2,000 ರೂಪಾಯಿಗೆ ಚಿಲ್ಲರೆ ತನ್ನಿ ಎಂದು ಕೇಕ್‌ನಲ್ಲೇ ಬರೆದ ಸಿಬ್ಬಂದಿ, ಬರ್ತ್‌ಡೆ ಸಂಭ್ರಮಕ್ಕೆ ಬ್ರೇಕ್
ಆ್ಯಪ್ ಮೂಲಕ ಅಥವಾ ಫೋನ್ ಮೂಲಕ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಬಹುದು. ಅದರಲ್ಲೂ ಆಹಾರ, ತನಿಸುಗಳ ಆರ್ಡರ್ ಹೆಚ್ಚು. ಹೀಗೆ ಬರ್ತ್‌ಡೆಗೆ ಫೋನ್ ಕಾಲ್ ಮೂಲಕ ಕೇಕ್ ಆರ್ಡರ್ ಮಾಡಲಾಗಿದೆ. ಜೊತೆಗೆ ಕೇಕ್ ಡೆಲಿವರಿ ಮಾಡುವಾಗಿ ಚಿಲ್ಲರೆ ತನ್ನಿ ಎಂದು ಕೇಳಿಕೊಂಡಿದ್ದಾರೆ. ಇಷ್ಟೇ ನೋಡಿ, ಕೇಕ್ ಡೆಲಿವರಿ ಹೇಗಾಯ್ತು ನೋಡಿ.
ಕರಾಚಿ(ಮಾ.08): ಫುಡ್ ಡೆಲಿವರಿ ಆ್ಯಪ್‌ನಿಂದ ಈಗ ಬದುಕು ಮತ್ತಷ್ಟು ಸುಲಭವಾಗಿದೆ. ಒಂದು ಕ್ಲಿಕ್ ಸಾಕು, ಎರಡೇ ನಿಮಿಷದಲ್ಲಿ ನಿಮ್ಮಿಷ್ಟದ ಆಹಾರ ಮನಗೆ ಬಂದಿರುತ್ತದೆ. ಆದರೆ ಫಟಾಫಟ್ ಸೇವೆ, ಗ್ರಾಹಕರ ಬೇಡಿಕೆ ಸೇರಿದಂತೆ ಹಲವು ಕಾರಣಗಳಿಂದ ಡೆಲಿವರಿ ವೇಳೆ ಎಡವಟ್ಟುಗಳಾಗಿದೆ. ತಾವು ಆರ್ಡರ್ ಮಾಡಿದ ಆಹಾರ ಬದಲು ಇನ್ಯಾವುದೋ ಆಹಾರ ಬಂದ ಹಲವು ಘಟನೆಗಳು ಇವೆ. ಇದೀಗ ಇವೆಲ್ಲವನ್ನೂ ಮೀರಿಸುವ ಘಟನೆಯೊಂದು ನಡೆದಿದೆ. ಪಾಕಿಸ್ತಾನದ ವ್ಯಕ್ತಿ ತನ್ನ ಕುಟುಂಬ ಸದಸ್ಯರ ಹುಟ್ಟು ಹಬ್ಬಕ್ಕೆ ಬೇಕರಿಗೆ ಕರೆ ಮಾಡಿ ಕೇಕ್ ಆರ್ಡರ್ ಮಾಡಿದ್ದಾರೆ. ಹಲವು ವಿದಧ ಕೇಕ್ ಪೈಕಿ ಚಾಕೋಲೇಟ್ ಮಿಶ್ರಿತ ಕೇಕ್ ಅಂತಿಮಗೊಳಿಸಿ ಆರ್ಡರ್ ಖಚಿತಪಡಿಸಿದ್ದಾರೆ. ಕೇಕ್ ಡೆಲಿವರಿ ವೇಳೆ ಹಣ ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಚಿಲ್ಲರೆ ಸಮಸ್ಯೆ ಕಾರಣ 2,000 ರೂಪಾಯಿಗೆ ಚಿಲ್ಲರೆ ತರುವಂತೆ ಮನವಿ ಮಾಡಿದ್ದಾರೆ. ಆದರೆ ಬೇಕರಿ ಸಿಬ್ಬಂದಿ ಸಂಪೂರ್ಣವಾಗಿ ಗ್ರಾಹಕನ ಮಾತು ಕೇಳಿಸಿಕೊಂಡಿಲ್ಲ 2,000 ರೂಪಾಯಿ ಚಿಲ್ಲರೆ ತನ್ನಿ ಅನ್ನೋದು ಮಾತ್ರ ಕೇಳಿಸಿಕೊಂಡಿದ್ದಾನೆ. ಹೀಗಾಗಿ ಕೇಕ್ ಮೇಲೆ 2,000 ರೂಪಾಯಿ ಚಿಲ್ಲರೆ ತನ್ನಿ ಎಂದು ಬರೆದು ಕೇಕ್ ಡೆಲಿವರಿ ಮಾಡಿದ ಘಟನೆ ನಡೆದಿದೆ.
