇಖನವು ಸಿಹಿ ತಿನ್ನುವಾಗ ನನಗಾಗುವ ಗಿಲ್ಡ್‌ನ್ನು ಕಡಿಮೆ ಮಾಡಿದೆ ಎಂದು ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ನೆಚ್ಚಿನ ಕ್ಯಾರೆಟ್ ಹಲ್ವಾದಿಂದ ಆರೋಗ್ಯಕ್ಕಿರುವ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ಯಾಕೆ ಆರೋಗ್ಯಕರ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಬೇಕಾ ಬಿಟ್ಟಿ ಸ್ವೀಟ್ಸ್ ತಿಂದ್ರೆ ಆರೋಗ್ಯಕ್ಕೆ ನೂರೆಂಟ್ ಅಪಾಯ ಗ್ಯಾರಂಟಿ!
ಕ್ಯಾರೆಟ್ ಹಲ್ವಾ ಯಾಕಷ್ಟು ಹೆಲ್ದೀ?
ಕ್ಯಾರೆಟ್ ಹಲ್ವಾ ತಯಾರಿಸಲು ಬಳಸುವ ಮೂಲ ಪದಾರ್ಥವೆಂದರೆ ಕ್ಯಾರೆಟ್. ಕ್ಯಾರೆಟ್‌ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೈಬರ್ ತುಂಬಿರುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಕ್ಯಾರೆಟ್ ಹಲ್ವಾ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಹಲ್ವಾಗೆ ಹಾಲು ಸೇರಿಸುವುದರಿಂದ ಭಕ್ಷ್ಯಕ್ಕೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸೇರಿಸಿದಂತಾಗುತ್ತದೆ. ಗೋಡಂಬಿ ಮತ್ತು ಒಣದ್ರಾಕ್ಷಿ ಹಲ್ವಾದಲ್ಲಿ ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸೇರಿಸುತ್ತದೆ.
ಹಲ್ವಾದಲ್ಲಿರುವ ತುಪ್ಪವು ಚಳಿಗಾಲದ ಜೊತೆಗೆ ಬರುವ ನೋವುಗಳನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬನ್ನು ಹೊಂದಿರುತ್ತದೆ. ತುಪ್ಪವು ತುಂಬಾ ಆರೋಗ್ಯಕರವಾಗಿದ್ದರೂ, ನೀವು ಅದನ್ನು ಸೇವಿಸದಿರಲು ಬಯಸಿದರೆ, ನೀವು 1 ಚಮಚ ಬೆಣ್ಣೆಯನ್ನು ಬಳಸಬಹುದು. ಅಲ್ಲದೆ, ಚಳಿಗಾಲದಲ್ಲಿ ಎದೆಯ ಮೇಲ್ಭಾಗದ ಸೋಂಕು ಹೆಚ್ಚಾಗುತ್ತದೆ. ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಇದು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಬಾಯಲ್ಲಿ ನೀರೂರಿಸುವ ಕಾಜು ಕಟ್ಲಿ, ಭಾರತಕ್ಕೇನು ನಂಟು?
ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಅನ್ನು ಅನ್ವಯಿಸುತ್ತೇವೆ. ಹಾಗೆಯೇ ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಸಕ್ರಿಯವಾಗಿರುವ ಯುವಿ ಕಿರಣಗಳನ್ನು ತಡೆಯುವ ಮೂಲಕ ಚರ್ಮಕ್ಕೆ ಸಹಾಯ ಮಾಡುತ್ತದೆ.
ಹೀಗಾಗಿ ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ ತಿನ್ನುವುದು ತುಂಬಾ ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ ಕ್ಯಾರೆಟ್ ಹಲ್ವಾವನ್ನು ಮಿತವಾಗಿ ತಿನ್ನುವುದು ಆರೋಗ್ಯಕರ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.