ಟೇಸ್ಟ್‌ ಚೆನ್ನಾಗಿಲ್ಲ ಅಂತ ಕಬಾಬ್‌ ಮಾಡಿದವನನ್ನು ಗುಂಡಿಕ್ಕಿ ಕೊಂದ!

ಕಬಾಬ್‌ ಎಲ್ಲರೂ ಮಾಡಿದ್ರೆ ಟೇಸ್ಟೀಯಾಗಿರಲ್ಲ. ಕೆಲ ರೆಸ್ಟೋರೆಂಟ್‌ಗಳಲ್ಲಿ ಕಬಾಬ್‌ ತುಂಬಾ ರುಚಿಯಾಗಿರುತ್ತೆ. ಇನ್ನು ಕೆಲವೆಡೆ ಟೇಸ್ಟೇ ಇರಲ್ಲ. ಕಬಾಬ್‌ ಟೇಸ್ಟ್ ಚೆನ್ನಾಗಿಲ್ಲದಿದ್ದಾಗ, ನೆಕ್ಸ್ಟ್‌ ಟೈಂ ಬೇರೆ ರೆಸ್ಟೋರೆಂಟ್‌ಗೆ ಹೋಗುತ್ತೇವೆ. ಆದರೆ ಇಲ್ಲಿಬ್ಬರು ಟೇಸ್ಟ್‌ ಚೆನ್ನಾಗಿಲ್ಲ ಅಂತ ಕಬಾಬ್‌ ಮಾಡಿದವನನ್ನು ಗುಂಡಿಕ್ಕಿ ಕೊಂದಿದ್ದಾರೆ. 

Cook Shot Dead Over Kebab Taste in Bareilly, Investigation Underway Vin

ಲಕ್ನೋ: ಕಬಾಬ್‌ ರುಚಿಯಾಗಿಲ್ಲ ಎಂದು ಕಬಾಬ್‌ ತಯಾರಿಸಿದ ವ್ಯಕ್ತಿಯನ್ನೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ಉತ್ತರ ಪ್ರದೇಶದ ಪ್ರೇಮ್‌ ನಗರದಲ್ಲಿ ನಡೆದಿದೆ. ಐಷಾರಾಮಿ ಕಾರಿನಲ್ಲಿ ಬಂದ, ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವಕರು ಕಬಾಬ್‌ ಆರ್ಡರ್‌ ಮಾಡಿ ತಿಂದು ಇದು ಚೆನ್ನಾಗಿಲ್ಲ ಎಂದು ಹೋಟೆಲ್‌ ಮಾಲೀಕನೊಟ್ಟಿಗೆ ಜಗಳ ಮಾಡಿ ಹಣ ಕೊಡದೇ ಕಾರು ಹತ್ತಿದ್ದಾರೆ. 120 ರು. ಹಣ ವಸೂಲಿ ಮಾಡುವಂತೆ ನಾಸೀರ್‌ ಅಹ್ಮದ್‌ (52) ಎಂಬ ಅಡುಗೆಯವನನ್ನು ಮಾಲೀಕ ಕಾರಿನ ಬಳಿ ಕಳಿಸಿದಾಗ ಅದರಲ್ಲೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳಪೆ ಗುಣಮಟ್ಟದ ಕಬಾಬ್‌ಗಳ ಬಗ್ಗೆ ಅಸಮಾಧಾನಗೊಂಡ ಇಬ್ಬರು ಬರೇಲಿ ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿಯ ಹೊರಗೆ ಮಾಂಸಾಹಾರಿ ಉಪಾಹಾರ ಗೃಹದ 52 ವರ್ಷದ ಅಡುಗೆಯವರನ್ನು ಹಣ ಕೇಳಿದಾಗ ಗುಂಡಿಕ್ಕಿ ಕೊಂದಿದ್ದಾರೆ. ಮಾಯನ್ ರಸ್ತೋಗಿ ಅಲಿಯಾಸ್ ಗೋಲ್ಡನ್ ಬಾಬಾ ಮತ್ತು ಆತನ ಸ್ನೇಹಿತ ತಾಜಿಮ್ ಶಮ್ಸಿ ಎಂಬಿಬ್ಬರನ್ನು ಗುರುವಾರ ಸಂಜೆ ರಾಂಪುರದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬ್ಬರು ವ್ಯಕ್ತಿಗಳು ಮದ್ಯದ ಅಮಲಿನಲ್ಲಿ ಪ್ರಿಯದರ್ಶಿನಿ ನಗರದಲ್ಲಿರುವ ಅಂಗಡಿಗೆ ಬಂದು ಕಬಾಬ್‌ನ ರುಚಿಯಿಂದ ಸಂತೋಷವಾಗಲಿಲ್ಲ ಎಂದು ಅಂಗಡಿ ಮಾಲೀಕ ಅಂಕುರ್ ಸಬರ್ವಾಲ್‌ಗೆ ದೂರು ನೀಡಿದ್ದಾರೆ. ವಾಗ್ವಾದವು ಉಲ್ಬಣಗೊಳ್ಳುತ್ತಿದ್ದಂತೆ, ಇಬ್ಬರೂ ಸಬರ್ವಾಲ್ ಮೇಲೆ ಹಲ್ಲೆ ನಡೆಸಿದರು ಮತ್ತು ಆಹಾರಕ್ಕಾಗಿ ಹಣ ನೀಡದೆ ತಮ್ಮ ಕಾರಿಗೆ ಮರಳಿದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಹೇಳಿದ್ದಾರೆ.

ಮನೇಲಿ ರೆಸ್ಟೋರೆಂಟ್‌ ಸ್ಟೈಲ್ ಕಬಾಬ್‌ ಮಾಡ್ಬೇಕಾ ? ಈ ಟ್ರಿಕ್ಸ್ ಬಳಸಿ

ಸಬರ್ವಾಲ್ ಅವರು ಇಬ್ಬರಿಂದ 120 ವಸೂಲಿ ಮಾಡಲು ಅಡುಗೆಯವರನ್ನು ಕಳುಹಿಸಿದಾಗ ಅದರಲ್ಲಿ ಒಬ್ಬರಾದ ನಾಸೀರ್ ಅಹಮದ್ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ನಂತರ, ದುಷ್ಕರ್ಮಿಗಳು ನೈನಿತಾಲ್ ರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ. ಸಿಬ್ಬಂದಿಗಳು ತೆಗೆದ ಚಿತ್ರಗಳ ಆಧಾರದ ಮೇಲೆ ಕಾಶಿಪುರದಲ್ಲಿ (ಉತ್ತರಖಂಡ) ಎಸ್‌ಯುವಿಯನ್ನು ಪತ್ತೆಹಚ್ಚಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.

ಅಪರಿಚಿತ ದಾಳಿಕೋರರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಾವು ಉತ್ತರಾಖಂಡ ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾಹಿತಿ ನೀಡಿದ್ದಾರೆ.

ಈ ರೀತಿ ಮಾಡಿದರೆ ಕಬಾಬ್‌ ಟೇಸ್ಟಿ ಮತ್ತು ಹೆಲ್ತಿ ಕೂಡ!

ಪತ್ನಿ ಮಾಡಿದ ಕಬಾಬ್ ಟೇಸ್ಟ್ ಇಲ್ಲ ಅಂತಾ ಗಂಡ ಆತ್ಮಹತ್ಯೆ
ಪತ್ನಿ ಮಾಡಿದ ಕಬಾಬ್ ಟೇಸ್ಟ್ ಇಲ್ಲ ಅಂತಾ ಮನನೊಂದು ಪತಿರಾಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು.  42 ವರ್ಷದ ಸುರೇಶ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದ. ಕಬಾಬ್ ತಿನ್ನೋ ಆಸೆಯಾಗಿದೆ ಅಂತ  ಹೆಂಡತಿ ಶಾಲಿನಿಗೆ ಕಬಾಬ್ ಮಾಡಲು ಹೇಳಿದ್ದ. ಅವಳೋ ತನಗೆ ತಿಳಿದಹಾಗೆ ಕಬಾಬ್ ಮಾಡಿಕೊಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ ಕಬಾಬ್ ಟೇಸ್ಟೇ ಇಲ್ಲ ಅಂತಾ ಹೆಂಡತಿಗೆ ರೋಲ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಪತ್ನಿ ಆಸ್ಪತ್ರೆಗೆ  ದಾಖಲಾಗಿದ್ದಾಳೆ. ಗಂಡನ ಹಲ್ಲೆ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದಾಳೆ. ದೂರು ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸರು ಸುರೇಶ್‌ನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುರೇಶನ ಮೃತದೇಹ ಪತ್ತೆಯಾಗಿದೆ.  ಬನ್ನೇರುಘಟ್ಟ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios