ಎಗ್ ಪಾನಿಪುರಿ ವಿಡಿಯೋ ವೈರಲ್; ಏನೆಲ್ಲಾ ಅವಾಂತರ ಮಾಡ್ತೀರಪ್ಪಾ ಕ್ಯಾಕರಿಸಿ ಉಗಿದ ನೆಟ್ಟಿಗರು!
ಪಾನಿಪುರಿ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತದೆ. ಪುಟಾಣಿ ಪೂರಿಗಳು, ಇದಕ್ಕೆ ಆಲೂಗಡ್ಡೆ, ಬಟಾಣಿ, ಮಸಾಲೆ ಸೇರಿಸಿದ ಸ್ಟಫಿಂಗ್. ಇದನ್ನು ಖಾರ, ಸ್ವೀಟ್ ಪಾನಿಯಲ್ಲಿ ಅದ್ದಿ ತಿನ್ನೋದೆ ಚೆಂದ ಅಲ್ವಾ? ಈ ನಾರ್ಮಲ್ ಪಾನಿಪುರಿ ಓಕೆ, ಆದ್ರೆ ನೀವು ಎಗ್ ಪಾನಿಪುರಿ ಟ್ರೈ ಮಾಡಿದ್ದೀರಾ?
ಫೇವರಿಟ್ ಇಂಡಿಯನ್ ಸ್ಟ್ರೀಟ್‌ಫುಡ್‌ಗಳ ಬಗ್ಗೆ ಮಾತನಾಡಲು ಹೊರಟರೆ ಪಾನಿಪುರಿ ಖಂಡಿತವಾಗಿಯೂ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಎಲ್ಲಾ ಕಡೆಯೂ ಸುಲಭವಾಗಿರುವ ಈ ಸ್ಟ್ರೀಟ್‌ಫುಡ್ ಜನರ ನೆಚ್ಚಿನ ಬೀದಿ ಆಹಾರಗಳಲ್ಲಿ ಒಂದಾಗಿದೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ, ಪ್ರತಿಯೊಬ್ಬರೂ ಪಾನಿಪುರಿಯನ್ನು ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತದೆ. ಪುಟಾಣಿ ಪೂರಿಗಳು, ಇದಕ್ಕೆ ಆಲೂಗಡ್ಡೆ, ಬಟಾಣಿ, ಮಸಾಲೆ ಸೇರಿಸಿದ ಸ್ಟಫಿಂಗ್. ಇದನ್ನು ಖಾರ, ಸ್ವೀಟ್ ಪಾನಿಯಲ್ಲಿ ಅದ್ದಿ ತಿನ್ನೋದೆ ಚೆಂದ ಅಲ್ವಾ? ಈ ನಾರ್ಮಲ್ ಪಾನಿಪುರಿ ಓಕೆ ಆದ್ರೆ ನೀವು ಎಗ್ ಪಾನಿಪುರಿ ಟ್ರೈ ಮಾಡಿದ್ದೀರಾ?
ಎಗ್ ಪಾನಿಪುರೀನಾ ಅಂತ ಗಾಬರಿಯಾಗ್ಬೇಡಿ. ನೀವು ಕೇಳ್ತಾ ಇರೋದು ನಿಜಾನೇ. ಎಲ್ಲಾ ಕಡೆ ಫುಡ್ ಎಕ್ಸಪರಿಮೆಂಟ್ ನಡೆಯುತ್ತಿರುವ ಈ ದಿನಗಳಲ್ಲಿ ಯಾವುದೇ ಆಹಾರವನ್ನು ವಿಚಿತ್ರವಾದ ಸ್ಥಿತಿಯಲ್ಲಿ ನೋಡಿದರೆ ಆಶ್ಚರ್ಯವೇನಿಲ್ಲ. ಹಾಗೆಯೇ ಸದ್ಯ ಎಗ್ ಪಾನಿಪುರಿ ಎಲ್ಲೆಡೆ ವೈರಲ್ ಆಗ್ತಿದೆ. ಬೀದಿಬದಿ ವ್ಯಾಪಾರಿಯೊಬ್ಬರು ಈ ಹೊಸ ಎಗ್ ಪಾನಿಪುರಿ ಟ್ರೈ ಮಾಡಿದ್ದಾರೆ. ಆದ್ರೆ ವಿಚಿತ್ರ ಅಂದ್ರೆ ಇದರಲ್ಲಿ ಪಾನಿಪುರಿಯೇ ಇಲ್ಲ.
ಮೊಸರು ಗುಲಾಬ್ ಜಾಮೂನ್, ಫಾಂಟಾ ಮ್ಯಾಗಿ… ಏನೀ ವಿಚಿತ್ರ ಕಾಂಬಿನೇಷನ್ ಸ್ನ್ಯಾಕ್ಸ್?
ಸೋಷಿಯಲ್ ಮೀಡಿಯಾದಲ್ಲಿ ಎಗ್ ಪಾನಿಪುರಿ ಮಾಡೋ ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಎಗ್ ಪಾನಿಪುರಿ ಮಾಡೋ ವಿಡಿಯೋ ವೈರಲ್ ಆಗಿದೆ. ಕ್ಲಿಪ್ ಅನ್ನು ಜನಕ್ ಬರ್ಡೋಲಿಯಾ ಎಂಬ ಇನ್‌ಸ್ಟಾಗ್ರಾಮ್ ಫುಡ್ ಬ್ಲಾಗರ್ ಇದನ್ನು ಹಂಚಿಕೊಂಡಿದ್ದಾರೆ. ಸೂರತ್ ಮೂಲದ ಬ್ಲಾಗರ್, 'ನಿಮ್ಮ ಪಾನಿಪುರಿ ಪಾಲುದಾರರೊಂದಿಗೆ ಟ್ಯಾಗ್ ಮಾಡಿ/ಹಂಚಿಕೊಳ್ಳಿ"' ಎಂಬ ಶೀರ್ಷಿಕೆಯೊಂದಿಗೆ (Heading) ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವ್ಯಾಪಾರಿ ಮೊದಲಿಗೆ ಎಲ್ಲೋ ಇಲ್ಲದ ಬೇಯಿಸಿದ ಮೊಟ್ಟೆಯ ಬಿಳಿ ಅರ್ಧ ಭಾಗಕ್ಕೆ ಟೊಮೆಟೊ ಕೆಚಪ್ ಮತ್ತು ಕೆನೆ ಸೇರಿಸುತ್ತಾನೆ. ನಂತರ, ಅದಕ್ಕೆ ತುರಿದ ಚೀಸ್ ಹಾಕಿ, ಮೇಲಿನಿಂದ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸುತ್ತಾನೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ 2.2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 69,700 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ನೆಟ್ಟಿಗರು ಈ ವಿಚಿತ್ರ ಆಹಾರವನ್ನು (Weird food) ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು. 'ಇದೆಂಥಾ ಅಸಹ್ಯ ಆಹಾರ' ಎಂದು ಹೀಗಳೆದಿದ್ದಾರೆ.
Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?
ಯಾಕೆ ಆಹಾರ ಹಾಳ್ ಮಾಡ್ತೀರಿ ಎಂದು ಛೀಮಾರಿ ಹಾಕಿದ ನೆಟ್ಟಿಗರು
ಇನೊಬ್ಬರು, 'ಇದರಲ್ಲಿ ಪಾನಿಪುರಿಯೇ ಇಲ್ಲ ಮತ್ಯಾಕೆ ಇದಕ್ಕೆ ಎಗ್ ಪಾನಿಪುರಿಯೆಂಬ ಹೆಸರಿದೆ' ಎಂದು ಪ್ರಶ್ನಿಸಿದ್ದಾರೆ. ಮೂರನೇ ಬಳಕೆದಾರರು ಇನ್‌ಸ್ಟಾದಲ್ಲಿ 'ಡಿಸ್‌ಲೈಕ್ ಬಟನ್' ಇಡುವಂತೆ ಕೋರಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಬೀದಿಬದಿಯ ವ್ಯಾಪಾರಿಗಳೇ, ಯಾಕೆ ನೀವು ಎಲ್ಲರ ನೆಚ್ಚಿನ ಪಾನೀಪುರಿಯ ಹಿಂದೆ ಬಿದ್ದಿದ್ದೀರಿ, ಯಾಕೆ ಅದನ್ನು ಹಾಳು ಮಾಡುತ್ತೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಬಾಳೆಹಣ್ಣು (Banana) ಬಳಸಿ ಪಾನಿಪುರಿ ಮಾಡೋ ವಿಡಿಯೋ ವೈರಲ್ ಆಗಿತ್ತು. ಪಾನಿಪುರಿಗೆ ಆಲೂಗಡ್ಡೆಯ (Potato) ಬದಲು ಬಾಳೆಹಣ್ಣು ಸೇರಿಸಿ ಕೊಡ್ತಿರೋ ವಿಡಿಯೋ ವೈರಲ್ ಆಗಿತ್ತು ಟ್ವಿಟರ್ ಬಳಕೆದಾರ ಮೊಹಮ್ಮದ್ ಫ್ಯೂಚರ್‌ವಾಲಾ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ತಮ್ಮ ಗ್ರಾಹಕರಿಗೆ (Customers) 'ಬಾಳೆಹಣ್ಣು ಪಾನಿ ಪುರಿ' ಸರ್ವ್ ಮಾಡಿದ್ದಾರೆ. ಬೀದಿಬದಿ ವ್ಯಾಪಾರಿ ಪಾನಿಪುರಿ ಸ್ಟಫಿಂಗ್‌ಗೆ ಬೇಯಿಸಿದ ಆಲೂಗಡ್ಡೆಯನ್ನು ಬಳಸುವ ಬದಲು ಬಾಳೆಹಣ್ಣನ್ನು ಬಳಸಿದ್ದಾರೆ.