Tea: ಟೀ ಹೀಗೆ ಮಾಡಿ.. ನಿಮ್ಮ ಜನ್ಮದಲ್ಲೇ ಇಷ್ಟು ರುಚಿಯಾದ ಟೀ ನೀವು ಕುಡಿದಿರಲ್ಲ; ಬೇಕಿದ್ರೆ ಚಾಲೆಂಜ್!
ಮನೆಗಳಲ್ಲಿ ಹಾಗೂ ಹೊಟೆಲ್‌ಗಳಲ್ಲಿ ಟೀ ಮಾಡೋದು ಕಾಮನ್. ಆದರೆ, ರುಚಿರುಚಿಯಾಗಿ ಟೀ ಮಾಡೋದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಹೀಗೆ ಟೀ ಮಾಡಿದರೆ ತುಂಬಾ ರುಚಿಕರ ಎನ್ನಿಸುತ್ತದೆ. ನೀವು ಹೀಗೆ ಟೀ ಮಾಡುವ ಕಲೆ ಸಿದ್ಧಿಸಿಕೊಂಡರೆ ನಿಮ್ಮ ಗಂಡ/ ಹೆಂಡತಿ ನಿಮಗಾಗಿ ಕಾಯೋದು ಗ್ಯಾರಂಟಿ!

ಟೀ ಮಾಡೋದು ಎಲ್ರಿಗೂ ಗೊತ್ತು. ಅಥವಾ ಹಾಗಂತ ಎಲ್ಲರೂ ಅಂದ್ಕೊಂಡಿದಾರೆ. ಆದ್ರೆ ರುಚಿಕಟ್ಟಾದ ಟೀ (Special Tea) ಮಾಡೋದು ಒಂದು ಕಲೆ. ಅದು ಎಲ್ಲರಿಗೂ ಬರೋದಿಲ್ಲ ಎನ್ನಬಹುದು. ಭಾರತಕ್ಕೆ ಬ್ರಿಟೀಷರು ಬಂದು ಹೋದ ಮೇಲೆ ನಮ್ಮ ಭಾರತೀಯರ ಮನೆಯಲ್ಲಿ ಟೀ ಕುಡಿಯೋ ಪದ್ಧತಿ ಹಾಸುಹೊಕ್ಕಾಗಿದೆ. ಇದು ಒಂಥರಾ ಅತಿಥಿ ಸತ್ಕಾರದ ಮುಖ್ಯ ಅಂಶಗಳಲ್ಲಿ ಸೇರಿಕೊಂಡಿದೆ. ಟೀ ಅಥವಾ ಕಾಫೀ ಕೊಡುವುದು ಎಲ್ಲರ ಮನೆಯಲ್ಲಿ ಪದ್ಧತಿ ಎನ್ನುವಂತಾಗಿದೆ.
ಟೀ ಮಾಡೋದು ಮನೆಗಳಲ್ಲಿ ಹಾಗೂ ಹೊಟೆಲ್‌ಗಳಲ್ಲಿ ಕಾಮನ್. ಆದರೆ, ರುಚಿರುಚಿಯಾಗಿ ಟೀ ಮಾಡೋದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಸರಿಯಾಗಿ ಮಾಹಿತಿ ಪಡೆದುಕೊಂಡರೆ, ಅದನ್ನು ಅಳವಡಿಸಿಕೊಂಡು ಟೀ ಮಾಡಿದರೆ ತುಂಬಾ ರುಚಿಕರವಾಗಿ ಮಾಡಬಹುದು. ಅದರಲ್ಲೂ ಕೆಲವರಿಗೆ ಮಾತ್ರ ರುಚಿಕಟ್ಟಾದ ಟೀ ಮಾಡುವಿಕೆ ಸಿದ್ಧಿಸುತ್ತದೆ ಎನ್ನಬಹುದು. ಅವರಲ್ಲಿ ನೀವೂ ಒಬ್ಬರಾಗಬಹುದು.
ಹಾಗಿದ್ದರೆ ಏನು ಮಾಡಬೇಕು? ಟೀ ಮಾಡುವ ಕಲೆ ಸಿದ್ಧಿಸಿಕೊಳ್ಳುವುದು ಹೇಗೆ?
