ಕತ್ತರಿಸಿದ ಈರುಳ್ಳಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಈ ಡೇಂಜರಸ್ ಕಾಯಿಲೆ ಕಾಡ್ಬೋದು ಹುಷಾರ್‌!

ಕೆಲವು ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಏಕೆಂದರೆ ಈ ಆಹಾರಗಳು ವಿಷಕಾರಿಯಾಗಿ ನಮ್ಮ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತವೆ ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ನಾವು ದಿನನಿತ್ಯ ಅಡುಗೆಯಲ್ಲಿ ಬಳಸೋ ಈ ಪದಾರ್ಥನೂ ಸೇರಿದೆ. ಯಾವುದು ಅದು?

Do you keep chopped onions in the fridge, Beware of this disease Vin

ಇವತ್ತಿನ ಕಾಲದಲ್ಲಿ ಎಲ್ಲರೂ ಮನೆಯಲ್ಲಿ ಫ್ರಿಡ್ಜ್ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಯಾಕೆಂದರೆ ಇದು ಕಿಚನ್‌ನ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಇವುಗಳಲ್ಲಿ ಯಾವುದೇ ಹಣ್ಣುಗಳು, ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಬಹುದು. ಆದರೆ ಫ್ರಿಡ್ಜ್‌ನಲ್ಲಿ ಕೆಲವು ರೀತಿಯ ಆಹಾರ ಪದಾರ್ಥಗಳನ್ನು ಶೇಖರಿಸಬಾರದು ಎನ್ನುತ್ತಾರೆ ತಜ್ಞರು. ಹಲವರಿಗೆ ಬೇಯಿಸಿದ ಆಹಾರವನ್ನು ಎರಡರಿಂದ ಮೂರು ದಿನಗಳವರೆಗೆ ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸವಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಆಹಾರಗಳನ್ನು ಫ್ರಿಜ್‌ನಲ್ಲಿ ಇಡಲೇಬಾರದು. ಏಕೆಂದರೆ ಈ ಆಹಾರಗಳು ವಿಷಕಾರಿಯಾಗಿ ನಮ್ಮ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತವೆ ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ಕತ್ತರಿಸಿದ ಈರುಳ್ಳಿ ಸೇರಿವೆ. 

ರೆಫ್ರಿಜರೇಟರ್‌ನಲ್ಲಿ ನಾವು ಸಾಕಷ್ಟು ಆಹಾರ (Food)ವನ್ನು ಇಡುತ್ತೇವೆ. ಉಳಿದ ಅನ್ನ, ಸಾಂಬಾರ್, ಚಪಾತಿ, ರೋಟಿಗಳಿಂದ ತೊಡಗಿ ಹೊಸದಾಗಿ ಖರೀದಿಸಿದ ತರಕಾರಿಗಳವರೆಗೆ. ಆದರೆ ಕೆಲವು ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ವಿಷಕಾರಿಯಾಗಿ ಪರಿಣಮಿಸುತ್ತಾವೆ ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ಕತ್ತರಿಸಿದ ಈರುಳ್ಳಿ ಸೇರಿದೆ. ಕತ್ತರಿಸಿದ ಈರುಳ್ಳಿ (Onion)ಯನ್ನು ಫ್ರಿಡ್ಜ್ ನಲ್ಲಿಟ್ಟರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ರಾತ್ರಿ ಮಲಗುವಾಗ ಸಾಕ್ಸಲ್ಲಿ ತುಂಡು ಈರುಳ್ಳಿ ಹಾಕಿಟ್ರೆ ಎನು ಲಾಭ ಇಲ್ನೋಡಿ!

ಸೋಂಕು ಹರಡುತ್ತದೆ
ಕತ್ತರಿಸಿದ ಈರುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾದ ಸೋಂಕಿಗೆ (Bacteria) ಕಾರಣವಾಗಬಹುದು. ಇವುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು. ಇದಲ್ಲದೆ, ಕತ್ತರಿಸಿದ ಈರುಳ್ಳಿಯನ್ನು ಫ್ರಿಜ್‌ನಲ್ಲಿ ಇಡುವುದರಿಂದ ಕೆಟ್ಟ ವಾಸನೆ ಬರುತ್ತದೆ. ಆ ವಾಸನೆ ಫ್ರಿಜ್ ನಲ್ಲಿಟ್ಟ ಇತರ ಆಹಾರ ಪದಾರ್ಥಗಳಿಗೂ ಹರಡುತ್ತದೆ. ಪರಿಣಾಮವಾಗಿ, ತರಕಾರಿಯೂ ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ.

ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ
ಕತ್ತರಿಸಿದ ಈರುಳ್ಳಿ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಹಾಗಾಗಿ ಇವುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಈರುಳ್ಳಿ ಮೃದುವಾಗುತ್ತದೆ. ಹೆಚ್ಚಿನ ಆರ್ದ್ರತೆಗೆ ಒಡ್ಡಿಕೊಳ್ಳುವುದರಿಂದ ರೋಗಕಾರಕಗಳು ಅವುಗಳಿಗೆ ಅಂಟಿಕೊಳ್ಳುತ್ತವೆ. ಅಲ್ಲದೆ, ಈರುಳ್ಳಿಯ ಪೌಷ್ಟಿಕಾಂಶದ ಮೌಲ್ಯವೂ ಕಡಿಮೆಯಾಗುತ್ತದೆ. ಇವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತವೆ. ಕತ್ತರಿಸಿದ ಈರುಳ್ಳಿ ಫ್ರಿಜ್‌ನ ಶೀತ ತಾಪಮಾನದೊಂದಿಗೆ ಕೆಲಸ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಈ ಪ್ರತಿಯೊಂದು ಕ್ರಿಯೆಯು ಸಲ್ಫರ್ ಸಂಯುಕ್ತಗಳ ರಚನೆಗೆ ಕಾರಣವಾಗುತ್ತದೆ. ಏಕೆಂದರೆ ಈರುಳ್ಳಿಯಲ್ಲಿ ಸಲ್ಫರ್ ಇರುತ್ತದೆ. ಈ ಈರುಳ್ಳಿಯು ಅಡುಗೆಯನ್ನು ಕೆಟ್ಟ ವಾಸನೆ (Bad smell)ಯನ್ನು ನೀಡುತ್ತದೆ. 

ಹೀಗೆಲ್ಲಾ ಆಹಾರ ಪದಾರ್ಥಗಳನ್ನು ಫ್ರಿಜ್‌ನಲ್ಲಿಟ್ಟರೂ ಹಾಳಾಗೋದು ಗ್ಯಾರಂಟಿ!

ಈರುಳ್ಳಿ ಶೇಖರಿಸುವ ಸರಿಯಾದ ವಿಧಾನ ಯಾವುದು?
ಈರುಳ್ಳಿಯನ್ನು ಕತ್ತರಿಸಿ ಶೇಖರಿಸಿದಾಗ ಸಿಪ್ಪೆ ತೆಗೆಯುವುದು ಕೂಡ ಮತ್ತೊಂದು ಅಪಾಯ (Dangerous)ವನ್ನು ತಂದೊಡ್ಡಬಹುದು. ಈರುಳ್ಳಿ ಸಿಪ್ಪೆಯನ್ನು ತೆಗೆದಾಗ ಅದರಿಂದ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ಬ್ಯಾಕ್ಟೀರಿಯಾವನ್ನು ಆಕರ್ಷಿಸುವ ಮತ್ತು ಅವುಗಳ ಬೆಳವಣಿಗೆಗೆ ಕಾರಣವಾಗುವ ಪೋಷಕಾಂಶಗಳಾಗುತ್ತವೆ. 40 ಡಿಗ್ರಿ ಫ್ಯಾರನ್‌ಹೀಟ್ ಅಥವಾ 4.4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಫ್ರಿಜ್‌ನಲ್ಲಿ ಇಡುವುದು ಈರುಳ್ಳಿಯನ್ನು ಶೇಖರಿಸಲು ಉತ್ತಮ ಮಾರ್ಗವಾಗಿದೆ.

Latest Videos
Follow Us:
Download App:
  • android
  • ios