Asianet Suvarna News Asianet Suvarna News

Cucumber In Winter: ಚಳಿಗಾಲದಲ್ಲಿ ಸೌತೆಕಾಯಿ ತಿಂದ್ರೆ ಶೀತ, ಕೆಮ್ಮಿನ ಸಮಸ್ಯೆ ಜಾಸ್ತಿ

ಸೌತೆಕಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಒಳಿತು. ಹೀಗಾಗಿಯೇ ಹಲವರು ಎಲ್ಲಾ ಹೊತ್ತಿನ ತಮ್ಮ ಆಹಾರದಲ್ಲೂ ಸೌತೆಕಾಯಿಯನ್ನು ಕಡ್ಡಾಯವಾಗಿ ಬಳಸುತ್ತಾರೆ.  ಆದ್ರೆ ಚಳಿಗಾಲದಲ್ಲಿ ಸೌತೆಕಾಯಿ ತಿನ್ನೋ ಅಭ್ಯಾಸ ಒಳ್ಳೆಯದಾ ?

Cucumber In Winter: Should You Eat Cucumber In Cold Weather Vin
Author
First Published Dec 1, 2022, 2:13 PM IST

ದಿನನಿತ್ಯ ಸೌತೆಕಾಯಿ (Cucumber) ಸೇವಿಸಿದರೆ ಆರೋಗ್ಯಕ್ಕೆ (Health) ಹಲವು ಪ್ರಯೋಜನಗಳಿವೆ. ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸೌತೆಕಾಯಿ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಸಲಾಡ್, ಸೌತೆಕಾಯಿ ಜ್ಯೂಸ್ ಮೊದಲಾದವುಗಳನ್ನು ಸೇವಿಸುತ್ತಾರೆ. ಇದರಿಂದ ಮಧುಮೇಹ (Diabetes), ಮಲಬದ್ಧತೆ (Constipation) ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ತೂಕ ಇಳಿಕೆಗೂ ಸೌತೆಕಾಯಿ ಸೇವನೆ ಉತ್ತಮ ಎಂದು ತಿಳಿದುಬಂದಿದೆ. ಆದರೆ ನಿಮಗೆ ಗೊತ್ತಾ ಸೌತೆಕಾಯಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿರುವ ಹಾಗೆಯೇ ಕೆಲವೊಂದು ಅಡ್ಡಪರಿಣಾಮಗಳೂ ಇವೆ. ಅದರಲ್ಲೂ ಚಳಿಗಾಲ (Winter)ದಲ್ಲಿ ಸೌತೆಕಾಯಿ ತಿನ್ನಬಹುದಾ, ತಿನ್ನಬಾರದಾ ಎಂಬುದನ್ನು ಮೊದ್ಲು ತಿಳ್ಕೋಬೇಕು.

ಸೌತೆಕಾಯಿ ಸೇವನೆಯ ಆರೋಗ್ಯ ಪ್ರಯೋಜನಗಳು
ಸೌತೆಕಾಯಿಯು 96 ಪ್ರತಿಶತದಷ್ಟು ನೀರಿನಂಶವನ್ನು ಒಳಗೊಂಡಿದೆ. ಹೀಗಾಗಿಯೇ ಇದು ಜೀರ್ಣಕ್ರಿಯೆ (Digestion), ತೂಕ ನಷ್ಟ ಮತ್ತು ದೇಹದ ಮೇಲೆ ಕಪ್ಪು ವರ್ತುಲಗಳು ಮತ್ತು ಸನ್‌ಬರ್ನ್‌ಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುವ ಬಹು ಗುಣಗಳನ್ನು ಹೊಂದಿದೆ. ಇದು ಹೆಚ್ಚಾಗಿ ಬೇಸಿಗೆಯಲ್ಲಿ ಸಿಗುವ ಹಣ್ಣಾದರೂ ಅನೇಕ ಜನರು ಇದನ್ನು ದಿನದಲ್ಲಿ ಊಟದ ಜೊತೆಗೆ ಸಾಮಾನ್ಯ ಸಲಾಡ್‌ಗಳು ಮತ್ತು ಭಕ್ಷ್ಯಗಳ ಭಾಗವಾಗಿ ಬಳಸುತ್ತಾರೆ. ಎಲ್ಲಾ ರೀತಿಯ ಹವಾಮಾನದಲ್ಲಿ ಸೌತೆಕಾಯಿಗಳನ್ನು ಸೇವಿಸಬಹುದು. ಆದರೂ ಚಳಿಗಾಲದಲ್ಲಿಯೂ ಇದನ್ನು ಸೇವಿಸಬಹುದಾ ಎಂಬ ಬಗ್ಗೆ ಹೆಚ್ಚಿನ ಗೊಂದಲವಿದೆ. 

ಹೊಟ್ಟೆಯ ಕೊಬ್ಬನ್ನು ಕರಗಿಸಲು ಒಂದು ಗ್ಲಾಸ್ ಸೌತೆಕಾಯಿ ನೀರು ಸಾಕು

ಸೌತೆಕಾಯಿಯಲ್ಲಿದೆ ಮೂರು ಪ್ರಮುಖ ಗುಣ
ಆಯುರ್ವೇದದ ಪ್ರಕಾರ ಸೌತೆಕಾಯಿಯು ಮೂರು ಪ್ರಮುಖ ಗುಣಗಳನ್ನು ಹೊಂದಿದೆ. ಸೀತಾ (ತಂಪಾಗುವಿಕೆ), ರೋಪಾನ್ (ಚಿಕಿತ್ಸೆ) ಮತ್ತು ಕಷಾಯ (ಸಂಕೋಚಕ). ಸೌತೆಕಾಯಿ ಸಸ್ಯ ಆಧಾರಿತ ಆಹಾರ ಪದಾರ್ಥವಾಗಿದೆ. ಅಂದರೆ ಅದರ ಎಲ್ಲಾ ಗುಣಗಳು ಸಾವಯವವಾಗಿದೆ. ಇದು ದೇಹ (Body)ವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಶಾಖವನ್ನು ಉತ್ಪಾದಿಸುವ ಔಷಧಿ ಅಥವಾ ಯಾವುದೇ ಆಹಾರ ಪದಾರ್ಥಕ್ಕೆ ಅಲರ್ಜಿಯ ಪ್ರತಿಕ್ರಿಯೆಯಿಂದ ಉಂಟಾಗುವ ಸುಟ್ಟಗಾಯಗಳು, ಮೊಡವೆಗಳು (Pimples)ಮತ್ತು ದೇಹದ ದದ್ದುಗಳಿಗೆ ಚಿಕಿತ್ಸೆ ನೀಡುತ್ತದೆ.

ಸೌತೆಕಾಯಿಯು ದೇಹದಲ್ಲಿ ಎಲ್ಲಾ ಮೂರು ದೋಷಗಳನ್ನು - ಕಪಾ, ಪಿತ್ತ ಮತ್ತು ವಾತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ನೀರಿನ ಅಂಶವನ್ನು ನಿರ್ವಹಿಸುತ್ತದೆ. ಆದರೆ ಸೌತೆಕಾಯಿಯಲ್ಲಿರುವ ಅದರ ತಂಪಾಗಿಸುವ ಗುಣಲಕ್ಷಣಗಳಿಂದಾಗಿ, ಚಳಿಗಾಲದಲ್ಲಿ ಇದನ್ನು ತಿನ್ನಲು ಸೂಕ್ತವಲ್ಲ.

ಸೌತೆಕಾಯಿ ಕಹಿ ಅಥವಾ ಸಿಹಿ ? ಗುರುತಿಸೋಕೆ ಈ ವಿಧಾನ ಅನುಸರಿಸಿ

ಚಳಿಗಾಲದಲ್ಲಿ ಸೌತೆಕಾಯಿಯನ್ನು ತಿನ್ನಬಹುದೇ ?
ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ (Immunity power) ಸಮಸ್ಯೆಗಳು, ಕೆಮ್ಮು ಮತ್ತು ಚಳಿಗಾಲದಲ್ಲಿ ಶೀತದಿಂದ ಬಳಲುತ್ತಿರುವ ಜನರು ಸೌತೆಕಾಯಿಯನ್ನು ತಿನ್ನುವುದು ಸೂಕ್ತವಲ್ಲ. ಏಕೆಂದರೆ ಇದು ನೈಸರ್ಗಿಕ ಸಂಕೋಚಕ ಮತ್ತು ಸೀತಾ (ತಂಪಾಗಿಸುವ) ಗುಣಗಳನ್ನು ಹೊಂದಿದೆ. ಹೀಗಾಗಿ ದೇಹಕ್ಕೆ ಒಳಗಿನಿಂದ ಸ್ವಲ್ಪ ಉಷ್ಣತೆಯ ಅಗತ್ಯವಿದ್ದಾಗ ಇದು ದೇಹವನ್ನು ಮತ್ತಷ್ಟು ತಂಪಾಗಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದು ದೇಹದಲ್ಲಿ ಕಫದ ಅಂಶವನ್ನು ಹೆಚ್ಚಿಸುತ್ತದೆ ಮತ್ತು ವಿಶೇಷವಾಗಿ ಚಳಿಗಾಲದಲ್ಲಿ ಶೀತಕ್ಕೆ ಕಾರಣವಾಗಬಹುದು.

ಚಳಿಗಾಲದಲ್ಲಿ ನಿಮ್ಮ ಆಹಾರದಿಂದ ಸೌತೆಕಾಯಿಯನ್ನು ಸರಳವಾಗಿ ತೊಡೆದುಹಾಕಲು ಸಾಧ್ಯವಾಗದವರಾಗಿದ್ದರೆ, ಹಗಲಿನ ವೇಳೆಯಲ್ಲಿ ಅದನ್ನು ಸೇವಿಸಲು ಪ್ರಯತ್ನಿಸಿ. ದೇಹದ ನೈಸರ್ಗಿಕ ಉಷ್ಣತೆಯಿಂದಾಗಿ ಸೌತೆಕಾಯಿಯನ್ನು ಬಿಸಿಲು ಇರುವಾಗ ಸೇವಿಸುವುದರಿಂದ ಚಳಿಗಾಲದಲ್ಲಿ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ. ನಿಮಗೆ ಇನ್ನೂ ಸಂದೇಹವಿದ್ದರೆ ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಿದ್ದರೆ, ನಿಮ್ಮ ವೈದ್ಯರು ಅಥವಾ ಪ್ರಮಾಣೀಕೃತ ಪೌಷ್ಟಿಕತಜ್ಞರೊಂದಿಗೆ ಮಾತನಾಡಿ. ಆರೋಗ್ಯವಾಗಿರಿ.

Follow Us:
Download App:
  • android
  • ios