ಆನ್‌ಲೈನ್ ಎಡವಟ್ಟು, 12 ಸಾವಿರ ರೂ ಎಲೆಕ್ಟ್ರಿಕ್ ಬ್ರಶ್ ಆರ್ಡರ್ ಮಾಡಿದ ಮಹಿಳೆಗೆ ಸಿಕ್ಕಿದ್ದು ಮಸಾಲೆ ಪುಡಿ!
ಮಹಿಳೆಯೊಬ್ಬರು 11,999 ರೂಪಾಯಿ ಬೆಲೆಯ ಎಲೆಕ್ಟ್ರಿಕ್ ಟೂಥ್ ಬ್ರಶ್ ಆರ್ಡರ್ ಮಾಡಿದ್ದಾರೆ. ಆದರೆ ಡೆಲಿವರಿ ಬಾಕ್ಸ್ ತೆರೆದು ನೋಡಿದಾಗ ಆಘಾತವಾಗಿದೆ. ಟೂಥ್ ಬ್ರಶ್ ಬದಲು 10 ರೂಪಾಯಿ ಮಸಾಲೆ ಪುಡಿ ಬಂದಿದೆ.
ನವದೆಹಲಿ(ಫೆ.15): ಡಿಜಿಟಲ್ ಕಾಲದಲ್ಲಿ ಒಂದು ಕ್ಲಿಕ್ ಮಾಡಿದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ತಿನಿಸು, ತರಕಾರಿಯಿಂದ, ಅಡುಗೆ ಸಾಮಾನುಗಳ ಕೆಲವೇ ಕೆಲವು ನಿಮಿಷಗಳಲ್ಲಿ ತಲುಪಲಿದೆ. ಅತೀ ವೇಗವಾಗಿ ಡೆಲಿವರಿ ಮಾಡುವ ಧಾವಂತದಲ್ಲಿ ಹಲವು ಎಡವಟ್ಟುಗಳಾಗಿದೆ. ಫೋನ್ ಆರ್ಡರ್ ಮಾಡಿದವರಿಗೆ ಸೋಪ್ ಸಿಕ್ಕಿದ ಉದಾಹರಣೆಗಳು ಇವೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಅಮೇಜಾನ್ ಮೂಲಕ ದೆಹಲಿ ಮೂಲದ ಮಹಿಳೆಯೊಬ್ಬರು 12 ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಟೂಥ್ ಬ್ರಶ್ ಆರ್ಡರ್ ಮಾಡಿದ್ದಾರೆ. ಆದರೆ ಡೆಲವರಿಯಾದ ಪಾರ್ಸೆಲ್ ತೆರೆದು ನೋಡಿದಾಗ ಅಚ್ಚರಿಯಾಗಿದೆ. ಕಾರಣ ತನ್ನ 12 ಸಾವಿರ ಮೌಲ್ಯದ ಟೂಥ್ ಬ್ರಶ್ ಬದಲು 10 ರೂಪಾಯಿ ಮಸಾಲೆ ಪುಡಿ ಬಂದಿದೆ.
ಇದೀಗ ಅಮೇಜಾನ್(Amazon Delivery) ಎಡವಟ್ಟಿನ ಡೆಲಿವರಿ ಬಾರಿ ವೈರಲ್ ಆಗಿದೆ.ಬದಾಸ್ ಫ್ಲವರ್ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ನನ್ನ ತಾಯಿ ಎಲೆಕ್ಟ್ರಿಕ್ ಟೂಥ್ ಬ್ರಶ್(Electric Tooth Brush) ಆರ್ಡರ್ ಮಾಡಿದ್ದಾರೆ. 11,999 ರೂಪಾಯಿ ಮೌಲ್ಯದ ಈ ಟೂಥ್ ಬ್ರಶ್ ಆರ್ಡರ್ ಮಾಡುವಾಗಲೇ ತಾಯಿ ಹಣ ಪಾವತಿ ಮಾಡಿದ್ದಾರೆ. ಆದರೆ ಅಮೆಜಾನ್ ಡೆಲಿವರಿ ಮಾಡಿದ್ದು ಮಾತ್ರ ಬೇರೆ. ಡೆಲಿವರಿ ವೇಳೆ ಬಾಕ್ಸ್ ತೂಕ ಕಡಿಮೆ ಇತ್ತು. ಆಗಲೇ ಅನುಮಾನ ಕಾಡಿತ್ತು. ಟೂಥ್ ಬ್ರಶ್‌ಗೆ ಸಂಪೂರ್ಣ ಹಣ ಪಾವತಿಸಿದ್ದರೂ, ಈ ಡೆಲಿವರಿ ಪಡೆಯಲು ಹಣ ಪಾವತಿಸುವಂತೆ ಸೂಚಿಸಲಾಗಿತ್ತು.ಬಾಕ್ಸ್ ತೆರೆದಾಗ 4 ಬಾಕ್ಸ್ ಎಂಡಿಹೆಚ್ ಮಸಾಲೆ(MDH masala) ನೀಡಲಾಗಿದೆ ಎಂದು ಟ್ವಿಟರ್ ಖಾತೆಯಲ್ಲಿ ದಾಖಲೆ ಸಮೇತ ವಿವರ ನೀಡಲಾಗಿದೆ.
ಕಪ್ಪು ಬಣ್ಣದ ಗೇಟ್, 1 ಕೀ.ಮಿ ಮೊದಲು ಕರೆ ಮಾಡಿ, ವಿಳಾಸ ನೋಡಿ ಕಂಗಲಾದ ಡೆಲಿವರಿ ಬಾಯ್!
ಸರಣಿ ಟ್ವೀಟ್ ಮೂಲಕ ಅಮೇಜಾನ್ ಇ ಕಾಮರ್ಸ್‌ನ್ನು (E commerce) ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಮೇಜಾನ್ ಈ ರೀತಿ ಡೆಲಿವರಿ (Order Delivery) ಮಾಡಿದರೆ ಗತಿಯೇನು? ಗ್ರಾಹಕರು ಹಣ ಪಾವತಿಸಿ, ಡೆಲವರಿ ದಿನಾಂಕದ ವರೆಗೆ ಕಾದು ಮತ್ತೆ ಹಿಂತಿರುಗಿಸುವ, ದೂರು ದಾಖಲಿಸುವ ಕಷ್ಟವೇಕೆ? ಇದಕ್ಕಿಂತ ನೇರವಾಗಿ ಶೋ ರೂಂಗೆ ತೆರಳಿ ಖರೀದಿಸಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ರೀತಿ ಇ ಕಾರ್ಮಸ್ ಡೆಲವರಿ ಎಡವಟ್ಟು ಮೊದಲಲ್ಲ. ಹಲವು ಬಾರಿ ಈ ರೀತಿಯ ಘಟನೆಗಳ ನಡೆದಿದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ರೀತಿಯ ಎಡವಟ್ಟುಗಳು ನಡೆದಿದೆ. ಲಂಡನ್ನಿನ 61 ವರ್ಷದ ಎಲಾನ್ ವುಡ್ ಎಂಬ ವ್ಯಕ್ತಿ ಅಮೇಜಾನ್‌ನಲ್ಲಿ 1.20 ಲಕ್ಷ ರುಪಾಯಿಗಳ ಲ್ಯಾಪ್‌ಟಾಪ್ ಆರ್ಡರ್ ಮಾಡಿ ಹಣವನ್ನೂ ಪಾವತಿಸಿದ್ದರು. ಳಿಕ ಡೆಲಿವರಿಯಾದ ಬಾಕ್ಸ್ ಓಪನ್ ಮಾಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕಂದ್ರೆ ಸಿಕ್ಕಿದ್ದು ಲ್ಯಾಪ್‌ಟಾಪ್ ಅಲ್ಲ ಎರಡು ಪೆಡಿಗ್ರಿ ನಾಯಿ ಬಿಸ್ಕೆಟ್. ಬಳಿಕ ಮೊದಲು ಹಣ ಹಿಂದಿರುಗಿಸಲು ನಕ್ರಾ ಮಾಡಿದ ಕಂಪನಿ ನಂತರ ಎಲಾನ್‌ಗೆ ಕ್ಷಮೆಯಾಚಿಸಿ ಹಣ ವಾಪಸು ನೀಡಿದೆ.
ಜೀನ್ಸ್ ಆರ್ಡರ್ ಮಾಡಿದ್ರೆ ಒಂದು ಬ್ಯಾಗ್ ಈರುಳ್ಳಿ ಕಳಿಸಿದ ಫ್ಯಾಷನ್ ಸೈಟ್