ಜಾವೇದ್ ಶಮಿ ಅನ್ನೋ ವ್ಯಕ್ತಿ ಫೋನ್ ಕರೆ ಮಾಡಿ ಕೇಕ್ ಆರ್ಡರ್ ಮಾಡಿದ್ದಾರೆ. ಬರ್ತ್‌ಡೇ ಕೇಕ್‌ನಲ್ಲಿ ಯಾವುದು ಚೆನ್ನಾಗಿದೆ ಎಂದು ಕೇಳಿದ್ದಾರೆ. ಇದರಲ್ಲಿ ಹಲವು ಆಯ್ಕೆಗಳನ್ನು ನೀಡಿದ್ದಾರೆ. ಈ ಆಯ್ಕೆಯಲ್ಲಿ ಚಾಕೋಲೇಟ್ ಕೇಕ್ ಆರ್ಡರ್ ಮಾಡಿದ್ದಾರೆ. ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಯೂ ನೀಡಿದ್ದಾರೆ. ಫೋನ್ ಕರೆಯ ಕೊನೆಯಲ್ಲಿ ಕೇಕ್ ಡೆಲಿವರಿ ಮಾಡುವಾಗ ಚಿಲ್ಲರೆ ತನ್ನಿ ಎಂದು ಮನವಿ ಮಾಡಿದ್ದಾರೆ.
ಝೊಮ್ಯಾಟೋ ಎಡವಟ್ಟು, ಆನ್‌ಲೈನ್‌ನಲ್ಲಿ ವೆಜ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ತು ಚಿಕನ್ ಕರಿ!
ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಯಾರಲ್ಲೂ ಹಣವಿಲ್ಲ. ಹೀಗಾಗಿ ಚಿಲ್ಲರೆ ಸಿಗುವುದೇ ಕಷ್ಟ. ಇಷ್ಟೇ ಗ್ರಾಹಕನ ಬಳಿಯೂ ಯಾವುದೇ ಚಿಲ್ಲರೆ ಇರಲಿಲ್ಲ. ಹೀಗಾಗಿ ಕೇಕ್ ಡೆಲಿವರಿ ಮಾಡುವಾಗ ಚಿಲ್ಲರೆ ತನ್ನಿ ಇದರಿಂದ ಕ್ಯಾಶ್ ಆನ್ ಡೆಲಿವರಿ ವೇಳೆ ಸಮಸ್ಯೆ ಎದುರಾಗುವುದಿಲ್ಲ ಅನ್ನೋದು ಗ್ರಾಹಕನ ಸಲಹೆಯಾಗಿತ್ತು.
