ರೈಲಿನಲ್ಲಿ ಸಿಕ್ಕ ಭೋಜನಕ್ಕೆ ಮನಸೋತ ಸಚಿವ: ನೆಟ್ಟಿಗರ ಅಸಮಾಧಾನ

ನಾಗಲ್ಯಾಂಡ್ ಶಾಸಕ ತೆಮ್ಜೆನ್ ಇಮ್ನಾ ಅವರು ಟ್ವಿಟ್ಟರ್‌ನಲ್ಲಿ ರೈಲಿನಲ್ಲಿ ನೀಡುವ ಆಹಾರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Nagaland Minister shares photos of dinner served in Train, netizens not accepted akb

ರೈಲು ಪ್ರಯಾಣ ಒಂದು ಸುಂದರವಾದ ಅನುಭವ.. ರೈಲಿನ ಕಿಟಕಿಗಳ ಪಕ್ಕ ಕುಳಿತುಕೊಂಡು ಬಿಸ್ಕೆಟ್ ತಿನ್ನುತ್ತಾ ಟೀ ಕಾಫಿ ಕುಡಿಯುತ್ತಾ, ಸುತ್ತಲಿನ ವಿಹಂಗಮ ನೋಟಗಳನ್ನು ನೋಡುವುದೇ ಒಂದು ಖುಷಿ. ಆದರೆ ರೈಲಿನ ಕೆಟರಿಂಗ್ ವ್ಯವಸ್ಥೆ ನಾವು ಕಲ್ಪಿಸಿಕೊಂಡಷ್ಟು ಖುಷಿ ನೀಡುವುದಿಲ್ಲ. ರೈಲಿನಲ್ಲಿ ಸಿಗುವ ಟೀ ಕಾಫಿ ಊಟ ಕೆಲವೊಮ್ಮ ಮನಸ್ಸಿನ ನೆಮ್ಮದಿ ಕೆಡಿಸುತ್ತವೆ. ಆದರೆ ಇತ್ತೀಚೆಗೆ ರೈಲಿನ ಆಹಾರ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಆಗಿದ್ದು, ಶುಚಿ ರುಚಿಯಾದ ಆಹಾರ ಸಿಗುತ್ತಿವೆ ಎಂದು ಕೆಲವು ರೈಲು ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದೇ ರೀತಿ ನಾಗಲ್ಯಾಂಡ್ ಶಾಸಕ ತೆಮ್ಜೆನ್ ಇಮ್ನಾ ಅವರು ಟ್ವಿಟ್ಟರ್‌ನಲ್ಲಿ ರೈಲಿನಲ್ಲಿ ನೀಡುವ ಆಹಾರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಆ ರೈಲಿನಲ್ಲಿ ಸಿಕ್ಕಿದ ಆಹಾರದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  

ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವರು ಆಗಿರುವ ತೆಮ್ಜೆನ್ ಇಮ್ನಾ ಅವರು, ತಮಗೆ ರೈಲಿನಲ್ಲಿ ನೀಡಿದ ಊಟದ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಅಸ್ಸಾಂನ (Assam) ಗುವಾಹಟಿಯಿಂದ (Guwahati)ನಾಗಲ್ಯಾಂಡ್‌ನ (Nagaland) ದಿಮಾಪುರ ನಗರಕ್ಕೆ (Dimapur) ರಾಜಧಾನಿ ರೈಲಿನಲ್ಲಿ ಸಂಚರಿಸುತ್ತಿದ್ದರು. ರೈಲಿನಲ್ಲಿ ಇವರಿಗೆ ನೀಡಿದ ಊಟದಲ್ಲಿ ಚಿಕನ್ ಕರ್ರಿ, ದಾಲ್‌, ಚಪಾತಿ, ಅನ್ನ ಅಂಬ್ಲೆಟ್‌, ಮೊಸರು ಹಾಗೂ ಉಪ್ಪಿನಕಾಯಿಯನ್ನು ನೀಡಲಾಗಿತ್ತು. ರೈಲಿನಲ್ಲಿ ನೀಡಿದ ಈ ಸುಂದರವಾದ ರಾತ್ರಿಯ ಭೋಜನಕ್ಕೆ ಸಂತಸ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ ನಾಗಲ್ಯಾಂಡ್ ಸಚಿವರು  ಈ ಭೋಜನದ ಫೋಟೋ ತೆಗೆದು ಕೇಂದ್ರ ರೈಲ್ವೆ ಸಚಿವ ಹಾಗೂ ರೈಲ್ವೆ ಸಚಿವಾಲಯಕ್ಕೆ ಟ್ಯಾಗ್‌ ಮಾಡಿ ಪೋಸ್ಟ್ ಮಾಡಿದ್ದಾರೆ. 

