Asianet Suvarna News Asianet Suvarna News

ಕಪ್ಪಾಗಿರುವ ಬಾಳೆಹಣ್ಣಿನ ಸುಟ್ಟವು ಸಖತ್ ಟೇಸ್ಟೀ; ಸಿಂಪಲ್ ರೆಸಿಪಿ ಟ್ರೈ ಮಾಡಿ

ಬೇಸಿಗೆಯಲ್ಲಿ ಈ ಹಣ್ಣು ಬಲು ಬೇಗ ಕಪ್ಪಾಗುತ್ತದೆ. ಮಕ್ಕಳು ಸಹ ಕಪ್ಪಾದ ಬಾಳೆಹಣ್ಣು ತಿನ್ನಲು ಒಪ್ಪುವುದಿಲ್ಲ. ಹೀಗಿರುವಾಗ ಮಕ್ಕಳಿಗೆ ನೀವು ಟೇಸ್ಟಿಯಾಗಿರುವ ಈ ಬಾಳೆಹಣ್ಣಿನ ಸ್ನ್ಯಾಕ್ಸ್ ಮಾಡಿಕೊಡಬಹುದು. ಅದೇ ಬಾಳೆಹಣ್ಣಿನ ಸುಟ್ಟವು. ಸಿಂಪಲ್ ರೆಸಿಪಿ ಇಲ್ಲಿದೆ.

Blackened Banana Suttevu is very tasty; Try this simple recipe Vin
Author
First Published Aug 22, 2023, 1:18 PM IST

ಬಾಳೆ ಹಣ್ಣು ಅನ್ನೋದು ವರ್ಷ ಪೂರ್ತಿ ಎಲ್ಲರ ಮನೆಯಲ್ಲೂ ಸಿಗೋ ಹಣ್ಣು. ಆರೋಗ್ಯಕ್ಕೂ ಇದು ತುಂಬಾ ಒಳ್ಳೇದು. ಬಾಳೆಹಣ್ಣಿನ ದೋಸೆ, ರಸಾಯನ, ಜ್ಯೂಸ್, ಮಿಲ್ಕ್‌ಶೇಕ್ ಹೀಗೆ ಏನು ಬೇಕಾದ್ರೂ ಮಾಡಿ ಸವಿಯಬಹುದು. ಹಾಗಂದ್ರೆ ಯಾವಾಗ್ಲೂ ಇದನ್ನೇ ತಿನ್ತಾ ಇರೋಕೆ ಬೇಜಾರು ಅಲ್ವಾ. ಹೀಗಾಗಿಯೇ ಕೆಲವೊಮ್ಮೆ ಮನೆಯಲ್ಲಿ ಸಾಕಷ್ಟು ಬಾಳೆಹಣ್ಣು ಇದ್ರೂ ಹಾಗೆಯೇ ಹಾಳಾಗ್ತಾ ಹೋಗ್ತಿರುತ್ತದೆ. ಬೇಸಿಗೆಯಲ್ಲಿ ಈ ಹಣ್ಣು ಬಲು ಬೇಗ ಕಪ್ಪಾಗುತ್ತದೆ. ಮಕ್ಕಳು ಸಹ ಕಪ್ಪಾದ ಬಾಳೆಹಣ್ಣು ತಿನ್ನಲು ಒಪ್ಪುವುದಿಲ್ಲ. ಹೀಗಿರುವಾಗ ಮಕ್ಕಳಿಗೆ ನೀವು ಟೇಸ್ಟಿಯಾಗಿರುವ ಈ ಬಾಳೆಹಣ್ಣಿನ ಸ್ನ್ಯಾಕ್ಸ್ ಮಾಡಿಕೊಡಬಹುದು. ಅದೇ ಬಾಳೆಹಣ್ಣಿನ ಸುಟ್ಟವು. ಸಿಂಪಲ್ ರೆಸಿಪಿ ಇಲ್ಲಿದೆ.