ಆದರೆ ಆರ್ಡರ್ ಪಡೆದ ಬೇಕರಿ ಸಿಬ್ಬಂದಿ ಇದು ಬರ್ತ್‌ಡೆ ಕೇಕ್ ಅನ್ನೋದನ್ನೇ ಮರೆತಿದ್ದಾನೆ. ಗ್ರಾಹಕನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಂಡಿಲ್ಲ. ಆದರೆ ಫೋನ್ ಕಾಲ್ ಅಂತ್ಯದಲ್ಲಿ ಒತ್ತಿ ಒತ್ತಿ ಹೇಳಿದ 2,000 ರೂಪಾಯಿಗೆ ಚಿಲ್ಲರೆ ತನ್ನಿ ಅನ್ನೋ ಮಾತು ಕೇಳಿಸಿಕೊಂಡಿದ್ದಾರೆ. ಬೇಕರಿ ಸಿಬ್ಬಂದಿ, ಒತ್ತಿ ಒತ್ತಿ ಹೇಳುತ್ತಿರುವ ಮಾತನ್ನೇ ಕೇಕ್‌ನಲ್ಲಿ ಬರೆಯಲು ಹೇಳಿದ್ದಾರೆ ಎಂದು ಭಾವಿಸಿ, ಚಾಕೋಲೇಟ್ ಕೇಕ್ ಮೇಲೆ 2,000 ರೂಪಾಯಿ ಚಿಲ್ಲರೆ ತನ್ನಿ ಎಂದು ಇಂಗ್ಲೀಷ್‌ನಲ್ಲಿ ಬರೆದಿದ್ದಾರೆ.
ಸುಂದರವಾದ ಬಾಕ್ಸ್ ಮೂಲಕ ಕೇಕ್ ಡೆಲಿವರಿ ಮಾಡಲಾಗಿದೆ. ಹಣ ನೀಡಿ ಕೇಕ್ ಪಡೆದು ಇನ್ನೇನು ಕತ್ತರಿಸಬೇಕು ಎಂದು ತೆರೆದಾಗ ಅಚ್ಚರಿ ಕಾದಿದೆ. ತಾನು ಚಿಲ್ಲರೆ ತನ್ನಿ ಎಂದು ಮಾತುಗಳೇ ಕೇಕ್ ಮೇಲೆ ಬರೆಯಲಾಗಿದೆ. ಈ ಕುರಿತು ಜಾವೇಶ್ ಶಮಿ ಟ್ವಿಟರ್ ಮೂಲಕ ಪೋಟೋ ಪೋಸ್ಟ್ ಮಾಡಿದ್ದಾರೆ. ನಾನು ಚಿಲ್ಲರೆ ತನ್ನಿ ಎಂದು ಹೇಳಿದ್ದೆ. ಆದರೆ ಬೇಕರಿಯವು ಹೀಗೆ ಡೆಲವರಿ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಆನ್‌ಲೈನ್ ಎಡವಟ್ಟು, 12 ಸಾವಿರ ರೂ ಎಲೆಕ್ಟ್ರಿಕ್ ಬ್ರಶ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ಕಿದ್ದು ಮಸಾಲೆ ಪುಡಿ!
ಭಾರತದಲ್ಲೂ ಆನ್‌ಲೈನ್ ಶಾಪಿಂಗ್ ಮೇಲೆ ಹಲವು ಎಡವಟ್ಟುಗಳಾಗಿವೆ. ಹಲವು ದೂರುಗಳು ದಾಖಲಾಗಿದ್ದರೆ, ಬಹುತೇಕ ಬಾರಿ ಇ ಕಾಮರ್ಸ್ ಕಂಪನಿಗಳು ಕ್ಷಮೆ ಕೇಳಿದೆ. ಇದೀಗ ಕೇಕ್ ಡೆಲಿವರಿ ಭಾರಿ ಸದ್ದು ಮಾಡುತ್ತಿದೆ. ಹಲವರು ಕೊನೆ ಪಕ್ಷ ಆರ್ಡರ್ ಮಾಡಿದ ಕೇಕ್‌ನ್ನೇ ನೀಡಿದ್ದಾರೆ. ಸಮಾಧಾನ ಪಟ್ಟುಕೊಳ್ಳಿ ಎಂದುು ಕಮೆಂಟ್ ಮಾಡಿದ್ದಾರೆ.