Asianet Suvarna News Asianet Suvarna News

ಚಳಿಗಾಲದಲ್ಲಿ ತಪ್ಪಿಯೂ ಇಂಥಾ ಆಹಾರ ತಿನ್ಬೇಡಿ, ಅಸ್ತಮಾ ಸಮಸ್ಯೆ ಕಾಡುತ್ತೆ

ಚಳಿಗಾಲ ಶುರುವಾಯ್ತು ಅಂದ್ರೆ ಜೊತೆಗೇ ಕಾಯಿಲೆನೂ ಶುರುವಾಯ್ತು ಅಂತಾನೆ ಅರ್ಥ. ಶೀತ, ಕೆಮ್ಮು, ಜ್ವರದ ಜೊತೆಗೆ ಉಸಿರುಗಟ್ಟುವಿಕೆಯ ಸಮಸ್ಯೆನೂ ಹಲವರಿಗೆ ಕಾಡುತ್ತೆ. ಅದರಲ್ಲೂ ಚಳಿಗಾಲದಲ್ಲಿ ಅಸ್ತಮಾದ ಸಮಸ್ಯೆ ಕಾಡ್ಬಾರ್ದು ಅಂದ್ರೆ ಈ ಕೆಲವು ಆಹಾರ ತಿನ್ಲೇಬಾರ್ದು ನೆನಪಿರ್ಲಿ.

Deadly Asthma Starts Immediately After Eating These Foods Vin
Author
First Published Dec 16, 2022, 3:56 PM IST

ಆಸ್ತಮಾ ಶ್ವಾಸಕೋಶದ ದೀರ್ಘಕಾಲದ ಕಾಯಿಲೆ (Disease)ಯಾಗಿದ್ದು, ಇದರಲ್ಲಿ ಉಸಿರಾಟದ ಕೊಳವೆಗಳಲ್ಲಿ ಊತ ಮತ್ತು ಬಿಗಿತ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2019 ರಲ್ಲಿ ಸುಮಾರು 262 ಮಿಲಿಯನ್ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ. ಅದೇ ವರ್ಷದಲ್ಲಿ ಸುಮಾರು 4 ಲಕ್ಷ 55 ಸಾವಿರ ಜನರು ಅಸ್ತಮಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. WHO ಪ್ರಕಾರ, ಕುಟುಂಬದ ಇತಿಹಾಸ, ತಂಬಾಕು ಮತ್ತು ಅಲರ್ಜಿಗಳು ಶ್ವಾಸಕೋಶ (Lungs)ದಲ್ಲಿ ಅಸ್ತಮಾದ ದಾಳಿಯನ್ನು ಪ್ರಚೋದಿಸುತ್ತವೆ. ಆದರೆ ರೋಗಿಯು ಅಸ್ತಮಾವನ್ನು ತೀವ್ರಗೊಳಿಸುವ ವಸ್ತುಗಳು ಮತ್ತು ಅಲರ್ಜಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ, ಸಮಸ್ಯೆ ಹೆಚ್ಚು ಅಪಾಯಕಾರಿಯಾಗಿ  ಪರಿಣಮಿಸುತ್ತದೆ.

ಚಳಿಗಾಲದಲ್ಲಿ, ಶ್ವಾಸಕೋಶಗಳಿಗೆ ಹೇಗಾದರೂ ಹೆಚ್ಚಿನ ಕಾಳಜಿ ಬೇಕು. ಹೆಚ್ಚುವರಿಯಾಗಿ, ಈ ಋತುವಿನಲ್ಲಿ ಅಸ್ತಮಾ ರೋಗಲಕ್ಷಣಗಳು ಸಹ ತೀವ್ರವಾಗಬಹುದು. ನಿರಂತರ ಕೆಮ್ಮು (Cough), ಉಸಿರಾಟದ ತೊಂದರೆ, ಎದೆಯಲ್ಲಿ ಉಬ್ಬಸ, ಎದೆಯಲ್ಲಿ ಬಿಗಿತ ಮುಂತಾದ ಸಮಸ್ಯೆಗಳು ಅಸ್ತಮಾದ ಲಕ್ಷಣಗಳಾಗಿವೆ. ಇದನ್ನು ತಪ್ಪಿಸಲು ಚಳಿಗಾಲ (Winter)ದಲ್ಲಿ ಕೆಲವೊಂದು ಆಹಾರವನ್ನು ತಿನ್ನೋದನ್ನು ತಪ್ಪಿಸಬೇಕು.

ಅಸ್ತಮಾ ಅಂತ ನೆಗ್ಲೆಕ್ಟ್ ಮಾಡೋ ಹಾಗಿಲ್ಲ..ಲೈಂಗಿಕ ಜೀವನಕ್ಕೂ ಅಡ್ಡಿಯಾಗ್ಬೋದು!

ಉಪ್ಪಿನಕಾಯಿ: ಉಪ್ಪಿನಕಾಯಿ (Pickle) ತಿನ್ನುವುದರಿಂದ ಮಾರಣಾಂತಿಕ ಅಸ್ತಮಾ ಉಂಟಾಗುತ್ತದೆ. ಉಪ್ಪಿನಕಾಯಿ ಕೆಡುವುದನ್ನು ತಡೆಯಲು ಸಲ್ಫೈಟ್ ಅನ್ನು ಸೇರಿಸಲಾಗುತ್ತದೆ ಎಂದು ಪಬ್ಮೆಡ್‌ನಲ್ಲಿ ಪ್ರಕಟವಾದ ಸಂಶೋಧನೆ ಹೇಳುತ್ತದೆ. ಇದರಿಂದ ಅಸ್ತಮಾ ಅಟ್ಯಾಕ್ ಬರಬಹುದು. ಶೀತದಲ್ಲಿ ಉಪ್ಪಿನಕಾಯಿ ತಿನ್ನುವುದು ಎದೆಯ ಬಿಗಿತ ಮತ್ತು ಕೆಮ್ಮನ್ನು ಉಂಟುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ವಾಲ್ನಟ್-ಪಿಸ್ತಾ: ವಾಲ್‌ನಟ್ಸ್, ಪಿಸ್ತಾಗಳಂತಹ ಒಣ ಹಣ್ಣುಗಳನ್ನು (Dry fruits) ತಿನ್ನುವುದರಿಂದ ಅಸ್ತಮಾ ಉಲ್ಬಣಗೊಳ್ಳಬಹುದು. ಏಕೆಂದರೆ, ಈ ಒಣ ಹಣ್ಣುಗಳು ಅಲರ್ಜಿ ಅಂಶಗಳನ್ನು ಹೊಂದಿರುತ್ತವೆ. ಇದು ಮಾರಣಾಂತಿಕ ಅಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸುತ್ತದೆ. ಅದಕ್ಕಾಗಿಯೇ ಶೀತದಲ್ಲಿ ಒಣ ಹಣ್ಣುಗಳನ್ನು ತಿನ್ನುವ ಮೊದಲು, ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Diwali 2022: ಅಸ್ತಮಾ ರೋಗಿಗಳಿಗೆ ಆರೋಗ್ಯದ ಬಗೆಗಿರಲಿ ಕಾಳಜಿ

ಬೀನ್ಸ್: ಚಳಿಗಾಲದಲ್ಲಿ ರಾಜ್ಮಾ ಅನ್ನ ತಿನ್ನುವ ಆನಂದವೇ ಬೇರೆ. ಆದರೆ ಅಸ್ತಮಾ ರೋಗಿಗಳಿಗೆ ಇದು ಒಳ್ಳೆಯದಲ್ಲ. ಒಂದು ಸಂಶೋಧನೆಯ ಪ್ರಕಾರ, ಬೀನ್ಸ್‌ನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ವಿಭಜನೆಯಾದಾಗ ಅನಿಲವು ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ, ಅಸ್ತಮಾದಲ್ಲಿ ಉಸಿರಾಟದ ತೊಂದರೆ ಉಂಟಾಗಬಹುದು ಮತ್ತು ಪರಿಸ್ಥಿತಿಯು ಹದಗೆಡಬಹುದು. ರಾಜ್ಮಾ ಮಾಡುವ ಮೊದಲು, ಅದನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ಮುಳುಗಿಸಿ ಮತ್ತು ನೀರನ್ನು ಹಲವಾರು ಬಾರಿ ಬದಲಾಯಿಸಿ.

ಚಹಾ-ಕಾಫಿ:  ಸಂಶೋಧನೆಯೊಂದರಲ್ಲಿ, ಅಸ್ತಮಾದಲ್ಲಿ ಕಾಫಿಯ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆ. ಅತಿಯಾಗಿ ಚಹಾ (Tea) ಮತ್ತು ಕಾಫಿ ಸೇವನೆಯು ಅಸ್ತಮಾಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಏಕೆಂದರೆ, ಇದು ಅಲರ್ಜಿಯನ್ನು ಉಂಟುಮಾಡುವ ಸ್ಯಾಲಿಸಿಲೇಟ್‌ಗಳನ್ನು ಹೊಂದಿರುತ್ತದೆ.

World Asthma Day: ಅಸ್ತಮಾ ನಿವಾರಣೆಗೆ ನೆರವಾಗುವ ಯೋಗಾಸನಗಳು

ಹಾಲಿನ ಉತ್ಪನ್ನಗಳು: ಡೈರಿ ಉತ್ಪನ್ನಗಳು ಎಲ್ಲರಿಗೂ ಅಸ್ತಮಾವನ್ನು ಉಂಟುಮಾಡುವುದಿಲ್ಲ. ಆದರೆ ಡೈರಿ ಉತ್ಪನ್ನಗಳಿಗೆ ಅಲರ್ಜಿಗಳು ಅಸ್ತಮಾವನ್ನು ಉಲ್ಬಣಗೊಳಿಸಬಹುದು. ಅಂತಹವರು ಲ್ಯಾಕ್ಟೋಸ್ ಮುಕ್ತ ಆಹಾರವನ್ನು ಸೇವಿಸಬೇಕು. ಹಾಲಿನ ಉತ್ಪನ್ನಗಳಿಂದ ದೂರವಿರಬೇಕು.

Follow Us:
Download App:
  • android
  • ios