Asianet Suvarna News Asianet Suvarna News

Winter Food: ಚಳಿಗಾಲದಲ್ಲಿ ಸೇವಿಸಲು ಆಯುರ್ವೇದ ಶಿಫಾರಸು ಮಾಡಿರುವ ಆಹಾರಗಳು

ಚಳಿಗಾಲ (Winter)ದಲ್ಲಿ ಎಲ್ರಿಗೂ ಬಜ್ಜಿ, ಬೋಂಡಾ, ಪಕೋಡಾ ಅಂತ ಕರಿದ ತಿಂಡಿಗಳನ್ನೆಲ್ಲ ತಿನ್ತಾ ಇರ್ಬೇಕು ಅನ್ಸುತ್ತೆ. ಹುಷಾರು ತಪ್ಪಿದಾಗಲೊಮ್ಮೆ ಮಾತ್ರ ಯಾಕೆ ಬೇಕಿತ್ತಪ್ಪಾ ಇಂಥಾ ಫುಡ್ (Food) ಅಂತನಿಸೋದು ಸುಳ್ಳಲ್ಲ..ಹಾಗಿದ್ರೆ ಚಳಿಗಾಲದಲ್ಲಿ ತಿನ್ನೋಕೆ ಸೂಕ್ತವಾದ ಆಹಾರಗಳು ಯಾವೆಲ್ಲಾ..?
 

Foods to be consumed in winters recommended by Ayurveda
Author
Bengaluru, First Published Dec 20, 2021, 3:36 PM IST

ಚಳಿಗಾಲ ಬಂದ್ರೆ ಸಾಕು ಆಗೊಮ್ಮೆ ಈಗೊಮ್ಮೆ ಏನಾದ್ರೂ ತಿನ್ತಾ ಇರ್ಬೇಕು ಅಂತ ಪ್ರತಿಯೊಬ್ಬರಿಗೂ ಅನ್ಸುತ್ತೆ. ಹೀಗಾಗಿಯೇ ಕೆಲವೊಬ್ಬರು ದಿನದಲ್ಲಿ ಐದಾರು ಸಾರಿ ಟೀ, ಕಾಫಿ ಕುಡಿಯುತ್ತಾರೆ. ಬಜ್ಜಿ, ಬೋಂಡಾ, ಪಕೋಡಾಗಳಂತೂ ಈ ಸೀಸನ್‌ಗೆ ಇರ್ಲೇಬೇಕು. ಬಿಸಿ ಬಿಸಿಯಾಗಿ ಚಿಕನ್ ಫ್ರೈ, ಎಗ್ ಬೋಂಡಾ ಮಾಡಿ ತಿನ್ನೋರು ಇದ್ದಾರೆ. ಅದೆಲ್ಲಾ ಸರಿ, ಆದ್ರೆ ಚಳಿಗಾಲದಲ್ಲಿ ಜ್ವರ, ಶೀತ, ಕೆಮ್ಮು, ನೆಗಡಿ ಕಾಟನೂ ಜಾಸ್ತಿ ಇರುತ್ತೆ. ಹೀಗಾಗಿ ಹುಷಾರು ತಪ್ಪಿದಾಗಲೆಲ್ಲಾ ಗಂಜಿ ಕುಡಿಯೋದು ತಪ್ಪಿದ್ದಲ್ಲ. ಹೀಗಿದ್ದಾಗ ಇಷ್ಟೆಲ್ಲಾ ತಾಪತ್ರಯ ಯಾಕೆ, ಚಳಿಗಾಲಕ್ಕೆ ಸೂಟ್ ಆಗೋ ಫುಡ್ ಅನ್ನು ತಿನ್ನೋದೆ ಬೆಸ್ಟ್ ಅಲ್ವಾ..? ಹಾಗಾದ್ರೆ ಚಳಿಗಾಲದಲ್ಲಿ ಸೇವಿಸಲು ಆಯುರ್ವೇದ ಶಿಫಾರಸು ಮಾಡಿರುವ  ಆಹಾರಗಳು ಯಾವೆಲ್ಲಾ..

ಬೆಲ್ಲ (Jaggery)

ಚಳಿಗಾಲದಲ್ಲಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಉತ್ತಮ. ಕಾಫಿ, ಟೀಗಳಲ್ಲಿ ಕಬ್ಬಿನಿಂದ ತಯಾರಿಸಿದ ಬೆಲ್ಲದ ಬಳಕೆ ದೇಹದೊಳಗೆ ಶಾಖವನ್ನು ಉಂಟುಮಾಡುತ್ತದೆ. ಬೆಲ್ಲದ ಸೇವನೆ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Side effects of peas : ಚಳಿಗಾಲದಲ್ಲಿ ಬಟಾಣಿ ಅತಿಯಾದ ಸೇವನೆಯಿಂದ ಅನಾರೋಗ್ಯ

ತುಪ್ಪದೊಂದಿಗೆ ಕಿಚಡಿ (Khichdi with ghee)

ಭಾರತೀಯ ಪಾಕಪದ್ಧತಿಯಲ್ಲಿ ಪುರಾತನ ಕಾಲಗಳಿಂದಲೂ ಅಳವಡಿಸಿಕೊಂಡಿರುವ ಆಹಾರ ಇದಾಗಿದೆ. ತುಪ್ಪದೊಂದಿಗೆ ಕಿಚಡಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಕಾರಣಕ್ಕಾಗಿಯೇ ಯಾರಿಗಾದರೂ ಹುಷಾರಿಲ್ಲದಿದ್ದಾಗ ಸ್ವಲ್ಪ ಹಸುವಿನ ತುಪ್ಪದೊಂದಿಗೆ ಕಿಚಡಿಯನ್ನು ತಿನ್ನಲು ಸಲಹೆ ನೀಡುತ್ತಾರೆ. ಈ ಅಕ್ಕಿ, ಧಾನ್ಯ, ತರಕಾರಿಗಳ ಸಂಯೋಜನೆಯು ಆಹಾರ ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ. ಪ್ರೋಟೀನ್-ಭರಿತವಾಗಿರುವ ಕಾರಣ ಆರೋಗ್ಯಕ್ಕೂ ಉತ್ತಮ.

