MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರೀಲ್ಸ್, ಫೋಟೋ ಹಾಕೋದಕ್ಕೇ ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ರಾ? ನಿವೇದಿತಾ ಗೌಡ ಹೇಳಿದ್ದೇನು ನೋಡಿ!

ರೀಲ್ಸ್, ಫೋಟೋ ಹಾಕೋದಕ್ಕೇ ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ರಾ? ನಿವೇದಿತಾ ಗೌಡ ಹೇಳಿದ್ದೇನು ನೋಡಿ!

'ನೀವು ಇಂಥ ಫೋಟೋ ಹಾಕಿದ್ದಕ್ಕೇ ಚಂದನ್ ಶೆಟ್ಟಿ ನಿಮ್ಮನ್ನ ಬಿಟ್ಟಿದ್ದು' ಅಂತ ಕಾಮೆಂಟ್ ಮಾಡ್ತಾರೆ. ಇದಕ್ಕೆ ಏನ್ ಹೇಳ್ತೀರಾ?' ಅನ್ನೋ ಪ್ರಶ್ನೆಗೆ ನಿವೇದಿತಾ ಗೌಡ ಕೊಟ್ಟ ಉತ್ತರ ಇದೀಗ ವೈರಲ್ ಆಗ್ತಿದೆ. ಹಾಗಿದ್ರೆ ನಿವೇದಿತಾ ಗೌಡ ಏನ್ ಹೇಳಿದ್ರು?

2 Min read
Author : Shriram Bhat
Published : Feb 11 2026, 02:57 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

'ನೀವು ಯಾವುದೇ ಪೋಸ್ಟ್ ಹಾಕಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್‌ ಬರ್ತವೆ. ಕೆಲವರು 'ನೀವು ಇಂಥ ಫೋಟೋ ಹಾಕಿದ್ದಕ್ಕೇ ಚಂದನ್ ಶೆಟ್ಟಿ (Chandan Shetty) ನಿಮ್ಮನ್ನ ಬಿಟ್ಟಿದ್ದು' ಅಂತ ಕಾಮೆಂಟ್ ಮಾಡ್ತಾರೆ. ಇದಕ್ಕೆ ಏನ್ ಹೇಳ್ತೀರಾ?' ಅನ್ನೋ ಪ್ರಶ್ನೆಗೆ ನಿವೇದಿತಾ ಗೌಡ (Niveditha Gowda) ಕೊಟ್ಟ ಉತ್ತರ ಇದೀಗ ವೈರಲ್ ಆಗ್ತಿದೆ. ಹಾಗಿದ್ರೆ ನಿವೇದಿತಾ ಗೌಡ ಕೊಟ್ಟ ಉತ್ತರವೇನು ನೋಡಿ..

26
Image Credit : Instagram

'ನನಗೆ ಚಂದನ್ ಶೆಟ್ಟಿ ಪರಿಚಯ ಆಗೋದಕ್ಕೂ ಮೊದಲೇ ನಾನು ರೀಲ್ಸ್ ಮಾಡ್ತಿದ್ದೆ, ಫೋಟೋಗಳನ್ನೂ ಪೋಸ್ಟ್ ಮಾಡ್ತಿದ್ದೆ.. ರೀಲ್ಸ್ ಮೂಲಕನೇ ನನಗೆ ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಅವಕಾಶ ಸಿಕ್ಕಿದ್ದು.. ಹೀಗಾಗಿ ಈ ಮಾತು ಸರಿಯಲ್ಲ. ಒಮ್ಮೆ ನಿಜ ಅಗಿದ್ರೂ ಕೂಡ ಈಗ ನಾನು ಅದಕ್ಕೆ ಏನೂ ಮಾಡೋಕೆ ಆಗಲ್ಲ. ಆದೆಲ್ಲಾ ಈಗ ಮುಗಿದ ಅಧ್ಯಾಯ.. ಅವೆಲ್ಲಾ ಘಟನೆಗಳಾಗಿ ಒಂದು ವರ್ಷದ ಮೇಲಾಯ್ತು. ಈಗ ಆ ಪ್ರಶ್ನೆಗೆ ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಏಕೆಂದರೆ ಅದೆಲ್ಲಾ ಈಗ ಮುಗಿದ ಕಥೆ' ಎಂದು ನಿವೇದಿತಾ ಗೌಡ ಉತ್ತರ ಕೊಟ್ಟಿದ್ದಾರೆ.

Related Articles

Related image1
ಬಂಧನ ಸಿನಿಮಾ ಮಾಡೋಕೆ ವಿಷ್ಣುವರ್ಧನ್‌ಗೆ ಇಷ್ಟವೇ ಇರಲಿಲ್ಲವಂತೆ; ಆದ್ರೆ ಆಮೇಲೆ ನಟಿಸಿದ್ದು ಹೇಗೆ?
Related image2
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
36
Image Credit : Instagram