ಬೇಕಾದ ಪದಾರ್ಥಗಳು
ಒಂದೂವರೆ ಗ್ಲಾಸ್ ಬೆಳ್ತಿಗೆ ಅಕ್ಕಿ (2 ಗಂಟೆ ನೆನೆಸಿಡಬೇಕು)
ಬಾಳೆಹಣ್ಣು-10ರಿಂದ 11
ತೆಂಗಿನ ತುರಿ 1 ಕಪ್‌
ಏಲಕ್ಕಿ 4
ಬೆಲ್ಲ-ಒಂದು ಕಪ್‌
ಗೋಧಿ ಪುಡಿ ಸ್ಪಲ್ಪ
ಕರಿಯಲು ಎಣ್ಣೆ

ಬೆಳಗ್ಗೆ ತಿಂಡಿ ಏನೂಂತ ತಲೆಕೆಡಿಸಿಕೊಳ್ಬೇಡಿ, ಈ ಹೆಲ್ದೀ ಸ್ಯಾಂಡ್‌ವಿಚ್ ಮಾಡಿ

ಮಾಡುವ ವಿಧಾನ
ಅಕ್ಕಿಯನ್ನು ತೊಳೆದುಕೊಂಡು, ತೆಂಗಿನ ತುರಿ ಸೇರಿಸಿ ಮೊದಲಿಗೆ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚು ನೀರು ಸೇರಿಸಬಾರದು. ಅಕ್ಕಿ, ತೆಂಗಿನ ತುರಿ ಸ್ಪಲ್ಪ ನುಣ್ಣಗೆ ಆದ ಮೇಲೆ ಬಾಳೆಹಣ್ಣು ಮತ್ತು ಬೆಲ್ಲವನ್ನು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಏಲಕ್ಕಿ ಸೇರಿಸಿ ಮಿಕ್ಸ್ ಮಾಡಿ. ಈ ಪೇಸ್ಟ್ ನುಣ್ಣಗೆ ಆದ ನಂತರ ಪಾತ್ರೆಗೆ ಶಿಫ್ಟ್ ಮಾಡಿಕೊಳ್ಳಿ. ಇದಕ್ಕೆ ಅಂಟು ಬರಲು ಮೂರು ಚಮಚದಷ್ಟು ಗೋಧಿ ಪುಡಿ ಸೇರಿಸಿಕೊಳ್ಳಿ. ಜಾಸ್ತಿ ಗಟ್ಟಿಯಾಗದಂತೆ ನೋಡಿಕೊಳ್ಳಿ.

ಈಗ ಗ್ಯಾಸ್ ಮೇಲೆ ಒಂದು ಬಾಂಡ್ಲಿಯಲ್ಲಿ ಎಣ್ಣೆಯನ್ನು ಹಾಕಿಡಿ. ಎಣ್ಣೆ ಬಿಸಿಯಾದ ನಂತರ ಸ್ಪೂನ್‌ನಲ್ಲಿ ಅಥವಾ ಕೈಯಲ್ಲಿ ಹಿಟ್ಟನ್ನು ಉಂಡೆಯಾಗಿ ಮಾಡಿ ಎಣ್ಣೆಗೆ ಹಾಕಿ. ಸ್ಪಲ್ಪ ಹೊತ್ತು ಕಾದ ನಂತರ ಇದನ್ನು ಮಗುಚಿ ಹಾಕಿ. ಕಂದು ಬಣ್ಣ ಬರುವ ವರೆಗೆ ಕರಿದು ತೆಗೆಯಿರಿ. ಹಿಟ್ಟನ್ನು ಯಾವತ್ತೂ ಹೆಚ್ಚು ಹಾಕಬೇಡಿ. ಹೀಗೆ ದೊಡ್ಡದಾಗಿ ಮಾಡಿಕೊಂಡರೆ ಸುಟ್ಟೇವು ಒಳಗಡೆ ಬೇಯುವುದಿಲ್ಲ. ಹೀಗಾಗಿ ಸಣ್ಣ ಸಣ್ಣದಾಗಿ ಕರಿದುಕೊಳ್ಳಿ. ಸಂಜೆಯ ಟೀ ಜೊತೆ ಇದನ್ನು ಸವಿಯಲು ಸಖತ್ತಾಗಿರುತ್ತದೆ. 

ಹತ್ತೇ ನಿಮಿಷ ಸಾಕು..ಮನೆಯಲ್ಲೇ ರೆಡಿ ಮಾಡಿ, ಘಮಘಮಿಸುವ ಮೈಸೂರ್ ಪಾಕ್‌

Follow Us:
Download App:
  • android
  • ios