ಎಳ್ಳು ಬೀಜಗಳು (Sesame seeds)

ಎಳ್ಳು ನೈಸರ್ಗಿಕವಾಗಿ ಉತ್ತಮ ಕೊಬ್ಬಿನಾಂಶದಿಂದ ಕೂಡಿದ್ದು, ಚಳಿಗಾಲದಲ್ಲಿ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ. ಎಳ್ಳು ಬೀಜಗಳು ತಾಮ್ರ, ಕಬ್ಬಿಣ, ಸತು ಮತ್ತು ವಿವಿಧ ಜೀವಸತ್ವಗಳಲ್ಲಿ ಸಮೃದ್ಧವಾಗಿವೆ.  ಚಳಿಗಾಲದಲ್ಲಿ ಇವುಗಳ ಸೇವನೆ ಜ್ವರ ಬರದಂತೆ ತಡೆಯುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿಯೇ ಚಳಿಗಾಲದಲ್ಲಿ ತಯಾರಿಸುವ ಹೆಚ್ಚಿನ ಸಿಹಿತಿಂಡಿಗಳಲ್ಲಿ ಎಳ್ಳನ್ನು ಸೇರಿಸುತ್ತಾರೆ.

ತರಕಾರಿಗಳು (Green leafy vegetables)

ಚಳಿಗಾಲದಲ್ಲಿ ಶೀತ ಮತ್ತು ಜ್ವರದಿಂದ ದೂರವಿರಲು ಹೆಚ್ಚುವರಿ ರಕ್ಷಣೆಯ ಅಗತ್ಯವಿದೆ. ಹೀಗಾಗಿ, ಚಳಿಗಾಲದಲ್ಲಿ ಪಾಲಕ್, ಮೆಂತೆ, ಹರಿವೆ ಮುಂತಾದ ಸೊಪ್ಪು ತರಕಾರಿಗಳನ್ನು ಹೆಚ್ಚೆಚ್ಚು ಅಡುಗೆಯಲ್ಲಿ ಬಳಸಬೇಕು. ತರಕಾರಿಗಳು ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ.

ಗೋಲ್ಡನ್ ಹಾಲು (Golden milk)

ಗೋಲ್ಡನ್ ಹಾಲು ಅಥವಾ ಅರಿಶಿನ ಹಾಲು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾಗಿರುವ ಶಾಖವನ್ನು ಒದಗಿಸುತ್ತದೆ.  ಅಜೀರ್ಣ, ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ಪಡೆಯಲು ಮಲಗುವ ವೇಳೆಗೆ ಈ ಹಾಲನ್ನು ಕುಡಿಯಲು ಹಿರಿಯರು ಹೇಳುತ್ತಾರೆ.

ಅ...ಕ್ಷೀ! ಚಳಿಗಾಲ ಶುರುವಾಯ್ತು.. ಕೆಮ್ಮು, ನೆಗಡಿ ಜೋರಾಯ್ತು, ಪಾರಾಗಲು ಬೆಸ್ಟ್‌ ಟಿಪ್ಸ್ ಇಲ್ಲಿದೆ!

ಚಿಕನ್ ಸೂಪ್ (Chicken soup)

ತಂಪಾದ ಚಳಿಗಾಲದಲ್ಲಿ, ಚಿಕನ್ ಸೂಪ್ ಬೌಲ್ ಮೈ ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ. ದೇಹದ ಶಾಖ ಕಡಿಮೆಯಾಗದಂತೆ ನೋಡಿಕೊಳ್ಳಲು ಚಳಿಗಾಲದಲ್ಲಿ ಚಿಕನ್ ಸೂಪ್ ಸೇವನೆ  ಉತ್ತಮವಾಗಿದೆ. ಈ ಸೂಪ್ ತಯಾರಿಕೆಯು ಎಲ್ಲಾ ರೀತಿಯ ಮಸಾಲೆಗಳನ್ನು ಹೊಂದಿರುತ್ತದೆ. ಹೀಗಾಗಿ ಬಾಯಿಗೂ ರುಚಿ, ಆರೋಗ್ಯಕ್ಕೂ ಉತ್ತಮ.

ಗಿಡಮೂಲಿಕೆಯ ಹಸಿರು ಚಹಾ (Herbal green tea)

ಚಳಿಗಾಲದಲ್ಲಿ ತಂಪಾದ ವಾತಾವರಣದಿಂದ ರಕ್ಷಣೆ ಪಡೆಯಲು ಎಲ್ಲರೂ ಆಗೊಮ್ಮೆ ಈಗೊಮ್ಮೆ ಟೀ, ಕಾಫಿ ಕುಡಿಯುತ್ತಿರುತ್ತಾರೆ. ಇದರ ಬದಲು ಇತರ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಚಳಿಗಾಲದಲ್ಲಿ ಬೆಸ್ಟ್. ತುಳಸಿ, ಶುಂಠಿ, ಲವಂಗ ಮೊದಲಾದವುಗಳನ್ನು ಸೇರಿಸಿ ಮಾಡಿದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಚಳಿಯಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ದಿನಕ್ಕೆ ಎರಡು ಬಾರಿ ಈ ಬಿಸಿ ಪಾನೀಯವನ್ನು ಸೇವಿಸಬಹುದು.

Follow Us:
Download App:
  • android
  • ios