ಜೀವನವೊಂದು ಪ್ರಯಾಣ, ಪ್ರವಾಸವನ್ನು ಆನಂದಿಸಿ, ಆಹಾರವೇ ಜೀವನ (Food Life) ಹಾಗಾಗಿ ಎಂದಿಗೂ ಭೋಜನವನ್ನು ತಪ್ಪಿಸಿಕೊಳ್ಳಬೇಡಿ. ದಿಮಾಪುರದಿಂದ ಗುವಾಹಟಿಗೆ ಹೋಗುವ ವೇಳೆ ರಾಜಧಾನಿ ಎಕ್ಸ್‌ಪ್ರೆಸ್ (Rajadhani express) ರೈಲಿನಲ್ಲಿ ನೀಡಿದ ಸೊಗಸಾದ ಆಹಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ಟ್ವಿಟ್ಟರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸಾವಿರಾರು ಜನ ಈ ಟ್ವಿಟ್‌ನ್ನು ಲೈಕ್ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಆಹಾರದ ಗುಣಮಟ್ಟ (Food Quality) ಚೆನ್ನಾಗಿರುವುದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

Kitchen Tips : ಅಲ್ಯೂಮಿನಿಯಂ ಪಾತ್ರೆ ಬಳಸೋದೇ ಒಳ್ಳೇಯದಲ್ಲ, ಅದ್ರಲ್ಲೂ ಈ ಫುಡ್ ಮಾಡಲೇ ಬಾರದು!

ರೈಲ್ವೇ ಸೇವಾ ಕೂಡ  ತೆಮ್ಜೆನ್ ಇಮ್ನಾ ಅಲಾಂಗ್‌ (Temjen Imna Along) ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಸರ್, ನಿಮ್ಮ ಅಮೂಲ್ಯ ಸಮಯವನ್ನು ನಮಗೆ ಬರೆಯಲು ಉಳಿಸಿದ್ದಕ್ಕಾಗಿ ಧನ್ಯವಾದಗಳು. ಆದಾಗ್ಯೂ ನಿಮ್ಮ ಪ್ರತಿಕ್ರಿಯೆಯು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ನಮ್ಮ ತಂಡದ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬರೆದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ತೆಮ್ಜೆಮ್ ಇಮ್ನಾ  ರೈಲ್ವೇ ಸೇವೆಯ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ್ದು, ಅನೇಕರು ಈ ರೀತಿ ಆಹಾರ ನಮಗೆ ಸಿಕ್ಕಿಲ್ಲ ಎಂಧೂ ಕಾಮೆಂಟ್ ಮಾಡಿದ್ದಾರೆ. ದಯವಿಟ್ಟು ಅವರಿಗೆ ಉತ್ತರಿಸಿ. ನನ್ನ ಪಾಲಿಗೆ ತುಂಬಾ ಉತ್ತಮ ಸೇವೆ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಹುಶಃ ನೀವು ಎಸಿ ಭೋಗಿಯಲ್ಲಿ ಸಂಚರಿಸಿರಬೇಕು ಆ ಕಾರಣಕ್ಕೆ ನಿಮಗೆ ಉತ್ತಮವಾದ ಹಾಗೂ ರುಚಿಯಾದ ಭೋಜನ ಸಿಕ್ಕಿದೆ. ನಾನು ಇತ್ತೀಚೆಗೆ ಭೋಪಾಲ್ ಶತಾಬ್ಧಿಯಲ್ಲಿ (Bhopal Shatabdhi) ಸಂಚರಿಸಿದ್ದೆ. ಅಲ್ಲಿ ಅವರು ನನಗೆ ನೀಡಿದ ಆಹಾರ ಭಯಾನಕವಾಗಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಅವರು ನೀಡುತ್ತಿದ್ದ ಆಹಾರದ ಗುಣಮಟ್ಟ ತುಂಬಾ ಚೆನ್ನಾಗಿತ್ತು. ಬಹುಶಃ  ಮುಂದೆ ಅವರು ಅದನ್ನು ಸುಧಾರಿಸುವ ಭರವಸೆ ಇದೆ ಎಂದು ಕಾಮೆಂಟ್ ಮಾಡಿದ್ದರು.

National Nutrition Week: ಆರಂಭ ಉತ್ತಮವಾಗಿದ್ರೆ ಅನಾರೋಗ್ಯದ ಪ್ರಶ್ನೆ ಎಲ್ಲಿ?

ಮತ್ತೆ ಕೆಲವರು ಇಷ್ಟು ಸಣ್ಣ ಪ್ರಮಾಣದ ಆಹಾರ ನಿಮಗೆ ಸಾಕಾಗುತ್ತದೆಯೇ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ತೆಜ್ಮನ್ ಇಮ್ನಾ ಅವರು ತಮ್ಮ ಸ್ವಾರಸ್ಯಕರವಾದ ಹಾಸ್ಯಕ್ಕೆ ಹೆಸರುವಾಸಿಯಾಗಿದ್ದು, ಈ ತರಲೆ ಪ್ರಶ್ನೆಗೆ ಅವರು ಅಷ್ಟೇ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ನಾಗಲ್ಯಾಂಡ್ನ ಸಚಿವರು ಆಗಿರುವ ತೆಜ್ಮನ್ ಅವರು ತಮ್ಮ ಬಗ್ಗೆಯೇ ಹಾಸ್ಯ ಮಾಡಿಕೊಳ್ಳುವ ಮೂಲಕ ಇಂಟರ್‌ನೆಟ್‌ನಲ್ಲಿ ಆಗಾಗ ಸಂಚಲನ ಮೂಡಿಸುತ್ತಿರುತ್ತಾರೆ. 
 

Latest Videos
Follow Us:
Download App:
  • android
  • ios