ಹೌದು, ರುಚಿಕರವಾದ ಟೀಮಾಡಲು ಸ್ವಲ್ಪ ಹೆಚ್ಚಿನ ವಿಭಿನ್ನ ಮಾಹಿತಿಯ ಅಗತ್ಯವಿದೆ. ಅದು ಕೆಲವು ಅಡುಗೆ ಮಾಡುವವರಿಂದ ಸಿಕ್ಕರೆ ಇನ್ನೂ ಕೆಲವು ಸೋಷಿಯಲ್ ಮೀಡಿಯಾಗಳ ಮೂಲಕ ದೊರಕುತ್ತದೆ. ಇಲ್ಲಿದೆ ನೋಡಿ ನೀವು ಜನ್ಮದಲ್ಲೇ ಕುಡಿದಿರಲಾರದ ರುಚಿಕಟ್ಟಾದ ಟೀ ಮಾಡುವ ವಿಧಾನ. ಈ ಸೀಕ್ರೆಟ್ ಗೊತ್ತಿದ್ದರೆ ಸಾಕು ನಿಮಗೆ ಸನ್ಮಾನ, ಬಹುಮಾನ ಗ್ಯಾರಂಟಿ!
ಈ ವಿಭಿನ್ನ ಟೀ ಹೇಗೆ ಮಾಡೋದು ?
ಎಂದಿನಂತೆ ನೀರು ಅಥವಾ ಹಾಲನ್ನು ಕುದಿಸಿಕೊಳ್ಳಿ.. ಅಥವಾ ಹಾಲು ಹಾಗೂ ನೀರಿನ ನಿಮಗೆ ಬೇಕಾದ ಪ್ರಮಾಣದಲ್ಲಿ ಸೇರಿಸಿಕೊಂಡು ಕುದಿಸಿಕೊಳ್ಳಿ.. ಸ್ವಲ್ಪ ಏಲಕ್ಕಿ ಬೇಕಿದ್ದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಏಲಕ್ಕಿ ಹಾಕಬೇಡಿ, ಸ್ವಲ್ಪವೇ ಹಾಕಿ. ಏಕೆಂದರೆ ಜಾಸ್ತಿ ಏಲಕ್ಕಿ ಹಾಕಿದರೆ ಅದು ಏಲಕ್ಕಿ ಟೀ ಎಂಬಷ್ಟು ಸುವಾಸನೆ ಬರುತ್ತದೆ.
ಕುದಿಯುತ್ತಿರುವ ಹಾಲು ಅಥವಾ ನೀರಿಗೆ, ಹಾಲು+ನೀರಿಗೆ ಸಕ್ಕರೆ ಬೇಕಾದರೆ ಸೇರಿಸಿಕೊಳ್ಳಿ. ಆದರೆ, ಅತಿಯಾಗಿ ಸಕ್ಕರೆ ಹಾಕಿ ಪಾಯಸದ ಹಾಗೆ ಮಾಡಿಕೊಳ್ಳಬೇಡಿ. ಸಕ್ಕರೆ ಜಾಸ್ತಿ ಹಾಕಿದರೆ ಮಾಡಲಿರುವ ನಿಮ್ಮ ಟೀಯ ವಿಭಿನ್ನ ರುಚಿ ಕೆಟ್ಟುಹೋಗುತ್ತದೆ. ಈಗ ಟೀ ಪುಡಿ ಹಾಕುವ ಸಮಯ.. ಇಲ್ಲೇ ಮ್ಯಾಜಿಕ್ ಇರೋದು ನೋಡಿ..!
ಟೀ ಪುಡಿಯನ್ನು ಟೀಗೆ ಹಾಕೋದು ಕಾಮನ್. ಆದರೆ, ಟೀ ಪುಡಿಯನ್ನು ಮೊದಲೇ ಬೇರೆ ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪವೇ ಹುರಿದಿಟ್ಟುಕೊಳ್ಳಿ.. ಎಷ್ಟು ಹುರಿಯಬೇಕು ಎಂಬ ಪ್ರಶ್ನೆಗೆ ಉತ್ತರ, ಸುಮಾರು ಒಂದು ನಿಮಿಷ ಅಥವಾ ಟೀ ಪುಡಿ ಹುರಿದ ಸುವಾಸನೆ (ಅರೋಮ) ಬರುವ ತನಕ ಹುರಿದಿರಬೇಕು. ಹೀಗೆ ಹುರಿದ ಟೀ ಪುಡಿಯನ್ನು ಸೇರಿಸಿದರೆ ಟೀ ರುಚಿ ಅದ್ಭುತವಾಗಿರುತ್ತದೆ. ನೀವು ನಿಮ್ಮ ಜನ್ಮದಲ್ಲಿ ಇಂತಹ ಕುಡಿದಿಲ್ಲ ಅಂತ ಹೇಳೋದು ಗ್ಯಾರಂಟಿ. ಅಷ್ಟು ಅದ್ಭುತವಾದ ರುಚಿ ಹೀಗೆ ಮಾಡಿದ ಟೀಗೆ ಬರುತ್ತದೆ.
ಸೋ, ಮತ್ಯಾಕೆ ತಡ? ಹುರಿದ ಟೀ ಪುಡಿಯಿಂದ ಈಗಲೇ ಮಾಡಿ ಅದ್ಭುತ ರುಚಿಕರವಾದ ಟೀ..!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
