ತಮಾಷೆಗೆಂದು ಅಪರಿಚಿತರ ಮದ್ವೆಗೆ ಹೋಗಿ ಊಟ ಮಾಡದಿರೀ ಜೋಕೆ... ಇಲ್ಲೇನಾಯ್ತು ನೋಡಿ

ಮದುವೆ ಮನೆಗೆ ಹೋಗಿ ಭರ್ಜರಿಯಾಗಿ ಊಟ ಮಾಡಿದವ ಅಲ್ಲಿ ಮದುವೆ ಮನೆ ಮಂದಿಗೆ ಸಿಕ್ಕಿ ಬಿದ್ದಿದ್ದು, ಮದ್ವೆ ಮನೆಯವರು ಆತನಿಗೆ ಪಾತ್ರ ತೊಳೆಯುವ ಶಿಕ್ಷೆ ನೀಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿ.

dont go for unknown persons wedding for eating, see here what happen to MBA student in Bhopal who went marriage for fun and food akb

ಭೋಪಾಲ್: ಕೆಲವರು ತಮಾಷೆಗಾಗಿ ಮತ್ತೆ ಕೆಲವರು ಮದುವೆಯಲ್ಲಿರುವ ಭೂರಿ ಬೋಜನದ ರುಚಿ ಸವಿಯಲು, ಅಪರಿಚಿತರ ಮದುಗೆ ಹೋಗಿ ಅವರ ನೆಂಟರು ಬಂಧುಗಳಂತೆ ಅಲ್ಲಿ ಊಟ ಮಾಡಿ ಬರುವವರಿದ್ದಾರೆ. ನಗರದ ಮದುವೆಗಳನ್ನು ಬಹುತೇಕ ಇವೆಂಟ್ ಮ್ಯಾನೇಜ್‌ಮೆಂಟ್‌ನವರೇ ನಡೆಸಿ ಕೊಡುವುದರಿಂದ ಅನೇಕರಿಗೆ ಅಪರಿಚಿತರು ಬಂದರು ತಿಳಿಯುವುದಿಲ್ಲ. ಈ ವಿಚಾರವನ್ನೇ ಬಂಡವಾಳವಾಗಿಸಿಕೊಂಡು ಮದುವೆ ಮನೆಗೆ ಹೋಗಿ ಭರ್ಜರಿಯಾಗಿ ಊಟ ಮಾಡಿದವ ಅಲ್ಲಿ ಮದುವೆ ಮನೆ ಮಂದಿಗೆ ಸಿಕ್ಕಿ ಬಿದ್ದಿದ್ದು, ಮದ್ವೆ ಮನೆಯವರು ಆತನಿಗೆ ಪಾತ್ರ ತೊಳೆಯುವ ಶಿಕ್ಷೆ ನೀಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿ. ಅಲ್ಲದೇ ಇಲ್ಲಿ ಸಿಕ್ಕಿ ಬಿದ್ದವ ಓರ್ವ ಎಂಬಿಎ ವಿದ್ಯಾರ್ಥಿ.

ಸಾಮಾನ್ಯವಾಗಿ ಭಾರತೀಯ ಮದುವೆಗಳು (Indian Wedding)  ಅಲ್ಲಿ ಉಣಬಡಿಸುವ ತರಹೇವಾರಿ ತಿನಿಸುಗಳ ಕಾರಣಕ್ಕೆ ಫೇಮಸ್ ಆಗಿದೆ. ಮದುವೆ ನೋಡುವುದಕ್ಕೆ ಹೋಗುವುದಕ್ಕಿಂತ ಹೆಚ್ಚು ಜನ ಮದುವೆ ಮನೆಯಲ್ಲಿರುವ ಭೋಜನದ ಆಸೆಯಿಂದ ಹೋಗುತ್ತಾರೆ. ಮದುವೆ ಮನೆಗೆ ವಧುವರರ (Bride Groom) ಕುಟುಂಬದವರು, ಆತ್ಮೀಯರು, ನೆಂಟರು, ಬಿಟ್ಟರೆ ಉಳಿದವರೆಲ್ಲರೂ ಬರುವುದು ಸರಿಯಾಗಿ ಊಟದ ಸಮಯಕ್ಕೆ. ಇಂತಹ ಅಪರಿಚಿತ ಮದುವೆಯಲ್ಲಿ ಹೋಗಿ ಊಟ ಮಾಡುವ ಚಾಳಿ ಕೆಲವರಿಗಿದೆ. ಕೆಲವರು ಇದನ್ನು ತಮಾಷೆಗಾಗಿಯೂ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ಎಂಬಿಎ ವಿದ್ಯಾರ್ಥಿ (MBA Student) ಹೀಗೆ ಅಪರಿಚಿತರ ಮದುವೆಯಲ್ಲಿ ಊಟ ಮಾಡಲು ಹೋಗಿ ತಗಲಾಕೊಂಡಿದ್ದಾನೆ. 

ಊಟಕ್ಕೆ ಬಂದವನನ್ನು ಸುಮ್ಮನೆ ಬಿಡದ ಮದುವೆ ಮನೆಯವರು ಆತನಿಂದ ಚೆನ್ನಾಗಿ ಪಾತ್ರೆ ತೊಳೆಸಿ ಕಳುಹಿಸಿದ್ದಾರೆ. ಅಲ್ಲದೇ ಈ ಘಟನೆಯನ್ನು ವಿಡಿಯೋ ಕೂಡ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದೀಗ ವೈರಲ್ ಆಗಿದೆ. ಜಬಲ್ಪುರ (Jabalpur) ಮೂಲದ ಯುವಕ ಮಧ್ಯಪ್ರದೇಶದ (Madhya Pradesh)  ಭೋಪಾಲ್‌ಗೆ (Bhopal) ಎಂಬಿಎ ಶಿಕ್ಷಣಕ್ಕಾಗಿ ಬಂದಿದ್ದ.

ಮನೆಯಿಂದ ಬುತ್ತಿ ತಂದು ಶಿಕ್ಷಕರಿಗೆ ಬಾಳೆಲೆ ಭೋಜನ ಮಾಡಿಸಿದ ಶಿಷ್ಯರು!

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಯಾರೇ ಬಂದರೂ ಅವರು ಪರಿಚಿತರೇ ಇರಲಿ ಅಪರಿಚಿತರೇ ಇರಲಿ ಒಂದೊತ್ತು ಊಟ ಅಥವಾ ಬಾಯಾರಿಕೆ ಕೊಟ್ಟು ಕಳುಹಿಸುವ ಪದ್ಧತಿ ಇದೆ. ಆದರೆ ಇದು ಪಟ್ಟಣ, ಪ್ರತಿಯೊಂದಕ್ಕೂ ದುಬಾರಿ ಬೆಲೆ ನೀಡಿ ಕೊಂಡುಕೊಳ್ಳಬೇಕು. ಅದರ ನಡುವೆ ಮದುವೆಯ ಕಷ್ಟ ಬೇಡ ಎಂದು ಬಹುತೇಕರು ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ಇದರ ಹೊಣೆ ವಹಿಸುತ್ತಾರೆ. ಅವರೋ ಪ್ಲೇಟ್‌ ಲೆಕ್ಕದಲ್ಲಿ ಭೋಜನ ತಯಾರಿಸಿ ತಂದು ಅವರೇ ಮದುವೆ ಮನೆಯಲ್ಲಿ ಉಣ ಬಡಿಸುತ್ತಾರೆ. ಮದುವೆ ಮನೆಗೆ ಆಗಮಿಸುವ ಅಥಿತಿಗಳಿಗೂ ಲೆಕ್ಕವಿರುತ್ತದೆ. ಇಂತಹ ಪರಿಸ್ಥಿತಿ ಇರುವಾಗ ಹೀಗೆ ಅಪರಿಚಿತರು (Stranger) ಬಂದು ಭೋಜನ (Food) ಸವಿದು ತಗಲಾಕೊಂಡರೆ ಸುಮ್ಮನೇ ಬಿಡುತ್ತಾರೆಯೇ?

ರೈಲಿನಲ್ಲಿ ಸಿಕ್ಕ ಭೋಜನಕ್ಕೆ ಮನಸೋತ ಸಚಿವ: ನೆಟ್ಟಿಗರ ಅಸಮಾಧಾನ

ಒಟ್ಟಿನಲ್ಲಿ ಈ ವಿಡಿಯೋ ಅನೇಕರ ಮೊಗದಲ್ಲಿ ನಗು ಮೂಡಿಸುತ್ತಿದೆ. 1ನಿಮಿಷ 27 ಸೆಕೆಂಡ್‌ಗಳ ಈ ವಿಡಿಯೋವನ್ನು  7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕ್ಕುಕ್ಕುರುಗಾಲಲ್ಲಿ ಕುಳಿತು ಯುವಕ ಪಾತ್ರ ತೊಳೆಯುತ್ತಿರುವುದು ಕಾಣಿಸುತ್ತಿದೆ. ಆದರೆ ಆತನಿಂದ ಪಾತ್ರ ತೊಳೆಸಿಕೊಂಡಿದ್ದಕ್ಕೆ ವಿಡಿಯೋ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದುವೆ ಮನೆಗಳಲ್ಲಿ ಬಹಳಷ್ಟು ಆಹಾರ ವೇಸ್ಟ್ ಆಗುತ್ತದೆ. ಹೀಗಿರುವಾಗ ಒಬ್ಬ ಬಂದು ಆಹಾರ ತಿಂದಿದ್ದಕ್ಕೆ ಇಂತಹ ಶಿಕ್ಷೆ ಏಕೆ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. 

Ramanagara ವಾಸವಿ ಭೋಜನ ಸಂತೆ, ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳು ಬೊಂಬಾಟ್

ಪರಿಚಿತನೋ ಅಪರಿಚಿತನೋ ಆಹಾರ ನೀಡುವುದು ಭಾರತೀಯ ಸಂಸ್ಖೃತಿ. ಆದರೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಒಂದೊತ್ತು ಊಟ ಮಾಡಿದ್ದಕ್ಕೆ ಇಡೀ ಮದ್ವೆ ಮನೆ ಪಾತ್ರೆ ತೊಳೆಸಿದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. 

Latest Videos
Follow Us:
Download App:
  • android
  • ios