ಬೇಕಾ ಬಿಟ್ಟಿ ಸ್ವೀಟ್ಸ್ ತಿಂದ್ರೆ ಆರೋಗ್ಯಕ್ಕೆ ನೂರೆಂಟ್ ಅಪಾಯ ಗ್ಯಾರಂಟಿ!
ನೀವು ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದರೆ ನಿಮ್ಮ ದೇಹಕ್ಕೆ ಸಂಭವಿಸಬಹುದಾದ 5 ವಿಷಯಗಳು ಯಾವುವು ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ನೀವು ಇಷ್ಟಪಟ್ಟು ತಿನ್ನುವ ಆಹಾರಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಆದುದರಿಂದ ಈ ವಿವರಗಳನ್ನು ತಿಳಿದುಕೊಂಡ್ರೆ ಒಳ್ಳೇದು.
ನೀವು ಹೆಚ್ಚು ಸಕ್ಕರೆ ಸೇವಿಸುತ್ತಿದ್ದೀರಾ? ಸ್ವೀಟ್ ಟೂತ್ (sweet tooth) ಹೊಂದಿರುವ ಜನರು ರುಚಿಕರವಾದ ಕಪ್ ಕೇಕ್ ತಿನ್ನದಿರುವುದು ಅಥವಾ ದೊಡ್ಡ ಕೇಕ್ ತುಂಡಿನಿಂದ ದೂರವಿರುವುದು ಎಷ್ಟು ಕಷ್ಟ ಅನ್ನೋದು ಗೊತ್ತು. ಸ್ವೀಟ್ ಇಷ್ಟ ಪಡೋದು ತಪ್ಪಲ್ಲ ಆದರೆ ಸಕ್ಕರೆಯನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ ಏಕೆಂದರೆ ಇದು ಆರೋಗ್ಯಕರ ಆಹಾರ ಅಲ್ಲ.
ಸಕ್ಕರೆ ಮತ್ತು ತೂಕ ಹೆಚ್ಚಳವು (Weight Gain) ನೇರವಾಗಿ ಒಂದಕ್ಕೊಂದು ಸಂಬಂಧಿಸಿದೆ ಅನ್ನೋದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಸೋಡಾಗಳು, ತಂಪು ಪಾನೀಯಗಳು, ಕೋಲಾಗಳು ಮತ್ತು ಇತರ ಸಿಹಿ ಪಾನೀಯಗಳು ಫ್ರಕ್ಟೋಸ್ನಿಂದ ತುಂಬಿರುತ್ತವೆ, ಇದು ಒಂದು ರೀತಿಯ ಸರಳ ಸಕ್ಕರೆಯಾಗಿದ್ದು, ಇದು ಆಹಾರದ ಹಸಿವನ್ನು ಹೆಚ್ಚಿಸುತ್ತದೆ. ಇದು ಮಾತ್ರವಲ್ಲ, ಇದನ್ನ ಹೆಚ್ಚಾಗಿ ಸೇವಿಸೋದ್ರಿಂದ ದೇಹದಲ್ಲಿ ಕೊಬ್ಬು ಬೆಳೆಯುತ್ತೆ, ಅಷ್ಟೆ ಯಾಕೆ ಇದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ.
ಹೆಚ್ಚು ಹೆಚ್ಚು ಸಿಹಿ ತಿನ್ನೋದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಅನ್ನೋದನ್ನು ತಿಳಿಯೋಣ :
ಹೃದ್ರೋಗಗಳ ಅಪಾಯ ಹೆಚ್ಚು (heart problem) : ಸಕ್ಕರೆ ಅಧಿಕವಾಗಿರುವ ಆಹಾರವು ಬಹಳಷ್ಟು ಕಾಯಿಲೆಗಳಿಗೆ ಸಂಬಂಧಿಸಿದೆ, ಅವುಗಳಲ್ಲಿ ಒಂದು ಹೃದ್ರೋಗ. ಅಧಿಕ ಸಕ್ಕರೆ ಮಟ್ಟವು ಬೊಜ್ಜು ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ರಕ್ತದೊತ್ತಡವನ್ನು (Blood Pressure) ಹೆಚ್ಚಿಸುತ್ತದೆ. ಇವೆಲ್ಲವೂ ಹೃದ್ರೋಗಗಳಿಗೆ ಅಪಾಯಕಾರಿ ಅಂಶಗಳಾಗಿವೆ.
ಮೊಡವೆ (Acne): ಸಕ್ಕರೆಯು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು, ಇದು ಹೆಚ್ಚುವರಿ ಆಂಡ್ರೊಜೆನ್ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ.
ಟೈಪ್ 2 ಮಧುಮೇಹ ಅಪಾಯ (Type 2 diabetes): ಅನಾದಿ ಕಾಲದಿಂದಲೂ ಅತಿಯಾದ ಸಕ್ಕರೆ ಸೇವನೆಯು ಟೈಪ್ 2 ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ದೇಹದ ಕೊಬ್ಬು ಹೆಚ್ಚಾಗುತ್ತದೆ, ಇವೆರಡೂ ಮಧುಮೇಹಕ್ಕೆ ಅಪಾಯಕಾರಿ ಅಂಶಗಳಾಗಿವೆ.
ನಿಮ್ಮನ್ನು ಕ್ಯಾನ್ಸರ್ ಪೀಡಿತರನ್ನಾಗಿ ಮಾಡಬಹುದು (cancer): ಎಚ್ಚರ! ನೀವು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ತಿನ್ನುವ ಚಾಕೊಲೇಟ್ ನಿಂದ, ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಹೆಚ್ಚಿನ ಸಕ್ಕರೆ ಸೇವನೆಯು ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ಗೆ ಕಾರಣವಾಗಬಹುದು
ನೀವು ಸಿಹಿ ತಿನಿಸುಗಳನ್ನು ತಿನ್ನಲೇ ಬೇಡಿ ಎಂದು ನಾವು ಖಂಡಿತವಾಗಿಯೂ ಹೇಳೊದಿಲ್ಲ ಆದರೆ ಸಿಹಿ ಆಹಾರದ ಬಗ್ಗೆ ಗಮನ ಇರಲಿ. ಚಾಕೊಲೇಟ್ ಪೇಸ್ಟ್ರಿಯನ್ನು ನೀವು ಭಯ ಇಲ್ಲದೇ ತಿನ್ನಬಹುದು ಆದರೆ ಸಕ್ಕರೆಯನ್ನು ಮಿತವಾಗಿ ತಿನ್ನುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಸರಿಯಾದ ವ್ಯಾಯಾಮದೊಂದಿಗೆ ಸಮತೋಲನಗೊಳಿಸಿ ಮತ್ತು ಯಾವಾಗಲೂ ಹೈಡ್ರೇಟ್ ಆಗಿರಿ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.