ಹೌದು, ನಿವೇದಿತಾ ಗೌಡ ಅವರು ಜನರ ಕಣ್ಣಿಗೆ ಬಿದ್ದಿದ್ದೇ ರೀಲ್ಸ್ ಮೂಲಕ. ಜೊತೆಗೆ, ತಮ್ಮ ಗ್ಲಾಮರಸ್ ಫೋಟೋಗಳ ಮೂಲಕ. ಬಿಗ್ ಬಾಸ್ ಮೂಲಕ ಚಂದನ್ ಶೆಟ್ಟಿ ಪರಿಚಯ, ಸ್ನೇಹ, ಪ್ರೇಮ ಹಾಗೂ ಮದುವೆ ಎಲ್ಲವೂ ಆ ಬಳಿಕ ಆಗಿದ್ದು. ಆದರೆ, ಮದುವೆ ಅನ್ನೋದು ಒಮದು ಕಮಿಟ್‌ಮೆಂಟ್. ಅಲ್ಲಿ ಇಬ್ಬರ ಜೀವನ ಒಂದೇ ಹಳಿಯಲ್ಲಿ ಸಾಗಬೇಕಾಗುತ್ತೆ. ಹೀಗಾಗಿ ಇಬ್ಬರೂ ತಮಗೆ ತಾವೇ ಕೆಲವೊಂದು ಮಿತಿಗಳನ್ನು ಹಾಕಿಕೊಳ್ಳಬೇಕಾಗುತ್ತೆ..

46
Image Credit : Instagram

'ಮದುವೆ ಬಳಿಕ ಕೂಡ ಮದುವೆ ಆಗುವುದಕ್ಕಿಂತ ಮೊದಲು ಹೇಗಿದ್ದೆನೋ ಹಾಗೇ ಇರುತ್ತೇನೆ ಎನ್ನುವುದು ಸರಿಯಲ್ಲ' ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡುತ್ತಿದ್ದರೆ ಇನ್ನೂ ಕೆಲವರು 'ಮದುವೆ ಅನ್ನೋದು ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಾಯಿಸಬೇಕಾಗಿಲ್ಲ. ಗಂಡ-ಹೆಂಡತಿ ಇಬ್ಬರೂ ತಮ್ಮತಮ್ಮ ಆದ್ಯತೆಗಳನ್ನು ಮದುವೆ ಬಳಿಕವೂ ಇಟ್ಟುಕೊಳ್ಳಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. 

56
Image Credit : Instagram

ಕೆಲವರು ಇನ್ನೂ ಮುಂದಕ್ಕೆ ಹೋಗಿ 'ಮದುವೆ ಬಳಿಕ ಹೊಂದಾಣಿಕೆ ಆಗದಿದ್ದರೆ ಡಿವೋರ್ಸ್ ಕೊಟ್ಟು ಸಿಂಗಲ್ ಲೈಫ್ ಲೀಡ್ ಮಾಡಬಹುದು' ಎಂದೂ ಕೂಡ ಅನಿಸಿಕೆ ಹಂಚಿಕೊಂಡಿದ್ದಾರೆ.

66
Image Credit : Instagram

'ಲವ್, ಮದುವೆ, ಡಿವೋರ್ಸ್ ಎಲ್ಲವೂ ಅವರವರ ಪರ್ಸ್ನಲ್ ಸಂಗತಿಗಳು. ಅವು ಹೇಗಾದರೂ ಇರಬಹುದು. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಎಲ್ಲವನ್ನೂ ಜನರ ಇಷ್ಟದಂತೆ, ಸಮಾಜ ಹೇಳಿದಂತೆ ಕೇಳುವ ಅಗತ್ಯವಿಲ್ಲ. ಅವರವರ ಜೀವನ ಅವರವರದ್ದು' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ನಿವೇದಿತಾ ಗೌಡ ಅವರ ಯಾವುದೇ ಹೇಳಿಕೆ ಅಥವಾ ಜೀವನ ಸಾರ್ವಜನಿಕ ಚರ್ಚೆ ಆಗುವುದು ಮಾತ್ರ ದುರಂತ ಎನ್ನಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮನರಂಜನಾ ಸುದ್ದಿ
ನಿವೇದಿತಾ ಗೌಡ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಟಾಕ್ಸಿಕ್ ಸಿನಿಮಾ ಮತ್ತೊಂದು ವಿವಾದ: ಸಂತ ಮಿಕಯೇಲ್ ಮುಂದೆ ಯಶ್ ಅಶ್ಲೀಲ ದೃಶ್ಯ ತೆಗೆಯದಿದ್ದರೆ ಕಾನೂನು ಹೋರಾಟ!
Recommended image2
ಫ್ರೀ ಆಗಿ ಸಿನಿಮಾ ನೋಡಿ / ಯಾವ ನಾಯಿಗೆ ಬೇಕೋ ನಿನ್ನ ಟಿಕೆಟ್...! ಬೈಕೊಂಡಾದರೂ‌ 'ವಲವಾರ' ನೋಡಿ; ವೀರಕಪುತ್ರ ಶ್ರೀನಿವಾಸ್
Recommended image3
Sa Re Ga Ma Pa Kannada Show 2026: ಮಕ್ಕಳಿಗೋಸ್ಕರ ಸಿಂಗಿಂಗ್‌ ಶೋ ಆಡಿಷನ್‌; ಯಾವಾಗ? ಎಲ್ಲಿ?
Related Stories
Recommended image1
ಬಂಧನ ಸಿನಿಮಾ ಮಾಡೋಕೆ ವಿಷ್ಣುವರ್ಧನ್‌ಗೆ ಇಷ್ಟವೇ ಇರಲಿಲ್ಲವಂತೆ; ಆದ್ರೆ ಆಮೇಲೆ ನಟಿಸಿದ್ದು ಹೇಗೆ?
Recommended image2
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved