Cooking Tips: ಹಿಟ್ಟು ಕಲಸುವಾಗ ನೀವು ಈ 3 ಪದಾರ್ಥಗಳನ್ನ ಸೇರಿಸಿದರೆ, ಚಪಾತಿಯಿಂದ ಹಿಡಿದು ಪೂರಿ-ಪರಾಠಗಳವರೆಗೆ ಎಲ್ಲವೂ ಪರ್ಫೆಕ್ಟ್ ಆಗಿ ಬರುತ್ತವೆ. ಪ್ರತಿಯೊಂದು ಚಪಾತಿ ಚೆನ್ನಾಗಿ ಉಬ್ಬುತ್ತದೆ ಮತ್ತು ಗಂಟೆಗಟ್ಟಲೇ ಸಾಫ್ಟ್ ಆಗಿರುತ್ತದೆ.

ನೆಯಲ್ಲಿ ಪ್ರತಿದಿನ ಚಪಾತಿ ಮಾಡುವುದು ಸಾಮಾನ್ಯ ಕೆಲಸ. ಆದರೆ ಅವು ಮೃದುವಾಗಿ ಮತ್ತು ಉಬ್ಬಿ ಬಂದಾಗ ಮಾತ್ರ ತಿನ್ನಲು ರುಚಿ ರುಚಿಯಾಗಿರುತ್ತವೆ. ಬಿಸಿಬಿಸಿ ಚಪಾತಿ ಹೇಗೋ ಚೆನ್ನಾಗಿರುತ್ತವೆ, ಆದರೆ ವಿಶೇಷವಾಗಿ ಆಫೀಸ್ ಅಥವಾ ಶಾಲೆಯ ಟಿಫಿನ್ ಬಾಕ್ಸ್ ಹಾಗೂ ಪ್ರಯಾಣದ ಸಮಯದಲ್ಲಿ ತಗೆದುಕೊಂಡು ಹೋಗುವ ಚಪಾತಿ ಒಣಗಿ ಗಟ್ಟಿ ಹಪ್ಪಳದಂತಾಗುತ್ತವೆ. ಅವುಗಳ ಮೃದುತ್ವ ಹೊರಟುಹೋಗಿ, ಕೆಲವು ಬಾರಿಯಂತೂ ಎಷ್ಟು ಗಟ್ಟಿಯಾಗುತ್ತವೆ ಎಂದರೆ ತಿನ್ನಲು ಮನಸ್ಸೇ ಆಗುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ದರಿಂದ ಹಿಟ್ಟು ಕಲಸುವಾಗ ಈ 3 ಪದಾರ್ಥ ಮಿಕ್ಸ್ ಮಾಡಿದರೆ, ಚಪಾತಿ ಎಷ್ಟು ಅದ್ಭುತವಾಗಿ ಬರುತ್ತವೆ ಎಂದರೆ ತಿಂದರೆ ಮಜಾ ಅನಿಸುತ್ತದೆ. ಹಾಗೆಯೇ ಸಖತ್ ಸಾಫ್ಟ್ ಆಗಿ ಬರುತ್ತವೆ. ಕೇವಲ ಚಪಾತಿ ಮಾತ್ರವಲ್ಲ, ಪೂರಿ ಮತ್ತು ಪರಾಠ ಮಾಡುವಾಗಲೂ ಈ ಟ್ರಿಕ್ ಬಳಸಬಹುದು. ಇದರಿಂದ ಹಿಟ್ಟು ಸಿಕ್ಕಾಪಟ್ಟೆ ಸಾಫ್ಟಾಗಿ ಬರುತ್ತದೆ.

ಸಾಫ್ಟ್ ಚಪಾತಿಗಾಗಿ ಹಿಟ್ಟಿಗೆ ಈ 3 ಪದಾರ್ಥಗಳನ್ನ ಸೇರಿಸಿ

ಚಪಾತಿ ದೀರ್ಘಕಾಲದವರೆಗೆ ಸಾಫ್ಟ್ ಆಗಿರಲು ಮತ್ತು ಪೂರಿ-ಪರಾಠಗಳು ಸಹ ಮೃದುವಾಗಿರಲು ಹಿಟ್ಟು ಕಲಸುವಾಗ ಈ ಕೆಳಗಿನ ಮೂರು ಪದಾರ್ಥಗಳನ್ನ ಸೇರಿಸಿ

1. ತುಪ್ಪ (Ghee): ಮೊದಲನೆಯದಾಗಿ, ಹಿಟ್ಟಿಗೆ ಸುಮಾರು ಎರಡು ಚಮಚದಷ್ಟು ಶುದ್ಧ ತುಪ್ಪವನ್ನು ಸೇರಿಸಿ. ತುಪ್ಪವು ಹಿಟ್ಟನ್ನು ಅತ್ಯಂತ ಮೃದುವಾಗಿಸುತ್ತದೆ, ಇದರಿಂದ ಚಪಾತಿ ದೀರ್ಘಕಾಲ ಸಾಫ್ಟ್ ಆಗಿರುತ್ತದೆ.

2. ಮೊಸರು (Curd): ಇದರೊಂದಿಗೆ ಹಿಟ್ಟಿಗೆ ಒಂದು ಸಣ್ಣ ಕಪ್ ಮೊಸರನ್ನು ಸೇರಿಸಿ. ಮೊಸರು ಸೇರಿಸುವುದರಿಂದ ಹಿಟ್ಟು ಸ್ವಲ್ಪ ಫರ್ಮೆಂಟೇಶನ್ (ಹುದುಗುವಿಕೆ) ಆಗುತ್ತದೆ, ಇದು ಚಪಾತಿಯನ್ನ ತುಂಬಾ ಮೃದುವಾಗಿಸಲು ನೆರವಾಗುತ್ತದೆ.

3. ಹಾಲು (Milk): ಮೊಸರಿನ ಜೊತೆಗೆ ಒಂದು ಕಪ್ ಹಾಲನ್ನು ಸಹ ಹಿಟ್ಟಿಗೆ ಸೇರಿಸಿ. ಹಾಲು ಹಿಟ್ಟಿನಲ್ಲಿ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ, ಇದರಿಂದ ಚಪಾತಿ ಒಣಗುವುದಿಲ್ಲ ಮತ್ತು ದೀರ್ಘಕಾಲದವರೆಗೆ ಮೃದುವಾಗಿರುತ್ತವೆ. ಪೂರಿ-ಪರಾಠಗಳ ಟೆಕ್ಸ್ಚರ್ ಕೂಡ ಇದರಿಂದ ತುಂಬಾ ಚೆನ್ನಾಗಿ ಬರುತ್ತದೆ.

ಕೊನೆಯದಾಗಿ ಈ ಮೂರು ಪದಾರ್ಥಗಳನ್ನು ಸೇರಿಸಿದ ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕುತ್ತಾ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.

ಹಿಟ್ಟು ಕಲಸುವ ಸರಿಯಾದ ವಿಧಾನ

ವಾತಾವರಣ ತಂಪಾಗಿದ್ದರೆ (ವಿಶೇಷವಾಗಿ ಚಳಿಗಾಲದಲ್ಲಿ) ಹಿಟ್ಟು ಕಲಸಲು ಯಾವಾಗಲೂ ಉಗುರುಬೆಚ್ಚಗಿನ ನೀರನ್ನು ಬಳಸಿ.
ಅದೇ ಬೇಸಿಗೆ ಕಾಲವಾಗಿದ್ದರೆ ಸಾಮಾನ್ಯ ತಾಪಮಾನದ (Room Temperature) ನೀರನ್ನು ಬಳಸಬಹುದು.
ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತಾ ಹಿಟ್ಟನ್ನು ಕಲಸಿ, ನಂತರ ಅದಕ್ಕೆ ಇನ್ನು ಸ್ವಲ್ಪ ತುಪ್ಪವನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.

ಬಳಿಕ ಹಿಟ್ಟನ್ನು 5 ರಿಂದ 10 ನಿಮಿಷಗಳ ಕಾಲ ಮುಚ್ಚಿಡಿ. ಅಷ್ಟರಲ್ಲಿ ಹಿಟ್ಟು ಚೆನ್ನಾಗಿ ಸೆಟ್ ಆಗುತ್ತದೆ, ಆಮೇಲೆ ಮಾಡುವ ರೊಟ್ಟಿ, ಪೂರಿ ಮತ್ತು ಪರಾಠಗಳು ತುಂಬಾ ಚೆನ್ನಾಗಿ ಮೂಡಿಬರುತ್ತವೆ.

ಪ್ರಯಾಣಕ್ಕೆ ಈ ಚಪಾತಿ ಬೆಸ್ಟ್

ನೀವು ಎಲ್ಲಾದರೂ ಹೊರಗೆ ಹೋಗುತ್ತಿದ್ದರೆ ಅಥವಾ ಟಿಫಿನ್ ಬಾಕ್ಸ್‌ಗೆ ಚಪಾತಿ ಪ್ಯಾಕ್ ಮಾಡುತ್ತಿದ್ದರೆ, ಈ ವಿಧಾನದಲ್ಲಿ ಹಿಟ್ಟು ಕಲಸಿ ಚಪಾತಿ ಮಾಡಿ. ಇವು ದೀರ್ಘಕಾಲದವರೆಗೆ ಮೃದುವಾಗಿರುತ್ತವೆ.

ಈ ವಿಷಯ ನೆನಪಿರಲಿ

ಹಾಲು ಮತ್ತು ಮೊಸರು ಬೇಗನೆ ಹಾಳಾಗುವ ಪದಾರ್ಥಗಳು. ಆದ್ದರಿಂದ ಹಿಟ್ಟಿಗೆ ಇವುಗಳನ್ನು ಮಿಕ್ಸ್ ಮಾಡಿದರೆ, ಆ ಹಿಟ್ಟನ್ನು ಫ್ರಿಡ್ಜ್‌ನಲ್ಲಿಯೇ ಸ್ಟೋರ್ ಮಾಡಿ ಇಡಿ. ಹೊರಗೆ ಇಟ್ಟರೆ ಹಿಟ್ಟು ಬೇಗನೆ ಕೆಟ್ಟುಹೋಗಬಹುದು. ಅಲ್ಲದೆ, ಅತಿಯಾದ ಪ್ರಮಾಣದಲ್ಲಿ ಹಾಲು-ಮೊಸರು ಬಳಸಬೇಡಿ, ಇಲ್ಲದಿದ್ದರೆ ಹಿಟ್ಟು ಕೈಗೆ ಅಂಟಿಕೊಳ್ಳುತ್ತದೆ ಮತ್ತು ಚಪಾತಿ ಲಟ್ಟಿಸುವುದು ಕಷ್ಟವಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ವಿಡಿಯೋ

View post on Instagram