ಈ ರೀತಿ ಮಾಡಿದರೆ ಕಬಾಬ್ ಟೇಸ್ಟಿ ಮತ್ತು ಹೆಲ್ತಿ ಕೂಡ!
ಬಾಯಲ್ಲಿ ನೀರು ಬರಿಸುವ ರುಚಿಯಾದ ಮಟನ್ ಶಮಿ ಕಬಾಬ್ ರೆಸಿಪಿ ನಿಮಗಾಗಿ. ಬೇಕಾಗುವ ಸಾಮಾಗ್ರಿಗಳು - ಬೋನ್‌ಲೆಸ್ ಮಟನ್ - 500 ಗ್ರಾಂ, ಕಡಲೆ ಬೇಳೆ -1 ಕಪ್, ಅರಿಶಿನ ಪುಡಿ- ಅರ್ಧ ಟೀಸ್ಪೂನ್, ಬೆಳ್ಳುಳ್ಳಿ - 10 ಎಸಳು, ಶುಂಠಿ - 2 ಇಂಚು, ಹಸಿರು ಮೆಣಸಿನಕಾಯಿ - 3 (ಸಣ್ಣಗೆ ಕತ್ತರಿಸಿದ), ಸಣ್ಣಗೆ ಕತ್ತರಿಸಿದ ಅರ್ಧ ಪೆಕನ್ ನಟ್ಸ್, ಪುದೀನಾ ಎಲೆಗಳು, ಉಪ್ಪು, ಎಣ್ಣೆ ,ಕೆಂಪು ಮೆಣಸಿನಕಾಯಿ - 4, ಕರಿಮೆಣಸು - 1 ಟೀಸ್ಪೂನ್, ಲವಂಗ - 5, ದಾಲ್ಚಿನ್ನಿ - ಅರ್ಧ ಇಂಚು, ಏಲಕ್ಕಿ - 2, ಜೀರಿಗೆ - ಅರ್ಧ ಟೀಚಮಚ, ಕಪ್ಪು ಏಲಕ್ಕಿ - 2.
ಮಟನ್‌ಗೆ 2 ಟೀ ಚಮಚ ಪಪ್ಪಾಯಿ ಸೇರಿಸಿ ಮತ್ತು ಮ್ಯಾರಿನೇಟ್ ಮಾಡಿ. ಇದರಿಂದ, ಮಟನ್ ಬೇಗ ಮೃದುವಾಗುತ್ತದೆ. (ಶಮಿ ಕಬಾಬ್ ತಯಾರಿಸಲು ಕಚ್ಚಾ ಪಪ್ಪಾಯಿ ಬಹಳ ಮುಖ್ಯ).
ಇದರ ನಂತರ, ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ ದಾಲ್ಚಿನ್ನಿ, ಲವಂಗ, ದಾಲ್ಚಿನ್ನಿ ಎಲೆಗಳು, ಏಲಕ್ಕಿ, ಕರಿಮೆಣಸು ಫ್ರೈ ಮಾಡಿ.
ಈಗ ಸಣ್ಣಗೆ ಪೀಸ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಹುರಿಯಿರಿ ಮತ್ತು ಸ್ವಲ್ಪ ಸಮಯದ ನಂತರ ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ 5-10 ನಿಮಿಷ ಬೇಯಲು ಬಿಡಿ.
ನಂತರ ಒಂದು ಗಂಟೆ ಮೊದಲು ನೆನೆಸಿಟ್ಟ ಕಡಲೆ ಬೇಳೆ ಮತ್ತು ಅರ್ಧ ಕಪ್ ನೀರು ಬೆರೆಸಿ 2 ವಿಸಲ್ ಕೂಗಿಸಿ.
ಬೆಂದ ಮಾಂಸ ಮತ್ತು ಕಡಲೆ ಬೇಳೆಯನ್ನು ಮಿಕ್ಸಿ ಮಾಡಿ . ಅದನ್ನು 30-35 ನಿಮಿಷಗಳ ಕಾಲ ಫ್ರಿಜ್ ನಲ್ಲಿಡಿ.
ನಂತರ ಹೆಚ್ಚಿದ ಈರುಳ್ಳಿ, ನಿಂಬೆ ರಸ ಮತ್ತು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಅದನ್ನು ಬೇಕಾದ ಆಕಾರ ಮಾಡಿ ಸೆಟ್ ಆಗಲು 15 ನಿಮಿಷಗಳ ಕಾಲ ಫ್ರಿಜ್ ನಲ್ಲಿಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಬಾಬ್‌ಗಳನ್ನು ಗೋಲ್ಡನ್ ಬ್ರೌನ್ ಆಗುವ ವರೆಗೆ ಡೀಪ್ ಫ್ರೈ ಮಾಡಿ.
ಇಲ್ಲವಾದಲ್ಲಿ ಅವುಗಳನ್ನು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ರಿಂದ 20 ನಿಮಿಷಗಳ ಕಾಲ ಗ್ರಿಲ್‌ನಲ್ಲಿ ಬೇಕ್ ಮಾಡಬಹುದು.