ನಿಮ್ಮ ಬ್ಲಡ್ ಗ್ರೂಪಿಗೆ ತಕ್ಕಂತೆ ಡಯಟ್ ಮಾಡಿ, ಆರೋಗ್ಯ ಹೇಗೆ ಇಂಪ್ರೂವ್ ಆಗುತ್ತೆ ನೋಡಿ!
ಪದೇ ಪದೇ ಹುಷಾರು ತಪ್ಪೋದ್ರ ಹಿಂದೆ ನಾವು ತಿನ್ನುವ ತಪ್ಪು ಆಹಾರ ಇರುತ್ತೆ. ನಮಗೆ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು ಎಂಬುದೇ ಗೊತ್ತಿಲ್ಲ. ನಮ್ಮ ಬ್ಲಡ್ ಗ್ರೂಪ್ ಪ್ರಕಾರ ನಾವು ಆಹಾರ ತೆಗೆದುಕೊಂಡ್ರೆ ಅನಾರೋಗ್ಯ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತೆ ಎಂಬುದು ನಿಮಗೆ ಗೊತ್ತಾ?
ಕೆಲಸದ ಒತ್ತಡದಿಂದಾಗಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲು ಸಾಧ್ಯವಾಗ್ತಿಲ್ಲ. ಅತಿಯಾದ ಓಡಾಟ, ಕಂಪ್ಯೂಟರ್ ಮುಂದೆ ದಿನಗಟ್ಟಲೆ ಕುಳಿತು ಕೆಲಸ ಮಾಡೋದು, ಒಂದಾದ್ಮೇಲೆ ಒಂದು ಫೋನ್ ಕಾಲ್ಸ್, ಮಧ್ಯರಾತ್ರಿಯವರೆಗೆ ಕೆಲಸ ಹೀಗೆ ನಾನಾ ಟೆನ್ಷನ್ ನಲ್ಲಿರುವ ಜನರಿಗೆ ತಮ್ಮ ಆರೋಗ್ಯ ನೋಡಿಕೊಳ್ಳಲು ಸಮಯವೇ ಸಿಗ್ತಿಲ್ಲ. ಸರಿಯಾಗಿ ನೀರು ಕುಡಿಯೋಕೂ ಸಮಯ ಸಿಗಲ್ಲ ಎನ್ನುವವರಿದ್ದಾರೆ. ಅವರ ಇದೇ ಜೀವನಶೈಲಿ ಅನಾರೋಗ್ಯಕ್ಕೆ ತಳ್ಳುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಈಗ ಜನರು ಹೃದಯಾಘಾತ, ಪಾರ್ಶ್ವವಾಯುಗಳಿಗೆ ಬಲಿಯಾಗ್ತಿದ್ದಾರೆ.
ಅನಾರೋಗ್ಯ (Illness) ಕ್ಕೆ ಒಳಗಾಗುವ ಮೊದಲೇ ನಮ್ಮ ಆರೋಗ್ಯ (Health) ದ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಸಮಯ ಹೊಂದಿಸಿಕೊಂಡು ಪೌಷ್ಟಿಕಾಂಶದ ಆಹಾರವನ್ನು ಸೇವನೆ ಮಾಡ್ಬೇಕು. ಈ ಆಹಾರ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಈಗಿನ ಜನರು ಡಯಟ್ (Diet) ಹೆಸರಿನಲ್ಲಿ ಆಹಾರವನ್ನೇ ಸೇವನೆ ಮಾಡೋದಿಲ್ಲ. ಮತ್ತೆ ಕೆಲವರು ತಮ್ಮದೇ ಆಹಾರ ಕ್ರಮ ಅನುಸರಿಸ್ತಾರೆ. ಆದರೆ ನಿಮ್ಮ ಬ್ಲಡ್ ಗ್ರೂಪ್ (Blood group) ಆಧಾರದ ಮೇಲೆ ನೀವು ಆಹಾರ ಸೇವನೆ ಮಾಡಿದ್ರೆ ಒಳ್ಳೆಯದು. ಇದ್ರಿಂದ ನೀವು ಮತ್ತಷ್ಟು ಆರೋಗ್ಯವಾಗಿರಬಹುದು. ಅಲ್ಲದೆ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅನೇಕ ಸಂಶೋಧನೆಗಳು ಕೂಡ ಇದನ್ನು ಸ್ಪಷ್ಟಪಡಿಸಿವೆ. ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ ನೀವು ಆಹಾರ ಸೇವನೆ ಮಾಡಿದ್ರೆ ನಿಮ್ಮ ದೇಹ ಸಾಕಷ್ಟು ಶಕ್ತಿ ಪಡೆಯುತ್ತದೆ. ನೀವು ಸಕ್ರಿಯವಾಗಿ ಕೆಲಸ ಮಾಡಲು ಇದು ಸಹಕಾರಿಯಾಗುತ್ತದೆ.
ಗುಜರಾತ್ ಫೇಮಸ್ ಫುಡ್, ಕ್ರಿಕೆಟಿಗರಿಗೆ ಹೋಲಿಸಿದ ಡಾ.ಬ್ರೋ! ಪಾಂಡ್ಯ ಪಾಪಡ್, ಬುಮ್ರಾ ಜಿಲೇಬಿಯಂತೆ!
ಯಾವ ಬ್ಲಡ್ ಗ್ರೂಪ್ ನವರು ಯಾವ ಆಹಾರ ಸೇವನೆ ಮಾಡ್ಬೇಕು? :
ಎ ಬ್ಲಡ್ ಗ್ರೂಪ್ : ನೀವು ಎ ಬ್ಲಡ್ ಗ್ರೂಪ್ ಹೊಂದಿದವರಾಗಿದ್ದರೆ ನಿಮ್ಮ ರೋಗನಿರೋಧಕ ಶಕ್ತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ನೀವು ಕಾರ್ಬೋಹೈಡ್ರೇಟ್ ಭರಿತ ಆಹಾರವನ್ನು ಡಯಟ್ ನಲ್ಲಿ ಸೇರಿಸಬೇಕು. ಕಡಿಮೆ ಕೊಬ್ಬಿನಂಶವಿರುವವರು ಆಹಾರ ಸೇವನೆ ಮಾಡಲು ಆದ್ಯತೆ ನೀಡಿ. ಅನ್ನ, ಕುಂಬಳಕಾಯಿ, ಶೇಂಗಾ, ಸೋಯಾ ಆಹಾರ, ಒಣದ್ರಾಕ್ಷಿ, ಶುಂಠಿಯನ್ನು ನೀವು ಸೇವನೆ ಮಾಡ್ಬೇಕು.
ತೂಕ ಇಳಿಸಿಕೊಳ್ಳೋಕೆ ನೀತಾ ಅಂಬಾನಿ ಇಷ್ಟೇ ಮಾಡೋದು, ನೀವೂ ಈ ಮೆಥಡ್ ಟ್ರೈ ಮಾಡ್ಬೋದು
ಬಿ ಬ್ಲಡ್ ಗ್ರೂಪ್ : ಬಿ ಬ್ಲಡ್ ಗ್ರೂಪಿನವರಿಗೆ ಸಮತೋಲಿತ ಆಹಾರ ಅಗತ್ಯವಿದೆ. ಇವರು ತರಕಾರಿ, ಮೀನು, ಕಾರ್ಬೋಹೈಡ್ರೇಟ್, ಹಾಲು ಮತ್ತು ಮೊಸರು ಸೇವನೆ ಮಾಡ್ಬೇಕು. ಪ್ರೋಟೀನ್ ಹೆಚ್ಚಿರುವ ಆಹಾರವನ್ನು ನೀವು ಸೇವನೆ ಮಾಡೋದು ಒಳ್ಳೆಯದು. ನಿಮ್ಮ ಬ್ಲಡ್ ಗ್ರೂಪ್ ಬಿ ಆಗಿದ್ದರೆ ಜಂಕ್ ಫುಡ್, ಕಡಲೆಕಾಳು ಮತ್ತು ಉದ್ದಿನಬೇಳೆಯನ್ನು ಕಡಿಮೆ ಸೇವಿಸಬೇಕು ಎನ್ನುತ್ತಾರೆ ತಜ್ಞರು.
ಎಬಿ ಬ್ಲಡ್ ಗ್ರೂಪ್ : ಎಬಿ ರಕ್ತದ ಗುಂಪು ಹೊಂದಿರುವ ಜನರು ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಮಾಂಸ, ಮೀನು, ತರಕಾರಿ ಮತ್ತು ಹಾಲಿನ ಉತ್ಪನ್ನಗಳನ್ನು ನೀವು ತಿನ್ನಬೇಕು. ನೀವು. ಕೆಂಪು ಮಾಂಸ, ಜೋಳ ಮತ್ತು ಭಾರೀ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಓ ಬ್ಲಡ್ ಗ್ರೂಪ್ : ಓ ಬ್ಲಡ್ ಗ್ರೂಪ್ ಹೊಂದಿರುವ ಜನರಿಗೆ ಅಲರ್ಜಿ , ಜ್ವರ ಮತ್ತು ಎಸ್ಜಿಮಾದಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಈ ಗ್ರೂಪ್ ಜನರು ತಮ್ಮ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಧಾನ್ಯಗಳು, ಬೀನ್ಸ್ ನಂತಹ ಆಹಾರವನ್ನು ಇವರು ಹೆಚ್ಚು ಸೇವನೆ ಮಾಡೋದು ಒಳ್ಳೆಯದು.
ಯಾಕೆ ಬ್ಲಡ್ ಗ್ರೂಪ್ ಪ್ರಕಾರ ಆಹಾರ ಸೇವನೆ ಮಾಡ್ಬೇಕು? : ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ. ನಿಮ್ಮ ಚಯಾಪಚಯಕ್ರಿಯೆ ಸರಿಯಾಗಿರಬೇಕು. ನಿಮ್ಮ ರಕ್ತಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಿದಾಗ ಚಯಾಪಚಯ ಸರಾಗವಾಗಿ ಆಗುತ್ತದೆ. ಇದ್ರಿಂದ ನಮ್ಮ ದೇಹ ಈ ಎಲ್ಲ ಪ್ರಯೋಜನ ಪಡೆಯುತ್ತದೆ.