ಝೊಮ್ಯಾಟೋ ಎಡವಟ್ಟು, ಆನ್‌ಲೈನ್‌ನಲ್ಲಿ ವೆಜ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ತು ಚಿಕನ್ ಕರಿ!
ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಅದೆಷ್ಟೋ ಮಂದಿಗೆ ಅನುಕೂಲವಾಗಿದೆ. ಹಸಿವಾದಾಗ, ಅಡುಗೆ ಮಾಡಲು ಸಮಯವಿಲ್ಲದಿದ್ದಾಗ ಥಟ್ಟಂತ ಆರ್ಡರ್ ಮಾಡಿದರೆ ಫುಡ್ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಆದರೆ ಈ ಆಪ್‌ಗಳಿಂದ ಕೆಲವೊಮ್ಮೆ ಎಡವಟ್ಟು ಸಹ ಆಗುತ್ತದೆ. ಅಂಥದ್ದೇ ಘಟನೆಯೊಂದು ಜೈಪುರದಲ್ಲಿ ನಡೆದಿದೆ.
ಜೈಪುರ: ಝೊಮೇಟೋ, ಸ್ವಿಗ್ಗಿ ಮೊದಲಾದ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಹಲವರಿಗೆ ಅನುಕೂಲವಾಗಿದೆ. ಕಾಲೇಜು, ಆಫೀಸಿಗೆ ಹೋಗುವವರು, ಅಡುಗೆ ಮಾಡಲು ಸಮಯಾನೇ ಇಲ್ಲ ಅಂದುಕೊಳ್ಳುವವರು ಈ ಆಪ್‌ಗಳ ನೆರವಿನಿಂದ ಸುಲಭವಾಗಿ ಫುಡ್ ಆರ್ಡರ್ ಮಾಡಿಕೊಳ್ಳಬಹುದು. ಮನೆಗೆ ಅದೆಷ್ಟು ಅತಿಥಿಗಳು ಬಂದರೂ ಅಡುಗೆ ಮಾಡುವ ಕಷ್ಟ ತೆಗೆದುಕೊಳ್ಳಬೇಕಾಗಿಲ್ಲ. ಹೀಗಾಗಿಯೇ ಬಹುತೇಕರು ಇಂಥಾ ಆಪ್‌ಗಳಿಂದ ಸುಲಭವಾಗಿ ಆಹಾರ ತರಿಸಿಕೊಳ್ಳುತ್ತಾರೆ. ಆನ್‌ಲೈನ್ ಪೇಮೆಂಟ್‌ನ ಜೊತೆಗೆ ನೇರವಾಗಿ ಹಣವನ್ನೂ ಪಾವತಿಸಲೂ ಅವಕಾಶ ಇರುವ ಕಾರಣ ಯಾವುದೇ ತೊಂದ್ರೆ ಆಗುವುದಿಲ್ಲ.ಆದರೂ ಕೆಲವೊಮ್ಮೆ ಇಂಥಾ ಫುಡ್ ಡೆಲಿವರಿ ಆಪ್‌ಗಳಿಂದ ಎಡವಟ್ಟುಗಳಾಗಿ ಬಿಡುತ್ತದೆ.
ಆರ್ಡರ್ ಮಾಡಿದ ಆಹಾರ (Food) ತುಂಬಾ ತಡವಾಗಿ ಬರುವುದು, ಕೆಲವೊಂದು ಫುಡ್ ಐಟಂ ಮಿಸ್ ಆಗಿರುವುದು ಮೊದಲಾದ ಎಡವಟ್ಟುಗಳು ನಡೆಯುತ್ತವೆ. ಆದ್ರೆ ಜೈಪುರದಲ್ಲಿ ಇದೆಲ್ಲಕಿಂತಲೂ ದೊಡ್ಡ ಪ್ರಮಾದವೇ ನಡೆದಿದೆ. ವೆಜ್ ಫುಡ್ ಆರ್ಡರ್ ಮಾಡಿದ ಮಹಿಳೆಗ ನಾನ್‌ವೆಜ್ ಆಹಾರ ಡೆಲಿವರಿ ಮಾಡಲಾಗಿದೆ. ಮಹಿಳೆ (Woman) ಈ ಕುರಿತು ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಫುಡ್ ಡೆಲಿವರಿ, ಇಂಥವರೇ ನಮ್ಮ ಹೀರೋಸ್ ಎಂದ ಝೊಮೇಟೋ
ವೆಜ್ ಫುಡ್ ಆರ್ಡರ್ ಮಾಡಿದ್ರೆ ಮನೆ ಬಾಗಿಲಿಗೆ ಚಿಕನ್ ಕರಿ ಬಂತು!
ಟ್ವಿಟ್ಟರ್ ಬಳಕೆದಾರರಾದ ನಿರುಪಮಾ ಸಿಂಗ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social media) ಝೋಮೆಟೋ ತಮಗೆ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದಾಗ ಚಿಕನ್ ಕರಿ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಪ್ಲೇಟ್‌ನಲ್ಲಿ ಚಿಕನ್ ಪೀಸ್ ಇರೋ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಹಾಯ್ ಝೊಮೇಟೋ, ನಾನು ಝೊಮೇಟೋದಿಂದ ಸಸ್ಯಾಹಾರ ಆರ್ಡರ್ ಮಾಡಿದೆ. ಆದರೆ ನನಗೆ ವೆಜ್ ಫುಡ್ ಡೆಲಿವರಿ ಆಗುವ ಬದಲು ಮಾಂಸಾಹಾರ (Nonveg) ಬಂದಿದೆ. ನಿಮ್ಮ ಸೇವೆ ತುಂಬಾ ಭಯಾನಕವಾಗಿದೆ ' ಎಂದು ಮಹಿಳೆ ಬರೆದುಕೊಂಡಿದ್ದಾರೆ. ಜೊತೆ ಅವರು ಪೋಸ್ಟ್ ಜೊತೆಗೆ ಝೊಮೇಟೋವನ್ನು ಸಹ ಟ್ಯಾಗ್ ಮಾಡಿದ್ದಾರೆ. .
ವೀಡಿಯೊದಲ್ಲಿ, ಮಹಿಳೆ ಚಮಚವನ್ನು ಬಳಸಿ ಚಿಕನ್ ತುಂಡನ್ನು ಒಡೆಯುವುದನ್ನು ನೋಡಬಹುದು. ಅಪ್ಲೋಡ್ ಮಾಡಿದ ನಂತರ ವೀಡಿಯೊ 447K ವೀಕ್ಷಣೆಗಳನ್ನು ಗಳಿಸಿದೆ. ಅನೇಕ ಬಳಕೆದಾರರು ನಿರುಪಮಾ ಅವರನ್ನು ಬೆಂಬಲಿಸಿದರು. ಒಬ್ಬ ವ್ಯಕ್ತಿ'ಇದು ಕೆಟ್ಟ ಅನುಭವವಾಗಿದೆ. ತಿಳಿಯದೇ ಸೇವಿಸಿದರೆ ಏನಾಗಿಬಿಡುತ್ತಿತ್ತು' ಎಂದಿದ್ದಾರೆ. ಇನ್ನೊಬ್ಬರು, 'ಝೊಮೇಟೋ ವಿತರಣೆಯ ಜವಾಬ್ದಾರಿಯನ್ನು ಹೊಂದಿದ್ದರೂ, ಇದು 99% ರೆಸ್ಟೊರೆಂಟ್‌ನ ತಪ್ಪು. ಈ ಅವ್ಯವಸ್ಥೆ ಇನ್ನೂ ಇದೆ' ಎಂದು ಬರೆದುಕೊಂಡಿದ್ದಾರೆ.
ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!
ಮಹಿಳೆಯ ಬಳಿ ಕ್ಷಮೆಯಾಚಿದಿ ಝೊಮೇಟೊ ಆ್ಯಪ್
ಫುಡ್ ಡೆಲಿವರಿ ಆ್ಯಪ್ ಝೊಮಾಟೊ ತನ್ನಿಂದಾದ ಎಡವಟ್ಟಿಗೆ ಕ್ಷಮೆಯಾಚಿಸಿದೆ. 'ಹಾಯ್ ನಿರುಪಮಾ, ಈ ಪ್ರಮಾದಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಈ ಕುರಿತು ಹೆಚ್ಚಿನ ತನಿಖೆ (Enquiry) ನಡೆಸಲು ದಯವಿಟ್ಟು ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯನ್ನು ಖಾಸಗಿ ಸಂದೇಶದ (Message) ಮೂಲಕ ಹಂಚಿಕೊಳ್ಳಿ' ಎಂದು ಝೊಮಾಟೊ ಟ್ವೀಟ್ ಮಾಡಿ ಉತ್ತರಿಸಿದೆ.
ವೀಡಿಯೊವನ್ನು ನೋಡಿ: